Site icon Vistara News

Hardik Pandya: ಬ್ರೇಕ್ ಅಪ್ ಕುರಿತು ರಹಸ್ಯ ಪೋಸ್ಟ್​ ಮಾಡಿದ ಹಾರ್ದಿಕ್ ಪಾಂಡ್ಯ ಪತ್ನಿ

Hardik Pandya

Hardik Pandya: Natasa Stankovic Shares Cryptic Post Amid Hardik Pandya Divorce Rumours, Drops a Pic of Jesus

ಲಂಡನ್​: ಹಾರ್ದಿಕ್ ಪಾಂಡ್ಯ(Hardik Pandya) ಮತ್ತು ನತಾಶಾ ಸ್ಟಾನ್‌ಕೋವಿಕ್‌(Natasa Stankovic) ಅವರ ವಿವಾಹ ಮುರಿದು ಬಿದ್ದಿದೆಯೇ?, ಈ ಜೋಡಿ ವಿಚ್ಛೇದನಕ್ಕೆ ಪಡೆಯಲಿದೆಯೇ? ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಯಾಗುತ್ತಿದೆ. ಇದರ ಬೆನ್ನಲ್ಲೇ ನತಾಶಾ ರಹಸ್ಯ ಪೋಸ್ಟ್ ಒಂದನ್ನು ಮಾಡಿದ್ದಾರೆ. ಈ ಪೋಸ್ಟ್​ ನೋಡುವಾಗ ಈ ಜೋಡಿ ಶೀಘ್ರದಲ್ಲೇ ದೂರವಾಗುವುದು ಖಚಿತ ಎನ್ನುವಂತಿದೆ.

ನತಾಶಾ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪಾಂಡ್ಯ ಹೆಸರನ್ನು ಮತ್ತು ಅವರ ಜತೆಗಿರುವ ಫೋಟೊವನ್ನು ಅಳಿಸಿಹಾಕಿದ ಬಳಿಕ ವಿಚ್ಛೇದನಕ್ಕೆ ಪಡೆಯಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತು. ಸದ್ಯ ಈ ವದಂತಿಗಳ ಬಗ್ಗೆ ಪಾಂಡ್ಯ ಅಥವಾ ನಾತಾಶಾ ಪ್ರತಿಕ್ರಿಯಿಸದಿದ್ದರೂ ಕೂಡ, ಶನಿವಾರ ರಾತ್ರಿ ನತಾಶಾ ಕುರಿಮರಿಯೊಂದಿಗೆ ಯೇಸುವಿನ ಚಿತ್ರವನ್ನು ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ, ಯೇಸು ತನ್ನ ಜಾಡನ್ನು ಹಿಂಬಾಲಿಸಿದಾಗ ಕುರಿಮರಿ ಮುಂದಾಳತ್ವ ವಹಿಸುತ್ತಿರುವ ಫೋಟೊ ಇದಾಗಿದೆ. ಈ ಫೋಟೊವನ್ನು ಅವರು ತಮ್ಮ ಮುಂದಿನ ಜೀವನದ ಅರ್ಥ ಕಲ್ಪಿಸುವ ನಿಟ್ಟಿನಲ್ಲಿಯೇ ಹಾಕಿದಂತಿದೆ.


ವಿಚ್ಛೇದನದ ಸುದ್ದಿಯ ನಡುವೆ, ನತಾಶಾ ಮೊದಲ ಬಾರಿಗೆ ಪಾಪರಾಜಿಗಳ ಕ್ಯಾಮರಾದಲ್ಲಿ ಸೆರೆಯಾಗಿದ್ದಾರೆ. ಬಾಲಿವುಡ್ ಉದಯೋನ್ಮುಖ ನಟಿ ದಿಶಾ ಪಟಾನಿ ಅವರ ಬಾಯ್​ಫ್ರೆಂಡ್​ ಎಂದು ಹೇಳಿಕೊಳ್ಳಲಾಗುತ್ತಿರುವ ವ್ಯಕ್ತಿಯ ಜತೆ ಕಾಣಿಸಿಕೊಂಡಿದ್ದಾರೆ. ಅವರಿಬ್ಬರೂ ಸಾರ್ವಜನಿಕಗಾಗಿ ಹೋಗುತ್ತಿರುವ ವಿಡಿಯೊ ವೈರಲ್ ಆಗಿದ್ದು ಪಾಪರಾಜಿಗಳು (ಕ್ಯಾಮೆರಾಮನ್​ಗಳು) ಅವರಿಬ್ಬರ ಚಿತ್ರಗಳನ್ನು ಸೆರೆ ಹಿಡಿದಿದ್ದಾರೆ.

