ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ಈ ಹಿಂದೆಯೂ ಅನೇಕ ವಿವಾದಗಳಲ್ಲಿ ಸಿಲುಕಿಕೊಂಡಿದ್ದರು. ಹೆಣ್ಣು ಮಕ್ಕಳ ಕುರಿತ ಹೇಳಿಕೆ ಸೇರಿದಂತೆ ಅವರು ಅನೇಕ ಬಾರಿ ಚರ್ಚೆಗೆ ಕಾರಣರಾಗಿದ್ದರು. ಇದೀಗ ಅವರು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಸಮಾರಂಭದಲ್ಲಿ ಕುಡಿಯಲು ಎರಡು ಟಕಿಲಾಗಳನ್ನು (ಮದ್ಯ) ಆರ್ಡರ್ ಮಾಡಿದ ವಿಡಿಯೊವೊಂದು ವೈರಲ್ ಆಗಿದೆ. ಡಾನ್ಸ್ ಮಾಡುತ್ತಲೇ ಅವರು ಎಣ್ಣೆ ಕೊಡಿ ಎಂದು ಕೇಳಿದ್ದು ಕೆಲವರಿಗೆ ಖುಷಿ ಕೊಟ್ಟರೆ ಇನ್ನೂ ಕೆಲವರಿಗೆ ಪಾಂಡ್ಯ ವರ್ತನೆ ಇಷ್ಟವಾಗಿಲ್ಲ.
Hardik Pandya ordered "2 tequilas"
— i. (@ArrestPandya) July 13, 2024
Tequila is one of the most strongest alcohol and he's the vice captain of the country 👏🏻 pic.twitter.com/cSaFSNNfCq
ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ಜಾಗತಿಕವಾಗಿ ಚರ್ಚೆಯಾದ ಮದುವೆ ಕಾರ್ಯಕ್ರಮ. ಅನೇಕ ಕ್ರಿಕೆಟಿಗರು ಮತ್ತು ಬಾಲಿವುಡ್ ತಾರೆಯರು ಕಾಣಿಸಿಕೊಂಡು ಇಲ್ಲಿ ಕುಣಿದು ಕುಪ್ಪಳಿಸಿದ್ದರು. ಅಂತೆಯೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ಹಾರ್ದಿಕ್ ಪಾಂಡ್ಯ ಸಮಾರಂಭದಲ್ಲಿ ಎರಡು ಟಕಿಲಾಗಳನ್ನು ಆರ್ಡರ್ ಮಾಡಿದ್ದಾರೆ. ಹಿನ್ನೆಲೆ ಸಂಗೀತಗಳ ನಡುವೆಯೂ ಅವರು ಟಕಿಲಾ ಕೊಡಿ ಎಂದು ಕೇಳಿದ್ದು ಸ್ಪಷ್ಟವಾಗಿ ವಿಡಿಯೊದಲ್ಲಿ ದಾಖಲಾಗಿದೆ.
ಟಕಿಲಾ (Tequila) ಎಂಬುದು ನೀಲಿ ವೆಬರ್ ಅಗವೆಯಿಂದ ತಯಾರಿಸಿದ ಮದ್ಯ. ಮೆಕ್ಸಿಕೊದಲ್ಲಿ ಉತ್ಪಾದಿಸಲಾದ ಡಿಸ್ಟಿಲ್ಡ್ ಆಲ್ಕೋಹಾಲ್ ಇದು. ಇದು 35ರಿಂದ 40 ಪ್ರತಿಶತ ಆಲ್ಕೋಹಾಲ್ ಹೊಂದಿರುತ್ತದೆ. ಇದು ಮದ್ಯಗಳ ಸಾಲಿನಲ್ಲಿ ಅತ್ಯಂತ ಪ್ರಬಲವಾಗಿದೆ. ಸಾಮಾನ್ಯವಾಗಿ ಈ ಮದ್ಯವನ್ನು ಕುಡಿದವರು ಬೇಗ ಮತ್ತೇರಿಸಿಕೊಳ್ಳುತ್ತಾರೆ. ಇಂಥ ಮದ್ಯವನ್ನು ಪಾಂಡ್ಯ ಕೇಳಿರುವುದು ಚರ್ಚೆಗೆ ಕಾರಣವಾಗಿದೆ.
