ಮುಂಬಯಿ: ಕ್ವಿಂಟನ್ ಡಿ ಕಾಕ್ (174) ಅವರ ಸ್ಮರಣೀಯ ಶತಕ ಹಾಗೂ ವಿಕೆಟ್ಕೀಪರ್ ಬ್ಯಾಟರ್ ಹೆನ್ರಿಚ್ ಕ್ಲಾಸೆನ್ (90) ಅವರ ಸ್ಫೋಟಕ ಅರ್ಧ ಶತಕ ನೆರವಿನೊಂದಿಗೆ ಮಿಂಚಿದ ದಕ್ಷಿಣ ಆಫ್ರಿಕಾ ತಂಡ ವಿಶ್ವ ಕಪ್ ಟೂರ್ನಿಯ (ICC World Cup 2023) ತನ್ನ ಐದನೇ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು 149 ರನ್ಗಳ ಅಂತರದಿಂದ ಸೋಲಿಸಿದೆ. ಇದು ಹಾಲಿ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಬಳಗಕ್ಕೆ ಲಭಿಸಿದ ನಾಲ್ಕನೇ ಗೆಲುವು. ದಕ್ಷಿಣ ಆಫ್ರಿಕಾ ತಂಡದ ಬೌಲರ್ಗಳು ಕೂಡ ಈ ಗೆಲುವಿಗೆ ತಮ್ಮ ಕೊಡುಗೆ ಸಲ್ಲಿಸಿದ್ದು ಬಾಂಗ್ಲಾದ ಪ್ರಮುಖ ಬ್ಯಾಟರ್ಗಳನ್ನು ಔಟ್ ಮಾಡುವ ಮೂಲಕ ಗೆಲುವಿನ ಅಂತರ ದೊಡ್ಡದಾಗಿರುವಂತೆ ನೋಡಿಕೊಂಡರು. ಇದರಿಂದ ತಂಡದ ರನ್ರೇಟ್ (2.370) ಕೂಡ ಏರಿಕೆಯಾಯಿತು.
The South Africa juggernaut rolls on in Mumbai 🤩
— ICC Cricket World Cup (@cricketworldcup) October 24, 2023
The Proteas garner a massive net run rate boost with another emphatic win ✅#CWC23 | #SAvBAN 📝: https://t.co/zon7XRfci5 pic.twitter.com/ycudXjTcnz
ಈ ಗೆಲುವಿನೊಂದಿಗೆ ಬಾಂಗ್ಲಾದೇಶ ತಂಡ ಆಡಿರುವ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಜಯಿಸಿ ಒಟ್ಟು8 ಅಂಕಗಳನ್ನು ಸಂಪಾದಿಸಿದೆ. ಜತೆಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದ ನ್ಯೂಜಿಲ್ಯಾಂಡ್ ತಂಡವನ್ನು ಕೆಳಕ್ಕೆ ತಳ್ಳಿ ಆ ಸ್ಥಾನವನ್ನು ಆಕ್ರಮಿಸಿಕೊಂಡಿತು. ನೆಟ್ರನ್ರೇಟ್ (2.370) ವಿಚಾರದಲ್ಲಿ ಮಾರ್ಕ್ರಮ್ ನೇತೃತ್ವದ ಬಳಗ ಉಳಿದೆಲ್ಲ ತಂಡಗಳಿಗಿಂತ ಗರಿಷ್ಠ ಪಾಯಿಂಟ್ ಪಡೆದುಕೊಂಡಿದೆ. ಅತ್ತ ಬಾಂಗ್ಲಾದೇಶ ತಂಡ ಸತತವಾಗಿ ನಾಲ್ಕನೇ ಪರಾಜಯಕ್ಕೆ ಒಳಗಾಯಿತು. ಇದರೊಂದಿಗೆ ಆ ತಂಡದ ಸೆಮಿಫೈನಲ್ ಅವಕಾಶ ಬಹುತೇಕ ನಷ್ಟಗೊಂಡಿದೆ.
