ಮುಂಬಯಿ: ಹಾರ್ದಿಕ್ ಪಾಂಡ್ಯ(Hardik Pandya) ಮತ್ತು ನತಾಶಾ ಸ್ಟಾನ್‌ಕೋವಿಕ್(Nataša Stanković) ವಿಚ್ಛೇದನ ಪಡೆಯಲಿದ್ದಾರೆ ಎಂಬ ಸುದ್ದಿಯ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ ಅವರು ಸುಂದರ ಹುಡುಗಿಯ ಜತೆಗಿರುವ ಫೋಟೊ ಮತ್ತು ವಿಡಿಯೊ ವೈರಲ್ ಆಗಿದೆ. ಈ ವಿಡಿಯೊ ಕಂಡ ನೆಟ್ಟಿಗರು ಪಾಂಡ್ಯ ನತಾಶಾಗೆ ವಿಚ್ಛೇದನ ಕೊಡುವುದು ಖಚಿತ ಎಂದಿದ್ದಾರೆ.
ಹಾರ್ದಿಕ್ ಪಾಂಡ್ಯ ಜತೆ ಕಾಣಿಸಿಕೊಂಡಿರುವ ಈ ಹುಡುಗಿಯ ಹೆಸರು ಪ್ರಾಚಿ ಸೋಲಂಕಿ(Prachi Solanki). ಈಕೆ ಪ್ರಸಿದ್ಧ ಮೇಕಪ್ ಆರ್ಟಿಸ್ಟ್, ಹಾಗೂ ಸೋಷಿಯಲ್ ಮೀಡಿಯಾ ಇನ್ಫುಲೆನ್ಸರ್ ಆಗಿದ್ದಾಳೆ. ಹಾರ್ದಿಕ್ ಜತೆಗಿರುವ ಹಲವು ಸುಂದರ ಕ್ಷಣದ ಫೋಟೊ ಮತ್ತು ವಿಡಿಯೊವನ್ನು ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಸೋಲಂಕಿ, ವಿಶ್ವಕಪ್ ಹೀರೋ ಅವರನ್ನು ಭೇಟಿ ಮಾಡಿದೆ ಎಂದು ಬರೆದುಕೊಂಡು ಲವ್ ಎಮೊಜಿಯನ್ನು ಹಾಕಿದ್ದಾರೆ. ವಿಡಿಯೊದಲ್ಲಿ ಪಾಂಡ್ಯ ಜತೆ ಸೋಲಂಕಿ ಅತ್ಯಂತ ಆತ್ಮೀಯವಾಗಿ ಕಂಡುಬಂದಿದ್ದಾರೆ.
ಸೋಲಂಕಿ ಅವರು ಹಾರ್ದಿಕ್ ಮನೆಗೆ ಬಂದು ಭೇಟಿಯಾಗಿರುವುದು ನೆಟ್ಟಿಗರಿಗೆ ಹಲವು ಅನುಮಾನ ಮೂಡುವಂತೆ ಮಾಡಿದೆ. ಪಾಂಡ್ಯ ಕುಟುಂಬದ ಸದ್ಯರೊಂದಿಗೂ ಸೋಲಂಕಿ ಆತ್ಮೀಯವಾಗಿರುವ ಫೋಟೊವನ್ನು ಕೂಡ ಹಂಚಿಕೊಂಡಿದ್ದಾರೆ. ಸದ್ಯಕ್ಕೆ ಇದೊಂದು ಆತ್ಮೀಯ ಭೇಟಿಯಂತೆ ತೋರುತ್ತಿದ್ದರೂ ಕೂಡ ನೆಟ್ಟಿಗರು ಮಾತ್ರ ಶೀಘ್ರದಲ್ಲೇ ಪಾಂಡ್ಯ ಸೋಲಂಕಿಯನ್ನು ವಿವಾಹವಾಗಲಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚಿಸಲು ಆರಂಭಿಸಿದ್ದಾರೆ.
ಇದನ್ನೂ ಓದಿ Hardik Pandya: ನತಾಶಾ ಜತೆ ವಿಚ್ಛೇದನ ಖಚಿತ; ಸುಳಿವು ನೀಡಿದ ಹಾರ್ದಿಕ್ ಪಾಂಡ್ಯ ಪೋಸ್ಟ್!
