ಅಹಮದಾಬಾದ್: ಪಾಕಿಸ್ತಾನ ವಿರುದ್ಧ ಶನಿವಾರ ನಡೆದ ವಿಶ್ವಕಪ್(icc world cup 2023) ಲೀಗ್ ಪಂದ್ಯದಲ್ಲಿ ಆತಿಥೇಯ ಭಾರತ ತಂಡ 7 ವಿಕೆಟ್ಗಳ ಗೆಲುವು ಸಾಧಿಸಿ ಕೂಟದಲ್ಲಿ ಹ್ಯಾಟ್ರಿಕ್ ಗೆಲುವು ಸಂಪಾದಿಸಿದೆ. ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ(Hardik Pandya) ಅವರು ಮಂತ್ರ ಪಠಣ ಮಾಡಿ ಪಾಕ್ ಆಟಗಾರ ಇಮಾಮ್ ಉಲ್ ಹಕ್(Imam-ul-Haq) ವಿಕೆಟ್ ಕಿತ್ತ ಘಟನೆ ನಡೆಯಿತು. ಈ ವಿಡಿಯೊ ಎಲ್ಲಡೆ ವೈರಲ್ ಆಗಿದೆ.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿದ ಪಾಕಿಸ್ತಾನ ಪರ ಅಬ್ದುಲ್ಲಾ ಶಫೀಕ್ ಮತ್ತು ಇಮಾಮ್ ಉಲ್ ಹಕ್ ಆರಂಭದಲ್ಲಿ ಭಾರತೀಯ ಬೌಲರ್ಗಳ ಚಳಿ ಬಿಡಿಸಿದರು. ಅದರಲ್ಲೂ ಸಿರಾಜ್ ಅವರಿಗೆ ಸರಿಯಾಗಿ ದಂಡಿಸಿದರು. ಉಭಯ ಆಟಗಾರರ ಆಟವನ್ನು ಕಂಡಾಗ ಈ ಬಾರಿ ಪಾಕ್ 350ರ ಗಡಿ ದಾಟುತ್ತದೆ ಎಂದು ಊಹಿಸಲಾಗಿತ್ತು.
ಗಟ್ಟಿಯಾಗಿ ಬೇರೂರಿ ನಿಂತಿದ್ದ ಇಮಾಮ್ ಉಲ್ ಹಕ್ ಅವರನ್ನು 13ನೇ ಓವರ್ ಎಸೆಯಲು ಬಂದ ಹಾರ್ದಿಕ್ ಪಾಂಡ್ಯ ಚೆಂಡನ್ನು ಎಸೆಯುವ ಮುನ್ನ ವಿಕೆಟ್ ಬೀಳುವಂತೆ ಮಂತ್ರವೊಂದನ್ನು ಪಠಣ ಮಾಡಿ ಚೆಂಡನ್ನು ಎಸೆದರು. ಸಾರಸ್ಯವೆಂದರೆ ಈ ಎಸೆತದಲ್ಲೇ ಡೇಂಜರಸ್ ಇಮಾಮ್ ಉಲ್ ಹಕ್ ಅವರು ಕೀಪರ್ ರಾಹುಲ್ ಕೈಗೆ ಕ್ಯಾಚ್ ನೀಡಿ ವಿಕೆಟ್ ಕೈಚೆಲ್ಲಿದರು. ಪಾಂಡ್ಯ ಮಂತ್ರ ಫಲಿಸಿತು. ಇದೇ ಖುಷಿಯಲ್ಲಿ ಅವರು ಹೇಗಿದೆ ನನ್ನ ಮಂತ್ರದ ಪವಾಡ, ನಡಿ ನಡಿ ಪೆವಿಲಿಯನ್ ಕಡೆಗೆ ಎನ್ನುವ ರೀತಿಯಲ್ಲಿ ಸನ್ನೆ ಮಾಡಿದರು.
I think #HardikPandya would have uttered #PKMKBForever and guess what immediately got rewarded with a wicket.
— Esha Srivastav🇮🇳🚩 (@EshaSanju15) October 14, 2023
Power of #PKMKB 😂#Bharat that is #India stands at 8 – 0 🇮🇳❤️🔥#BHAvsPAK #IndiaVsPakistan #RohitSharma #JaspritBumrah #ICCCricketWorldCup23 pic.twitter.com/VDWIC7oBzX
ಪಾಂಡ್ಯ ಅವರು ಮಂತ್ರದ ಮೂಲಕ ವಿಕೆಟ್ ಪಡೆಯುತ್ತಿದಂತೆ ಈ ವಿಡಿಯೊವನ್ನು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ನಿಮ್ಮ ಮಂತ್ರದ ರಹಸ್ಯವನ್ನು ನಮಗೂ ತಿಳಿಸಿ ಪ್ಲೀಸ್ ಎಂದು ಹಾಸ್ಯಮಯ ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು ಇದು ಸನಾತನ ಧರ್ಮದ ಪವರ್ ಎಂದು ಹೇಳಿದ್ದಾರೆ. ಈ ಪಂದ್ಯದಲ್ಲಿ ಹಾರ್ದಿಕ್ 6 ಓವರ್ಗಳಲ್ಲಿ 34 ರನ್ ನೀಡಿ 2 ವಿಕೆಟ್ ಕಬಳಿಸಿದರು. ಇಮಾಮ್ ಉಲ್ ಹಕ್ ಅವರು 38 ಎಸೆತ ಎದುರಿಸಿ 6 ಬೌಂಡರಿ ನೆರವಿನಿಂದ 36 ರನ್ ಬಾರಿಸಿದರು.
ಇದನ್ನೂ ಓದಿ IND vs PAK: ಪಾಕ್ ಆಟಗಾರ ರಿಜ್ವಾನ್ಗೆ ತಿರುಗೇಟು ನೀಡಿದ ಸೋನು ನಿಗಮ್
ಭಾರತದಕ್ಕೆ ಏಳು ವಿಕೆಟ್ ಗೆಲುವು
ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಸ್ಡೇಡಿಯಂನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ ಬಿಗಿ ಬೌಲಿಂಗ್ ದಾಳಿ ಸಂಘಟಿಸಿತು. ನಾಟಕೀಯ ಕುಸಿತ ಕಂಡ ಪಾಕಿಸ್ತಾನ 42.5 ಓವರ್ ಗಳಲ್ಲಿ 191 ರನ್ ಗಳಿಗೆ ಸರ್ವಪತನ ಕಂಡಿತು. ಗುರಿ ಬೆನ್ನಟ್ಟಿದ ಭಾರತ 30.3 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿತು.
ರೋಹಿತ್ ಅಮೋಘ ಬ್ಯಾಟಿಂಗ್
ನಾಯಕ ರೋಹಿತ್ ಶರ್ಮ ಈ ಪಂದ್ಯದಲ್ಲಿ ಅಬ್ಬರದ ಬ್ಯಾಟಿಂಗ್ ನಡೆಸಿ ಗಮನಸೆಳೆದರು. 63 ಎಸೆತಗಳಲ್ಲಿ 86 ರನ್ ಗಳಿಸಿ ನೆರೆದಿದ್ದ ಅಭಿಮಾನಿಗಳಿಗೆ ಬರಪೂರ ರಂಜನೆ ನೀಡಿದರು. ಅವರ ಸೊಗಸಾದ ಈ ಇನಿಂಗ್ಸ್ನಲ್ಲಿ ಬರೋಬ್ಬರಿ 6 ಸಿಕ್ಸರ್ ಮತ್ತು 6 ಬೌಂಡರಿ ಸಿಡಿಯಿತು.