Site icon Vistara News

Hasin Jahan: ‘ನಾಯಿಗಳ ದಂಡು’… ಎಂದು ಶಮಿಯನ್ನು ಅನಗತ್ಯವಾಗಿ ಕೆಣಕಿದರೇ ವಿಚ್ಛೇದಿತ ಪತ್ನಿ?; ವಿಡಿಯೊ ವೈರಲ್​

Hasin Jahan: Divorced wife who scolded Shami unnecessarily as 'pack of dogs'; The video is viral

Hasin Jahan: Divorced wife who scolded Shami unnecessarily as 'pack of dogs'; The video is viral

ಕೋಲ್ಕತ್ತಾ: ಟೀಮ್​ ಇಂಡಿಯಾದ ಸ್ಟಾರ್​ ವೇಗಿ ಮೊಹಮ್ಮದ್​ ಶಮಿ(Mohammed Shami) ಅವರ ವಿರುದ್ಧ ಸದಾ ಒಂದಿಲ್ಲೊಂದು ಕಾರಣಗಳಿಂದ ಟೀಕಿಸುತ್ತಿರುವ ಅವರ ವಿಚ್ಛೇದಿತ ಪತ್ನಿ ಹಸೀನ್ ಜಹಾನ್(Hasin Jahan) ಈ ಬಾರಿ ನಾಯಿಗೆ ಹೋಲಿಕೆ ಮಾಡಿ ಪರೋಕ್ಷವಾಗಿ ಹೀಯಾಳಿಸಿದ್ದಾರೆ.

ಹೌದು, ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಕಣ್ಣು ಮಿಟುಕಿಸುವ ಒಂದು ನಿಮಿಷದ ವಿಡಿಯೊ ಹಂಚಿಕೊಂಡಿರುವ ಹಸೀನ್ ಜಹಾನ್, ನಾಯಿಗಳ ದಂಡು ಹೆಣ್ಣು ಮಕ್ಕಳ ಹಿಂದಿನಿಂದ ಮಾತ್ರ ಬೊಗಳುತ್ತದೆ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಶಮಿಯನ್ನು ಅನಗತ್ಯವಾಗಿ ಕೆಣಕಿದರೇ ಎಂದ ಅನುಮಾನ ಮೂಡಿದೆ.

ಶಮಿ ವಿರುದ್ಧ ಹಸೀನ್ ಜಹಾನ್ ಈ ರೀತಿ ಮಾಡುತ್ತಿರುವುದು ಇದೇ ಮೊದಲೇನಲ್ಲ. ಏಕದಿನ ವಿಶ್ವಕಪ್​ ಟೂರ್ನಿಯ ವೇಳೆ ಉತ್ತಮ ಪ್ರದರ್ಶನ ತೋರಿದಾಗ ಎಮ್ಮೆ ನೀರು ಕುಡಿಯುತ್ತಿರುವ ಚಿತ್ರಗಳನ್ನು ಪೋಸ್ಟ್​ ಮಾಡುವ ಮೂಲಕ ವಿಲಕ್ಷಣದ ಹೇಳಿಕೆ ನೀಡಿದ್ದರು.

