ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಭಾರತ ತಂಡದ ಮಾಜಿ ನಾಯಕ ಹಾಗೂ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿಯನ್ನು ತನ್ನ ಪ್ರೀತಿಯ ಸಹೋದರ ಎಂದು ಕರೆದಿದ್ದಾರೆ. ಚೆನ್ನೈನಲ್ಲಿ ಮಂಗಳವಾರ (ಮೇ 23) ಐಪಿಎಲ್ 2023ರ ಮೊದಲ ಪ್ಲೇಆಫ್ ಪಂದ್ಯ ಗುಜರಾತ್ ಟೈಟನ್ಸ್ ಹಾಗೂ ಸಿಎಸ್ಕೆ ನಡುವೆ ನಡೆಯಲಿದೆ. ಅದಕ್ಕಿಂತ ಮೊದಲು ಗುಜರಾತ್ ಜೈಂಟ್ಸ್ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೊದಲ್ಲಿ ಹಾರ್ದಿಕ್ ಪಾಂಡ್ಯ ಈ ರೀತಿಯಾಗಿ ಹೇಳಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ಗಂಭೀರ ವ್ಯಕ್ತಿ ಎಂದು ಬಹಳಷ್ಟು ಜನರು ಭಾವಿಸುತ್ತಾರೆ. ನನ್ನ ಪ್ರಕಾರ ಅದು ಸುಳ್ಳು. ನಾವಿಬ್ಬರೂ ಸಾಕಷ್ಟು ಜೋಕ್ಗಳನ್ನು ಹೇಳುತ್ತಿರುತ್ತೇವೆ. ಜೋರಾಗಿ ನಗುತ್ತೇವೆ. ನಾನು ಅವರನ್ನು ಮಹೇಂದ್ರ ಸಿಂಗ್ ಧೋನಿಯಾಗಿ ನೋಡುವುದಿಲ್ಲ. ಅವರಿಂದ ಬಹಳಷ್ಟು ವಿಷಯಗಳನ್ನು ಕಲಿತಿದ್ದೇನೆ, ಅವರನ್ನು ನೋಡುವಾಗ ಮಾತ್ರವಲ್ಲ, ಹೆಚ್ಚು ಮಾತನಾಡದೆ ಸಾಕಷ್ಟು ಸಕಾರಾತ್ಮಕ ವಿಷಯಗಳನ್ನು ಕಲಿತಿದ್ದೇನೆ. ಹೀಗಾಗಿ ಅವರನ್ನು ಡಿಯರ್ ಬ್ರದರ್ ಎಂದು ಕರೆಯುತ್ತೇನೆ ಎಂದು ಪಾಂಡ್ಯ ವಿಡಿಯೊದಲ್ಲಿ ಹೇಳಿದ್ದಾರೆ.
ನನಗೆ ಮಹೇಂದ್ರ ಸಿಂಗ್ ಧೋನಿ ಕೇವಲ ಪ್ರೀತಿಯ ಸಹೋದರ. ನಾನು ಅವನೊಂದಿಗೆ ತಮಾಷೆ ಮಾಡುತ್ತಿರುತ್ತೇನೆ. ಅವರೊಂದಿಗೆ ನಾನು ಖುಷಿಯಾಗಿರುತ್ತೇನೆ. ಅದೇ ರೀತಿ ನಾನು ಮಹೇಂದ್ರ ಸಿಂಗ್ ಧೋನಿ ಅಭಿಮಾನಿ. ಅವರನ್ನು ದ್ವೇಷಿಸಲು ಯಾರಿಗೂ ಸಾಧ್ಯವಿಲ್ಲ. ದೆವ್ವಗಳಿಗೆ ಮಾತ್ರ ಅವರನ್ನು ವಿರೋಧಿಸಲು ಸಾಧ್ಯ ಎಂದು ಬೌಲಿಂಗ್ ಆಲ್ರೌಂಡರ್ ಹೇಳಿದ್ದಾರೆ.
