INDvsNA ODI | ವಿವಾದಾತ್ಮಕ ತೀರ್ಪಿಗೆ ಹಾರ್ದಿಕ್​ ಪಾಂಡ್ಯ ಔಟ್​; ಮೂರನೇ ಅಂಪೈರ್​ ವಿರುದ್ಧ ನೆಟ್ಟಿಗರ ಕಿಡಿ - Vistara News

ಕ್ರಿಕೆಟ್

INDvsNA ODI | ವಿವಾದಾತ್ಮಕ ತೀರ್ಪಿಗೆ ಹಾರ್ದಿಕ್​ ಪಾಂಡ್ಯ ಔಟ್​; ಮೂರನೇ ಅಂಪೈರ್​ ವಿರುದ್ಧ ನೆಟ್ಟಿಗರ ಕಿಡಿ

ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ಔಟ್ ಅಲ್ಲ ಎಂಬುದಾಗಿ ಕ್ರಿಕೆಟ್​ ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.

VISTARANEWS.COM


on

hardik pandya
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೈದರಾಬಾದ್​ : ನ್ಯೂಜಿಲ್ಯಾಂಡ್​ ವಿರುದ್ಧದ ಏಕ ದಿನ ಸರಣಿಯ (INDvsNA ODI ) ಮೊದಲ ಪಂದ್ಯದಲ್ಲಿ ಭಾರತ ತಂಡದ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ಅವರಿಗೆ ಮೂರನೇ ಅಂಪೈರ್ ವಿವಾದಾತ್ಮಕ ಔಟ್​ ತೀರ್ಪು ನೀಡಿದರು. ಇದರಿಂದ ಕೋಪಗೊಂಡ ನೆಟ್ಟಿಗರು ಮೂರನೇ ಅಂಪೈರ್​ ತೀರ್ಪಿನ ವಿರುದ್ಧ ಕಿಡಿ ಕಾರಿದರು.

ಭಾರತದ ಇನಿಂಗ್ಸ್​ನ 40ನೇ ಓವರ್​ನಲ್ಲಿ ಈ ವಿವಾದಾತ್ಮಕ ತೀರ್ಪು ನೀಡಲಾಯಿತು. ಡ್ಯಾರಿಲ್​ ಮಿಚೆಲ್​ ಎಸೆತ ಪಾಂಡ್ಯ ಬ್ಯಾಟ್​ನಿಂದ ತಪ್ಪಿಸಿಕೊಂಡು ವಿಕೆಟ್​ಕೀಪರ್​ ಟಾಮ್​ ಲೇಥಮ್ ಕೈ ಸೇರಿತು. ಚೆಂಡು ಬೇಲ್ಸ್​ನಿಂದ ಕೂದಲೆಳೆ ಅಂತರದಲ್ಲಿ ಮೇಲಕ್ಕೆ ಸಾಗಿ ಲೇಥಮ್​ ಗ್ಲವ್ಸ್ ಸೇರಿಕೊಂಡಿತು. ಇದೇ ವೇಳೆ ಬೇಲ್ಸ್ ಎಗರಿತ್ತು. ಖಚಿತತೆ ಪಡೆಯುವ ಉದ್ದೇಶದಿಂದ ಫೀಲ್ಡ್​ ಅಂಪೈರ್​ಗಳ ಮೂರನೇ ಅಂಪೈರ್​ ಮೊರೆ ಹೋದರು.

ಚೆಂಡು ಸಾಗುವ ರೀತಿಯನ್ನು ಸೂಕ್ಷ್ಮವಾಗಿ ಗಮನಿಸಿದ ಮೂರನೇ ಅಂಪೈರ್ ಬೌಲ್ಡ್​ ಎಂದು​ ತೀರ್ಪು ನೀಡಿದರು. ತಕ್ಷಣ ಪಾಂಡ್ಯ ಸಮೇತ ಎಲ್ಲರೂ ಅಚ್ಚರಿಗೆ ಒಳಗಾದರು. ಚೆಂಡು ವಿಕೆಟ್​ಗಿಂತ ಮೇಲಿಂದ ಸಾಗಿದ್ದು, ವಿಕೆಟ್​ ಕೀಪರ್​ ಗ್ಲವ್ಸ್​ ಸಮೀಪವಿತ್ತು. ಹೀಗಾಗಿ ವಿಕೆಟ್​ಗೆ ಗ್ಲವ್ಸ್​ ತಾಗಿ ಬೇಲ್ಸ್​ ಬಿದ್ದಿದಿಯೇ ಹೊರತು ಚೆಂಡು ತಾಗಿಲ್ಲ ಎಂಬುದು ಅವರ ಅಭಿಪ್ರಾಯವಾಗಿತ್ತು. ಈ ವಿಚಾರ ನೆಟ್ಟಿಗರ ಚರ್ಚೆಗೆ ಕಾರಣವಾಯಿತು. ಅಂಪೈರ್​ಗಳ ಕೆಟ್ಟ ತೀರ್ಪಿನಿಂದ ಪಾಂಡ್ಯ ಅನಗತ್ಯವಾಗಿ ಔಟಾಗಬೇಕಾಯಿತು ಎಂದೆಲ್ಲ ಚರ್ಚೆ ನಡೆಯಿತು.

ಪಾಂಡ್ಯ ವಿಕೆಟ್​ ಬೀಳುತ್ತಿದ್ದಂತೆ ಭಾರತ ತಂಡ 40 ಓವರ್​ಗಳಲ್ಲಿ 251 ರನ್​ಗಳಿಗೆ 5 ವಿಕೆಟ್​ ಕಳೆದುಕೊಂಡಿತು. ಹಾರ್ದಿಕ್​ ಪಾಂಡ್ಯ 38 ಎಸೆತಗಳಲ್ಲಿ 28 ರನ್ ಬಾರಿಸಿ ಔಟಾದರು. ಆದಾದ ಬಳಿಕ ಶುಬ್ಮನ್​ ಗಿಲ್ ದ್ವಿ ಶತಕ ಬಾರಿಸಿ ಭಾರತ ತಂಡಕ್ಕೆ 249 ರನ್​ ಪೇರಿಸಲು ನೆರವಾದರು.

