Site icon Vistara News

Viral News: ಹಾಟ್​ ಫೋಟೊ ಹಂಚಿಕೊಂಡ ಹಾರ್ದಿಕ್‌ ಪಾಂಡ್ಯ ದಂಪತಿ

Hardik Pandya And Natasa

ಮುಂಬಯಿ: ಭಾರತದ ಸ್ಟಾರ್‌ ಕ್ರಿಕೆಟರ್‌(Indian cricketer) ಹಾರ್ದಿಕ್‌ ಪಾಂಡ್ಯ(Hardik Pandya) ಮತ್ತು ಅವರ ಪತ್ನಿ ನತಾಶಾ ಸ್ಟಾನ್ಕೋವಿಕ್‌(Natasa Stankovic) ಅವರು ಹಾಟ್​ ಫೋಟೊವೊಂದನ್ನು ಹಂಚಿಕೊಂಡಿದ್ದಾರೆ. ಈ ಫೋಟೊ ವೈರಲ್(Viral News)​ ಆಗಿದೆ. ಆದರೆ ಈ ಫೋಟೊ ಕಂಡ ಕೆಲ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. “ರೊಮ್ಯಾನ್ಸ್​ ಏನಿದ್ದರು ನಿಮ್ಮಿಬ್ಬರ ಮಧ್ಯೆ ಇರಲಿ. ಇದನ್ನೂ ಜಗತ್ತಿಗೆ ತೋರಿಸುವ ಅಗತ್ಯವಿಲ್ಲ” ಎಂದಿದ್ದಾರೆ.


ಸೋಫಾದಲ್ಲಿ ಕುಳಿತು ಲಿಪ್​ ಲಾಕ್​ ಮಾಡುತ್ತಿರುವಂತೆ ಫೋಸ್​ ನೀಡಿರುವ ಫೋಟೊವನ್ನು ನತಾಶಾ ಸ್ಟಾನ್ಕೋವಿಕ್‌ ಅವರು ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನು ಕಂಡ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಸಖತ್​ ಜೋಡಿ ಎಂದರೆ ಇನ್ನು ಕೆಲವರು ದಯವಿಟ್ಟು ಈ ರೀತಿಯ ಫೋಟೊ ಹಂಚಿಕೊಳ್ಳಬೇಡಿ ಎಂದಿದ್ದಾರೆ. ‘ಭಾರತವನ್ನು ಪ್ರತಿನಿಧಿಸುವ ಆಟಗಾರನಿಗೆ ಇಂತಹ ವರ್ತನೆ ಸೂಕ್ತವಲ್ಲ. ಇದು ಭಾರತೀಯ ಸಂಸ್ಕೃತಿಯಲ್ಲ’ ಎಂದು ಹಾರ್ದಿಕ್​ಗೆ ಕೆಲವರು ಬುದ್ಧಿವಾದ ಹೇಳಿದ್ದಾರೆ.


ಫೆ.14 ರಂದು ರಾಜಸ್ಥಾನದ ಉದಯ್‌ಪುರದಲ್ಲಿ ಕ್ರಿಷ್ಚಿಯನ್‌ ಸಂಪ್ರದಾಯದಂತೆ ಅದ್ದೂರಿಯಾಗಿ ಈ ಜೋಡಿ ಪುನರ್‌ ವಿವಾಹವಾಗಿದ್ದರು. ಅಂದ ಹಾಗೇ, ಹಾರ್ದಿಕ್‌ ಮತ್ತು ನತಾಶಾ ಕಳೆದ 2020ರಲ್ಲೇ ರಿಜಿಸ್ಟರ್‌ ರೀತಿಯಲ್ಲಿ ವಿವಾಹವಾಗಿ್ದರು. ಆದರೆ ಪ್ರೇಮಿಗಳ ದಿನದಂದು ತಮ್ಮ ಕುಟುಂಬಸ್ಥರ ಮತ್ತು ಗೆಳೆಯರ ಸಮ್ಮುಖದಲ್ಲಿ ಮತ್ತೊಮ್ಮೆ ವಿವಾಹವಾಗಿದ್ದರು. ಇವರ ವಿವಾಹ ಸಮಾರಂಭದಲ್ಲಿ ಕೊಹ್ಲಿ-ಅನುಷ್ಕಾ, ರಾಹುಲ್‌-ಅಥಿಯಾ ಸೇರಿ ಹಲವು ಗಣ್ಯರು ಭಾಗಿ ಇವರಿಬ್ಬರ ಪುನರ್‌ ವಿವಾಹಕ್ಕೆ ನೆಟ್ಟಿಗರೂ ಶುಭ ಹಾರೈಸಿದ್ದರು.

ನತಾಶಾ ಸರ್ಬಿಯಾದ ರೂಪದರ್ಶಿಯಾಗಿದ್ದು, ಪ್ರಕಾಶ್ ಝಾ ಅವರ ‘ಸತ್ಯಾಗ್ರಹ’ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದರ್ಪಣೆ ಮಾಡಿದ್ದರು. 2014-15ರಲ್ಲಿ ರಿಯಾಲಿಟಿ ಶೋ ‘ಬಿಗ್ ಬಾಸ್ 8’ ನಲ್ಲಿ ಭಾಗವಹಿಸಿದ್ದರು. ‘ಫುಕ್ರೆ ರಿಟರ್ನ್ಸ್’ ‘ಮೆಹಬೂಬಾ’ ‘ಜಿಂದಗಿ ಮೇರಿ ಡ್ಯಾನ್ಸ್ ಡ್ಯಾನ್ಸ್’ ನಂತಹ ಹಲವಾರು ಹಿಟ್ ಬಾಲಿವುಡ್ ಹಾಡುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಸಕ್ರೀಯರಾಗಿರುವ ಅವರು ತಮಿಳು ಮತ್ತು ಕನ್ನಡ ಸಿನಿಮಾ ಹಾಡುಗಳಿಗೆ ಹೆಜ್ಜೆ ಹಾಕಿರುವ ವಿಡಿಯೊವನ್ನು ಹಂಚಿಕೊಳ್ಳುತ್ತಿರುತ್ತಾರೆ.

ಇದನ್ನೂ ಓದಿ Sourav Ganguly: ಹಾರ್ದಿಕ್​ ಪಾಂಡ್ಯಗೆ ವಿಶೇಷ ಮನವಿ ಮಾಡಿದ ದಾದಾ


ರೋಹಿತ್​ ಶರ್ಮ ಬಳಿಕ ಹಾರ್ದಿಕ್​ ಪಾಂಡ್ಯ ಅವರು ಭಾರತ ತಂಡದ ನಾಯಕನಾಗಲಿದ್ದಾರೆ ಎಂದು ಈಗಾಗಲೇ ಹೇಳಲಾಗುತ್ತಿದೆ. ಟಿ20ಯಲ್ಲಿ ಸದ್ಯ ಅವರೇ ಹಂಗಾಮಿಯಾಗಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ.

Exit mobile version