Site icon Vistara News

Hardik Pandya : ಹಾರ್ದಿಕ್​ ಪಾಂಡ್ಯಗೆ ಹೊಸ ಆಫರ್​, ಹ್ಯುಂಡೈಯ ಹೊಸ ಕಾರಿಗೆ ಅವರೇ ಬ್ರಾಂಡ್​ ಅಂಬಾಸಿಡರ್​

Hardik Pandya

#image_title

ನವ ದೆಹಲಿ: ಹ್ಯುಂಡೈ ಕಂಪನಿಯು ತನ್ನ ಹೊಸ ಸಬ್ ಕಾಂಪ್ಯಾಕ್ಟ್ ಎಸ್​​ಯುವಿ ಎಕ್ಸ್​ಟೆರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ ಕಾರಿನ ಮುಂಭಾಗ ಮತ್ತು ಹಿಂಭಾಗದ ಹಲವು ಚಿತ್ರಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಹ್ಯುಂಡೈ ಈ ಕಾರನ್ನು ಜುಲೈ 10ರಂದು ಭಾರತದ ಮಾರುಕಟ್ಟೆಗೆ ಇಳಿಸಲಿದೆ. ಏತನ್ಮಧ್ಯೆ, ಹ್ಯುಂಡೈ ಎಕ್ಸ್​​ಟೆರ್​ಗಾಗಿ ಹೊಸ ಟಿವಿ ಜಾಹೀರಾತು ಬಿಡುಗಡೆ ಮಾಡಿದೆ. ಈ ವಿಡಿಯೊದಲ್ಲಿ ಭಾರತ ತಂಡದ ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ (Hardik Pandya) ಅವರಿದ್ದು, ಹೊಸ ಕಾರಿಗೆ ಅವರೇ ಬ್ರಾಂಡ್ ಅಂಬಾಸಿಡರ್​ ಆಗಿರಲಿದ್ದಾರೆ ಎಂದು ಹೇಳಲಾಗಿದೆ. ಇದು ಟಾಟಾ ಪಂಚ್​ ಪಾರಮ್ಯ ಸಾಧಿಸಿರುವ ಸಬ್​ ಕಾಂಪಾಕ್ಟ್​​ ಎಸ್​​​ಯುವಿ ಸೆಗ್ಮೆಂಟ್​​ಗೆ ಪ್ರವೇಶ ಪಡೆಯಲಿದೆ ಎಕ್ಸ್​ಟೆರ್​.

ಹ್ಯುಂಡೈ ಇಂಡಿಯಾ ತನ್ನ ಅಧಿಕೃತ ಯೂಟ್ಯೂಬ್ ಚಾನೆಲ್​​ನಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದೆ. ಅದರಲ್ಲಿ ಕಾರಿನ ವಿನ್ಯಾಸವನ್ನು ತೋರಿಸಲಾಗಿದೆ. ಸಬ್ ಕಾಂಪ್ಯಾಕ್ಟ್ ಎಸ್​​ಯುವಿಯಲ್ಲಿ ಎಚ್ ಆಕಾರದ ಡೇಟೈಮ್ ರನ್ನಿಂಗ್ ಎಲ್ಇಡಿಗಳು, ಆಯತಾಕಾರದಎಲ್ಇಡಿ ಪ್ರೊಜೆಕ್ಟರ್ ಲೈಟ್​​ಗಳು, ಅಗಲ ಗ್ರಿಲ್ ಮತ್ತು ಮುಂಭಾಗದಲ್ಲಿ ಫಾಕ್ಸ್ ಸಿಲ್ವರ್ ಸ್ಕಿಡ್ ಪ್ಲೇಟ್ ಇಡಲಾಗಿದೆ. ಚೌಕಾಕಾರದ ವೀಲ್​ ಅಲಾಯ್​​ಗಳು, ಬಾಡಿ ಕ್ಲಾಡಿಂಗ್​ನೊಂದಿಗೆ ಸೈಡ್ ಪ್ರೊಪೈಲ್ ಅತ್ಯಾಕರ್ಷಕವಾಗಿದೆ. ಮುಂಭಾಗದ ಗ್ರಿಲ್ ಮೇಲೆ ಎಕ್ಸ್​ಟೆರ್​ ಬ್ಯಾಜ್​ ಹಾಕಲಾಗಿದೆ.

ಹೇಗಿದೆ ವಿನ್ಯಾಸ?

ಮುಂಭಾಗದಲ್ಲಿ ಕಾರಿನ ಮಾಡೆಲ್​ನ ಬ್ಯಾಡ್ಜ್ ಹಾಕಿರುವುದು ಇದೇ ಮೊದಲ ಬಾರಿ ಎನ್ನಲಾಗಿದೆ. ಕಾರು ಚೌಕಾಕಾರದಲ್ಲಿದ್ದು. ಟೇಲ್ ಲ್ಯಾಂಪ್​​ನಲ್ಲಿಯೂ ಇದೇ ರೀತಿಯ ಎಚ್-ಆಕಾರದ ಎಲ್ಇಡಿ ಇನ್​ಸರ್ಟ್​ಗಳಿವೆ. ಟೈಲ್ ಗೇಟ್ ನ ಉದ್ದಕ್ಕೂ ಕಪ್ಪು ಬ್ಯಾಂಡ್ ಅಳವಡಿಸಲಾಗಿದೆ . ಹ್ಯುಂಡೈ ಲೋಗೋವನ್ನು ಈ ಕಪ್ಪು ವಿನ್ಯಾಸದ ಬ್ಯಾಂಡ್ ಮೇಲೆ ಇರಿಸಲಾಗಿದೆ. ಹ್ಯುಂಡೈ ಎಕ್ಸ್ಟರ್ ನ ಹಿಂಭಾಗದ ಬಂಪರ್​​ನ ಕೆಳಭಾಗದಲ್ಲಿರುವ ಕಪ್ಪು ಬಾಡಿ ಕ್ಲಾಡಿಂಗ್​ ಮೇಲೆ ಬೃಹತ್​​ ಫಾಕ್ಸ್ ಸಿಲ್ವರ್ ಸ್ಕಿಡ್ ಪ್ಲೇಟ್​ ಹಾಕಲಾಗಿದೆ. ಅದರ ಎರಡೂ ತುದಿಗಳಲ್ಲಿ ರಿಫ್ಲೆಕ್ಟರ್ ಗಳನ್ನು ಇರಿಸಲಾಗುತ್ತದೆ. ರೂಫ್ ಸ್ಪಾಯ್ಲರ್, ಶಾರ್ಕ್ ಫಿನ್ ಆಂಟೆನಾ ಮತ್ತು ರೂಫ್ ರೇಲ್ಸ್​​ಗಳ ನಡುವೆ ಇರಿಸಲಾದ ಎಲ್ಇಡಿ ಬ್ರೇಕ್ ಲೈಟ್​​ಗಳಿವೆ.