ಇದನ್ನೂ ಓದಿ | Hardik Pandya | ನೀರು ತಂದುಕೊಡದ ಸಹ ಆಟಗಾರರನ್ನು ನಿಂದಿಸಿದ ಹಾರ್ದಿಕ್​ ಪಾಂಡ್ಯ, ನೆಟ್ಟಿಗರ ಟೀಕೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Virat Kohli: ಐಸಿಸಿ ವರ್ಷದ ಏಕದಿನ ಆಟಗಾರ ಪ್ರಶಸ್ತಿ ಸ್ವೀಕರಿಸಿದ ವಿರಾಟ್ ಕೊಹ್ಲಿ

Virat Kohli: 2012, 2017, 2018 ರಲ್ಲಿಯೂ ಕೊಹ್ಲಿ ಐಸಿಸಿ ವರ್ಷದ(ICC ODI Player Of The Year 2023) ಏಕದಿನ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದರು.

VISTARANEWS.COM


on

Virat Kohli
Koo

ನ್ಯೂಯಾರ್ಕ್​: ಭಾರತ ತಂಡದ ಸ್ಟಾರ್​ ಆಟಗಾರ ವಿರಾಟ್ ಕೊಹ್ಲಿ(Virat Kohli) ಅವರು ಐಸಿಸಿ ವರ್ಷದ(ICC ODI Player Of The Year 2023) ಏಕದಿನ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಭಾನುವಾರ ಕೊಹ್ಲಿ ಈ ಪ್ರಶಸ್ತಿ ಸ್ವೀಕರಿಸಿದರು. ಈ ಮೂಲಕ ವೃತ್ತಿಜೀವನದಲ್ಲಿ ಮತ್ತೊಂದು ಬೃಹತ್ ಉತ್ತುಂಗಕ್ಕೆ ಏರಿದ್ದಾರೆ. ಟಿ20 ವಿಶ್ವಕಪ್​ ಆಡುವ ಸಲುವಾಗಿ ನ್ಯೂಯಾರ್ಕ್​ನಲ್ಲಿರು ಕೊಹ್ಲಿ ಈ ಪ್ರಶಸ್ತಿಯನ್ನು ಇಲ್ಲಿಯೇ ಸ್ವೀಕರಿಸಿದ್ದಾರೆ. ಇದರ ವಿಡಿಯೊವನ್ನು ಐಸಿಸಿ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ನಲ್ಲಿ ಹಂಚಿಕೊಂಡಿದೆ. 2012, 2017, 2018 ರಲ್ಲಿಯೂ ಕೊಹ್ಲಿ ಈ ಪ್ರಶಸ್ತಿ ಪಡೆದಿದ್ದರು.

2022ರ ದ್ವಿತೀಯಾರ್ಧದಲ್ಲಿ ಮತ್ತೆ ಹಳೆಯ ಬ್ಯಾಟಿಂಗ್​ ಫಾರ್ಮ್​ಗೆ ಮರಳಿದ ವಿರಾಟ್​ ಕೊಹ್ಲಿ ಟೆಸ್ಟ್ ಮತ್ತು ಏಏಕದಿನ ಕ್ರಿಕೆಟ್​ನಲ್ಲಿ ರನ್​ಗಳ ಮಳೆಯನ್ನೇ ಸುರಿಸಿದ್ದರು. ಅಲ್ಲದೆ ಹಲವು ವಿಶ್ವ ದಾಖಲೆಯನ್ನು ಕೂಡ ತಮ್ಮ ಹೆಸೆರಿಗೆ ಬರೆದಿದ್ದರು. 2023ರಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಬಾರ್ಡರ್-ಗವಾಸ್ಕರ್ ಸರಣಿಯ ಅಂತಿಮ ಪಂದ್ಯದಲ್ಲಿ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕೊಹ್ಲಿ 186 ರನ್ ಸಿಡಿಸಿದ್ದರು. ಇದು 2019 ರ ನಂತರ ಅವರ ಮೊದಲ ಟೆಸ್ಟ್ ಶತಕವಾಗಿತ್ತು.

ಆಸೀಸ್​ ಬಳಿಕ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್​ನಲ್ಲಿ 121 ರನ್ ಗಳಿಸುವ ತಮ್ಮ ಶತಕದ ಸಂಖ್ಯೆಯನ್ನು ಮತ್ತೆ ಹೆಚ್ಚಿಸಿದರು. ಏಕದಿನ ಮಾದರಿಯಲ್ಲಿ ಹಲವಾರು ದಾಖಲೆಗಳನ್ನು ಪುಡಿಮಾಡಿ ಕಳೆದ ವರ್ಷ ಆರು ಶತಕಗಳನ್ನು ಬಾರಿಸಿದ್ದಾರೆ. ಜತೆಗೆ ಏಕದಿನ ಕ್ರಿಕೆಟ್​ನಲ್ಲಿ ಸಚಿನ್​ ಬಾರಿಸಿದ್ದ 49 ಶತಕದ ವಿಶ್ವ ದಾಖಲೆಯನ್ನು ಹಿಂದಿಕ್ಕಿ 50 ಶತಕ ಪೂರ್ತಿಗೊಳಿಸಿದ್ದರು. ವಿಶ್ವಕಪ್​ ಟೂರ್ನಿಯಲ್ಲೂ 765 ರನ್​ ಬಾರಿಸಿ ಟೂರ್ನಿಯಲ್ಲಿ ಅತ್ಯಧಿಕ ರನ್​ ಗಳಿಸಿದ ಆಟಗಾರ ಎನಿಸಿಕೊಂಡಿದ್ದರು.

