ಬೆಂಗಳೂರು: ಅಕ್ಟೋಬರ್ 29 ರಂದು ಲಕ್ನೋದಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಭಾರತದ ಮುಂದಿನ ವಿಶ್ವಕಪ್ ಪಂದ್ಯದಿಂದ ಹಾರ್ದಿಕ್ ಪಾಂಡ್ಯ ಹೊರಗುಳಿಯುವ ಸಾಧ್ಯತೆಯಿದೆ. ಪುಣೆಯಲ್ಲಿ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದ ವೇಳೆ ಆಗಿರುವ ಪಾದದ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಆಲ್ರೌಂಡರ್ ಧರ್ಮಶಾಲಾದಲ್ಲಿ ನ್ಯೂಜಿಲೆಂಡ್ ವಿರುದ್ಧದ ತಂಡದ ಮುಂದಿನ ಪಂದ್ಯಕ್ಕೂ ಲಭ್ಯವಿರಲಿಲ್ಲ. ಇದೀಗ ಅವರು ಲಖನೌ ಪಂದ್ಯಕ್ಕೂ ಇರಲಾರರು ಎಂದು ಹೇಳಲಾಗಿದೆ.
ಗಾಯ ಗಂಭೀರವಲ್ಲ ಆದರೆ ಪಾಂಡ್ಯ ಅವರನ್ನು ತರಾತುರಿಯಲ್ಲಿ ಕರೆದೊಯ್ಯಲು ಮ್ಯಾನೇಜ್ಮೆಂಟ್ ಉತ್ಸುಕವಾಗಿಲ್ಲ ಎಂದು ತಿಳಿದುಬಂದಿದೆ. “ಹೌದು, ಲಕ್ನೋದಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಮುಂದಿನ ಪಂದ್ಯದಿಂದ ಹಾರ್ದಿಕ್ ಹೊರಗುಳಿಯುವ ಸಾಧ್ಯತೆಯಿದೆ. ಈ ಹಂತದಲ್ಲಿ ಇದು ಮುನ್ನೆಚ್ಚರಿಕೆಯ ಕ್ರಮವಾಗಿದೆ. ಗಾಯ ಗಂಭೀರವಾದದ್ದೇನೂ ಅಲ್ಲ”ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
30 ವರ್ಷದ ಹಾರ್ದಿಕ್ ತಂಡದೊಂದಿಗೆ ಧರ್ಮಶಾಲಾಕ್ಕೆ ಪ್ರಯಾಣಿಸಲಿಲ್ಲ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ವೈದ್ಯಕೀಯ ತಂಡವು ವಿಶ್ರಾಂತಿ ಪಡೆಯಲು ಸಲಹೆ ನೀಡಿತು. ಹೀಗಾಗಿ ಅವರು ಬೆಂಗಳೂರಿಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಆಗಮಿಸಿ ಪುನಶ್ಚೇತನದಲ್ಲಿ ತೊಡಗಿದ್ದಾರೆ. ಮುಂಬೈನಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯಕ್ಕೂ ಮುನ್ನ ಅವರು ತಂಡದೊಂದಿಗೆ ಸಂಪರ್ಕ ಸಾಧಿಸುವ ಸಾಧ್ಯತೆಯಿದೆ.
ಭಾರತವು ನ್ಯೂಜಿಲೆಂಡ್ ವಿರುದ್ಧದ ತನ್ನ ಕೊನೆಯ ಪಂದ್ಯವನ್ನು ಗೆದ್ದು ಗೆಲುವಿನ ಓಟವನ್ನು ಮುಂದುವರಿಸಿದೆ. ನಂತರ ಸುಂದರವಾದ ಗುಡ್ಡಗಾಡು ನಗರದವಾದ ಧರ್ಮಶಾಲಾದಲ್ಲಿ ಎರಡು ದಿನಗಳ ವಿರಾಮವನ್ನು ಆನಂದಿಸಿತು. ಅಕ್ಟೋಬರ್ 25ರಂದು ಭಾರತೀಯ ಕ್ರಿಕೆಟ್ ತಂಡವು ಅಲ್ಲಿಂದ ಲಕ್ನೊಗೆ ಪ್ರಯಾಣ ಬೆಳೆಸಲಿದೆ.
