Site icon Vistara News

IPL 2023 : ಅಭಿಮಾನಿಗಳ ಕ್ಷಮೆ ಕೋರಿದ ಹಾರ್ದಿಕ್​ ಪಾಂಡ್ಯ, ಸೋಲು ನನ್ನಿಂದಲೇ ಎಂದ ನಾಯಕ!

Delhi Capitals, Gujarat Titans

Delhi Capitals, Gujarat Titans

ಅಹಮದಾಬಾದ್​: ಹಾರ್ದಿಕ್​ ಪಾಂಡ್ಯ ನೇತೃತ್ವದ ಗುಜರಾತ್ ತಂಡ ಎರಡನೇ ಬಾರಿ ತಮ್ಮ ತವರು ನೆಲದ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. ಮೊದಲ ಚರಣದಲ್ಲಿ ಕೋಲ್ಕೊತಾ ವಿರುದ್ಧ ಕೊನೇ ಓವರ್​ನಲ್ಲಿ ಸೋಲು ಕಂಡಿದ್ದ ಗುಜರಾತ್ ತಂಡ ಇದೀಗ ದುರ್ಬಲ ಡೆಲ್ಲಿ ವಿರುದ್ಧ 5 ರನ್​ಗಳಿಂದ ಸೋತಿದೆ. ಈ ಬಗ್ಗೆ ಗುಜರಾತ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರಿಗೆ ಸಿಕ್ಕಾಪಟ್ಟೆ ಬೇಸರವಿದೆ. ಅದನ್ನವರು ಪಂದ್ಯದ ಬಳಿಕ ಹೇಳಿದ್ದು, ಬೌಲರ್​ ಮೊಹಮ್ಮದ್​ ಶಮಿಯ ಕ್ಷಮೆ ಕೋರಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ಮೊದಲು ಬ್ಯಾಟ್​ ಮಾಡಿ 130 ರನ್‌ಗಳನ್ನು ಪೇರಿಸಿತ್ತು. ಆ ಗುರಿಯನ್ನು ಬೆನ್ನಟ್ಟಲು ಹೊರಟ ಗುಜರಾತ್ ಟೈಟನ್ಸ್ ಆರಂಭದಲ್ಲೇ ನಿಯಮಿತವಾಗಿ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. 19ನೇ ಓವರ್‌ನಲ್ಲಿ 3 ಸಿಕ್ಸರ್‌ ಬಾರಿಸುವ ಮೂಲಕ ರಾಹುಲ್ ತೆವಾಟಿಯ (20 ರನ್, 3X6) ಪಂದ್ಯದ ಗತಿಗೆ ತಿರುವು ಕೊಟ್ಟರು. ಆದರೆ ಕೊನೇ ಹಂತದಲ್ಲಿ ಐದು ರನ್​ನಿಂದ ಸೋಲು ಕಂಡಿತು. ನಾಯಕ ಹಾರ್ದಿಕ್ ಪಾಂಡ್ಯ ಅವರ ಅರ್ಧ ಶತಕ (ಅಜೇಯ 59 ರನ್) ಹೊರತಾಗಿಯೂ 20 ಓವರ್‌ಗಳಿಗೆ ಕೇವಲ 125 ರನ್‌ಗಳಿಗೆ ಸೋಲೊಪ್ಪಿಕೊಂಡಿತು. ಈ ಬಗ್ಗೆ ನಾಯಕ ಹಾರ್ದಿಕ್​ಗೆ ಬೇಸರವಿದ್ದು ಕ್ಷಮೇ ಕೋರಿದ್ದಾರೆ.

ಪಂದ್ಯದ ಬಳಿಕ ಮಾತನಾಡಿದ ಪಾಂಡ್ಯ,, ಈ ಗುರಿ ದೊಡ್ಡದಾಗಿರಲಿಲ್ಲ. ಸುಲಭವಾಗಿ ಮುಟ್ಟಬಹುದಿತ್ತು. ಆದರೆ ಆರಂಭದಲ್ಲೇ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡೆವು. ಆದರೆ, ತೆವಟಿಯಾ ಕೆಲವು ಉತ್ತಮ ಹೊಡೆತಗಳಿಂದ ಭರವಸೆ ಮೂಡಿಸಿದರು. ನಾನು ಕೂಡ ಗೆಲುವಿಗೆ ಯತ್ನಿಸಿದೆ. ಆದರೂ ಜಯ ಸಿಗಲಿಲ್ಲ. ಪಂದ್ಯದಲ್ಲಿ ಒಂದೆರಡು ದೊಡ್ಡ ಓವರ್‌ಗಳನ್ನು ನಿರೀಕ್ಷಿಸಿದ್ದೆವು, ಆದರೆ ಮಧ್ಯಮ ಓವರ್‌ಗಳಲ್ಲಿ ಲಯ ತಪ್ಪಿತು ಎಂದು ಹೇಳಿದ್ದಾರೆ.

