Site icon Vistara News

Happy Independence day 2024: ಸ್ವಾತಂತ್ರ್ಯ ದಿನಾಚರಣೆಯಂದು ಒಲಿಂಪಿಯನ್​ಗಳನ್ನು ಭೇಟಿಯಾದ ಪ್ರಧಾನಿ ಮೋದಿ ಗೆ ಜೆರ್ಸಿ ಉಡುಗೊರೆ

Happy Independence day 2024

ಬೆಂಗಳೂರು: ಇತ್ತೀಚೆಗೆ ಮುಕ್ತಾಯಗೊಂಡ ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಭಾಗವಹಿಸಿ ಪರಾಕ್ರಮ ಮೆರೆದ ಭಾರತದ ಕ್ರೀಡಾಪಟುಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ದಿನಾಚರಣೆಯಂದು (Happy Independence day 2024) ಭೇಟಿಯಾಗಿ ಅಭಿನಂದಿಸಿದರು. ತಮ್ಮ ನಿವಾಸಕ್ಕೆ ಭಾರತೀಯ ಪುರುಷರ ಹಾಕಿ ತಂಡ, ಡಬಲ್ ಒಲಿಂಪಿಕ್ ಪದಕ ವಿಜೇತ ಮನು ಭಾಕರ್, ಸರಬ್ಜೋತ್ ಸಿಂಗ್ ಮತ್ತು ಅಮನ್ ಸೆಹ್ರಾವತ್ ಸೇರಿದಂತೆ ಒಲಿಂಪಿಕ್ ಸಾಧಕರನ್ನು ಆಹ್ವಾನಿಸಿ ಶ್ಲಾಘಿಸಿದರು. ಇದೇ ವೇಳೆ ಭಾರತೀಯ ಪುರುಷರ ಹಾಕಿ ತಂಡವು ಸಹಿ ಮಾಡಿದ ಜರ್ಸಿಯನ್ನು ಉಡುಗೊರೆಯಾಗಿ ಮೋದಿ ಅವರಿಗೆ ನೀಡಿದರು.

ಮನು ಭಾಕರ್, ಸರಬ್ಜೋತ್ ಸಿಂಗ್, ಸ್ವಪ್ನಿಲ್ ಕುಸಾಲೆ, ಭಾರತೀಯ ಪುರುಷರ ಹಾಕಿ ತಂಡ ಮತ್ತು ನೀರಜ್ ಚೋಪ್ರಾ ಸೇರಿದಂತೆ ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಭಾರತೀಯ ಕ್ರೀಡಾಪಟುಗಳು ಒಟ್ಟು ಆರು ಪದಕಗಳನ್ನು ಗೆದ್ದುಕೊಂಡಿದ್ದಾರೆ. “ನನ್ನ ಪ್ರೀತಿಯ ದೇಶದ ನಾಗರಿಕರೇ, ಇಂದು ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ ಯುವ ಪಡೆಯನ್ನು ನಾವು ಹೊಂದಿದ್ದೇವೆ. 140 ಕೋಟಿ ಭಾರತೀಯರ ಪರವಾಗಿ ನಮ್ಮ ಎಲ್ಲಾ ಕ್ರೀಡಾಪಟುಗಳನ್ನು ಅಭಿನಂದಿಸಲು ನಾನು ಬಯಸುತ್ತೇನೆ. ನಾವು ಹೊಸ ಕನಸುಗಳು ಮತ್ತು ಸಂಕಲ್ಪಗಳೊಂದಿಗೆ ಮುಂದುವರಿಯುತ್ತೇವೆ. ಕೆಲವೇ ದಿನಗಳಲ್ಲಿ ನಮ್ಮ ಪ್ಯಾರಾ-ಅಥ್ಲೀಟ್​ಗಳು ಪ್ಯಾರಾಲಿಂಪಿಕ್ಸ್​ಗಾಗಿ ಪ್ಯಾರಿಸ್​ಗೆ ಹಾರಲಿದ್ದಾರೆ, ನಾನು ಅವರಿಗೂ ಶುಭ ಹಾರೈಸುತ್ತೇನೆ” ಎಂದು ಪ್ರಧಾನಿ ಮೋದಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.

