ಬೆಂಗಳೂರು: ಆರ್ಸಿಬಿ ತಂಡ ಕೈಬಿಟ್ಟ ವೇಳೆ ಚರ್ಚಗೆ ಒಳಗಾಗಿದ್ದ ಮಧ್ಯಮ ವೇಗಿ ಹರ್ಷಲ್ ಪಟೇಲ್ ಇನ್ನಷ್ಟು ಲಾಭ ಪಡೆದುಕೊಂಡದಿ್ದಾರೆ. ಅವರನ್ನು ಪಂಜಾಬ್ ಕಿಂಗ್ಸ್ 11.75 ಕೋಟಿ ರೂ.ಗೆ ಖರೀದಿಸಿದೆ. ಗುಜರಾತ್ ಟೈಟಾನ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ತೀವ್ರ ಬಿಡ್ಡಿಂಗ್ ನಂತರ, ಅನುಭವಿ ವೇಗಿ ಅಂತಿಮವಾಗಿ ಎರಡನೇ ತಂಡವನ್ನು ಸೇರಿಕೊಂಡರು.
Kar 𝐇𝐚𝐫 Maidaan Fateh! ❤️
— Punjab Kings (@PunjabKingsIPL) December 19, 2023
All Hail King Patel! 👑#IPL2024Auction #SaddaPunjab #PunjabKings #JazbaHaiPunjabi pic.twitter.com/79r5pOox0K
ಐಪಿಎಲ್ನಲ್ಲಿ ಅನುಭವಿ ಆಟಗಾರನಾಗಿರುವ ಹರ್ಷಲ್, 2012ರಲ್ಲಿ ಐಪಿಎಲ್ಗೆ ಪಾದಾರ್ಪಣೆ ಮಾಡಿದಾಗಿನಿಂದ ಟೂರ್ನಿಯಲ್ಲಿ 91 ಪಂದ್ಯಗಳನ್ನು ಆಡಿದ್ದಾರೆ. ವೇಗದ ಬೌಲರ್ ತಮ್ಮ ಸುದೀರ್ಘ ಐಪಿಎಲ್ ವೃತ್ತಿಜೀವನದಲ್ಲಿ 111 ವಿಕೆಟ್ಗಳನ್ನು ಪಡೆದಿದ್ದಾರೆ.
ಐಪಿಎಲ್ನಲ್ಲಿ ಸುದೀರ್ಘ ವೃತ್ತಿಜೀವನದ ಹೊರತಾಗಿಯೂ, ರಾಷ್ಟ್ರೀಯ ತಂಡಕ್ಕಾಗಿ ಆಡುವ ದೃಷ್ಟಿಯಿಂದ 2023 ಹರ್ಷಲ್ಗೆ ಉತ್ತಮ ವರ್ಷವಾಗಿರಲಿಲ್ಲ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಜನವರಿಯಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಅವರು ಈ ವರ್ಷ ಟಿ 20 ಪಂದ್ಯಗಳಲ್ಲಿ ಟೀಮ್ ಇಂಡಿಯಾಕ್ಕಾಗಿ ಕೇವಲ ಒಂದು ಪಂದ್ಯವನ್ನು ಮಾತ್ರ ಆಡಿದ್ದರು. ಈ ಪಂದ್ಯದಲ್ಲಿ ಅವರು ಎರಡು ವಿಕೆಟ್ ಪಡೆದರು. ಆದಾಗ್ಯೂ, ಅವರ ದುಬಾರಿ ಎಕಾನಮಿ ರೇಟ್ 10 ಕ್ಕೂ ಹೆಚ್ಚು ರನ್ಗಳು ಅಂದಿನಿಂದ ಟಿ 20 ಐ ಪಂದ್ಯಗಳಲ್ಲಿ ಭಾರತೀಯ ತಂಡಕ್ಕೆ ಆಯ್ಕೆಯಾಗುವಲ್ಲಿ ತಡೆಯುವ ಅಂಶವೆಂದು ಸಾಬೀತಾಗಿದೆ. ಆದರೆ ಐಪಿಎಲ್ನಲ್ಲಿ ಅವರ ಪ್ರಭಾವ ಕಡಿಮೆಯಾಗಿಲ್ಲ. ಅವರು ಇನ್ನೂ ದೊಡ್ಡ ಮೊತ್ತ ಪಡೆದುಕೊಂಡಿದ್ದಾರೆ.
ಹರ್ಷಲ್ ಪಟೇಲ್ಗೆ ಆರ್ಸಿಬಿ ತಂಡ 10 ಕೋಟಿ ರೂಪಾಯಿ ನೀಡುತ್ತಿತ್ತು. ಆದರೆ ಅವರೀಗ ಇನ್ನಷ್ಟು ಹೆಚ್ಚಿನ ಮೊತ್ತಪ ಪಡೆದುಕೊಂಡಿದ್ದಾರೆ.
ಹರ್ಷಲ್ 2018 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಹೋಗುವ ಮೊದಲು ಆರ್ಸಿಬಿಯೊಂದಿಗೆ ತಮ್ಮ ಐಪಿಎಲ್ ಪ್ರಯಾಣವನ್ನು ಪ್ರಾರಂಭಿಸಿದ್ದರು. 2021 ರಲ್ಲಿ ಮತ್ತೆ ಬೆಂಗಳೂರಿಗೆ ಮರಳಿದ್ದರು.