ಪಂದ್ಯವನ್ನು ನಮ್ಮ ಕಡೆಗೆ ಒಲಿಸಿಕೊಳ್ಳುವುದಕ್ಕೆ ನಾವು ಸಂಪೂರ್ಣವಾಗಿ ಎಡವಿದೆವು. ಅರ್ಧ ಶತಕ ಬಾರಿಸಿದ ಹೊರತಾಗಿಯೂ ಗೆಲುವು ತಂದುಕೊಡದೇ ಇರುವುದಕ್ಕೆ ನಾನೇ ಹೊಣೆ. ಆದರೆ, ಡೆಲ್ಲಿ ಕ್ಯಾಪಿಟಲ್ಸ್ ಬೌಲರ್‌ಗಳು ನಿಖರವಾಗಿ ಬೌಲಿಂಗ್ ಮಾಡಿದೆವು. ನಾವು ಆರಂಭದಲ್ಲೇ ವಿಕೆಟ್‌ಗಳನ್ನು ಕಳೆದುಕೊಂಡಿದ್ದ ಸೋಲಿಗೆ ಪ್ರಮುಖ ಕಾರಣ, ಎಂದು ಪಾಂಡ್ಯ ಹೇಳಿದರು.

ಪಂದ್ಯದಲ್ಲಿ ಏನಾಯಿತು?

ಅಮನ್​ ಹಕಿಮ್​ ಖಾನ್​ (51) ಬಾರಿಸಿದ ಸಮಯೋಚಿತ ಅರ್ಧ ಶತಕ ಹಾಗೂ ಬೌಲರ್​ಗಳ ಸಾಹಸದಿಂದ ಮಿಂಚಿದ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಐಪಿಎಲ್​ 16ನೇ ಆವೃತ್ತಿಯ 44ನೇ ಪಂದ್ಯದಲ್ಲಿ ಗುಜರಾತ್ ಟೈಟನ್ಸ್​ ತಂಡದ ವಿರುದ್ಧ 5 ರನ್​ಗಳ ರೋಚಕ ವಿಜಯ ದಾಖಲಿಸಿತು. ಇದು ಕೂಡ ಹಾಲಿ ಆವೃತ್ತಿಯ ಐಪಿಎಲ್​ನ ಲಾಸ್ಟ್​ ಬಾಲ್​ ಥ್ರಿಲ್​ ಮ್ಯಾಚ್​. ಕೊನೇ ಓವರ್​ನ ಕೊನೇ ಎಸೆತದ ತನಕವೂ ಈ ಪಂದ್ಯ ಕುತೂಹಲ ಉಳಿಸಿಕೊಂಡಿತ್ತು. ಅಂತಿಮವಾಗಿ ಡೆಲ್ಲಿ ಬೌಲರ್​​ ಇಶಾಂತ್ ಶರ್ಮಾ ಎದುರಾಳಿಗೆ ಬೇಕಾದ 12 ರನ್​ಗಳಲ್ಲಿ ಕೇವಲ ಆರು ರನ್​ ನೀಡಿ ಗೆಲುವು ತಂದುಕೊಟ್ಟರು.

ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಮ್​​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಆದರೆ, ತಂಡದ ಬ್ಯಾಟರ್​​ಗಳು ನಿರ್ಧಾರಕ್ಕೆ ತಕ್ಕ ಹಾಗೆ ಬ್ಯಾಟಿಂಗ್​ ಮಾಡಲಿಲ್ಲ. ಹೀಗಾಗಿ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 130 ರನ್​ ಬಾರಿಸಿತು. ಪ್ರತಿಯಾಗಿ ಬ್ಯಾಟ್​​ ಮಾಡಿದ ಗುಜರಾತ್ ತಂಡ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 6 ವಿಕೆಟ್​ ನಷ್ಟಕ್ಕೆ 125 ರನ್ ಬಾರಿಸಿ ಸೋಲೊಪ್ಪಿಕೊಂಡಿತು. ಇದು ಕೂಡ ಹಾಲಿ ಆವೃತ್ತಿಯ ಐಪಿಎಲ್​ನ ಕಡಿಮೆ ರನ್​ಗಳ ಪಂದ್ಯವಾಗಿದೆ. ಡೆಲ್ಲಿ ತಂಡದ ಪರವಾಗಿ ಖಲೀಲ್​ ಅಹಮದ್​ 24 ರನ್​ಗಳಿಗೆ 2 ವಿಕೆಟ್​ ಉರುಳಿಸಿದರೆ, ಇಶಾಂತ್ ಶರ್ಮಾ 23 ರನ್​ಗಳಿಗೆ 2 ವಿಕೆಟ್​ ತೆಗೆದರು.

Exit mobile version