ಕೋಲ್ಕೊತಾ: ಆರಂಭಿಕ ಬ್ಯಾಟರ್ ಫಿಲ್ ಸಾಲ್ಟ್ (89 ರನ್, 47 ಎಸೆತ, 14 ಫೋರ್, 3 ಸಿಕ್ಸರ್) ಅವರ ಸ್ಫೋಟಕ ಬ್ಯಾಟಿಂಗ್ ಹಾಗೂ ಮಿಚೆಲ್ ಸ್ಟಾರ್ಕ್ ಅವರ ಮಾರಕ ಬೌಲಿಂಗ್ ನೆರವು ಪಡೆದ ಕೋಲ್ಕೊತಾ ನೈಟ್ ರೈಡರ್ಸ್ ತಂಡ ಐಪಿಎಲ್ 2024ರ (IPL 2024) 28ನೇ ಪಂದ್ಯದಲ್ಲಿ ಲಕ್ನೊ ಸೂಪರ್ ಜೈಂಟ್ಸ್ ವಿರುದ್ಧ 8 ವಿಕೆಟ್ ಸುಲಭ ವಿಜಯ ದಾಖಲಿಸಿದೆ. ಇದು ಕೆಕೆಆರ್ ತಂಡಕ್ಕ ಹಾಲಿ ಆವೃತ್ತಿಯಲ್ಲಿ ಲಭಿಸಿದ ಸತತ ಮೂರನೇ ಹಾಗೂ ಒಟ್ಟು ನಾಲ್ಕನೇ ವಿಜಯವಾಗಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ಅಷ್ಟೇ ಪಂದ್ಯಗಳಲ್ಲಿ ಅಷ್ಟೇ ಗೆಲುವು ದಾಖಲಿಸಿರುವ ರಾಜಸ್ಥಾನ್ ರಾಯಲ್ಸ್ ಮೊದಲ ಸ್ಥಾನ ಪಡೆದುಕೊಂಡಿದೆ.
I. C. Y. M. I
— IndianPremierLeague (@IPL) April 14, 2024
🔊 Sound 🔛!
That 9⃣8⃣m SIX from Phil Salt 🔥
Watch #TATAIPL LIVE on @StarSportsIndia and @JioCinema 💻📱#KKRvLSG | @KKRiders | @PhilSalt1 pic.twitter.com/joJJO61qzA
ಇಲ್ಲಿನ ಐತಿಹಾಸಿಕ ಈಡನ್ ಗಾರ್ಡನ್ಸ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕೆಕೆಆರ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಲಕ್ನೊ ತಂಡ ಬ್ಯಾಟಿಂಗ್ ವೈಫಲ್ಯ ಎದುರಿಸಿ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟ ಮಾಡಿಕೊಂಡು 161 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಕೆಕೆಆರ್ ತಂಡ ಕೇವಲ 15.4 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 162 ಬಾರಿಸಿ ಗೆಲುವು ಸಾಧಿಸಿತು. ಇದು ಲಕ್ನೊ ತಂಡಕ್ಕೆ ಸತತ ಎರಡನೇ ವಿಜಯವಾಗಿದೆ.