ಇಂಟೀರಿಯರ್​ ಹೇಗಿರಬಹುದು?

ವೀಡಿಯೊ ಹ್ಯುಂಡೈ ಎಕ್ಸ್​ಟೆರ್​ ಕಾರಿನ ಇಂಟೀರಿಯರ್​ ತೋರಿಸಿಲ್ಲ. ಆದರೆ, ಹ್ಯುಂಡೈ ನೀಡಬಲ್ಲ ಕೆಲವು ಫೀಚರ್​ಗಳನ್ನು ಅಂದಾಜಿಸಬಹುದು. ಸನ್ ರೂಫ್, ವೈರ್ ಲೆಸ್ ಚಾರ್ಜರ್, ಆಟೋಮ್ಯಾಟಿಕ್​ ಕ್ಲೈಮೇಟ್​ ಕಂಟ್ರೋಲ್​, ಹೊಸ ಟಚ್ ಸ್ಕ್ರೀನ್ ಇನ್ಫೋಟೈನ್​​ಮೆಂಟ್ ಸಿಸ್ಟಮ್ ಇರಲಿದೆ. ಎಕ್ಸ್​ಟೆರ್​ ತನ್ನ ಸೆಗ್ಮೆಂಟಿನಲ್ಲಿ ಡ್ಯುಯಲ್ ಕ್ಯಾಮೆರಾಗಳೊಂದಿಗೆ ಬರುವ ಮೊದಲ ಕಾರಾಗಲಿದೆ. ಆರು ಏರ್​​ಬ್ಯಾಗ್ ಗಳು, ಇಎಸ್​​ಸಿ, ಇಬಿಡಿಯೊಂದಿಗೆ ಎಬಿಎಸ್, ರಿವರ್ಸ್ ಪಾರ್ಕಿಂಗ್ ಸೆನ್ಸಾರ್​​ಗಳು ಮತ್ತು ಕ್ಯಾಮೆರಾ ಮತ್ತು ಹಿಲ್ ಸ್ಟಾರ್ಟ್ ಅಸಿಸ್ಟ್ ಫೀಚರ್​​ಗಳಿವೆ.

ಎಂಜಿನ್ ಸಾಮರ್ಥ್ಯ?

ಹ್ಯುಂಡೈ ಎಕ್ಸ್ಟರ್ 1.2-ಲೀಟರ್ ನಾಲ್ಕು ಸಿಲಿಂಡರ್ ನ್ಯಾಚುರಲಿ-ಆಸ್ಪಿರೇಟೆಡ್ ಪೆಟ್ರೋಲ್ ಎಂಜಿನ್​ ಹೊಂದಿರಲಿದೆ. ಅಂದಾಜಿನ ಪ್ರಕಾರ ಇದೊಂದೇ ಆಯ್ಕೆ ಇರಲಿದೆ. ಈ ಎಂಜಿನ್ 5 ಸ್ಪೀಡ್ ಮ್ಯಾನುವಲ್ ಮತ್ತು 5 ಸ್ಪೀಡ್ ಎಎಂಟಿ ಗೇರ್ ಬಾಕ್ಸ್ ಆಯ್ಕೆಗಳೊಂದಿಗೆ ಲಭ್ಯವಿರಲಿದೆ. ಇದು 83 ಬಿಎಚ್​​ಪಿ ಪವರ್ ಮತ್ತು 114 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಹ್ಯುಂಡೈ ಗ್ರ್ಯಾಂಡ್ ಐ10 ನಿಯೋಸ್, ಔರಾ ಮತ್ತು ವೆನ್ಯೂವಿನ ಎಂಜಿನ್ ಹೊಂದಿರಲಿದೆ.

ಹ್ಯುಂಡೈ ಎಕ್ಸ್ಟರ್ ಟಾಟಾ ಪಂಚ್ ಮತ್ತು ಸಿಟ್ರೋಯೆನ್ ಸಿ3 ಯಂಥ ಕಾರುಗಳಿಗೆ ಪೈಪೋಟಿ ನೀಡಲಿದೆ. ಪಂಚ್ ಪೆಟ್ರೋಲ್​ ಆಯ್ಕೆಯಲ್ಲಿ ಮಾತ್ರ ಲಭ್ಯವಿದೆ. ಭವಿಷ್ಯದಲ್ಲಿ ಸಿಎನ್​ಜಿ ಆಯ್ಕೆಯೂ ಸಿಗಬಹುದು.

Exit mobile version