ಪ್ಯಾರಿಸ್​ನಲ್ಲಿ ನಡೆದ ಒಲಿಂಪಿಕ್ಸ್​ನಲ್ಲಿ ಶೂಟಿಂಗ್​ ಸ್ಪರ್ಧೆಯಲ್ಲಿ ಎರಡು ಕಂಚಿನ ಪದಕಗಳನ್ನು ಗೆದ್ದ ಪಿಸ್ತೂಲ್ ಶೂಟರ್ ಮನು ಭಾಕರ್ ಮತ್ತು ಭಾರತೀಯ ಹಾಕಿ ತಂಡದ ಸದಸ್ಯರು ಸೇರಿದಂತೆ ಹಲವಾರು ಉನ್ನತ ಕ್ರೀಡಾಪಟುಗಳು ಗುರುವಾರ ಬೆಳಿಗ್ಗೆ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅವರಲ್ಲಿ ಸ್ಟಾರ್ ಗೋಲ್ ಕೀಪರ್ ಪಿ.ಆರ್.ಶ್ರೀಜೇಶ್ ಕೂಡ ಒಬ್ಬರಾಗಿದ್ದರು.

Hardik Pandya: ಬ್ರಿಟಿಷ್​ ಸಿಂಗರ್ ಜತೆ ಹಾರ್ದಿಕ್​ ಪಾಂಡ್ಯ​ ಡೇಟಿಂಗ್​​? ಜಾಸ್ಮಿನ್ ವಾಲಿಯಾ ಬ್ರೇಕಪ್‌ ಲಿಸ್ಟ್‌ ಇಲ್ಲಿದೆ

ಪ್ಯಾರಿಸ್ ಒಲಿಂಪಿಕ್ಸ್​ನ್ಲ್ಲಿ ಭಾರತದ ಅಭಿಯಾನವು 5 ಕಂಚು ಮತ್ತು ಒಂದು ಬೆಳ್ಳಿ ಸೇರಿದಂತೆ ಒಟ್ಟು ಆರು ಪದಕಗಳೊಂದಿಗೆ ಕೊನೆಗೊಂಡಿತು. ಈ ಫಲಿತಾಂಶವು ಟೋಕಿಯೊದಲ್ಲಿ ನಡೆದ ಹಿಂದಿನ ಒಲಿಂಪಿಕ್ಸ್​ಗಿಂತ ನಿರೀಕ್ಷೆಗಳಿಗಿಂತ ಕಡಿಮೆಯಾಗಿದೆ. ಟೋಕಿಯೊದಲ್ಲಿ ಭಾರತೀಯ ಕ್ರೀಡಾಪಟುಗಳು ಒಂದು ಚಿನ್ನ, ಎರಡು ಬೆಳ್ಳಿ ಮತ್ತು ನಾಲ್ಕು ಕಂಚು ಸೇರಿದಂತೆ ಏಳು ಪದಕಗಳನ್ನು ಐತಿಹಾಸಿಕ ಸಾಧನೆ ಮಾಡಿದ್ದಾರೆ.

ನಿರಾಶೆಯ ಹೊರತಾಗಿಯೂ, ಭಾರತವು ಕ್ರೀಡಾಕೂಟದಲ್ಲಿ ತನ್ನ ಅತ್ಯುತ್ತಮ ಪ್ರದರ್ಶನದ ಅಂಚಿನಲ್ಲಿತ್ತು. ಭಾರತದ ಆರು ಸ್ಪರ್ಧಿಗಳು ನಾಲ್ಕನೇ ಸ್ಥಾನ ಪಡೆದಿದ್ದಾರೆ. ಇದು ಪದಕವಾಗಿ ಪರಿವರ್ತನೆಗೊಂಡಿದ್ದರೆ ಉತ್ತಮ ಸಾಧನೆಯಾಗುತ್ತಿತ್ತು.

ಪುರುಷರ 10 ಮೀಟರ್ ಏರ್ ರೈಫಲ್ ಫೈನನ್​​ಲ್ಲಿ ಶೂಟರ್ ಅರ್ಜುನ್ ಬಬುಟಾ 208.4 ಅಂಕಗಳೊಂದಿಗೆ ನಾಲ್ಕನೆ ಸ್ಥಾನಕ್ಕೆ ತೃಪ್ತಿಪಟ್ಟರು. ಒಲಿಂಪಿಕ್ಸ್​​ನ ರೈಫಲ್ ಶೂಟಿಂಗ್​​​ನಲ್ಲಿ ಪದಕಕ್ಕಾಗಿ ಭಾರತದ 12 ವರ್ಷಗಳ ಬರವನ್ನು ಕೊನೆಗೊಳಿಸುವ ಅವಕಾಶವನ್ನು 25 ವರ್ಷದ ಅವರು ಕಳೆದುಕೊಂಡರು.

Exit mobile version