ಸಾಲ್ಟ್ ಭರ್ಜರಿ ಬ್ಯಾಟಿಂಗ್
ಗುರಿ ಬೆನ್ನಟ್ಟಲು ಆರಂಭಿಸಿದ ಕೆಕೆಆರ್ ಪರ ಫಿಲ್ ಸಾಲ್ಟ್ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಶಮರ್ ಜೋಸೆಫ್ ಎಸೆದ ಮೊದಲ ಓವರ್ನಲ್ಲಿ 20 ರನ್ ಗಳಿಸಿದ ಕೆಕೆಆರ್ ಭರ್ಜರಿ ಆರಂಭ ಪಡೆಯಿತು. ಆದರೆ ಸುನೀಲ್ ನರೈನ್ 6 ರನ್ ಗೆ ಔಟಾದರು. ಬೆನ್ನಲ್ಲೇ ರಘುವಂಶೀ ಕೂಡಾ ಕೇವಲ 7 ರನ್‌ಗಳಿಗೆ ಔಟಾದರು. ಇಬ್ಬರೂ ಆಟಗಾರರು ಒಂದಂಕಿ ಮೊತ್ತಕ್ಕೆ ಔಟಾದ ಬಳಿಕ, ನಾಯಕ ಶ್ರೇಯಸ್ ಅಯ್ಯರ್ ಮತ್ತು ಫಿಲ್ ಸಾಲ್ಟ್ ಒಂದಾದರು. ಸ್ಫೋಟಕ ಆಟವಾಡಿದ ಈ ಜೋಡಿಯಿಂದ ಶತಕದ ಜೊತೆಯಾಟ ಬಂತು.
✌️wickets in ✌️ overs for @KKRiders!
— IndianPremierLeague (@IPL) April 14, 2024
A wicket each for @Russell12A & @chakaravarthy29 👍 👍
Watch the match LIVE on @JioCinema and @StarSportsIndia 💻📱#TATAIPL | #KKRvLSG pic.twitter.com/HDTLXUDgOK
ಆರಂಭದಿಂದಲೂ ಅಬ್ಬರಿಸಿ 47 ಎಸೆತಗಳಲ್ಲಿ 14 ಆಕರ್ಷಕ ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 89 ರನ್ ಸಿಡಿಸಿ ಅಜೇಯರಾಗಿ ಉಳಿದರು. ಶ್ರೇಯಸ್ ಅಯ್ಯರ್ ಎಸೆತಕ್ಕೊಂದರಂತೆ 38 ರನ್ ಕಲೆ ಹಾಕಿದರು.
ಲಕ್ನೊ ಬ್ಯಾಟಿಂಗ್ ವೈಫಲ್ಯ
ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋಗೆ ಉತ್ತಮ ಆರಂಭ ದೊರಕಲಿಲ್ಲ . ಆರಂಭಿಕ ಕ್ವಿಂಟನ್ ಡಿಕಾಕ್ ಕೇವಲ 10 ರನ್ ಗಳಿಸಿ ವೈಭವ್‌ಗೆ ವಿಕೆಟ್ ಒಪ್ಪಿಸಿದರು. ಪಡಿಕ್ಕಲ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿದ್ದ ದೀಪಕ್ ಹೂಡಾ ಮತ್ತೆ ವಿಫಲರಾದರು. ಕೇವಲ 8 ರನ್ ಗಳಿಸಿದ ಔಟಾದರು ಕೆಎಲ್ ರಾಹುಲ್ 39 ರನ್ ಗಳಿಸಿ ರಸೆಲ್ ಎಸೆತದಲ್ಲಿ ಕ್ಯಾಚ್ ನೀಡಿ ನಿರ್ಗಮಿಸಿದರು. ಸ್ಟೋಯ್ನಿಸ್ ಆಟ ಕೂಡಾ 10 ರನ್‌ಗಳಿಗೆ ಅಂತ್ಯವಾಯ್ತು.
ಮೊದಲು ಅಬ್ಬರಿಸುವ ಸೂಚನೆ ನೀಡಿದ ಆಯುಷ್ ಬದೋನಿ 29 ರನ್‌ಗಳಿಗೆ ಇನಿಂಗ್ಸ್ ಮುಗಿಸಿದರು. ನಿಕೋಲಸ್ ಪೂರನ್, 32 ಎಸೆತಗಳಲ್ಲಿ 4 ಸಿಕ್ಸರ್ ಸಹಿತ 45 ರನ್ ಕಲೆ ಹಾಕಿ ಗೌರವಯುತ ಮೊತ್ತ ಪೇರಿಸಲು ನೆರವಾದರು.