ಕೆಳವು ದಿನಗಳ ಹಿಂದೆ ಟಿ20 ವಿಶ್ವಕಪ್ ಗೆದ್ದು ತವರಿಗೆ ಮರಳಿದ ಹಾರ್ದಿಕ್ ಪಾಂಡ್ಯ ತಮ್ಮ ಮಗನೊಂದಿಗೆ ವಿಶ್ವಕಪ್ ಗೆಲುವನ್ನು ಸಂಭ್ರಮಿಸಿದ್ದರು. ಈ ಫೋಟೊ ಮತ್ತು ವಿಡಿಯೊಗಳನ್ನು ಪಾಂಡ್ಯ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆದರೆ ನತಾಶಾ ಮಾತ್ರ ಕಾಣಿಸಿಕೊಂಡಿರಲಿಲ್ಲ. ಈ ಬಾರಿಯ ಐಪಿಎಲ್ ಸೇರಿ ವಿಶ್ವಕಪ್ ಟೂರ್ನಿಯ ವೇಳೆಯೂ ಅವರು ಪಾಂಡ್ಯಗೆ ಬೆಂಗಲ ಸೂಚಿಸುವ ಯಾವುದೇ ಪೋಸ್ಟ್ ಆಗಲಿ ಮಾಡಿರಲಿಲ್ಲ. ಇದೆಲ್ಲವನ್ನು ನೋಡುವಾಗ ಪಾಂಡ್ಯ ಮತ್ತು ನತಾಶಾ ದೂರ ಆಗುವುದು ಖಚಿತ ಎನ್ನುವಂತಿದೆ.
ವಿಚ್ಛೇದನದ ಸುದ್ದಿಯ ನಡುವೆ, ಕೆಲ ದಿನಗಳ ಹಿಂದೆ ನತಾಶಾ ಮೊದಲ ಬಾರಿಗೆ ಪಾಪರಾಜಿಗಳ ಕ್ಯಾಮರಾದಲ್ಲಿ ಸೆರೆಯಾಗಿದ್ದರು. ಬಾಲಿವುಡ್ ಉದಯೋನ್ಮುಖ ನಟಿ ದಿಶಾ ಪಟಾನಿ ಅವರ ಬಾಯ್ಫ್ರೆಂಡ್ ಎಂದು ಹೇಳಿಕೊಳ್ಳಲಾಗುತ್ತಿರುವ ವ್ಯಕ್ತಿಯ ಜತೆ ಕಾಣಿಸಿಕೊಂಡಿದ್ದರು. ಈ ವೇಳೆ ನತಾಶಗೆ ಪಾಪರಾಜಿಗಳು ಪಾಂಡ್ಯ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ನತಾಶ ಯಾವುದೇ ಪ್ರತಿಕ್ರಿಯೆ ನೀಡದೆ ತೆರಳಿದ್ದರು.
ಇದಾಗ ಬಳಿಕ ನತಾಶಾ ಸ್ಟಾನ್‌ಕೋವಿಕ್ ಅವರು ಯೇಸುವಿನ ಚಿತ್ರವನ್ನು ಹಂಚಿಕೊಂಡಿದ್ದರು. ಯೇಸು ತನ್ನ ಜಾಡನ್ನು ಹಿಂಬಾಲಿಸಿದಾಗ ಕುರಿಮರಿ ಮುಂದಾಳತ್ವ ವಹಿಸುತ್ತಿರುವ ಫೋಟೊ ಇದಾಗಿತ್ತು. ಈ ಫೋಟೊವನ್ನು ಕಂಡಾಗ ಈ ಜೋಡಿ ಶೀಘ್ರದಲ್ಲೇ ದೂರವಾಗುವುದು ಖಚಿತ ಎನ್ನುವಂತಿತ್ತು. ಅಲ್ಲದೆ ವಿಚ್ಛೇದನದ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ತನ್ನ ಆಸ್ತಿಯಲ್ಲಿ ಶೇ. 70 ಪ್ರತಿಶತವನ್ನು ನತಾಶಾಗೆ ನೀಡಬೇಕಾಗಬಹುದು ಎಂದು ವರದಿಯಾಗಿತ್ತು.