ಈ ಕಾರ್ಯಕ್ರಮದಲ್ಲಿ ಶಾರುಖ್ ಖಾನ್, ರಣವೀರ್ ಸಿಂಗ್, ಸಲ್ಮಾನ್ ಖಾನ್, ಆಲಿಯಾ ಭಟ್, ಕೃತಿ ಸನೋನ್, ಮಾಧುರಿ ದೀಕ್ಷಿತ್ ಮತ್ತು ಇತರ ಅನೇಕ ತಾರೆಯರು ಕಾಣಿಸಿಕೊಂಡಿದ್ದರು. ಕ್ರಿಕೆಟಿಗರಲ್ಲಿ ಹಾರ್ದಿಕ್ ಪಾಂಡ್ಯ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಜಸ್ಪ್ರೀತ್ ಬುಮ್ರಾ, ಎಂಎಸ್ ಧೋನಿ ಮತ್ತು ಶಿಖರ್ ಧವನ್ ಮದುವೆಯಲ್ಲಿದ್ದರು.
2024ರ ಟಿ20 ವಿಶ್ವಕಪ್ ಗೆಲುವಿನಲ್ಲಿ ಹಾರ್ದಿಕ್ ಪಾಂಡ್ಯ ಪಾತ್ರ
2024ರ ಟಿ20 ವಿಶ್ವಕಪ್ ಗೆಲುವಿನಲ್ಲಿ ಹಾರ್ದಿಕ್ ಪಾಂಡ್ಯ ಪ್ರಮುಖ ಪಾತ್ರ ವಹಿಸಿದ್ದರು. ಆಲ್ರೌಂಡರ್ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಅಗತ್ಯ ಕೊಡುಗೆಗಳನ್ನು ನೀಡಿದ್ದರು. 11 ವರ್ಷಗಳ ಬಳಿಕ ಭಾರತವನ್ನು ಮೊದಲ ಬಾರಿಗೆ ಐಸಿಸಿ ಟ್ರೋಫಿ ಕಡೆಗೆ ಮುನ್ನಡೆಸಿದ್ದರು.
2024 ರ ಟಿ 20 ವಿಶ್ವಕಪ್ನಲ್ಲಿ ಹಾರ್ದಿಕ್ 8 ಪಂದ್ಯಗಳಲ್ಲಿ 48 ಸರಾಸರಿ ಮತ್ತು 151.57 ಸ್ಟ್ರೈಕ್ ರೇಟ್ನಲ್ಲಿ 144 ರನ್ ಗಳಿಸಿದ್ದಾರೆ. ಅಫ್ಘಾನಿಸ್ತಾನ, ಬಾಂಗ್ಲಾದೇಶ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧದ ಅವರ ಅರ್ಧ ಶತಕಗಳು ಭಾರತದ ಗೆಲುವಿನಲ್ಲಿ ನಿರ್ಣಾಯಕವಾಗಿದ್ದವು.
ಇದನ್ನೂ ಓದಿ: KL Rahul : ಬಪ್ಪನಾಡು ದುರ್ಗಾಪರಮೇಶ್ವರಿ ದೇಗುಲಕ್ಕೆ ಕ್ರಿಕೆಟಿಗ ಕೆ. ಎಲ್ ರಾಹುಲ್ ದಂಪತಿ ಭೇಟಿ
ಪಾಂಡ್ಯ ಅವರು ಮೂರನೇ ವೇಗದ ಬೌಲರ್ ಪಾತ್ರವನ್ನು ಪರಿಪೂರ್ಣವಾಗಿ ನಿರ್ವಹಿಸಿದ್ದರು. ಅವರು 8 ಪಂದ್ಯಗಳಲ್ಲಿ 11 ವಿಕೆಟ್ಗಳನ್ನು ಪಡೆದಿದ್ದಾರೆ. ಫೈನಲ್ ಪಂದ್ಯದ ಕೊನೆಯ ಓವರ್ನಲ್ಲಿ ಹಾರ್ದಿಕ್ 16 ರನ್ಗಳನ್ನು ಯಶಸ್ವಿಯಾಗಿ ರಕ್ಷಿಸಿ ಭಾರತವನ್ನು ಐತಿಹಾಸಿಕ ಗೆಲುವಿನತ್ತ ಕೊಂಡೊಯ್ದಿದ್ದರು.. ಫೈನಲ್ನಲ್ಲಿ ಅವರು ದಕ್ಷಿಣ ಆಫ್ರಿಕಾ ವಿರುದ್ಧ 20 ರನ್ಗೆ 3 ವಿಕೆಟ್ ಪಡೆದರು.