Site icon Vistara News

ICC World Cup 2023 : ಹೆಚ್ಚು ರನ್​ ಬಿಟ್ಟುಕೊಟ್ಟವರಲ್ಲೂ ಪಾಕ್​ ಬೌಲರ್​ಗೇ ಮೊದಲ ಸ್ಥಾನ!

Haris Rauf

ಕೋಲ್ಕತಾ: ಈಡನ್ ಗಾರ್ಡನ್ಸ್​ನಲ್ಲಿ ಶನಿವಾರ ನಡೆದ ಇಂಗ್ಲೆಂಡ್ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನದ ವೇಗದ ಬೌಲರ್ ಹ್ಯಾರಿಸ್ ರವೂಫ್​ ಅನಗತ್ಯ ದಾಖಲೆ ನಿರ್ಮಿಸಿದ್ದಾರೆ. ವಿಶ್ವಕಪ್​​ನ ಒಂದೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್​ಗಳನ್ನು ಬಿಟ್ಟುಕೊಟ್ಟ ದಾಖಲೆಯನ್ನು ವೇಗಿ ಮುರಿದಿದ್ದಾರೆ. ಹ್ಯಾರಿಸ್ 9 ಪಂದ್ಯಗಳಲ್ಲಿ 533 ರನ್​ಗಳನ್ನು ಬಿಟ್ಟುಕೊಟ್ಟ ನಂತರ ತಮ್ಮ ನಿರಾಶಾದಾಯಕ ವಿಶ್ವಕಪ್ ಅಭಿಯಾನವನ್ನು ಕೊನೆಗೊಳಿಸಿದ್ದಾರೆ.

2019ರ ವಿಶ್ವಕಪ್​ನ 526 ರನ್​​ಗಳನ್ನು ಬಿಟ್ಟುಕೊಟ್ಟು ದಾಖಲೆ ನಿರ್ಮಿಸಿದ್ದ ಇಂಗ್ಲೆಂಡ್ನ ಲೆಗ್ ಸ್ಪಿನ್ನರ್ ಆದಿಲ್ ರಶೀದ್ ಅವರನ್ನು 30ರ ಹರೆಯದ ರವೂಫ್​ ಹಿಂದಿಕ್ಕಿದ್ದಾರೆ. ಶ್ರೀಲಂಕಾದ ವೇಗಿ ದಿಲ್ಶಾನ್ ಮಧುಶಂಕಾ ಹಾಲಿ ವಿಶ್ವಕಪ್ ಅಭಿಯಾನದಲ್ಲಿ ಒಂಬತ್ತು ಇನಿಂಗ್ಸ್​​ಗಳಲ್ಲಿ 525 ರನ್​ ಬಿಟ್ಟುಕೊಟ್ಟು ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ರವೂಫ್ 9 ಇನ್ನಿಂಗ್ಸ್​ಗಳಲ್ಲಿ 6.9 ಎಕಾನಮಿಯಲ್ಲಿ 16 ವಿಕೆಟ್​ಗಳನ್ನು ಪಡೆದಿದ್ದಾರೆ.

ವಿಶ್ವ ಕಪ್​ನಲ್ಲಿ ಅತಿ ಹೆಚ್ಚು ರನ್ ಬಿಟ್ಟುಕೊಟ್ಟವರು

ವಿಶ್ವಕಪ್​ನಲ್ಲಿ ಪಾಕಿಸ್ತಾಣ ತಂಡದ ನಿರಾಶಾದಾಯಕ ಓಟವನ್ನು ಕಂಡಿದೆ. ತಂಡದ ಅಗ್ರ ಬ್ಯಾಟರ್​ ಮೊಹಮ್ಮದ್ ರಿಜ್ವಾನ್ 8 ಪಂದ್ಯಗಳಲ್ಲಿ 359 ರನ್ ಗಳಿಸಿದ್ದಾರೆ. ಆದರೆ ಪಂದ್ಯಾವಳಿಯಲ್ಲಿ ಹ್ಯಾರಿಸ್ ರವೂಫ್ ಬಿಟ್ಟುಕೊಟ್ಟಿದ್ದಕ್ಕೆ ಹೋಲಿಸಿದರೆ ಅದು 138 ರನ್​ಗಳಿಗಿಂತ ಕಡಿಮೆಯಿದೆ.

