ಅಹ್ಮದಾಬಾದ್: ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶನಿವಾರ ನಡೆದ ಹೈ ವೋಲ್ಟೇಜ್ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಅವರ ಅಬ್ಬರದ ಬ್ಯಾಟಿಂಗ್ ಮುಂದೆ ಪಾಕಿಸ್ತಾನ ತಂಡದ 29 ವರ್ಷದ ಪಾಕಿಸ್ತಾನ ಹ್ಯಾರಿಸ್ ರವೂಫ್ ನಿರಾಶೆಗೊಂಡಿದ್ದರು. ಈ ನಿರಾಸೆಯನ್ನು ಅವರು ಶ್ರೇಯಸ್ ಅಯ್ಯರ್ ಮುಂದೆ ತೋರಿಸಿ ಪ್ರೇಕ್ಷಕರಿಂದ ಲೇವಡಿಗೆ ಒಳಗಾದರು.
ಪಾಕಿಸ್ತಾನದ ಪ್ರಮುಖ ವೇಗಿ ಹ್ಯಾರಿಸ್ ರವೋಫ್ ಭಾರತ ವಿರುದ್ಧದ ಪಂದ್ಯದಲ್ಲಿ ಸಂಪೂರ್ಣವಾಗಿ ವೈಫಲ್ಯ ಕಂಡರು. ಅವರು ತಮ್ಮ ಎಕ್ಸ್ಪ್ರೆಸ್ ವೇಗದಿಂದ ಯಾವುದೇ ಪರಿಣಾಮ ಬೀರಲು ಸಾಧ್ಯವಾಗಲಿಲ್ಲ. ಈ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಭಾರತದ ನಾಯಕ ರೋಹಿತ್ ಶರ್ಮಾ ರವೂಫ್ ಅವರ ಎಸೆತಗಳನ್ನು ಮುಗಿಲೆತ್ತರಕ್ಕೆ ಹಾರಿಸಿದರು. ಹೀಗಾಗಿ ರವೂಫ್ ತಮ್ಮ ಮೊದಲ ಸ್ಪೆಲ್ನಲ್ಲಿ 4 ಓವರ್ ಎಸೆದು 34 ರನ್ ನೀಡಿದ್ದರು.
— No-No-Crix (@Hanji_CricDekho) October 14, 2023
ಸಿಕ್ಕಾಪಟ್ಟೆ ರನ್ಗಳನ್ನುಬಿಟ್ಟುಕೊಟ್ಟ ನಂತರ ರವೂಫ್ ಸ್ಪಷ್ಟವಾಗಿ ನಿರಾಸೆಗೊಂಡಿದ್ದರು/ ಅವರು ಇನ್ನಿಂಗ್ಸ್ ನ 11ನೇ ಓವರ್ ನಲ್ಲಿ ಅದನ್ನು ವ್ಯಕ್ತಪಡಿಸಿದರು. ಓವರ್ನ 5 ನೇ ಎಸೆತದಲ್ಲಿ, ಅವರು ಆಫ್-ಸ್ಟಂಪ್ ಹೊರಗೆ ಫುಲ್ಲೆಂತ್ ಎಸೆತವನ್ನು ಎಸೆದರು. ಅಯ್ಯರ್ ಅದನ್ನು ವಾಪಸ್ ಕಳುಹಿಸಿದರು/ ರವೂಫ್ ಹತಾಶೆಯಿಂದ ಚೆಂಡನ್ನು ಸಂಗ್ರಹಿಸಿ ಅಯ್ಯರ್ ಅವರ ದಿಕ್ಕಿನಲ್ಲಿ ಮತ್ತೆ ವಾಪಸ್ ಎಸೆದರು. ಆ ಕ್ಷಣದಲ್ಲೇ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪ್ರೇಕ್ಷಕರು ಇದ್ದಕ್ಕಿದ್ದಂತೆ ಜೋರಾಗಿ ಪಾಕ್ ವೇಗಿಯನ್ನು ಲೇವಡಿ ಮಾಡಲು ಆರಂಭಿಸಿದರು.
ಗರಿಷ್ಠ ವಿಕೆಟ್ಗಳ ಗೆಲುವು
ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ವಿಶ್ವ ಕಪ್ (ind vs pak) ಪಂದ್ಯದಲ್ಲಿ ಭಾರತ ತಂಡ ಸುಲಭ ಜಯ ದಾಖಲಿಸಿದೆ. ಜಿದ್ದಾಜಿದ್ದಿನ ಪೈಪೋಟಿ ಎದುರಾಗಬಹುದು ಎಂದು ಅಂದಾಜಿಸಲಾಗಿದ್ದ ಪಂದ್ಯದಲ್ಲಿ ಭಾರತ ತಂಡ ಏಳು ವಿಕೆಟ್ ಸುಲಭ ಜಯ ದಾಖಲಿಸಿದೆ. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಭಾರತ ತಂಡ ಪಾರಮ್ಯ ಮೆರೆದಿದೆ. ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಸೇರಿದ್ದ 1 ಲಕ್ಷಕ್ಕೂ ಅಧಿಕ ಅಭಿಮಾನಿಗಳ ಮುಂದೆ ಭಾರತ ತಂಡದ ಆಟಗಾರರು ಕ್ರಿಕೆಟ್ ವೈಭವ ಮೆರೆದಿದ್ದಾರೆ. ಅಂದ ಹಾಗೆ ಇದು ಭಾರತ ತಂಡಕ್ಕೆ ವಿಶ್ವ ಕಪ್ ಟೂರ್ನಿಗಳಲ್ಲಿ ಪಾಕ್ ವಿರುದ್ಧ ಲಭಿಸಿದ ಗರಿಷ್ಠ ವಿಕೆಟ್ಗಳ ಜಯವಾಗಿದೆ. ಈ ಮೂಲಕವೂ ಭಾರತ ತಂಡ ಒಂದು ದಾಖಲೆಯನ್ನು ಮಾಡಿದೆ.
ಇದನ್ನೂ ಓದಿ : Rohit Sharma : ಒಂದು ಪಂದ್ಯದಲ್ಲಿ ನಾಲ್ಕು ದಾಖಲೆ ಸೃಷ್ಟಿಸಿದ ರೋಹಿತ್ ಶರ್ಮಾ
ವಿಕೆಟ್ಗಳ ಆಧಾರದ ಗೆಲುವನ್ನು ನೋಡಿದರೆ ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ಭಾರತ ತಂಡಕ್ಕೆ ಲಭಿಸಿರುವ ಗೆಲುವು ಇದುವರೆಗಿನ ವಿಶ್ವ ಕಪ್ಗಳಲ್ಲಿ ವಿಕೆಟ್ ಆಧಾರದಲ್ಲಿ ದೊರೆತ ಗರಿಷ್ಠ ವಿಕೆಟ್ಗಳ ಗೆಲುವಾಗಿದೆ. ಈ ಮೂಲಕವು ರೋಹಿತ್ ಬಳಗ ಜಯವನ್ನು ಇನ್ನಷ್ಟು ಸ್ಮರಣೀಯಗೊಳಿಸಿದೆ.