Site icon Vistara News

ICC World Cup 2023 : ಭಾರತದ್ದು ಮೋಸದ ಕ್ರಿಕೆಟ್ ಎಂದ ಪಾಕ್​ನ ಮಾಜಿ ಕ್ರಿಕೆಟಿಗ; ಬೆಂಡೆತ್ತಿದ ನೆಟ್ಟಿಗರು

Virat kohli DRS

ನವದೆಹಲಿ: ವಿಶ್ವಕಪ್ 2023 ಪಂದ್ಯಗಳಲ್ಲಿ (ICC World Cup 2023) ಭಾರತೀಯ ಬೌಲರ್​​ಗಳಿಗೆ ನೆರವು ನೀಡಲು ಐಸಿಸಿ ಮತ್ತು ಬಿಸಿಸಿಐ ಅನುಮಾನಾಸ್ಪದ ಚೆಂಡುಗಳನ್ನು ನೀಡಿವೆ ಎಂದು ಆರೋಪಿಸಿ ಸಾಮಾಜಿಕ ಮಾಧ್ಯಮದಲ್ಲಿ ವಿವಾದವನ್ನು ಹುಟ್ಟುಹಾಕಿದ ಕೆಲವು ದಿನಗಳ ನಂತರ, ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹಸನ್ ರಾಜಾ ಈಗ ಹೊಸ ರಾಗ ಎಳೆದಿದ್ದಾರೆ. ಭಾನುವಾರ ಕೋಲ್ಕತ್ತಾದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತದ ದಾಖಲೆಯ 243 ರನ್​ಗಳ ಗೆಲುವಿನ ನಂತರ ಮತ್ತೊಂದು ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಪಂದ್ಯಾವಳಿಯುದ್ದಕ್ಕೂ ಬಿಸಿಸಿಐ ಡಿಆರ್​ಎಸ್​ ಅನ್ನು ಬುದ್ಧಿವಂತಿಕೆಯಿಂದ ನಿರ್ವಹಿಸುತ್ತಿದೆ ಎಂದು ರಾಜಾ ಆರೋಪಿಸಿದ್ದಾರೆ. ಭಾರತಕ್ಕೆ ಪೂರಕವಾಗಿ ಫಲಿತಾಂಶ ಬರುವಂತೆ ನೋಡಿಕೊಳ್ಳುತ್ತಿದೆ ಎಂದು ನಂಜು ಕಾರಿದ್ದಾರೆ. ಈ ಬಗ್ಗೆ ಬಗ್ಗೆ ನೆಟ್ಟಿಗರು ಬೇಸರ ವ್ಯಕ್ತಪಡಿಸಿ ಮಾಜಿ ಕ್ರಿಕೆಟಿಗನಿಗೆ ಚೆನ್ನಾಗಿ ಬೈದಿದ್ದಾರೆ.

ರವೀಂದ್ರ ಜಡೇಜಾ ಈ ವಿಶ್ವಕಪ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಭಾರತದ ಗೆಲುವಿನ ರೂವಾರಿ ಎನಿಸಿಕೊಂಡಿದ್ದರು. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ತಮ್ಮ ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳನ್ನು ಹೊಂದಿರು ಅವರು ಐದು ವಿಕೆಟ್ ಸಾಧನೆ ಮಾಡಿದ್ದರು. ಅದಕ್ಕಾಗಿ ಅವರು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡಿದ್ದರು.

ಹೆನ್ರಿಕ್ ಕ್ಲಾಸೆನ್ ಅವರನ್ನು ಜಡೇಜಾ ಔಟ್ ಮಾಡಿರುವುದು ಅನುಮಾನಾಸ್ಪದವಾಗಿದೆ ಎಂದು ರಾಜಾ ಆರೋಪಿಸಿದ್ದಾರೆ. ಅವರು ತಮ್ಮ ಹೇಳಿಕೆಯಲ್ಲಿ ರಾಸ್ಸಿ ವಾನ್ ಡೆರ್ ಡುಸೆನ್ ಅವರ ಹೆಸರನ್ನು ಉಲ್ಲೇಖಿಸಿ ಶಮಿ ಎಸೆತಕ್ಕೆ ಅವರು ಎಲ್​ಬಿಡಬ್ಲ್ಯು ಆಗಿದ್ದು ಕೂಡ ಸರಿಯಾದ ತೀರ್ಪು ಅಲ್ಲ ಎಂದಿದ್ದಾರೆ.

