ನವದೆಹಲಿ: ಹೊಸದಾಗಿ ಆಯ್ಕೆಯಾದ ಭಾರತೀಯ ಕುಸ್ತಿ ಅಸೋಸಿಯೇಷನ್(Wrestling Federation of India) ಮಂಡಳಿಯನ್ನು ಕ್ರೀಡಾ ಸಚಿವಾಲಯ ಅಮಾನತುಗೊಳಿಸಿದ್ದಕ್ಕೂ(WFI suspension) ನನಗೂ ಯಾವುದೇ ಸಂಬಂಧವಿಲ್ಲ ಎಂದು ಭಾರತದ ಕುಸ್ತಿ ಫೆಡರೇಶನ್ ಮಾಜಿ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್(Brij Bhushan Singh) ಹೇಳಿದ್ದಾರೆ.
ಡಿಸೆಂಬರ್ 24, ಭಾನುವಾರದಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬ್ರಿಜ್ ಭೂಷಣ್, ನಾನು ಯಾವುದೇ ವಿವಾದವನ್ನು ಎದುರಿಸಲು ಬಯಸುವುದಿಲ್ಲ. ಭಾರತೀಯ ಕುಸ್ತಿ ರಂಗದಲ್ಲಿ ಇತ್ತೀಚಿನ ಬೆಳವಣಿಗೆಗಳಿಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
”12 ವರ್ಷ ಕುಸ್ತಿಪಟುಗಳಿಗಾಗಿ ದುಡಿದಿದ್ದೇನೆ, ನ್ಯಾಯ ಕೊಡಿಸಿದ್ದೇನೆಯೇ ಎನ್ನುವುದನ್ನು ಕಾಲವೇ ಹೇಳುತ್ತದೆ. ನಾನು ಕುಸ್ತಿಯಿಂದ ಸಂಪೂರ್ಣ ನಿವೃತ್ತಿ ಹೊಂದಿದ್ದೇನೆ. ಕುಸ್ತಿಯಿಂದ ನಂಟು ಕಡಿದುಕೊಂಡಿದ್ದೇನೆ. ಈಗ ಸರ್ಕಾರದ ಜತೆಗಿನ ನಿರ್ಧಾರ ಹಾಗೂ ಮಾತುಕತೆಯನ್ನು ಒಕ್ಕೂಟದ ಚುನಾಯಿತ ಜನರೇ ಮಾಡುತ್ತಾರೆ” ಎಂದು ಬ್ರಿಜ್ ಭೂಷಣ್ ಸಿಂಗ್ ನವದೆಹಲಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.
#WATCH | After the Union Sports Ministry suspends the newly elected body of the Wrestling Federation of India, former WFI chief Brij Bhushan Sharan Singh says, "I have worked 12 years for the wrestlers. Time will tell if I have done justice…Now decisions and talks with the govt… pic.twitter.com/DkWSBopxwm
— ANI (@ANI) December 24, 2023
ಅಸ್ತಿತ್ವದಲ್ಲಿರುವ ನಿಯಮ ಮತ್ತು ನಿಬಂಧನೆಗಳನ್ನು ಹೊಸದಾಗಿ ಆಯ್ಕೆಯಾದ ಕುಸ್ತಿ ಫೆಡರೇಶನ್ ಸಂಪೂರ್ಣ ನಿರ್ಲಕ್ಷಿಸಿದೆ ಎಂದು ಉಲ್ಲೇಖಿಸಿ ಸಚಿವಾಲಯವು ಇಂದು(ಡಿ. 24 ಭಾನುವಾರ) ಬೆಳಗ್ಗೆ ಕೇಂದ್ರ ಕ್ರೀಡಾ ಸಚಿವಾಲಯವು ಕುಸ್ತಿ ಫೆಡರೇಶನ್ ಆಫ್ ಇಂಡಿಯಾದ ಹೊಸದಾಗಿ ಚುನಾಯಿತ ಸಂಸ್ಥೆಯನ್ನು(WFI Suspended) ಅಮಾನತುಗೊಳಿಸಿತ್ತು.