ಇದನ್ನೂ ಓದಿ Virat kohli : ಕಡೆಗಣಿಸುವ ಹೇಳಿಕೆ ನೀಡಿ ಕೊಹ್ಲಿಗೆ ಮತ್ತೆ ಅವಮಾನ ಮಾಡಿದ ಅಂಬಾಟಿ ರಾಯುಡು

35 ವರ್ಷದ ಕೊಹ್ಲಿ 2023 ರಲ್ಲಿ 27 ಏಕದಿನ ಪಂದ್ಯಗಳಿಂದ 24 ಇನ್ನಿಂಗ್ಸ್‌ಗಳಲ್ಲಿ ಆರು ಶತಕಗಳು ಮತ್ತು ಎಂಟು ಅರ್ಧಶತಕಗಳೊಂದಿಗೆ 72.47 ರ ಸರಾಸರಿ ಮತ್ತು 99.13 ರ ಸ್ಟ್ರೈಕ್ ರೇಟ್‌ನಲ್ಲಿ 1,377 ರನ್ ಗಳಿಸಿದ್ದಾರೆ. ಈ ಪೈಕಿ ಗರಿಷ್ಠ ಸ್ಕೋರ್ 166* ಆಗಿತ್ತು. ಏಷ್ಯಾ ಕಪ್ 2023 ರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ನಿರ್ಣಾಯಕ ಸೂಪರ್ ಫೋರ್ ಹಂತದ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ 94 ಎಸೆತಗಳಲ್ಲಿ ಅಜೇಯ 122* ರನ್ ಗಳಿಸಿದ್ದರು.

ಕಳೆದ ವರ್ಷ ತವರಿನಲ್ಲಿ ನಡೆದ ಏಕದಿನ ವಿಶ್ವಕಪ್‌ನಲ್ಲಿ, ವಿರಾಟ್ 11 ಪಂದ್ಯಗಳಲ್ಲಿ 95.62 ಸರಾಸರಿಯಲ್ಲಿ 765 ರನ್‌ಗಳನ್ನು ಗಳಿಸಿದ್ದರು. ಇದರಲ್ಲಿ ಮೂರು ಶತಕಗಳು, ಆರು ಅರ್ಧ ಶತಕಗಳು ದಾಖಲಾಗಿತ್ತು. ಈ ಬಾರಿಯ ಐಪಿಎಲ್​ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ಗಳಿಸಿ ಆರೆಂಜ್ ಕ್ಯಾಪ್ ಗೆದ್ದಿದ್ದರು. ಇದೀಗ ಟಿ20 ವಿಶ್ವಕಪ್​ ಆಡಲು ಸಜ್ಜಾಗಿದ್ದಾರೆ. ಭಾರತ ತನ್ನ ಮೊದಲ ಲೀಗ್​ ಪಂದ್ಯವನ್ನು ಜೂನ್ 5ರಂದು ಐರ್ಲೆಂಡ್​ ವಿರುದ್ಧ ಆಡಲಿದೆ.

Continue Reading

ಕ್ರಿಕೆಟ್

IND vs PAK: ಇಂಡೋ-ಪಾಕ್​ ಹೈವೋಲ್ಟೇಜ್​ ಟಿ20 ಪಂದ್ಯ ವೀಕ್ಷಿಸಲು ಅಭಿಮಾನಿಗಳ ಹಿಂದೇಟು; ಇನ್ನೂ ಮಾರಾಟವಾಗಿಲ್ಲ ಟಿಕೆಟ್​

IND vs PAK:ಭಾರತ ಮತ್ತು ಪಾಕ್​ ಪಂದ್ಯದ ಟಿಕೆಟ್​ ಸಿಗುವುದೇ ಒಂದು ಅದೃಷ್ಟ. ಮ್ಯಾಚ್​ನ ಟಿಕೆಟ್​ಗಳು ಘೋಷಣೆಯಾದ ಕ್ಷಣಾರ್ಧದಲ್ಲೇ ಮಾರಾಟವಾಗುತ್ತಿದ್ದವು. ಆದರೆ ಈ ಬಾರಿ ಯಾರಿಗೂ ಕೂಡ ಟಿಕೆಟ್​ ಕೊಳ್ಳಲು ಆಸಕ್ತಿಯೇ ಇಲ್ಲದಂತಾಗಿದೆ. ಇದಕ್ಕೆ ಕಾರಣ ಟಿಕೆಟ್​ ಬೆಲೆ ದುಬಾರಿಯಾಗಿರುವುದು

VISTARANEWS.COM


on

IND vs PAK
Koo

ನ್ಯೂಯಾರ್ಕ್​: ಕ್ರಿಕೆಟ್​ ಅಭಿಮಾನಿಗಳು ಕಾದು ಕುಳಿತಿರುವ ಜೂನ್​ 9ರಂದು ನಡೆಯುವ ಭಾರತ ಮತ್ತು ಪಾಕಿಸ್ತಾನ(IND vs PAK) ನಡುವಣ ಟಿ20 ವಿಶ್ವಕಪ್​ನ(T20 World Cup 2024) ಹೈವೋಲ್ಟೇಜ್ ಪಂದ್ಯಕ್ಕೆ ಈ ಬಾರಿ ಪ್ರೇಕ್ಷಕರು ನಿರಾಸಕ್ತಿ ತೋರುತ್ತಿದ್ದಾರೆ ಎಂಬ ವಿಚಾರ ಹೊರಬಿದ್ದಿದೆ. ಈ ಪಂದ್ಯದ ಎಲ್ಲಾ ಟಿಕೆಟ್‌ಗಳು ಇನ್ನೂ ಮಾರಾಟವಾಗಿಲ್ಲ. ಈ ಪಂದ್ಯದ ಟಿಕೆಟ್‌ಗಳು ಇನ್ನೂ ಐಸಿಸಿ ವೆಬ್​ಸೈಟ್​ನಲ್ಲಿ ಲಭ್ಯವಿದ್ದು, ಇನ್ನೂ ಕೂಡ ಮಾರಾಟವಾಗದಿರುವುದು ಹಲವರಲ್ಲಿ ಅಚ್ಚರಿ ಮೂಡಿಸಿದೆ.