ಟ್ರೆಂಕಿಂಗ್ ಬ್ಯಾನ್
ಐಸಿಸಿ ವಿಶ್ವಕಪ್ನಲ್ಲಿ ಸತತ 5 ಗೆಲುವುಗಳನ್ನು ಸಾಧಿಸಿದ ಭಾರತ ಕ್ರಿಕೆಟ್ ತಂಡವು (Team India) ಇಂಗ್ಲೆಂಡ್ ವಿರುದ್ಧ ಆಡುವ ಮುಂದಿನ ಪಂದ್ಯದ ನಡುವೆ ಏಳು ದಿನಗಳ ವಿರಾಮ ಪಡೆಯುತ್ತದೆ. ಅದರಲ್ಲಿ ಮೊದಲೆರಡು ದಿನಗಳು ಆಟಗಾರರಿಗೆ ಸಂಪೂರ್ಣ ಫ್ರೀ. ತರಬೇತಿ ಮತ್ತು ಅಭ್ಯಾಸ ಶಿಬಿರಗಳು ಇಲ್ಲ. ಈ ಅವಧಿಯಲ್ಲಿ ಮಾನಸಿಕ ಒತ್ತಡವನ್ನು ನಿವಾರಿಸುವ ಕಡೆಗೆ ಆಟಗಾರರು ಗಮನ ಕೊಡಬೇಕಾಗಿದೆ. ಆದರೆ, ಬ್ರೇಕ್ ಕೊಡುವ ಮೊದಲು ಟೀಮ್ ಮ್ಯಾನೇಜ್ಮೆಂಟ್ ಆಟಗಾರರಿಗೆ ಖಡಕ್ ಎಚ್ಚರಿಕೆಯೊಂದನ್ನು ಕೊಟ್ಟಿದೆ. ಅದರ ಪ್ರಕಾರ ರಜೆ ಸಿಕ್ಕಿದೆ ಎಂದು ಯಾವ ಆಟಗಾರನೂ ಆ ಅವಧಿಯನ್ನು ತಮ್ಮ ವಿನೋದಕ್ಕೆ ಬಳಸುವಂತಿಲ್ಲ. ಅಂದರೆ ಟ್ರೆಕ್ಕಿಂಗ್, ಹೈಕಿಂಗ್ನಂಥ ಕಾರ್ಯಕ್ರಮಗಳನ್ನು ನಿಷೇಧಿಸಲಾಗಿದೆ. ಪ್ರಮುಖವಾಗಿ ಹಿಮಾಚಲ ಪ್ರದೇಶದ ಧರ್ಮಶಾಲಾ ಟ್ರೆಕ್ಕಿಂಗ್ಗೆ ಫೇಮಸ್. ಹೀಗಾಗಿ ಯಾರೂ ಆ ರೀತಿಯ ಕೆಲಸ ಮಾಡಬಾರದು ಎಂದು ಹೇಳಿದೆ. ಆದರೆ ಆಟಗಾರರು ಸುಂದರವಾದ ಧರ್ಮಶಾಲಾದಲ್ಲಿ ದೃಶ್ಯವೀಕ್ಷಣೆಗೆ ಹೋಗಬಹುದು.
ಇಂಗ್ಲೆಂಡ್ ವಿರುದ್ಧದ ತಯಾರಿಯನ್ನು ಪ್ರಾರಂಭಿಸಲು ತಂಡದ ನಿಯೋಗವು ಲಕ್ನೋಗೆ ಪ್ರಯಾಣಿಸುವ ಮೊದಲು ಆಟಗಾರರಿಗೆ 2 ದಿನಗಳ ವಿಶ್ರಾಂತಿ ಅವಧಿಯನ್ನು ನೀಡಲು ಟೀಮ್ ಮ್ಯಾನೇಜ್ಮೆಂಟ್ ನಿರ್ಧರಿಸಿತ್ತು. ತಂಡವು ಅಕ್ಟೋಬರ್ 25ರಂದು ಲಕ್ನೋಗೆ ಪ್ರಯಾಣಿಸುವ ನಿರೀಕ್ಷೆಯಿದೆ. ಈ ಮಧ್ಯೆ, ಬೆಟ್ಟಗಳಲ್ಲಿರುವ ಪಟ್ಟಣದ ರಮಣೀಯ ಸೌಂದರ್ಯವನ್ನು ಆನಂದಿಸಲು ಆಟಗಾರರಿಗೆ ಅವಕಾಶ ನೀಡಲಾಗಿದೆ. ಆದರೆ ಯಾರೂ ಅಪಾಯಕಾರಿ ಸಾಹಸಗಳನ್ನು ಮಾಡಬಾರದು ಎಂದು ಹೇಳಿದೆ.