ಜಡೇಜಾ ಎಸೆತಕ್ಕೆ ಕ್ಲಾಸೆನ್ ಔಟಾಗುವ ಮೊದಲು ಫೀಲ್ಡ್​ ಅಂಪೈರ್ ಮನವಿಯನ್ನು ತಿರಸ್ಕರಿಸಿದ್ದರು. ನಾಯಕ ರೋಹಿತ್ ಶರ್ಮಾ ಅವರಿಗೆ ಡಿಆರ್​ಎಸ್​ ಆಯ್ಕೆ ಮಾಡಲು ಜಡೇಜಾ ಮನವೊಲಿಸಿದ್ದರು. ರಿಪ್ಲೇ ಚೆಂಡು ಲೈನ್​ನಲ್ಲಿಯೇ ವಿಕೆಟ್​ಗೆ ಬಡಿಯುವುದನ್ನು ತೋರಿಸಿತ್ತು. ಹೀಗಾಗಿ ಮೂರನೇ ಅಂಪೈರ್​ ನಿರ್ಧಾರ ಬದಲಿಸುವಂತೆ ಫೀಲ್ಡ್​ ಅಂಪೈರ್​ಗೆ ಹೇಳಿದ್ದರು.

ಇದನ್ನೂ ಓದಿ: Virat Kohli : ತೆಂಡೂಲ್ಕರ್ ದಾಖಲೆ ಸರಿಗಟ್ಟುವ ಅಗತ್ಯವೇ ಇಲ್ಲ ಎಂದ ಮಾಜಿ ಆಸೀಸ್ ಆಟಗಾರ

ಜಡೇಜಾ ಐದು ವಿಕೆಟ್​ ಪಡೆದು ವೃತ್ತಿಜೀವನದ ಅತ್ಯುತ್ತಮ ಅಂಕಿಅಂಶಗಳೊಂದಿಗೆ ಪಂದ್ಯ ಮುಗಿಸಿದರು. ಆದರೆ ನಾವು ಡಿಆರ್ ಎಸ್ ತಂತ್ರಜ್ಞಾನದ ಬಗ್ಗೆ ಮಾತನಾಡಬೇಕಾಗಿದೆ. ಯಾಕೆಂದರೆ ವ್ಯಾನ್ ಡಿ ಡುಸೆನ್ ಔಟ್ ಆಗಿದ್ದು ಹೇಗೆ ಎಂಬುದೇ ಚರ್ಚೆಯ ವಿಷಯ. ಚೆಂಡು ಮಧ್ಯದ ಸ್ಟಂಪ್​ಗೆ ಬಡಿಯಲು ಹೇಗೆ ಸಾಧ್ಯ ಎಂಬುದೇ ಅಚ್ಚರಿ ಎಂದು ಹೇಳಿದ್ದಾರೆ.

ಇಂಪ್ಯಾಕ್ಟ್​ ಸರಿಯಾಗಿತ್ತು. ಆದರೆ ಚೆಂಡು ಲೆಗ್ ಸ್ಟಂಪ್ ಕಡೆಗೆ ಹೋಗುತ್ತಿತ್ತು. ಎಲ್ಲರಂತೆ, ನಾನು ನನ್ನ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿದ್ದೇನೆ. ಅಂತಹ ವಿಷಯಗಳನ್ನು ಪರಿಶೀಲಿಸಬೇಕು ಎಂದು ನಾನು ಹೇಳುತ್ತಿದ್ದೇನೆ. ಡಿಆರ್​ಎಸ್​​ ಅನ್ನು ತಿರುಚಲಾಗುತ್ತಿದೆ. ಅದು ಸ್ಪಷ್ಟವಾಗಿ ಗೋಚರಿಸುತ್ತಿದೆ” ಎಂದು ರಾಜಾ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾ-ಪಾಕ್ ಪಂದ್ಯವನ್ನು ಉಲ್ಲೇಖಿಸಿದ ರಾಜಾ

ಪಾಕಿಸ್ತಾನಕ್ಕಾಗಿ 23 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಅನುಭವಿ ಆಟಗಾರ ರಾಜಾ, ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನದ ಪಂದ್ಯದ ಡಿಆರ್​ಎಸ್​ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ಅಲ್ಲಿ ಪಂದ್ಯದ ಪಂದ್ಯದಲ್ಲಿ ಹ್ಯಾರಿಸ್ ರವೂಫ್​ ಎಸೆತಕ್ಕೆ ತಬ್ರೈಜ್ ಶಮ್ಸಿ ಎಲ್​ಬಿಡಬ್ಲ್ಯು ಡಿಆರ್​ಎಸ್​ ಮನವಿ ಬಳಿಕ ಔಟಾಗದೇ ಉಳಿದಿದ್ದರು.

ಈ ರೀತಿ ಆಗುತ್ತಿರುವುದು ಇದೇ ಮೊದಲಲ್ಲ. ಕಳೆದ ಎರಡು ಪಂದ್ಯಗಳಲ್ಲಿ ಇದು ಸಂಭವಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಪಾಕಿಸ್ತಾನದ ಪಂದ್ಯದಲ್ಲಿ ತಪ್ಪಾಗಿದೆ. ಅದಕ್ಕಾಗಿ ಯಾರೂ ಕ್ಷಮೆಯಾಚಿಸಲಿಲ್ಲ. ಈ ಎಲ್ಲಾ ವಿಷಯಗಳು ಭಾರತದಲ್ಲಿ ನಡೆಯುತ್ತಿದೆ ಎಂದು ಹೇಳಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version