ಬೆಂಗಳೂರು: ಐಪಿಎಲ್ 16ನೇ ಆವೃತ್ತಿಯ ಟೂರ್ನಿ ಮೊದಲಾರ್ಧವನ್ನು ಮುಗಿಸಿ ದ್ವಿತೀಯ ಚರಣದ ಪಂದ್ಯಗಳು ನಡೆಯುತ್ತಿವೆ. ಹೀಗಾಗಿ ಇನ್ನು ಪ್ಲೇ ಆಫ್ ಹಂತಕ್ಕೇರಲು ತಂಡಗಳ ನಡುವೆ ಪೈಪೋಟಿ ಆರಂಭಗೊಂಡಿದೆ. ಅಭಿಮಾನಿಗಳು ಕೂಡ ಯಾರು ಪ್ಲೇಆಫ್ಗೆ ಪ್ರವೇಶ ಮಾಡಬಹುದು ಎಂದೆಲ್ಲ ಲೆಕ್ಕಾಚಾರ ಆರಂಭಿಸಿದ್ದಾರೆ. ಐಪಿಎಲ್ ಅಂಕಪಟ್ಟಿಯಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಮತ್ತೊಮ್ಮೆ ಅಗ್ರಸ್ಥಾನದಲ್ಲಿದ್ದರೆ, ಲಕ್ನೋ ಸೂಪರ್ ಜೈಂಟ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ಕ್ರಮವಾಗಿ ಎರಡು, ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿವೆ. ಏತನ್ಮಧ್ಯೆ ಭಾರತ ತಂಡದ ಮಾಜಿ ಸ್ಪಿನ್ನರ್ ಹಾಗೂ ಹಾಲಿ ಕ್ರಿಕೆಟ್ ವಿಶ್ಲೇಷಕ ಹರ್ಭಜನ್ ಸಿಂಗ್ ಪ್ಲೇಆಫ್ ಹಂತಕ್ಕೇರಲಿರುವ ತಂಡಗಳು ಯಾವುದು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸ್ಟಾರ್ ಸ್ಪೋಟ್ಸ್ನ #AskStar ವಿಭಾಗದದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಹರ್ಭಜನ್ ಸಿಂಗ್, ಗುಜರಾತ್, ಚೆನ್ನೈ, ಮುಂಬೈ ಮತ್ತು ಬೆಂಗಳೂರು ಪ್ಲೇ ಆಫ್ ಪ್ರವೇಶ ಪಡೆಯಲಿದೆ ಎಂದು ಹೇಳಿದ್ದಾರೆ. ಪ್ರಸ್ತುತ ಬೆಂಗಳೂರು ಹಾಗೂ ಮುಂಬೈ ಪ್ರಸ್ತುತ ರೇಸ್ನಲ್ಲಿ ಹಿಂದುಳಿದರು ಮುಂದೆ ಪ್ಲೇಆಫ್ಗೆ ಪ್ರವೇಶ ಪಡೆಯುವುದು ಖಾತರಿ ಎಂದು ಹೇಳಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ತಲಾ ಒಂಬತ್ತು ಪಂದ್ಯಗಳ ನಂತರ ತಲಾ ಹತ್ತು ಅಂಕಗಳನ್ನು ಹೊಂದಿದೆ. ಈ ಮೂರು ತಂಡಗಳು