ಇದನ್ನೂ ಓದಿ WFI Suspended: ರಾಷ್ಟ್ರೀಯ ಕುಸ್ತಿ ಫೆಡರೇಶನ್ ಸಂಸ್ಥೆ ಅಮಾನತು ಮಾಡಲು ಕಾರಣವೇನು?
ಬ್ರಿಜ್ ಭೂಷಣ್ ಸಿಂಗ್ ನೂತನ ಅಧ್ಯಕ್ಷರಾದ ಸಂಜಯ್ ಸಿಂಗ್ ಅವರ ಆಪ್ತರಾಗಿದ್ದು, ಮಂಡಳಿಯ ಹೊದ ನಿಯಮದ ಹಿಂದ ಬ್ರಿಜ್ ಭೂಷಣ್ ಕೈವಾಡವಿದೆ ಎಂದು ಅನೇಕರು ಆರೋಪ ಮಾಡಿದ್ದರು. ಇದೇ ವಿಚಾರವಾಗಿ ಬ್ರಿಜ್ ಭೂಷಣ್ ಸುದ್ದಿಗೋಷ್ಠಿ ನಡೆಸಿ ಈ ಘಟನೆಗೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಾರೆ.
ಲೋಕಸಭೆ ಚುನಾವಣೆ ತಯಾರಿಯಲ್ಲಿ ನಿರತ
“ನನಗೂ ನೂತನ ಕುಸ್ತಿ ಒಕ್ಕೂಟಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ. ನಾನು ಲೋಕಸಭೆ ಚುನಾವಣೆ ತಯಾರಿಯಲ್ಲಿ ನಿರತನಾಗಿದ್ದೇನೆ. ಇನ್ನು ಕುಸ್ತಿ ಸಂಘದ ಬಗ್ಗೆ ತೆಗೆದುಕೊಳ್ಳಬೇಕಾದ ನಿರ್ಧಾರವನ್ನು ಆಯ್ಕೆಯಾದವರು ಮಾತ್ರ ತೆಗೆದುಕೊಳ್ಳುತ್ತಾರೆ. ಈಗ ಕುಸ್ತಿ ಸಂಘವು ನ್ಯಾಯಾಲಯದ ಮೊರೆ ಹೋಗುವುದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಸಂಜಯ್ ಸಿಂಗ್ ನನ್ನ ಸಂಬಂಧಿಯೂ ಅಲ್ಲ” ಎಂದು ಬ್ರಿಜ್ ಭೂಷಣ್ ಹೇಳಿದ್ದಾರೆ.
#WATCH | After the Union Sports Ministry suspends the newly elected body of the Wrestling Federation of India, former WFI chief Brij Bhushan Sharan Singh says, "…Sanjay Singh is not my relative…The announcement to hold U-15 and U-20 nationals in Nandini Nagar was to ensure… pic.twitter.com/wE5dW76KO7
— ANI (@ANI) December 24, 2023
“ಸಂಜಯ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಹೊಸದಾಗಿ ಆಯ್ಕೆಯಾದ ಮಂಡಳಿಯು ನಿಯಮಗಳು ಮತ್ತು ನಿಬಂಧನೆಗಳನ್ನು ಉಲ್ಲಂಘಿಸಿದೆ. ಹೊಸದಾಗಿ ಆಯ್ಕೆಯಾದ ಮಂಡಳಿಯು ಹಿಂದಿನ ಪದಾಧಿಕಾರಿಗಳ ನಿಯಂತ್ರಣದಲ್ಲಿದೆ ಎಂದು ಹೇಳುವ ಮೂಲಕ ಸಚಿವಾಲಯ ಹೊಸ ಮಂಡಳಿಯನ್ನು ಅಮಾನತುಗೊಳಿಸಿದೆ.