ನಟಿ ದಿಶಾ ಪಠಾಣಿ ಅವರ ವದಂತಿಯ ಗೆಳೆಯ ಅಲೆಕ್ಸಾಂಡರ್ ಅಲೆಕ್ಸ್ಲಿಕ್​ ಮತ್ತು ನತಾಶಾ ಜತೆಯಾಗಿ ಕಾಣಿಸಿಕೊಂಡಿದ್ದಾರೆ. ಪಾಪರಾಜಿಗಳಿಂದ ಸಾಕಷ್ಟು ವಿನಂತಿಗಳನ್ನು ಪಡೆದ ನಂತರ ನತಾಶಾ ಪೋಸ್ ನೀಡಿದ್ದಾರೆ. ಹೀಗಾಗಿ ಪಾಂಡ್ಯಾ ಜತೆಗಿನ ಡೈವೋರ್ಸ್​ ಪ್ರಕರಣವನ್ನು ಇನ್ನಷ್ಟು ಆಸಕ್ತಿದಾಯಕವಾಗಿದೆ. ಐಪಿಎಲ್ 2024 ರಲ್ಲಿ ಹಾರ್ದಿಕ್ ತಮ್ಮ ಉನ್ನತ ನಿರೀಕ್ಷೆಗಳಿಗೆ ತಕ್ಕ ಹಾಗೆ ಆಡಿಲ್ಲ. ಪತಿ ಸೋಲುತ್ತಿದ್ದರೂ ಒಂದೇ ಒಂದು ಬಾರಿಯೂ, ನತಾಶಾ ತಮ್ಮ ಪತಿಯ ಆತ್ಮವಿಶ್ವಾಸವನ್ನು ಹೆಚ್ಚಿಸಲು ಸ್ಟ್ಯಾಂಡ್​ಗಳಿಗೆ ಬಂದಿರಲಿಲ್ಲ.

ಇದನ್ನೂ ಓದಿ Hardik Pandya: ಪತ್ನಿಗೆ ಶೇ.70ರಷ್ಟು ಆಸ್ತಿ ವರ್ಗಾಯಿಸಲು ಮುಂದಾದ ಹಾರ್ದಿಕ್​ ಪಾಂಡ್ಯ; ಶೀಘ್ರದಲ್ಲೇ ವಿಚ್ಛೇದನ!

ಅಹಮದಾಬಾದ್ ಮಿರರ್ ವರದಿ ಪ್ರಕಾರ, ವಿಚ್ಛೇದನದ ಸಂದರ್ಭದಲ್ಲಿ ಹಾರ್ದಿಕ್ ಪಾಂಡ್ಯ ತನ್ನ ಆಸ್ತಿಯಲ್ಲಿ ಶೇ. 70 ಪ್ರತಿಶತವನ್ನು ನತಾಶಾಗೆ ನೀಡಬೇಕಾಗಬಹುದು. ಏಕೆಂದರೆ ಪಾಂಡ್ಯ ಅವರ ಹೆಂಡತಿ ಸರ್ಬಿಯಾ ದೇಶದವರು. ಹೀಗಾಗಿ ಅವರು ಜೀವನಾಂಶವನ್ನು ಸರ್ಬಿಯನ್ ದಿನಾರ್​ನಲ್ಲಿ ಪಡೆದುಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ.

ಹಾರ್ದಿಕ್‌ ಮತ್ತು ನತಾಶಾ ಕಳೆದ 2020ರಲ್ಲೇ ರಿಜಿಸ್ಟರ್‌ ರೀತಿಯಲ್ಲಿ ವಿವಾಹವಾಗಿದ್ದರು. ಮದುವೆಗೂ ಮುನ್ನವೇ ನತಾಶಾ ಅವರು ಗರ್ಭಿಣಿ ಆಗಿದ್ದರು. ಈ ಜೋಡಿಗೆ ಒಬ್ಬ ಪುತ್ರನಿದ್ದಾನೆ. ಈತನ ಹೆಸರು ಅಗಸ್ತ್ಯ. ಕಳೆದ ವರ್ಷ ಫೆ.14 ರಂದು ರಾಜಸ್ಥಾನದ ಉದಯ್‌ಪುರದಲ್ಲಿ ಕ್ರಿಷ್ಚಿಯನ್‌ ಸಂಪ್ರದಾಯದಂತೆ ಹಾರ್ದಿಕ್‌ ಮತ್ತು ನತಾಶಾ ಮತ್ತೊಮ್ಮೆ ಅದ್ದೂರಿಯಾಗಿ ಪುನರ್‌ ವಿವಾಹವಾಗಿದ್ದರು. ಕುಟುಂಬಸ್ಥರು ಮತ್ತು ಗೆಳೆಯರ ಸಮ್ಮುಖದಲ್ಲಿ ಮತ್ತೊಮ್ಮೆ ವಿವಾಹವಾಗಿದ್ದರು. ಇವರ ವಿವಾಹ ಸಮಾರಂಭದಲ್ಲಿ ಕೊಹ್ಲಿ-ಅನುಷ್ಕಾ, ರಾಹುಲ್‌-ಅಥಿಯಾ, ರಾಕಿಣಗ್​ ಸ್ಟಾರ್ ಯಶ್​ ಸೇರಿ ಹಲವು ಗಣ್ಯರೂ ಭಾಗಿಯಾಗಿದ್ದರು.

Exit mobile version