Site icon Vistara News

Hardik Pandya: ನೀನೆ ಪಂದ್ಯ ಮುಗಿಸು ಎಂದು ತಿಲಕ್​ ವರ್ಮಾಗೆ ಮೋಸ ಮಾಡಿದ ಪಾಂಡ್ಯ! ಆಡಿಯೊ ವೈರಲ್​

hardik pandya and tilak varma

ಗಯಾನಾ: ವಿಂಡೀಸ್​ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ(West Indies vs India, 3rd T20) ತಿಲಕ್​ ವರ್ಮಾ(Tilak Varma) ಅವರ ಅರ್ಧಶತಕದ ಅವಕಾಶವನ್ನು ತಪ್ಪಿಸಿದ ಹಾರ್ದಿಕ್​ ಪಾಂಡ್ಯ(Hardik Pandya) ವಿರುದ್ಧ ಅನೇಕ ಟೀಕೆಗಳು ವ್ಯಕ್ತವಾಗಿತ್ತು. ಇದೀಗ ಪಾಂಡ್ಯ ಅವರು ಮೈದಾನದಲ್ಲಿ ತಿಲಕ್​ ಮರ್ಮಾಗೆ ನೀಡಿದ ಸೂಚನೆಯ ಆಡಿಯೊವೊಂದು(viral audio) ವೈರಲ್​ ಆಗಿದೆ.

ಗಯಾನಾದಲ್ಲಿ ಮಂಗಳವಾರ ನಡೆದ ಮೂರನೇ ಟಿ20 ಪಂದ್ಯದಲ್ಲಿ ಭಾರತ ಗೆಲ್ಲಲು 14 ಬಾಲ್‌ಗಳಲ್ಲಿ 2 ರನ್‌ಗಳು ಬೇಕಾಗಿದ್ದವು. ಪಾಂಡ್ಯ ಜತೆ ಸಹ ಬ್ಯಾಟಿಂಗ್​ ಮಾಡುತ್ತಿದ್ದ ತಿಲಕ್‌ ವರ್ಮಾ (Tilak Verma) ಅವರ ಸ್ಕೋರ್‌ 49 ಆಗಿತ್ತು. ಇನ್ನೊಂದು ರನ್‌ ಮಾಡಿದ್ದರೆ ಟಿ20ಯಲ್ಲಿ ಎರಡನೇ ಹಾಫ್‌ ಸೆಂಚುರಿ ಮಾಡಿದ ಹೆಗ್ಗಳಿಕೆ ಈ ಯುವ ಆಟಗಾರನದಾಗುತ್ತಿತ್ತು. ಇನ್ನೂ 7 ವಿಕೆಟ್‌ಗಳು ಕೈಯಲ್ಲಿದ್ದವು. ಹೀಗಾಗಿ ಸೋಲುವ ಭಯವೂ ಇರಲಿಲ್ಲ.

ʼಪಾಂಡ್ಯ, ನೀನು ಧೋನಿ ಆಗಲಾರೆʼ

ಆದರೆ ಮುಂದಿನ ಪೊವೆಲ್‌ ಅವರ ಮುಂದಿನ ಎಸೆತವನ್ನು ಎದುರಿಸಿದ ಪಾಂಡ್ಯ, ಅದನ್ನು ನೇರವಾಗಿ ಸಿಕ್ಸ್‌ಗೆ ಅಟ್ಟಿದರು.(hardik pandya six) ಪಾಂಡ್ಯ ಅವರ ಈ ಹೊಡೆತ ತಿಲಕ್‌ ವರ್ಮಾ ಅವರ ಹಾಫ್‌ ಸೆಂಚುರಿಯ ಸಾಧ್ಯತೆಯನ್ನು ಕಸಿದುಕೊಂಡಿತು. ಇದರಿಂದ ಕುಪಿತರಾದ ಕ್ರಿಕೆಟ್​ ಅಭಿಮಾನಿಗಳು ʼʼಪಾಂಡ್ಯ, ನೀನು ಧೋನಿ ಆಗಲಾರೆʼʼ “ಇದು ಕ್ರಿಕೆಟ್‌ ಚರಿತ್ರೆಯ ಅತ್ಯಂತ ಕೆಟ್ಟ ಸಿಕ್ಸ್‌ʼʼ ನೀವೊಬ್ಬ ಸ್ವಾರ್ಥಿ ಹೀಗೆ ಹಲವು ತೀಕ್ಷ್ಣ ಮಾತುಗಳಿಂದ ಸಾಮಾಜಿಕ ಜಾಲತಾಣದಲ್ಲಿ ಟೀಕೆ ಮಾಡಿದ್ದರು. ಇದೀಗ ಈ ಪ್ರಕರಣಕ್ಕೆ ಮತ್ತೊಂದು ಪುಷ್ಟಿ ಸಿಕ್ಕಿದ್ದು ಆಡಿಯೊವೊಂದು ವೈರಲ್​ ಆಗಿದೆ.