ಇದನ್ನೂ ಓದಿ : ICC World Cup 2023 : ದಾಖಲೆಯ ಚೇಸಿಂಗ್​ ಮೂಲಕ ಬಾಂಗ್ಲಾ ವಿರುದ್ಧ ಗೆದ್ದ ಆಸೀಸ್​

ವಿಶೇಷವೆಂದರೆ, ಇಂಗ್ಲೆಂಡ್ ಮತ್ತು ಪಾಕಿಸ್ತಾನ ಎರಡೂ ವಿಶ್ವಕಪ್ ಸೆಮಿಫೈನಲ್ ಸ್ಪರ್ಧೆಯಿಂದ ಹೊರಗುಳಿದಿವೆ. ವಿಶ್ವಕಪ್ ಸೆಮಿಫೈನಲ್​​ಗೆ ಅರ್ಹತೆ ಪಡೆಯಲು ಪಾಕಿಸ್ತಾನವು ಮೊದಲು ಬ್ಯಾಟಿಂಗ್ ಮಾಡಬೇಕಾಗಿತ್ತು. ಆದರೆ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರಿಂದ ಅದು ಟಾಸ್ ಸಮಯದಲ್ಲಿ ಕೊನೆಗೊಂಡಿತು..

ಪಾಕಿಸ್ತಾನ ಔಟ್​; ಭಾರತ- ಕಿವೀಸ್​ ಸೆಮಿಫೈನಲ್​ ಫಿಕ್ಸ್​

ಬಾಬರ್ ಅಜಂ ನೇತೃತ್ವದ ಪಾಕಿಸ್ತಾನ ಕ್ರಿಕೆಟ್ ತಂಡ ಹಾಲಿ ಆವೃತ್ತಿಯ ವಿಶ್ವ ಕಪ್​ನ (ICC World Cup 2023) ಲೀಗ್​ ಹಂತದಿಂದಲೇ ಹೊರಕ್ಕೆ ನಡೆದಿದೆ. ಭಾರತೀಯ ಉಪ ಖಂಡದ ಲಾಭಗಳನ್ನು ಬಳಸಿಕೊಂಡು ಕಪ್​ ಗೆದ್ದುಕೊಂಡು ಬರುತ್ತೇವೆ ಎಂಬ ಹುಮ್ಮಸ್ಸಿನಲ್ಲಿ ಭಾರತಕ್ಕೆ ಕಾಲಿಟ್ಟಿದ್ದ ಪಾಕ್​ ತಂಡ ನಿರಾಶಾದಾಯಕ ಪ್ರದರ್ಶನ ನೀಡುವ ಮೂಲಕ ಮೊದಲ ಹಂತದಿಂದಲೇ ನಿರ್ಗಮಿಸಿದೆ. ಈ ಮೂಲಕ ಆಡಳಿತಾತ್ಮಕವಾಗಿ ಹಾಗೂ ಆಂತರಿಕ ಬಿಕ್ಕಟ್ಟಿನಲ್ಲಿ ಸಿಲುಕಿದ್ದ ಪಾಕ್ ತಂಡ ಭಾರತದಿಂದ ಬೇಸರದಿಂದ ನಿರ್ಗಮಿಸುವಂತಾಗಿದೆ.

ಪಾಕಿಸ್ತಾನ ತಂಡ ಹೊರಕ್ಕೆ ಬೀಳುತ್ತಿದ್ದಂತೆಯೇ ಭಾರತ ಹಾಗೂ ನ್ಯೂಜಿಲ್ಯಾಂಡ್ ತಂಡಗಳ ನಡುವಿನ ಸೆಮಿಫೈನಲ್ ಪಂದ್ಯ ಫಿಕ್ಸ್ ಆಗಿದೆ. ನವೆಂಬರ್​ 15ರಂದು ಮೊದಲ ಸೆಮಿ ಫೈನಲ್ ನಡೆಯಲಿದ್ದು, ಈ ಪಂದ್ಯ ಮುಂಬಯಿಯ ವಾಂಖೆಡೆ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ಅಯೋಜನೆಗೊಂಡಿದೆ.