ಭಾರತ ಮತ್ತು ಪಾಕ್​ ಪಂದ್ಯದ ಟಿಕೆಟ್​ ಸಿಗುವುದೇ ಒಂದು ಅದೃಷ್ಟ. ಮ್ಯಾಚ್​ನ ಟಿಕೆಟ್​ಗಳು ಘೋಷಣೆಯಾದ ಕ್ಷಣಾರ್ಧದಲ್ಲೇ ಮಾರಾಟವಾಗುತ್ತಿದ್ದವು. ಆದರೆ ಈ ಬಾರಿ ಯಾರಿಗೂ ಕೂಡ ಟಿಕೆಟ್​ ಕೊಳ್ಳಲು ಆಸಕ್ತಿಯೇ ಇಲ್ಲದಂತಾಗಿದೆ. ಇದಕ್ಕೆ ಕಾರಣ ಟಿಕೆಟ್​ ಬೆಲೆ ದುಬಾರಿಯಾಗಿರುವುದು. ಈ ಪಂದ್ಯಕ್ಕಾಗಿ ಐಸಿಸಿ ಮೂರು ಪ್ಯಾಕೇಜ್‌ಗಳಲ್ಲಿ ಟಿಕೆಟ್‌ಗಳನ್ನು ಇರಿಸಿದೆ. ಇದರಲ್ಲಿ ಡೈಮಂಡ್ ಕ್ಲಬ್, ಪ್ರೀಮಿಯಂ ಕ್ಲಬ್ ಲಾಂಜ್​​ ಮತ್ತು ಕಾರ್ನರ್ ಕ್ಲಬ್​​ಗಳನ್ನು ಒಳಗೊಂಡಿವೆ.

ಡೈಮಂಡ್ ಕ್ಲಬ್ ಟಿಕೆಟ್ ಬೆಲೆ 8.34 ಲಕ್ಷ ರೂ. ಈ ಟಿಕೆಟ್​ ಖರೀದಿಸುವ ಅಭಿಮಾನಿಗಳಿಗೆ ಅತ್ಯುತ್ತಮ ಸೌಲಭ್ಯಗಳು ಸಿಗುತ್ತವೆ. ಪ್ರೀಮಿಯಂ ಕ್ಲಬ್ ಲಾಂಜ್​ ಟಿಕೆಟ್ ಬೆಲೆ 2 ಲಕ್ಷ ರೂ, ಮತ್ತು ಕಾರ್ನರ್ ಕ್ಲಬ್ ಟಿಕೆಟ್ ಬೆಲೆ 2.29 ಲಕ್ಷ ರೂ. ಆಗಿದೆ. ಭಾರತ-ಪಾಕಿಸ್ತಾನ ಪಂದ್ಯದ ದೃಷ್ಟಿಯಿಂದ ಐಸಿಸಿ ಟಿಕೆಟ್ ಬೆಲೆಯನ್ನು ಇಷ್ಟು ದುಬಾರಿ ಇರಿಸಿದೆ. ಇದಲ್ಲದೆ ಪಂದ್ಯಕ್ಕೆ ಉಗ್ರರು ಬಾಂಬ್​ ಬೆದರಿಕೆ ಹಾಕಿದ್ದು ಕೂಡ ಅಭಿಮಾನಿಗಳ ಹಿಂದೇಟಿಗೆ ಕಾರಣವಾಗಿರಬಹುದು ಎಂದು ಹೇಳಲಾಗಿದೆ. ಹೆಚ್ಚಿನ ಟಿಕೆಟ್​ಗಳು ಖರೀದಿಯಾಗದಿದ್ದಲ್ಲಿ ಐಸಿಸಿ ಮತ್ತೆ ಪರಿಷ್ಕೃತ ಟಿಕೆಟ್​ ದರ ಹೊರಡಿಡುವ ಸಾಧ್ಯತೆ ಇದೆ.

ಇದನ್ನೂ ಓದಿ T20 World Cup 2024 : ಟಿ20 ವಿಶ್ವಕಪ್ ವಿಜೇತ ಭಾರತ ತಂಡದ ಕ್ರಿಕೆಟಿಗರು ಈಗ ಎಲ್ಲಿದ್ದಾರೆ?

ಭಾರತ ಮತ್ತು ಪಾಕಿಸ್ತಾನ(IND vs PAK) ನಡುವಣ ಪಂದ್ಯಕ್ಕೆ ಉಗ್ರರಿಂದ ದಾಳಿಯ ಬೆದರಿಕೆ ಬಂದಿರುವ ಕಾರಣ ಕ್ರೀಡಾಂಗಣದಲ್ಲಿ ಭಾರೀ ಭದ್ರತಾ ವ್ಯವಸ್ಥೆ ಕೈಗೊಳಲಾಗಿದೆ. ಐಸಿಸ್-ಕೆ ಹೆಸರಿನ ಭಯೋತ್ಪಾದಕ ಸಂಘಟನೆಯು “ಲೋನ್ ವುಲ್ಫ್” ದಾಳಿ ನಡೆಸುವುದಾಗಿ ಘೋಷಿಸಿತ್ತು. ಹೀಗಾಗಿ ಪಂದ್ಯಕ್ಕೆ ಸುಧಾರಿತ ಕಣ್ಗಾವಲು ಏರ್ಪಡಿಸಲಾಗಿದೆ.

ಹೈವೋಲ್ಟೇಜ್ ಕದನಕ್ಕೆ ನ್ಯೂಯಾರ್ಕ್(NEW YORK) ಹೊರವಲಯದಲ್ಲಿ 34,000 ಆಸನ ಸಾಮರ್ಥ್ಯವುಳ್ಳ ತಾತ್ಕಾಲಿಕ ಕ್ರೀಡಾಂಗಣವನ್ನು ನಿರ್ಮಿಸಲಾಗಿದೆ. ಭಾರತ ಮತ್ತು ಪಾಕ್​ ನಡುವಣ ಪಂದ್ಯ ನ್ಯೂಯಾರ್ಕ್‌ನಲ್ಲಿಯೇ ನಡೆಸಲು ಕಾರಣವೂ ಕೂಡ ಇದೆ. ಏಕೆಂದರೆ ಈ ಪ್ರದೇಶದಲ್ಲಿ 7,11,000 ಭಾರತೀಯ ಮತ್ತು ಸುಮಾರು 1,00,000 ಪಾಕಿಸ್ತಾನ ಮೂಲದ ಜನರು ವಾಸಿಸುತ್ತಿದ್ದಾರೆ ಎನ್ನಲಾಗಿದೆ. ಹೀಗಾಗಿ ಈ ಪಂದ್ಯ ಇಲ್ಲಿ ಏರ್ಪಡಿಸಲಾಗಿದೆ ಎನ್ನಲಾಗಿದೆ.

ಟಿ20 ಮುಖಾಮುಖಿ

ಉಭಯ ತಂಡಗಳು ಇದುವರೆಗೆ ಟಿ20 ಮಾದರಿಯಲ್ಲಿ 12 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ ಗರಿಷ್ಠ 9 ಪಂದ್ಯಗಳಲ್ಲಿ ಗೆದ್ದು ಬೀಗಿದೆ. ಪಾಕಿಸ್ತಾನ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಭಾರತಕ್ಕೆ ಇದರಲ್ಲೊಂದು ಸೋಲು 2021ರಲ್ಲಿ ನಡೆದಿದ್ದ ವಿಶ್ವಕಪ್​ನಲ್ಲಿ ಎದುರಾಗಿತ್ತು. ಅದು ಕೂಡ 10 ವಿಕೆಟ್​ ಅಂತರದ ಹೀನಾಯ ಸೋಲಾಗಿತ್ತು.

Continue Reading

ಕ್ರೀಡೆ

USA vs CAN: ಆರನ್ ಜೋನ್ಸ್ ಪ್ರಚಂಡ ಬ್ಯಾಟಿಂಗ್​; ಗೆಲುವಿನ ಶುಭಾರಂಭ ಕಂಡ ಅಮೆರಿಕ

USA vs CAN: ಭಾನುವಾರ ನಡೆದ ಟಿ20 ವಿಶ್ವಕಪ್​ ಟೂರ್ನಿಯ(T20 World Cup 2024) ಉದ್ಘಾಟನ ಪಂದ್ಯದಲ್ಲಿಕೆನಡಾ ವಿರುದ್ಧ ಅಮೆರಿಕ(USA vs CAN) 7 ವಿಕೆಟ್​ಗಳ ಗೆಲುವು ಸಾಧಿಸಿತು.

VISTARANEWS.COM


on

USA vs CAN
Koo

ನ್ಯೂಯಾರ್ಕ್​: ಟಿ20 ವಿಶ್ವಕಪ್​ ಟೂರ್ನಿಯ(T20 World Cup 2024) ಉದ್ಘಾಟನ ಪಂದ್ಯದಲ್ಲಿ ಆತಿಥೇಯ ಅಮೆರಿಕ(USA vs CAN) ಗೆಲುವಿನ ಖಾತೆ ತೆರೆದಿದೆ. ಭಾನುವಾರ ನಡೆದ ಬೃಹತ್​ ಮೊತ್ತದ ಮೇಲಾಟದಲ್ಲಿ ಕೆನಡಾ ವಿರುದ್ಧ 7 ವಿಕೆಟ್​ಗಳ ಗೆಲುವು ಸಾಧಿಸಿ ಮೆರೆದಾಡಿದೆ. ಜತೆಗೆ ‘ಎ’ ಗುಂಪಿನಲ್ಲಿ ಅಂಕದ ಖಾತೆ ತೆರೆದಿದೆ.

ಇಲ್ಲಿನ ಗ್ರ್ಯಾಂಡ್ ಪ್ರೈರೀ ಸ್ಟೇಡಿಯಂ, ಡಲ್ಲಾಸ್​ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಕೆನಡಾ ತಂಡ ನವನೀತ್ ಧಲಿವಾಲ್(61) ಮತ್ತು ನಿಕೋಲಸ್ ಕಿರ್ಟನ್(51) ಅರ್ಧಶತಕದ ಬ್ಯಾಟಿಂಗ್​ ನೆರವಿನಿಂದ 5 ವಿಕೆಟ್​ಗೆ 194 ರನ್​ ಬಾರಿಸಿತು. ಜವಾಬಿತ್ತ ಅಮೆರಿಕ ಈ ಬೃಹತ್​ ಮೊತ್ತವನ್ನು 17.4 ಓವರ್​ಗಳಲ್ಲಿ ಕೇವಲ 3 ವಿಕೆಟ್​ ಕಳೆದುಕೊಂಡು 197 ರನ್​ ಬಾರಿಸಿ ಅಮೋಘ ಗೆಲುವು ದಾಖಲಿಸಿತು. ಈ ಗೆಲುವಿನೊಂದಿಗೆ ಯುಎಸ್​ಎ ಗರಿಷ್ಠ ಮೊತ್ತ ಚೇಸ್​ ಮಾಡಿದ ದಾಖಲೆ ಬರೆಯಿತು. ಇದಕ್ಕೂ ಮುನ್ನ 168 ರನ್​ಗಳನ್ನು ಚೇಸ್ ಮಾಡಿದ್ದು ತಂಡದ ಅತ್ಯುತ್ತಮ ಸಾಧನೆಯಾಗಿತ್ತು. ಇದೀಗ ಟಿ20 ವಿಶ್ವಕಪ್​ನ ಚೊಚ್ಚಲ ಪಂದ್ಯದಲ್ಲೇ ಐತಿಹಾಸಿಕ ಗೆಲುವು ದಾಖಲಿಸಿದೆ.

ಚೇಸಿಂಗ್​ ವೇಳೆ ಅಮೆರಿಕ ಆರಂಭಿಕ ಆಘಾತ ಎದುರಿಸಿತು. ತಂಡ ಖಾತೆ ತೆರೆಯುವ ಮುನ್ನವೇ ಸ್ಟೀವನ್ ಟೇಲರ್(0) ಶೂನ್ಯಕ್ಕೆ ವಿಕೆಟ್​ ಕೈಚೆಲ್ಲಿದರು. 42 ರನ್​ ಒಟ್ಟುಗೂಡುವಷ್ಟರಲ್ಲಿ ಮೊನಾಂಕ್ ಪಟೇಲ್(16) ವಿಕೆಟ್​ ಕೂಡ ಬಿತ್ತು. ಈ ವೇಳೆ ಜತೆಗೂಡಿದ ಆಂಡ್ರೀಸ್ ಗೌಸ್ ಮತ್ತು ಆರನ್ ಜೋನ್ಸ್ ಬಿರುಸಿನ ಬ್ಯಾಟಿಂಗ್​ ಮೂಲಕ ಅರ್ಧಶತಕ ಬಾರಿಸಿ ತಂಡವನ್ನು ಸಂಕಷ್ಟದಿಂದ ಪಾರು ಮಾಡಿದರು. ಉತ್ತಮ ಹಿಡಿತ ಸಾಧಿಸಿದ್ದ ಕೆನಡಾ ಬೌಲರ್​ಗಳು ಗೌಸ್ ಮತ್ತು ಜೋನ್ಸ್ ಬ್ಯಾಟಿಂಗ್​ ಆರ್ಭಟದ ಮುಂದೆ ಸಂಪೂರ್ಣ ಲಯ ಕಳೆದುಕೊಂಡರು.

ಉಭಯ ಆಟಗಾರರು ಸೇರಿಕೊಂಡು ಸಿಕ್ಸರ್​ ಮತ್ತು ಬೌಂಡರಿಗಳ ಸುರಿಮಳೆಗೈದರು. ಕಿಕ್ಕಿರಿದು ನೆರೆದ ತವರಿನ ವೀಕ್ಷಕರಿಗೆ ಭರಪೂರ ರಂಜನೆ ಲಭಿಸಿತು. ಈ ಜೋಡಿ ಮೂರನೇ ವಿಕೆಟ್​ಗೆ ಬರೋಬ್ಬರಿ 131 ರನ್​ಗಳ ಅಮೂಲ್ಯ ಜತೆಯಾಟ ನಡೆಸಿತು. ಆಂಡ್ರೀಸ್ ಗೌಸ್ 46 ಎಸೆತಗಳಿಂದ 7 ಬೌಂಡರಿ ಮತ್ತು 3 ಸಿಕ್ಸರ್​ ನೆರವಿನಿಂದ 65 ರನ್​ ಬಾರಿಸಿದರು. ವಿಸ್ಫೋಟಕ ಬ್ಯಾಟಿಂಗ್​ ನಡೆಸಿದ ಆರನ್ ಜೋನ್ಸ್ 40 ಎಸೆತಗಳಿಂದ ಬರೋಬ್ಬರಿ 10 ಸಿಕ್ಸರ್​ ಮತ್ತು 4 ಬೌಂಡರಿ ಸಿಡಿಸಿ ಅಜೇಯ 94 ರನ್​ ಬಾರಿಸಿದರು. ಗೆಲುವಿಗೆ ನಾಲ್ಕು ರನ್​ ಬೇಕಿದ್ದಾಗ ಸಿಕ್ಸರ್​ ಬಡಿದಟ್ಟಿ ತಂಡಕ್ಕೆ ಗೆಲುವು ತಂದುಕೊಟ್ಟುರು. ನ್ಯೂಜಿಲ್ಯಾಂಡ್​ ತಂಡ ತೊರೆದು ಅಮೆರಿಕ ಪರ ಆಡುತ್ತಿರುವ ಕೋರಿ ಆ್ಯಂಡರ್ಸನ್​ ಅಜೇಯ 3 ರನ್​ ಬಾರಿಸಿದರು. ಬೌಲಿಂಗ್​ನಲ್ಲಿ ಒಂದು ವಿಕೆಟ್​ ಪಡೆದರು.

ಇದಕ್ಕೂ ಮುನ್ನ ಬ್ಯಾಟಿಂಗ್​ ನಡೆಸಿದ ಕೆನಡಾ ಪರ ನವನೀತ್ ಧಲಿವಾಲ್(61) ಮತ್ತು ನಿಕೋಲಸ್ ಕಿರ್ಟನ್(51) ಅರ್ಧಶತಕ ಬಾರಿಸಿ ಮಿಂಚಿದರು. ಉಳಿದಂತೆ ಶ್ರೇಯಸ್ ಮೊವ್ವ(32) ಆರಂಭಿಕ ಆಟಗಾರ ಆರನ್ ಜಾನ್ಸನ್(23) ರನ್​ ಬಾರಿಸಿದರು. ಬೃಹತ್​ ಮೊತ್ತ ಪೇರಿಸಿದರು ಕೂಡ ಬೌಲರ್​ಗಳಿಂದ ಸಂಘಟಿತ ಪ್ರದರ್ಶನ ಕಂಡು ಬಾರದ ಕಾರಣ ಪಂದ್ಯವನ್ನು ಕಳೆದುಕೊಂಡರು.

Continue Reading

ಕ್ರೀಡೆ

Rohit Sharma: ರೋಹಿತ್​ ಅಪ್ಪಿಕೊಳ್ಳಲು ಯತ್ನಿಸಿದ ಅಭಿಮಾನಿಯನ್ನು ಹೆಡೆಮುರಿ ಕಟ್ಟಿದ ನ್ಯೂಯಾರ್ಕ್ ಪೊಲೀಸ್; ವಿಡಿಯೊ ವೈರಲ್​

Rohit Sharma: ಬೇರೆ ದೇಶದಲ್ಲಿ ಈ ರೀತಿ ಮೈದಾನಕ್ಕೆ ನುಗ್ಗಿದರೆ ಎಚ್ಚರಿಕೆ ನೀಡಿ ಕಳಿಸಲಾಗುತ್ತದೆ. ಆದರೆ ಅಮೆರಿಕದಲ್ಲಿ ಮಾತ್ರ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಯಾರು ಏನೇ ಹೇಳಿದರು ಕೂಡ ಇಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆ ಖಚಿತ. ಅಮೆರಿಕದಲ್ಲಿ ನೆಲೆಸಿರುವ ಭಾರತೀಯರೊಬ್ಬರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೊ ಹಂಚಿಕೊಂಡು ಜಾಗ್ರತೆ ವಹಿಸಿ. ಇಲ್ಲಿ ಹುಚ್ಚಾಟ ನಡೆಸಿದರೆ ಜೈಲು ಕಂಬಿ ಎಣಿಸುವುದು ನಿಶ್ಚಿತ ಎಂದು ಎಚ್ಚರಿಕೆಯ ಸಂದೇಶ ನೀಡಿದ್ದಾರೆ.

