ಅಹಮದಾಬಾದ್: ಭಾರತ ಸೀಮಿತ ಓವರ್ಗಳ ತಂಡದ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಹಾಗೂ ಮಾಡೆಲ್ ನತಾಶಾ ಸ್ಟಾಂಕೊವಿಕ್ (nataša stanković) ಮದುವೆಯಾಗಿ ಮೂರು ವರ್ಷಗಳಾದವು. 2020ರ ಮೇ 31ರಂದು ಅವರಿಬ್ಬರು ಕಾನೂನುಬದ್ಧವಾಗಿ ವಿವಾಹವಾಗಿದ್ದಾರೆ. ಈ ಜೋಡಿಗೆ ಒಬ್ಬ ಪುತ್ರನಿದ್ದಾನೆ. ಈ ಸ್ಟಾರ್ ದಂಪತಿ ಇದೀಗ ರಾಜಸ್ಥಾನ್ನ ಉದಯ್ಪುರದಲ್ಲಿ ಮತ್ತೊಂದು ಬಾರಿ ಮದುವೆಯಾಗಲು ನಿರ್ಧರಿಸಿದ್ದಾರೆ. ಫೆಬ್ರವರಿ 14ರ ಪ್ರೇಮಿಗಳ ದಿನದಂದು ಅವರು ಸಾಂಪ್ರದಾಯಿಕ ಶೈಲಿಯಲ್ಲಿ ಈ ಬಾರಿ ಗಣ್ಯರನೇಕರಿಗೆ ಆಹ್ವಾನ ಕೊಟ್ಟು ಮದುವೆಯಾಗಲಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಮೂಲಗಳು ಹೇಳುವಂತೆ ಅವರಿಬ್ಬರು 2020ರಲ್ಲಿ ಕಾನೂನು ಪ್ರಕಾರವಾಗಿ ಮದುವೆಯಾಗಿದ್ದರು. ಆದರೆ, ವಿಶೇಷ ಸಮಾರಂಭವೇನೂ ಏರ್ಪಡಿಸಿರಲಿಲ್ಲ. ಎಲ್ಲ ಕಾರ್ಯಕ್ರಮಗಳೂ ತುರ್ತಾಗಿ ನಡೆದಿತ್ತು. ಇದೀಗ ತಮ್ಮ ಬದುಕಿನ ಜಂಜಾಟಗಳಿಂದ ಮುಕ್ತಿ ಪಡೆದುಕೊಂಡಿದ್ದಾರೆ. ಹೀಗಾಗಿ ಗಣ್ಯರಿಗೆಲ್ಲರಿಗೂ ಆಹ್ವಾನ ಕೊಟ್ಟು ಮದುವೆಯಾಗುವುದು ಅವರ ನಿರ್ಧಾರವಾಗಿದೆ.
ಫೆಬ್ರವರಿ 13ರಂದು ಮದುವೆ ಕಾರ್ಯಕ್ರಮ ಆರಂಭವಾಗಲಿದ್ದು, 16ರವರೆಗೆ ನಡೆಯಲಿದೆ. ಹಲ್ದಿ, ಮೆಹೆಂದಿ, ಸಂಗೀತ್ ಸೇರಿದಂತೆ ಎಲ್ಲ ಕಾರ್ಯಕ್ರಮಗಳೂ ಇದರಲ್ಲಿ ಸೇರಿಕೊಂಡಿವೆ. ಈ ಮದುವೆಗೆ ಕಳೆದ ನವೆಂಬರ್ನಿಂದಲೇ ತಯಾರಿ ಆರಂಭವಾಗಿದೆ ಎನ್ನಲಾಗಿದೆ. ಮದುವೆಗೆ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಆದರೆ ನತಾಶಾ ಸ್ಟಾಂಕೊವಿಕ್ ಮದುವೆ ದಿನದಂದು ಡಾಲ್ಸ್ ಮತ್ತು ಗಬ್ಬನಾ ವಿನ್ಯಾಸ ಮಾಡಿರುವ ಪ್ರಿಸ್ಟಿನ್ ಬಣ್ಣದ ವಸ್ತ್ರವನ್ನು ಹಾಕಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ : INDvsNZ T20 : ಪಿಚ್ ತಯಾರಿಸಿದ ಕ್ಯುರೇಟರ್ಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನಾಯಕ ಹಾರ್ದಿಕ್ ಪಾಂಡ್ಯ
29 ವರ್ಷದ ಹಾರ್ದಿಕ್ ಪಾಂಡ್ಯ ಹಾಗೂ 30 ವರ್ಷದ ನತಾಶಾ ಮೇ 31ರಂದು ಮದುವೆಯಾಗಿದ್ದರು. ಅವರಿಗೆ ಜುಲೈ ಗೆ ಪುತ್ರ ಅಗಸ್ತ್ಯ ಹುಟ್ಟಿದ್ದ.