ಇದನ್ನೂ ಓದಿ Hardik Pandya: ಸಿಕ್ಸರ್​ ಬಾರಿಸಿ ವಿರಾಟ್​ ಕೊಹ್ಲಿಯ ದಾಖಲೆ ಸರಿಗಟ್ಟಿದ ಹಾರ್ದಿಕ್​ ಪಾಂಡ್ಯ

ಮೈಕ್​ ಸ್ಟಂಪ್​ನಲ್ಲಿ ಸೆರೆಯಾದ ಆಡಿಯೊ

ತಿಲಕ್​ ವರ್ಮಾ ಅವರು 44 ರನ್​ ಗಳಿಸಿ ಕ್ರೀಸ್​ನಲ್ಲಿದ್ದ ವೇಳೆ ಹಾರ್ದಿಕ್​ ಪಾಂಡ್ಯ ಅವರು ತಿಲಕ್​ ವರ್ಮಾರನ್ನು ಬಾಯ್​(ಸಹೋದರ) ಎಂದು ಕರೆದು “ಪಂದ್ಯವನ್ನು ನೀನೇ ಫಿನಿಶ್​ ಮಾಡಬೇಕು. ಕೊನೆ ತನಕ ನಿಂತು ಆಡಬೇಕು. ಎಷ್ಟು ಎಸೆತಗಳನ್ನು ಎದುರಿಸಿರುವೆ ಎಂಬುದು ಇಲ್ಲಿ ಲೆಕ್ಕಕ್ಕೆ ಪಂದ್ಯದ ಗೆಲುವು ಪರಿಗಣನೆಗೆ ಬರುತ್ತದೆ. ಜತೆಗೆ ಅಜೇಯರಾಗಿ ಆಗಿ ಉಳಿಯುವುದರ ಮಹತ್ವ ಹೆಚ್ಚಿರುತ್ತದೆ” ಎಂದು ಪಾಂಡ್ಯ ಹಿಂದಿಯಲ್ಲಿ ಹೇಳಿರುವುದು ಸ್ಟಂಪ್‌ ಮೈಕ್‌ನಲ್ಲಿ ದಾಖಲಾಗಿದೆ.

ಮತ್ತೆ ಪಾಂಡ್ಯಗೆ ಕ್ಲಾಸ್​ ತೆಗೆದುಕೊಂಡ ನೆಟ್ಟಿಗರು

ಮೈಕ್​ ಸ್ಟಂಪ್​ನ ಆಡಿಯೊ ವೈರಲ್​ ಆಗುತ್ತಿದ್ದಂತೆ ಮತ್ತೆ ಪಾಂಡ್ಯರನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಉತ್ತಮವಾಗಿ ಆಟವಾಡುತ್ತಿದ್ದ ಆಟಗಾರನ ಹಾದಿ ತಪ್ಪಿಸಿದ್ದು ಮಾತ್ರವಲ್ಲದೆ ವಿಶ್ವಾಸ ದ್ರೋಹ ಬಗೆದಿದ್ದೀರ ಎಂದು ಕಮೆಂಟ್​ ಮಾಡಿದ್ದಾರೆ. ನಿಮ್ಮ ಮಾತಿಗೆ ಬೆಲೆ ಕೊಟ್ಟ ಆಟಗಾರನೀಗೆ ಈ ರೀತಿ ಕೇಟು ಬಗೆದದ್ದು ಸರಿಯಲ್ಲ ಎಂದು ಹೇಳಿದ್ದಾರೆ. ತಿಲಕ್​ ವರ್ಮ ಅವರು ಈ ಪಂದ್ಯದಲ್ಲಿ 37 ಎಸೆತಗಳಿಂದ ಅಜೇಯ 49 ರನ್​ ಬಾರಿಸಿದರು.

Exit mobile version