VISTARANEWS.COM


on

Rohit Sharma
Koo

ನ್ಯೂಯಾರ್ಕ್: ಬಾಂಗ್ಲಾದೇಶ(IND vs BAN) ವಿರುದ್ಧ ನಿನ್ನೆ(ಶನಿವಾರ) ನಡೆದ ಟಿ20 ವಿಶ್ವಕಪ್(T20 World Cup 2024)​ ಟೂರ್ನಿಯ ಅಭ್ಯಾಸ ಪಂದ್ಯದ ವೇಳೆ ರೋಹಿತ್​ ಶರ್ಮ(Rohit Sharma) ಅವರ ಅಭಿಮಾನಿಯೊಬ್ಬ ಮೈದಾನಕ್ಕೆ ನುಗ್ಗಿ ರೋಹಿತ್​ ಅವರನ್ನು ಅಪ್ಪಿಕೊಂಡಿದ್ದಾನೆ. ಈ ವೇಳೆ ನ್ಯೂಯಾರ್ಕ್​ನ ಪೊಲೀಸ್‌ ಪಡೆ ಶರವೇಗದಲ್ಲಿ ಓಡಿ ಒಂದು ಈ ಅಭಿಮಾನಿಯನ್ನು ಹೆಡೆಮುರಿ ಕಟ್ಟಿದ್ದಾರೆ. ಈ ವಿಡಿಯೊ ವೈರಲ್(viral video)​ ಆಗಿದೆ.

ಭಾರತ ತಂಡ ಫೀಲ್ಡಿಂಗ್​ ನಡೆಸುತ್ತಿದ್ದ ವೇಳೆ ಅಭಿಮಾನಿಯೊಬ್ಬ ಟೀಮ್​ ಇಂಡಿಯಾದ ಜೆರ್ಸಿ ತೊಟ್ಟು ನೇರವಾಗಿ ಮೈದಾನಕ್ಕೆ ಓಡಿ ಬಂದು ರೋಹಿತ್​ ಅವರನ್ನು ಅಪ್ಪಿಕೊಂಡು ಕಾಲಿಗೆ ಬಿದ್ದಿದ್ದಾನೆ. ಇದೇ ವೇಳೆ ಇಲ್ಲಿನ ಪೊಲೀಸ್‌ ಪಡೆ ಆತನನ್ನು ಮೈದಾನದಲ್ಲೇ ಕೈಗೆ ಕೋಳ ಹಾಕಿ ಎಳೆದುಕೊಂಡು ಹೋಗಿದ್ದಾರೆ. ಈ ವೇಳೆ ರೋಹಿತ್​ ಮತ್ತು ಟೂರ್ನಿಯ ಸಂಘಟಕರು ಆತನಿಗೆ ಏನು ಮಾಡಬೇಡಿ ಎಂದು ಹೇಳಿದರೂ ಕೂಡ ಕೆಳದೆ 2 ಪೊಲೀಸರು ಆತನ್ನು ಉಗ್ರಮಾಮಿಯನ್ನು ಬಂಧಿಸಿದಂತೆ ಎಳೆದುಕೊಂಡು ಹೋಗಿದ್ದಾರೆ. ಈತನಿಗೆ ಜೈಲು ಶಿಕ್ಷೆ ಖಚಿತ ಎನ್ನಲಾಗಿದೆ.

ಬೇರೆ ದೇಶದಲ್ಲಿ ಈ ರೀತಿ ಮೈದಾನಕ್ಕೆ ನುಗ್ಗಿದರೆ ಎಚ್ಚರಿಕೆ ನೀಡಿ ಕಳಿಸಲಾಗುತ್ತದೆ. ಆದರೆ ಅಮೆರಿಕದಲ್ಲಿ ಮಾತ್ರ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಯಾರು ಏನೇ ಹೇಳಿದರು ಕೂಡ ಇಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆ ಖಚಿತ. ಅಮೆರಿಕದಲ್ಲಿ ನೆಲೆಸಿರುವ ಭಾರತೀಯರೊಬ್ಬರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೊ ಹಂಚಿಕೊಂಡು ಜಾಗ್ರತೆ ವಹಿಸಿ. ಇಲ್ಲಿ ಹುಚ್ಚಾಟ ನಡೆಸಿದರೆ ಜೈಲು ಕಂಬಿ ಎಣಿಸುವುದು ನಿಶ್ಚಿತ ಎಂದು ಎಚ್ಚರಿಕೆಯ ಸಂದೇಶ ನೀಡಿದ್ದಾರೆ.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಭಾರತ ರಿಷಭ್​ ಪಂತ್​ ಅವರ ಅರ್ಧಶತಕ ಮತ್ತು ಪಾಂಡ್ಯ ಅವರ ಅಜೇಯ 40 ರನ್​ಗಳ ನೆರವಿನಿಂದ 5 ವಿಕೆಟಿಗೆ 182 ರನ್‌ ಗಳಿಸಿತು. ಗುರಿ ಬೆನ್ನಟ್ಟಿದ ಬಾಂಗ್ಲಾ 8 ವಿಕೆಟ್ ಕಳೆದುಕೊಂಡು 121 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲು ಕಂಡಿತು. ಬಾಂಗ್ಲಾ ತಂಡ ಇದಕ್ಕೂ ಮುನ್ನ ಆಡಿದ ಅಭ್ಯಾಸ ಪಂದ್ಯದಲ್ಲಿ ಅಮೆರಿಕ ವಿರುದ್ಧವೂ ಸೋಲು ಕಂಡಿತ್ತು.