ನವೆಂಬರ್​ 11ರಂದು ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಬೃಹತ್ ಅಂತರದ ಗೆಲುವು ಸಾಧಿಸುವ ಮೂಲಕ ಪಾಕಿಸ್ತಾನ ತಂಡಕ್ಕೆ ಸೆಮಿಫೈನಲ್​ಗೇರುವ ಅವಕಾಶ ಇತ್ತು.ಗೆಲುವಿನ ಜತೆಗೆ ನ್ಯೂಜಿಲ್ಯಾಂಡ್ ತಂಡವನ್ನು ನೆಟ್​ರನ್ ರೇಟ್​ನಲ್ಲಿ ಹಿಂದಿಕ್ಕಿ ಪಾಕಿಸ್ತಾನ ತಂಡ ಉಪಾಂತ್ಯಕ್ಕೆ ಪ್ರವೇಶ ಮಾಡಬೇಕಾಗಿತ್ತು. ಆದರೆ ಆ ಗುರಿ ಅಸಾಧ್ಯವಾಗಿತ್ತು. ಮೊದಲು ಬ್ಯಾಟ್​ ಮಾಡಿದ ಇಂಗ್ಲೆಂಡ್​ ತಂಡ 337 ರನ್​ ಬಾರಿಸಿತ್ತು. ಕೇವಲ 6. 4 ಓವರ್​ಗಳಲ್ಲಿ ಆ ಗುರಿಯನ್ನು ಮುಟ್ಟಿದ್ದರೆ ಪಾಕ್​ಗೆ ಸೆಮೀಸ್ ಪ್ರವೇಶದ ಅವಕಾಶ ಇತ್ತು. ಆ ಅವಕಾಶ ಮುಗಿದ ತಕ್ಷಣ ಪಾಕ್ ತಂಡದ ಸೆಮಿಸ್ ಕತೆ ಮುಗಿಯಿತು.

ಪಾಕಿಸ್ತಾನ ತಂಡ ಇನ್ನು ಇಂಗ್ಲೆಂಡ್ ವಿರುದ್ಧ ಗೆದ್ದರೂ ಏನೂ ಪ್ರಯೋಜನ ಇಲ್ಲ. ಅದು ಗರಿಷ್ಠ 5 ಗೆಲುವುಗಳೊಂದಿಗೆ 10 ಅಂಕಗಳನ್ನು ಸಂಪಾದಿಸಿ ತವರಿಗೆ ಮರಳಬಹುದು.

ಪಂದ್ಯದ ಮೊದಲು ಸನ್ನಿವೇಶಗಳ ಬಗ್ಗೆ ಮಾತನಾಡಿದ ಬಾಬರ್ ಅಜಮ್ ಅಂಡ್ ಕೋ 1.3 ಓವರ್​​ಗಳಲ್ಲಿ 20 ರನ್​​ಗಳ ಗುರಿಯನ್ನು ಬೆನ್ನಟ್ಟಬೇಕಾಗಿತ್ತು. 2.5 ಓವರ್ ಗಳಲ್ಲಿ 50 ರನ್ ಗಳ ಗುರಿ ನೀಡಲಾಗಿತ್ತು 3.4 ಓವರ್ ಗಳಲ್ಲಿ 150 ರನ್ ಗಳ ಗುರಿ ನೀಡಲಾಯಿತು. 4.3 ಓವರ್ ಗಳಲ್ಲಿ 200 ಮತ್ತು 6.1 ಓವರ್ ಗಳಲ್ಲಿ 300 ರನ್ ಗಳ ಗುರಿಯು ಎದುರಾಗಿತ್ತು.

Exit mobile version