ಹಾಳಿ ಆವೃತ್ತಿಯ ಐಪಿಎಲ್ನಲ್ಲಿ ಋತುವಿನಲ್ಲಿ ಮಹೇಂದ್ರ ಸಿಂಗ್ ಮೈದಾನಕ್ಕೆ ಕಾಲಿಟ್ಟಾಗಲೆಲ್ಲಾ ಅಭಿಮಾನಿಗಳ ಖುಷಿ ಮುಗಿಲುಮುಟ್ಟುತ್ತದೆ. ಎರಡು ಬಾರಿ ವಿಶ್ವಕಪ್ ವಿಜೇತ ನಾಯಕನ ಆಟವನ್ನು ನೋಡಲು ಅಭಿಮಾನಿಗಳು ಸಾಲುಗಟ್ಟಿ ನಿಂತಿರುತ್ತಾರೆ. ಹೀಗಾಗಿ ಮಂಗಳವಾರದ ಐಪಿಎಲ್ ಪಂದ್ಯದ ವೇಳೆ ಚೆಪಾಕ್ ಕ್ರೀಡಾಂಗಣ ಹಳದಿ ಸಾಗರವೇ ಆಗಲಿದೆ.
ಐಪಿಎಲ್ 2023 ಆಟಗಾರನಾಗಿ ಧೋನಿಯ ಕೊನೆಯ ಸೀಸನ್ ಎಂಬ ಊಹಾಪೋಹಗಳು ಎದ್ದಿವೆ. ಹೀಗಾಗಿ ಅವರ ಅಭಿಮಾನಿಗಳ ಆಕಾಂಕ್ಷೆ ಹೆಚ್ಚಾಗಿದೆ. ಆದಾಗ್ಯೂ, ನಿವೃತ್ತಿ ಮಾತನ್ನು ಅವರು ಇನ್ನೂ ದೃಢಪಡಿಸಿಲ್ಲ. ಚೆಪಾಕ್ನಲ್ಲಿ ಮಂಗಳವಾರ ರಾತ್ರಿ ನಡೆಯಲಿರುವ ಪಂದ್ಯದ ವೇಳೆಯೂ ಧೋನಿಗೆ ಪ್ರೀತಿ ಸಲ್ಲಿಸಲು ಅಭಿಮಾನಿಗಳು ಕಾತರಾಗಿ ಕುಳಿತಿದ್ದಾರೆ.
ಇದನ್ನೂ ಓದಿ ವ: IPL 2023 : ಮಹೇಂದ್ರ ಸಿಂಗ್ ಧೋನಿಗೆ ವಿಶೇಷ ಕೊಡುಗೆ ನೀಡಿದ ಅಭಿಮಾನಿ, ಏನದು?
ಹಾಲಿ ಚಾಂಪಿಯನ್ಸ್ ಗುಜರಾತ್ ತಂಡ ಚೆನ್ನೈನಲ್ಲಿ ಆಡುತ್ತಿರುವುದು ಇದೇ ಮೊದಲು. ಈ ಋತುವಿನಲ್ಲಿ ಈ ಇಬ್ಬರು ಎದುರಾಳಿಗಳು ಮುಖಾಮುಖಿಯಾಗುತ್ತಿರುವುದು ಕೂಡ ಎರಡನೇ ಬಾರಿ. ಲೀಗ್ ಹಂತದಲ್ಲಿ ಇತ್ತಂಡಗಳು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ಪರಸ್ಪರ ಎದುರಾಗಿದ್ದವು. ಈ ವೇಳೆ ಗುಜರಾತ್ ತಂಡ ಸಿಎಸ್ಕೆ ವಿರುದ್ಧ 5 ವಿಕೆಟ್ ಜಯ ಸಾಧಿಸಿತ್ತು
ಬುಧವಾರ ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಲಿವೆ.