Site icon Vistara News

Hardik Pandya : ಮುಂಬಯಿ ತಂಡಕ್ಕೆ ಹಾರ್ದಿಕ್ ಪಾಂಡ್ಯ ವಾಪಸ್​?

Hardik Pandya

ಮುಂಬಯಿ: ಮುಂದಿನ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಹರಾಜಿಗೆ ಮುಂಚಿತವಾಗಿ ಭಾರತದ ಟಿ 20 ಐ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ. ಏಕೆಂದರೆ ಗುಜರಾತ್ ಟೈಟಾನ್ಸ್ ನಾಯಕ ಮುಂಬೈ ಇಂಡಿಯನ್ಸ್​ಗೆ ಮರಳುವ ಸಾಧ್ಯತೆಯಿದೆ ಎಂಬುದಾಗಿ ವರದಿಯಾಗಿದೆ. ಗುಜರಾತ್ ತಂಡವನ್ನು ಅವರನ್ನು ಬಿಡುಗಡೆ ಮಾಡಲಿದ್ದು, ಮುಂಬಯಿ ತಂಡ ವಾಪಸ್ ಪಡೆದುಕೊಳ್ಳಲಿದೆ ಎನ್ನಲಾಗಿದೆ.

ಈ ಬೆಳವಣಿಗೆಯ ಬಗ್ಗೆ ಸ್ಪಷ್ಟತೆ ನೀಡಲು ಮುಂಬೈ ಇಂಡಿಯನ್ಸ್ ನಿರಾಕರಿಸಿದ್ದರಿಂದ, ಐಪಿಎಲ್​​ ಟ್ರೇಡಿಂಗ್​ ವಿಂಡೋ ಕೊನೆಯಾಗುವ ದಿನವಾದ ನವೆಂಬರ್ 26 ರವರೆಗೆ ಕಾಯಬೇಕಾಗುತ್ತದೆ. ಪಾಂಡ್ಯ 2022 ರ ಋತುವಿಗೆ ಮುಂಚಿತವಾಗಿ ಎಮ್​ಐ ತಂಡದಿಂದ ಬಿಡುಗಡೆಯಾಗುವ ಮೊದಲು ಏಳು ಋತುಗಳಲ್ಲಿ ಮುಂಬೈ ಪರ ಆಡಿದ್ದರು. ಗುಜರಾತ್ ಟೈಟಾನ್ಸ್ ತಂಡವನ್ನು ಸೇರಿಕೊಂಡ ನಂತರ, ಪಾಂಡ್ಯ ತಂಡವನ್ನು ಚೊಚ್ಚಲ ಋತುವಿನಲ್ಲಿ ಚಾಂಪಿಯನ್​ ಪಟ್ಟಕ್ಕೇರಿಸಿದ್ದರು. ನಂತರ ಆವೃತ್ತಿಯಲ್ಲಿ ರನ್ನರ್ ಅಪ್​ ಸ್ಥಾನ ಪಡೆದುಕೊಂಡಿತ್ತು.

“ಹೌದು, ಹಾರ್ದಿಕ್ ಮುಂಬೈ ಇಂಡಿಯನ್ಸ್​ ತಂಡಕ್ಕೆ ಹೋಗುವ ಬಗ್ಗೆ ಮಾತುಕತೆಗಳು ನಡೆದಿವೆ ಎಂದು ನಾನು ದೃಢಪಡಿಸಬಲ್ಲೆ. ಆದರೆ ಈ ಸಮಯದಲ್ಲಿ, ಒಪ್ಪಂದಕ್ಕೆ ಇನ್ನೂ ಸಹಿ ಹಾಕದ ಕಾರಣ ಹೆಚ್ಚಿನದನ್ನು ಖಚಿತಪಡಿಸಲಾಗುವುದಿಲ್ಲ “ಎಂದು ಗುಜರಾತ್ ತಂಡದ ಬೆಳವಣಿಗೆಗಳನ್ನು ಟ್ರ್ಯಾಕ್ ಮಾಡುವ ಐಪಿಎಲ್ ಮೂಲವೊಂದು ತಿಳಿಸಿದೆ. ಟ್ರೇ ಡಿಂಗ್​ ಆಟಗಾರರನ್ನು ಬದಲಾಯಿಸುವುದಕ್ಕೆ ಸೀಮಿತವಾಗಿರುವ ಕಾರಣ ಪಾಂಡ್ಯ ಎಂಐ ತಂಡಕ್ಕೆ ಮರಳಿದರೆ, ಯಾರು ಟೈಟನ್ಸ್​​ ನಾಯಕರಾಗಬಹುದು ಎಂಬ ಕೌತುಕ ಹೆಚ್ಚಾಗಿದೆ. ‘

ಮುಂಬೈನಲ್ಲಿ ಎಷ್ಟಿದೆ ದುಡ್ಡು?

ಕಳೆದ ಎರಡು ಋತುಗಳಲ್ಲಿ ಗಾಯಗೊಂಡಿರುವ ಜೋಫ್ರಾ ಆರ್ಚರ್ ಅವರನ್ನು 8 ಕೋಟಿ ರೂ.ಗೆ ಖರೀದಿಸಲು ಮುಂಬೈ ಇಂಡಿಯನ್ಸ್ ನಿರ್ಧರಿಸಿದೆಯೇ ಎಂಬ ಬಗ್ಗೆ ಇನ್ನೂ ಯಾವುದೇ ದೃಢೀಕರಣವಿಲ್ಲ. ಐಪಿಎಲ್ ಆಡಳಿತ ಮಂಡಳಿಯು ಹೆಚ್ಚುವರಿ 5 ಕೋಟಿ ರೂ.ಗಳನ್ನು ಹೆಚ್ಚಿಸಿದೆ. ಹೀಗಾಗಿ ಹಣದ ಮೀಸಲು ಹೆಚ್ಚಿಸಲು ತಮ್ಮ ಕೆಲವು ದೊಡ್ಡ ಖರೀದಿಗಳನ್ನು ಬಿಡುಗಡೆ ಮಾಡಬೇಕಾಗುತ್ತದೆ. ಹೊರತುಪಡಿಸಿದರೆ ಎಂಐ ತಂಡ ಒಟ್ಟು 5.50 ಕೋಟಿ ರೂ.ಗಳೊಂದಿಗೆ (ಸದ್ಯ ಪರ್ಸ್​ನಲ್ಲಿರುವ 50 ಲಕ್ಷ ರೂ.ಸೇರಿ ) ಮಿನಿ ಹರಾಜಿಗೆ ಹೋಗಬೇಕಾಗುತ್ತದೆ.

ಇದನ್ನೂ ಓದಿ : Imad Wasim : ಏಕಾಏಕಿ ನಿವೃತ್ತಿ ಘೋಷಿಸಿದ ಪಾಕಿಸ್ತಾನದ ಬಿಗ್​ ಹಿಟ್​ ಆಲ್​ರೌಂಡರ್​

ಪಾಂಡ್ಯ ಅಂತಿಮವಾಗಿ ಮುಂಬೈ ಇಂಡಿಯನ್ಸ್ ಪರ ಆಡಿದರೆ, ತಂಡವನ್ನು ಐದು ಟ್ರೋಫಿಗಳಿಗೆ ಮುನ್ನಡೆಸಿದ ಮತ್ತು ಉತ್ತಮ ಫಾರ್ಮ್ನಲ್ಲಿರುವ ಅಪ್ರತಿಮ ರೋಹಿತ್ ಶರ್ಮಾ ಅವರ ಅಡಿಯಲ್ಲಿ ಆಡಲಿದ್ದಾರೆಯೇ ಅಥವಾ ಅವರೇ ನಾಯಕರಾಗುತ್ತಾರೆಯೇ ಎಂಬುದು ಪ್ರಶ್ನೆಯಾಗಿದೆ. ಈ ಪ್ರಶ್ನೆಗಳು ಸದ್ಯಕ್ಕೆ ಉತ್ತರಿಸದೆ ಉಳಿದಿವೆ. ಬಿಸಿಸಿಐ ಅಂತಿಮ ಟ್ರೇಡಿಂಗ್​ ಪಟ್ಟಿಯನ್ನು ಅಧಿಕೃತವಾಗಿ ಘೋಷಿಸಿದ ನಂತರವೇ ಚಿತ್ರ ಸ್ಪಷ್ಟವಾಗುತ್ತದೆ.

Exit mobile version