ಈ ಸುದ್ದಿಗಳನ್ನೂ ಓದಿ
ICC World Cup 2023 : ಪಾಕ್ ತಂಡ ಫಜೀತಿ, ತುರ್ತು ಮೀಟಿಂಗ್ ಕರೆದ ಪಿಸಿಬಿ
ICC World Cup 2023 : ಪಾಕ್ ವಿರುದ್ಧ ಅಫಘಾನಿಸ್ತಾನದ ಗೆಲುವಿನಲ್ಲಿ ಭಾರತದ ಮಾಜಿ ಕ್ರಿಕೆಟಿಗನ ಕೈವಾಡ
Team India : ಭಾರತ ತಂಡದ ಆಟಗಾರರ ಮೋಜು, ಮಸ್ತಿಗೆ ಬ್ಯಾನ್; ಎಲ್ಲರಿಗೂ ಖಡಕ್ ಎಚ್ಚರಿಕೆ
ಇಲ್ಲಿನ ವಾಂಖೆಡೆ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ನಾಯಕನ ನಿರ್ಧಾರಕ್ಕೆ ಪೂರಕವಾಗಿವಾಗಿ ಆಡಿದ ಬ್ಯಾಟರ್ಗಳು ನಿಗದಿತ 50 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 382 ರನ್ ಬಾರಿಸಿತು. ಬೃಹತ್ ಮೊತ್ತಕ್ಕೆ ಪ್ರತಿಯಾಗಿ ಆಡಿದ ಬಾಂಗ್ಲಾದೇಶ 46.4 ಓವರ್ಗಳಲ್ಲಿ 233 ರನ್ಗಳಿಗೆ ಆಲ್ಔಟ್ ಅಯಿತು. ಬಾಂಗ್ಲಾದೇಶ ಪರ ಮಹಮದುಲ್ಲಾ (111) ಶತಕ ಬಾರಿಸಿ ಮಿಂಚಿದರು. ಅಲ್ಲದೆ, ಸೋಲಿನ ಬೇಸರಕ್ಕೆ ಒಳಗಾಗಿದ್ದ ಬಾಂಗ್ಲಾ ಅಭಿಮಾನಿಗಳಿಗೆ ಸಂತಸ ನೀಡಿದರು.‘
ಅಬ್ಬರದ ಬ್ಯಾಟಿಂಗ್
ಬ್ಯಾಟಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡ ಆರಂಭದಲ್ಲಿಯೇ ಕ್ವಿಂಟನ್ ಡಿ ಕಾಕ್ ಮೂಲಕ ಅಬ್ಬರದ ಬ್ಯಾಟಿಂಗ್ ಆರಂಭಿಸಿತು. ಆದಾಗ್ಯೂ ರೀಜಾ ಹೆಂಡ್ರಿಕ್ಸ್ (12) ಹಾಗೂ ರಸ್ಸೀ ವ್ಯಾನ್ಡೆರ್ ಡಸ್ಸೆನ್ (1) ಅವರ ವಿಕೆಟ್ಗಳು ಪತನಗೊಂಡ ಕಾರಣ ಆರಂಭಿಕ ಆಘಾತ ಉಂಟಾಯಿತು. 36 ರನ್ಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು. ಆದರೆ, ನಾಲ್ಕನೇ ಕ್ರಮಾಂಕದಲ್ಲಿ ಆಡಲು ಬಂದ ನಾಯಕ ಏಡೆನ್ ಮಾರ್ಕ್ರಮ್ (60) ಅರ್ಧ ಶತಕ ಬಾರಿಸಿ ಹಿನ್ನಡೆ ತಗ್ಗಿಸಿದರು. ಆ ಬಳಿಕ ಬಂದ ವಿಕೆಟ್ ಕೀಪರ್ ಬ್ಯಾಟರ್ ಕ್ಯಾಸೆನ್ 49 ಎಸೆತಗಳಲ್ಲಿ 2 ಫೋರ್ ಹಾಗೂ 8 ಸಿಕ್ಸರ್ ನೆರವಿನಿಂದ 90 ರನ್ ಬಾರಿಸಿದರು. ಅದಕ್ಕಿಂತ ಮೊದಲು 140 ಎಸೆತಗಳನ್ನು ಎದುರಿಸಿದ ಡಿ ಕಾಕ್ 15 ಫೋರ್ ಹಾಗೂ 7 ಸಿಕ್ಸರ್ ನೆರವಿನಿಂದ 174 ರನ್ ಹೊಡೆದರು. ಅದಕ್ಕಿಂತ ಮೊದಲು ಅವರು 101 ಎಸೆಗಳಲ್ಲಿ ಶತಕ ಪೂರೈಸಿದ್ದರು. ಅವರು ಹಾಲಿ ವಿಶ್ವ ಕಪ್ನಲ್ಲಿ ಕ್ವಿಂಟನ್ ಡಿ ಕಾಕ್ ಅವರ ಮೂರನೇ ಶತಕ. ಅಲ್ಲದೆ ಒಂದು ವಿಶ್ವ ಕಪ್ನಲ್ಲಿ ಮೂರು ಶತಕ ಬಾರಿಸಿದ ದಕ್ಷಿಣ ಆಫ್ರಿಕಾದ ಮೊದಲ ಬ್ಯಾಟರ್ ಎನಿಸಿಕೊಂಡು.