ಕೆಲವು ತಿಂಗಳ ಹಿಂದೆ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ರೋಹಿತ್​ ಶರ್ಮ ಅವರು ತಮ್ಮ ಪುಟ್ಟ ಮಗಳು ಸಮೈರಾ ತೊಡೆ ಮೇಲೆ ಹಾಯಾಗಿ ಮಲಗಿರುವ ಫೋಟೊ ಹಂಚಿಕೊಂಡಿದ್ದ ಹಸೀನ್ ಜಹಾನ್, ಹೆಚ್ಚಿನ ತಂದೆಯಂದಿರು ತಮ್ಮ ಪುಟ್ಟ ಮಗಳನ್ನು ದೇವರಂತೆ ಕಂಡು ಅವರಿಂದ ಶಾಂತಿ ಕಂಡುಕೊಳ್ಳುತ್ತಾರೆ. ಮತ್ತು ಕೆಲವು ತಂದೆಯರು ವೇಶ್ಯೆಯರ ಮಡಿಲಲ್ಲಿ!. ಅಲ್ಲಾಹು ಯಾವುದೇ ಮಗಳಿಗೆ ಇಂತಹ ಗುಣವಿಲ್ಲದ ತಂದೆಯನ್ನು ಎಂದಿಗೂ ನೀಡದಿರಲಿ. ಆಮೀನ್. ನನ್ನ ಪುಟ್ಟ ಮಗಳಿಗೆ ತಾಳ್ಮೆಯನ್ನು ನೀಡುವಂತೆ ನಾನು ಅಲ್ಲಾಹುವಿನನಲ್ಲಿ ಪ್ರಾರ್ಥಿಸುತ್ತೇನೆ ಎಂದು ಪೋಸ್ಟ್​ ಮಾಡಿ ಶಮಿಯನ್ನು ಅನಗತ್ಯವಾಗಿ ಕೆಣಕ್ಕಿದ್ದರು.

16 ಆಗಸ್ಟ್ 2018 ರಂದು, ಹಸಿನ್ ಜಹಾನ್(Hasin Jahan) ಮೊಹಮ್ಮದ್ ಶಮಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲದೆ ಹಲ್ಲೆ, ಅತ್ಯಾಚಾರ, ಕೊಲೆ ಯತ್ನ ಮತ್ತು ಕೌಟುಂಬಿಕ ಹಿಂಸಾಚಾರದ ಆರೋಪದಡಿಯಲ್ಲಿ ಟೀಮ್ ಇಂಡಿಯಾ ಕ್ರಿಕೆಟಿಗನ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ಇದೇ ವೇಳೆ ಮಗಳ ಖರ್ಚಿಗೆ ಹಾಗೂ ತನಗೆ ಯಾವುದೇ ರೀತಿಯ ಹಣಕಾಸಿನ ನೆರವು ನೀಡುತ್ತಿಲ್ಲ ಎಂದು ಹಸಿನ್ ಜಹಾನ್ ದೂರಿನಲ್ಲಿ ಅಪಾದಿಸಿದ್ದರು.

ಜೀವನಾಂಶ ನೀಡುತ್ತಿರುವ ಶಮಿ

2018 ರಲ್ಲಿ ಹಸಿನ್ ಜಹಾನ್ ಅವರು ಮಾಸಿಕ 10 ಲಕ್ಷ ರೂ ಜೀವನಾಂಶವನ್ನು ಕೋರಿ ಶಮ್ಮಿ ವಿರುದ್ಧ ಕಾನೂನು ಮೊಕದ್ದಮೆ ಹೂಡಿದ್ದರು. ವೈಯಕ್ತಿಕ ವೆಚ್ಚಕ್ಕಾಗಿ 7 ಲಕ್ಷ ರೂ., ತಮ್ಮ ಮಗಳ ನಿರ್ವಹಣೆಗಾಗಿ 3 ಲಕ್ಷ ರೂ. ಕೇಳಿದ್ದರು. ಇದರ ವಿಚಾರಣೆ ನಡೆಸಿದ ಕೋಲ್ಕೊತಾ ನ್ಯಾಯಾಲಯ ಇದೇ ವರ್ಷದ ಜನವರಿಯಲ್ಲಿ ತೀರ್ಪು ಪ್ರಕಟಿಸಿ, ಶಮಿ ಅವರು ಪತ್ಯೇಕವಾಗಿ ವಾಸಿಸುತ್ತಿರುವ ಪತ್ನಿ ಜಹಾನ್​ಗೆ ತಿಂಗಳಿಗೆ 50 ಸಾವಿರ ರೂ. ನೀಡುವಂತೆ ಸೂಚಿಸಿತ್ತು. ಕೋರ್ಟ್​ ಸೂಚನೆಯಂತೆ ಶಮಿ ಅವರು ಈ ಮೊತ್ತವನ್ನು ನೀಡಿತ್ತಲೇ ಬರುತ್ತಿದ್ದಾರೆ.

Exit mobile version