Site icon Vistara News

INDvsNA ODI | ವಿವಾದಾತ್ಮಕ ತೀರ್ಪಿಗೆ ಹಾರ್ದಿಕ್​ ಪಾಂಡ್ಯ ಔಟ್​; ಮೂರನೇ ಅಂಪೈರ್​ ವಿರುದ್ಧ ನೆಟ್ಟಿಗರ ಕಿಡಿ

hardik pandya

ಹೈದರಾಬಾದ್​ : ನ್ಯೂಜಿಲ್ಯಾಂಡ್​ ವಿರುದ್ಧದ ಏಕ ದಿನ ಸರಣಿಯ (INDvsNA ODI ) ಮೊದಲ ಪಂದ್ಯದಲ್ಲಿ ಭಾರತ ತಂಡದ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ಅವರಿಗೆ ಮೂರನೇ ಅಂಪೈರ್ ವಿವಾದಾತ್ಮಕ ಔಟ್​ ತೀರ್ಪು ನೀಡಿದರು. ಇದರಿಂದ ಕೋಪಗೊಂಡ ನೆಟ್ಟಿಗರು ಮೂರನೇ ಅಂಪೈರ್​ ತೀರ್ಪಿನ ವಿರುದ್ಧ ಕಿಡಿ ಕಾರಿದರು.

ಭಾರತದ ಇನಿಂಗ್ಸ್​ನ 40ನೇ ಓವರ್​ನಲ್ಲಿ ಈ ವಿವಾದಾತ್ಮಕ ತೀರ್ಪು ನೀಡಲಾಯಿತು. ಡ್ಯಾರಿಲ್​ ಮಿಚೆಲ್​ ಎಸೆತ ಪಾಂಡ್ಯ ಬ್ಯಾಟ್​ನಿಂದ ತಪ್ಪಿಸಿಕೊಂಡು ವಿಕೆಟ್​ಕೀಪರ್​ ಟಾಮ್​ ಲೇಥಮ್ ಕೈ ಸೇರಿತು. ಚೆಂಡು ಬೇಲ್ಸ್​ನಿಂದ ಕೂದಲೆಳೆ ಅಂತರದಲ್ಲಿ ಮೇಲಕ್ಕೆ ಸಾಗಿ ಲೇಥಮ್​ ಗ್ಲವ್ಸ್ ಸೇರಿಕೊಂಡಿತು. ಇದೇ ವೇಳೆ ಬೇಲ್ಸ್ ಎಗರಿತ್ತು. ಖಚಿತತೆ ಪಡೆಯುವ ಉದ್ದೇಶದಿಂದ ಫೀಲ್ಡ್​ ಅಂಪೈರ್​ಗಳ ಮೂರನೇ ಅಂಪೈರ್​ ಮೊರೆ ಹೋದರು.

ಚೆಂಡು ಸಾಗುವ ರೀತಿಯನ್ನು ಸೂಕ್ಷ್ಮವಾಗಿ ಗಮನಿಸಿದ ಮೂರನೇ ಅಂಪೈರ್ ಬೌಲ್ಡ್​ ಎಂದು​ ತೀರ್ಪು ನೀಡಿದರು. ತಕ್ಷಣ ಪಾಂಡ್ಯ ಸಮೇತ ಎಲ್ಲರೂ ಅಚ್ಚರಿಗೆ ಒಳಗಾದರು. ಚೆಂಡು ವಿಕೆಟ್​ಗಿಂತ ಮೇಲಿಂದ ಸಾಗಿದ್ದು, ವಿಕೆಟ್​ ಕೀಪರ್​ ಗ್ಲವ್ಸ್​ ಸಮೀಪವಿತ್ತು. ಹೀಗಾಗಿ ವಿಕೆಟ್​ಗೆ ಗ್ಲವ್ಸ್​ ತಾಗಿ ಬೇಲ್ಸ್​ ಬಿದ್ದಿದಿಯೇ ಹೊರತು ಚೆಂಡು ತಾಗಿಲ್ಲ ಎಂಬುದು ಅವರ ಅಭಿಪ್ರಾಯವಾಗಿತ್ತು. ಈ ವಿಚಾರ ನೆಟ್ಟಿಗರ ಚರ್ಚೆಗೆ ಕಾರಣವಾಯಿತು. ಅಂಪೈರ್​ಗಳ ಕೆಟ್ಟ ತೀರ್ಪಿನಿಂದ ಪಾಂಡ್ಯ ಅನಗತ್ಯವಾಗಿ ಔಟಾಗಬೇಕಾಯಿತು ಎಂದೆಲ್ಲ ಚರ್ಚೆ ನಡೆಯಿತು.

ಪಾಂಡ್ಯ ವಿಕೆಟ್​ ಬೀಳುತ್ತಿದ್ದಂತೆ ಭಾರತ ತಂಡ 40 ಓವರ್​ಗಳಲ್ಲಿ 251 ರನ್​ಗಳಿಗೆ 5 ವಿಕೆಟ್​ ಕಳೆದುಕೊಂಡಿತು. ಹಾರ್ದಿಕ್​ ಪಾಂಡ್ಯ 38 ಎಸೆತಗಳಲ್ಲಿ 28 ರನ್ ಬಾರಿಸಿ ಔಟಾದರು. ಆದಾದ ಬಳಿಕ ಶುಬ್ಮನ್​ ಗಿಲ್ ದ್ವಿ ಶತಕ ಬಾರಿಸಿ ಭಾರತ ತಂಡಕ್ಕೆ 249 ರನ್​ ಪೇರಿಸಲು ನೆರವಾದರು.

ಇದನ್ನೂ ಓದಿ | Hardik Pandya | ನೀರು ತಂದುಕೊಡದ ಸಹ ಆಟಗಾರರನ್ನು ನಿಂದಿಸಿದ ಹಾರ್ದಿಕ್​ ಪಾಂಡ್ಯ, ನೆಟ್ಟಿಗರ ಟೀಕೆ

Exit mobile version