ದ. ಆಫ್ರಿಕಾ ಬೌಲರ್ಗಳ ಅಬ್ಬರ
ಬೃಹತ್ ಮೊತ್ತವನ್ನು ಚೇಸ್ ಮಾಡಲು ಮುಂದಾದ ಬಾಂಗ್ಲಾದೇಶ ಆಟಗಾರರು ಸತತವಾಗಿ ವಿಕೆಟ್ ಕಳೆದುಕೊಂಡರು. ಅಗ್ರ ಕ್ರಮಾಂಕದ ಬ್ಯಾಟರ್ಗಳು ಕಳಪೆ ಪ್ರದರ್ಶನ ನೀಡಿದರು. ದಕ್ಷಿಣ ಆಫ್ರಿಕಾದ ಬೌಲರ್ಗಳ ಅಟ್ಟಹಾಸಕ್ಕೆ ಅವರೆಲ್ಲರು ಮೌನಿಯಾದರು. 58 ರನ್ಳಿಗೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು. ಆದರೆ, ಆರನೇ ಕ್ರಮಾಂಕದಲ್ಲಿ ಆಡಲು ಬಂದ ಮಹಮದುಲ್ಲಾ ದ. ಆಫ್ರಿಕಾ ಬೌಲರ್ಗಳಿಗೆ ಸೆಡ್ಡು ಹೊಡೆದರು. ವಿಕೆಟ್ಗಳು ಉರುಳುತ್ತಿರುವ ನಡುವೆಯೂ 111 ಎಸೆತಗಳನ್ನು ಎದುರಿಸಿ 11 ಫೋರ್ ಹಾಗೂ 4 ಸಿಕ್ಸರ್ ಸಮೇತ ಮೂರಂಕಿ ಮೊತ್ತ ದಾಟಿದರು. ಈ ಮೂಲಕ ಅವರು ಸೋಲಿನ ಅಂತರವನ್ನು ತಗ್ಗಿಸಿದರು.
ದಕ್ಷಿಣ ಆಫ್ರಿಕಾದ ನಾಗಾಲೋಟ
ದಕ್ಷಿಣ ಆಫ್ರಿಕಾ ತಂಡ ತನ್ನ ಮೊದಲ ಪಂದ್ಯದಲ್ಲಿ ಶ್ರೀಲಂಕಾವನ್ನು, ನಂತರದ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿತ್ತು. ಆದರೆ, ಮೂರನೇ ಪಂದ್ಯದಲ್ಲಿ ಅಚ್ಚರಿ ಎಂಬಂತೆ ನೆದರ್ಲ್ಯಾಂಡ್ಸ್ ವಿರುದ್ದ ಸೋತಿತ್ತು. ನಾಲ್ಕನೇ ಪಂದ್ಯದಲ್ಲಿ ಇಂಗ್ಲೆಂಡ್ ಮಣಿಸಿತ್ತು. ಇದೀಗ ಬಾಂಗ್ಲಾ ತಂಡದ ವಿರುದ್ಧವೂ ಸವಾರಿ ಮಾಡಿದೆ. ದಕ್ಷಿಣ ಆಫ್ರಿಕಾ ತಂಡ ಹಾಲಿ ವಿಶ್ವ ಕಪ್ನಲ್ಲಿ ಮೂರನೇ ಬಾರಿ 350ಕ್ಕೂ ಅಧಿಕ ರನ್ ಮಾಡಿದಂತಾಗಿದೆ. ಲಂಕಾ ವಿರುದ್ಧ 5 ವಿಕೆಟ್ಗೆ ದಾಖಲೆಯ 428 ರನ್ ಬಾರಿಸಿತ್ತು. ಇಂಗ್ಲೆಂಡ್ ವಿರುದ್ಧವೂ 7 ವಿಕೆಟ್ಗೆ 399 ರನ್ ಮಾಡಿತ್ತು. ಬಾಂಗ್ಲಾ ವಿರುದ್ದ 382 ರನ್ ಬಾರಿಸಿದೆ. ಈ ಮೂಲಕ ಎದುರಾಳಿ ತಂಡದ ಬೌಲರ್ಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಂಡಿದ್ದಾರೆ ದಕ್ಷಿಣ ಆಫ್ರಿಕಾದ ಬೌಲರ್ಗಳು.