ಇದನ್ನೂ ಓದಿ IND vs BAN: ಪಾಂಡ್ಯ ಬಲಿಷ್ಠ ಹೊಡೆತಕ್ಕೆ ನೆತ್ತರು ಚೆಲ್ಲಿದ ಬಾಂಗ್ಲಾ ಬೌಲರ್; ವಿಡಿಯೊ ವೈರಲ್​

ಐಪಿಎಲ್​ನಲ್ಲಿ ಬ್ಯಾಟಿಂಗ್​ ಮತ್ತು ಬೌಲಿಂಗ್​ ಎರಡರಲ್ಲೂ ವಿಫಲವಾಗಿದ್ದ ಹಾರ್ದಿಕ್​ ಪಾಂಡ್ಯ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ನಡೆದಿದ ಪಾಂಡ್ಯ ಬಿರುಸಿನ ಬ್ಯಾಟಿಂಗ್​ ಮೂಲಕ ಕೇವಲ 23 ಎಸೆತಗಳಿಂದ 2 ಬೌಂಡರಿ ಮತ್ತು 4 ಸಿಕ್ಸರ್‌ ಸಹಿತ ಅಜೇಯ 40 ರನ್ ಚಚ್ಚಿದರು. ಒಂದು ವಿಕೆಟ್​ ಕೂಡ ಕಿತ್ತರು.ಕಾರು ಅಪಘಾತದ ಬಳಿಕ ಮೊದಲ ಬಾರಿ ಟೀಮ್​ ಇಂಡಿಯಾ ಪರ ಆಡಿದ ರಿಷಭ್​ ಪಂತ್​ ಪ್ರಚಂಡ ಬ್ಯಾಟಿಂಗ್​ ನಡೆಸುವ ಮೂಲಕ ಗಮನಸೆಳೆದರು. ತಮ್ಮ ನೆಚ್ಚಿನ ಒನ್​ ಹ್ಯಾಂಡ್​ ಸಿಕ್ಸರ್​ ಕೂಡ ಬಾರಿಸಿದರು. ಮೂರನೇ ಕ್ರಮಾಂಕದಲ್ಲಿ ಆಡಿದ ಪಂತ್​ ಬರೋಬ್ಬರಿ 4 ಬೌಂಡರಿ ಮತ್ತು 4 ಸಿಕ್ಸರ್​ ಬಾರಿಸಿ 53 ರನ್​ ಗಳಿಸಿದರು.

Continue Reading
Advertisement
Drowned in water
ಚಿಕ್ಕಬಳ್ಳಾಪುರ19 mins ago

Drowned in Water : ನೀರಿನಲ್ಲಿ ಮುಳುಗಿ ಮುಂಬೈ ಮೂಲದ ಇಬ್ಬರು ಬಾಲಕಿಯರು ಸಾವು

Virat Kohli
ಕ್ರೀಡೆ19 mins ago

Virat Kohli: ಐಸಿಸಿ ವರ್ಷದ ಏಕದಿನ ಆಟಗಾರ ಪ್ರಶಸ್ತಿ ಸ್ವೀಕರಿಸಿದ ವಿರಾಟ್ ಕೊಹ್ಲಿ

Exit Poll 2024
ದೇಶ26 mins ago

Exit poll 2024: ಮೂರು ಎಕ್ಸಿಟ್ ಪೋಲ್ ಪ್ರಕಾರ ಬಿಜೆಪಿ ಸೀಟು 400 ದಾಟಲಿದೆ!

Karnataka Rain
ಮಳೆ47 mins ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Bhavani Revanna hide Not Present For SIT Questioning At Home
ಕರ್ನಾಟಕ51 mins ago

Bhavani Revanna: ಭವಾನಿ ರೇವಣ್ಣ ಕಣ್ಣಾಮುಚ್ಚಾಲೆ ಆಟ; ಎಸ್ ಐ ಟಿಗೆ ಅರೆಸ್ಟ್ ಮಾಡಿ ಜೈಲಿಗಟ್ಟುವ ಹಠ!

IND vs PAK
ಕ್ರಿಕೆಟ್58 mins ago

IND vs PAK: ಇಂಡೋ-ಪಾಕ್​ ಹೈವೋಲ್ಟೇಜ್​ ಟಿ20 ಪಂದ್ಯ ವೀಕ್ಷಿಸಲು ಅಭಿಮಾನಿಗಳ ಹಿಂದೇಟು; ಇನ್ನೂ ಮಾರಾಟವಾಗಿಲ್ಲ ಟಿಕೆಟ್​

Foeticide Case Foeticide another Case in Bagalkot
ಬಾಗಲಕೋಟೆ1 hour ago

Foeticide Case: ಬಾಗಲಕೋಟೆಯಲ್ಲಿ ಮತ್ತೊಂದು ಭ್ರೂಣ ಹತ್ಯೆ: ಗಾಢ ನಿದ್ರೆಯಲ್ಲಿದ್ದಾರಾ ಅಧಿಕಾರಿಗಳು?

Healthy Sandwich Spread
ಆರೋಗ್ಯ2 hours ago

Healthy Sandwich Spread: ಮನೆಯಲ್ಲೇ ಮಾಡಿ ಕಡಿಮೆ ಕ್ಯಾಲರಿಯ ಆರೋಗ್ಯಕರ ಸ್ಯಾಂಡ್‌ವಿಚ್‌ ಸ್ಪ್ರೆಡ್‌!

Taiwan Athletics Open
ಕ್ರೀಡೆ2 hours ago

Taiwan Athletics Open: ತೈವಾನ್‌ ಓಪನ್​ನಲ್ಲಿ ಚಿನ್ನ ಗೆದ್ದ ಕನ್ನಡಿಗ ಡಿ.ಪಿ. ಮನು

Assembly Election Results 2024:
ದೇಶ2 hours ago

Assembly Election Results 2024: ಅರುಣಾಚಲ ಪ್ರದೇಶದಲ್ಲಿ ಬಿಜೆಪಿ ಮುನ್ನಡೆ, ಸಿಕ್ಕಿಂನಲ್ಲಿ ಕ್ಲೀನ್‌ ಸ್ವೀಪ್‌ನತ್ತ SKM

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ47 mins ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು19 hours ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ3 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ5 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು5 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ6 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ7 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು7 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

ಟ್ರೆಂಡಿಂಗ್‌