ಇದನ್ನೂ ಓದಿ : IPL Auction 2024: ಐಪಿಎಲ್ ಇತಿಹಾಸದಲ್ಲೇ ದಾಖಲೆಯ ಮೊತ್ತಕ್ಕೆ ಸೇಲ್ ಆದ ಕಮಿನ್ಸ್
ಪಂಜಾಬ್ ಕಿಂಗ್ಸ್ ತಂಡದ ಸಹ ಮಾಲೀಕರಾದ ಪ್ರೀತಿ ಜಿಂಟಾ, “ತುಂಬಾ ಸಂತೋಷವಾಗಿದೆ ಮತ್ತು ಅವರು ನಂಬಲಾಗದ ಬೌಲರ್. ಹರ್ಷಲ್. ಪಂಜಾಬ್ ಕಿಂಗ್ಸ್ ಗೆ ಸ್ವಾಗತ. ಅವರನ್ನು ಬಿಡುಗಡೆ ಮಾಡಿರುವುದು ನಮಗೆ ಆಶ್ಚರ್ಯವನ್ನುಂಟು ಮಾಡಿತ್ತು ಎಂದು ಹೇಳಿದ್ದಾರೆ.
ಐಪಿಎಲ್ ಇತಿಹಾಸದಲ್ಲೇ ದಾಖಲೆಯ ಮೊತ್ತಕ್ಕೆ ಸೇಲ್ ಆದ ಕಮಿನ್ಸ್
ದುಬೈ: ಪ್ರಸಕ್ತ ಸಾಗುತ್ತಿರುವ ಐಪಿಎಲ್ 2024 ಮಿನಿ ಹರಾಜಿನಲ್ಲಿ ಆಸ್ಟ್ರೇಲಿಯಾದ ವಿಶ್ವಕಪ್ ವಿಜೇತ ನಾಯಕ ಪ್ಯಾಟ್ ಕಮಿನ್ಸ್ ಅವರು ಬೃಹತ್ ಮೊತ್ತಕ್ಕೆ ಸೇಲ್ ಆಗುವ ಮೂಲಕ ಐಪಿಎಲ್ನಲ್ಲಿ ದಾಖಲೆಯೊಂದನ್ನು ಬರೆದಿದ್ದಾರೆ. ಅತಿ ಹೆಚ್ಚು ಮೊತ್ತಕ್ಕೆ ಸೇಲ್ ಆದ ಆಟಗಾರ ಎನಿಸಿಕೊಂಡಿದ್ದಾರೆ.
ಇಂಗ್ಲೆಂಡ್ ಆಲ್ ರೌಂಡರ್ ಸ್ಯಾಮ್ ಕರ್ರನ್ ಅವರು ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಹಣ ಪಡೆದ ಆಟಗಾರ ಎನಿಸಿಕೊಂಡಿದ್ದರು. 2023ರಲ್ಲಿ ಅವರನ್ನು ಪಂಜಾಬ್ ಕಿಂಗ್ಸ್ ತಂಡವು 18.50 ಕೋಟಿ ರೂ ನೀಡಿ ಖರೀದಿ ಮಾಡಿತ್ತು. ಆದರೆ ಈಗ ಈ ದಾಖಲೆ ಪತನಗೊಂಡಿದೆ. ಕಮಿನ್ಸ್ ಅವರು 20.50 ಕೋಟಿಗೆ ಸೇಲ್ ಆಗುವ ಮೂಲಕ ಈ ದಾಖಲೆಯನ್ನು ಮುರಿದಿದ್ದಾರೆ.
ನಿರೀಕ್ಷೆಯಂತೆ ದೊಡ್ಡ ಮೊತ್ತ ಪಡೆದ ಡ್ಯಾರಿಲ್ ಮಿಚೆಲ್
ನ್ಯೂಜಿಲ್ಯಾಂಡ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಮತ್ತು ಆಲ್ರೌಂಡರ್ ಆಗಿರುವ ಡ್ಯಾರಿಲ್ ಮಿಚೆಲ್ ಅವರಿಗೂ ದೊಡ್ಡ ಮೊತ್ತ ಸಿಗುವ ನಿರೀಕ್ಷೆ ಮಾಡಲಾಗಿತ್ತು. ಅದರಂತೆ ಅವರು ದೊಡ್ಡ ಮೊತ್ತ ಜೇಬಿಗಿಳಿಸಿದ್ದಾರೆ.14 ಕೋಟಿ ರೂ. ಮೊತ್ತಕ್ಕೆ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸೇಲ್ ಆಗಿದ್ದಾರೆ
ಯಾವುದೇ ಹಂತದಲ್ಲಿಯೂ ತಂಡಕ್ಕೆ ಆಸರೆಯಾಗಿ ನಿಂತು ಪಂದ್ಯವನ್ನು ಗೆಲ್ಲಿಸುವ ಸಾಮರ್ಥ್ಯ ಇವರಿಗಿದೆ. ಈ ಬಾರಿಯ ಐಸಿಸಿ ಏಕದಿನ ವಿಶ್ವಕಪ್‌ನಲ್ಲಿಯೂ ಮಿಚೆಲ್ ಗಮನಾರ್ಹ ಪ್ರದರ್ಶನ ತೋರಿದ್ದರು. 552 ರನ್ ಬಾರಿಸಿ ವಿಶ್ವಕಪ್ನಲ್ಲಿ ಅತ್ಯಧಿಕ ರನ್ಗಳಿಸಿದ 5ನೇ ಆಟಗಾರನಾಗಿ ಹೊರಮೊಮ್ಮಿದ್ದರು.