ಇದು ದು ಉತ್ತರಿಸಲು ತುಂಬಾ ಕಷ್ಟಕರವಾದ ಪ್ರಶ್ನೆ. ಆದರೆ ಗುಜರಾತ್ ಟೈಟನ್ಸ್ ತಂಡ ಖಂಡಿತವಾಗಿಯೂ ಅರ್ಹತೆ ಪಡೆಯುವ ತಂಡಗಳಲ್ಲಿ ಒಂದಾಗುತ್ತದೆ ಎಂದು ನಾನು ಹೇಳಬಲ್ಲೆ. ಚೆನ್ನೈ ಸೂಪರ್ ಕಿಂಗ್ಸ್ ಆಯ್ಕೆಯೂ ಖಾತರಿ. ಮುಂಬೈ ಇಂಡಿಯನ್ಸ್ ಅರ್ಹತೆ ಪಡೆಯಲಿರುವ ಮೂರನೇ ತಂಡವಾಗಲಿದೆ. ಈ ತಂಡ ಪ್ರಸ್ತುತ ರೇಸ್ನಲ್ಲಿ ಹಿಂದುಳಿದಿದೆ ಎಂದು ನೀವು ಹೇಳಬಹುದು. ಆದರೂ ಅವರಿಗೆ ಅರ್ಹತೆ ಪಡೆಯುವ ಹೆಚ್ಚು ಅವಕಾಶಗಳಿವೆ. ಕೊನೆಯದಾಗಿ, ಆರ್ಸಿಬಿ ತಂಡ ನಾಲ್ಕನೇ ಸ್ಥಾನ ಪಡೆಯಲಿದೆ ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿವ: Virat Kohli : ಮೈದಾನದಲ್ಲೇ ಗುರ್ ಎಂದ ಗಂಭೀರ್, ಘರ್ಜಿಸಿದ ವಿರಾಟ್ ಕೊಹ್ಲಿ!
“ಆರ್ಆರ್ ತಂಡ ರೇಸ್ನಲ್ಲಿದೆ ನಿಜ. ಆದರೆ, ಕೊನೆಯಲ್ಲಿ ಯಾರಾದರೂ ತಂಡದ ಅವರನ್ನು ಹಿಂದಿಕ್ಕುತ್ತದೆ. ಬಯಿ ಇಂಡಿಯನ್ಸ್ ಆ ತಂಡವನ್ನು ಹಿಂದಿಕ್ಕುತ್ತದೆ ಎಂದು ನಾನು ನಂಬುತ್ತೇನೆ ಎಂದು 42 ವರ್ಷದ ಆಟಗಾರ ಹೇಳಿದ್ದಾರೆ.
ಹರ್ಭಜನ್ ಸಿಂಗ್ ಅವರ ಆಯ್ಕೆಯ ಬಗ್ಗೆ ಮತ್ತೊಬ್ಬ ವೀಕ್ಷಕ ವಿವರಣೆಗಾರ ದೀಪ್ದಾಸ್ ಗುಪ್ತಾ ತಮಾಷೆ ಮಾಡಿದರು. ಸಿಎಸ್ಕೆ ತಂಡದಲ್ಲಿ ಈ ಹಿಂದೆ ಅವರು ಆಡಿದ್ದಾರೆ. ಇತರ ಎರಡು ಪಂದ್ಯಗಳಲ್ಲಿ ಸ್ನೇಹಿತರಿದ್ದಾರೆ. ಅದಕ್ಕಾಗಿ ಪ್ಲೇಆಫ್ಗೆ ಆಯ್ಕೆ ಮಾಡಿದ್ದಾರೆ ಎಂದು ಹೇಳಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಹರ್ಭಜನ್ ಸಿಂಗ್, ಇದು ಸ್ನೇಹದ ಮಾತಲ್ಲ. ರಾಜಸ್ಥಾನ್ ರಾಯಲ್ಸ್ ಉತ್ತಮ ತಂಡ. ಚೆನ್ನಾಗಿಯೂ ಆಡುತ್ತಿದ್ದಾರೆ. ಆದರೆ ಗುಜರಾತ್ ಎಲ್ಲದಕ್ಕಿಂತಲೂ ಒಂದು ಹೆಜ್ಜೆ ಮುಂದಿದೆ. ಚೆನ್ನೈ ಯಾವಾಗಲೂ ಅರ್ಹತೆ ಪಡೆಯುವ ತಂಡ ಎಂದು ಹರ್ಭಜನ್ ಸಿಂಗ್ ಹೇಳಿದರು.