ವಿಸ್ತಾರನ್ಯೂಸ್ ಬೆಂಗಳೂರು : ಮುಂಬರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಪಂದ್ಯದ ಸಂದರ್ಭದಲ್ಲಿ ಗಣರಾಜ್ಯೋತ್ಸವದಂದು (republic day ) ಭಾರತೀಯ ಸೇನಾ ಸಿಬ್ಬಂದಿಯ ಕುಟುಂಬಗಳ ಸದಸ್ಯರಿಗೆ ಉಚಿತ ಪ್ರವೇಶ ನೀಡುವುದಾಗಿ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ (HCA) ಘೋಷಿಸಿದೆ. ಜನವರಿ 25ರಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಗೆ ಹೈದಾರಾಬಾದ್ ಕ್ರಿಕೆಟ್ ಸಂಸ್ಥೆ ಆತಿಥ್ಯ ವಹಿಸಲಿದೆ. ಉದ್ಘಾಟನಾ ಪಂದ್ಯ ಹೈದರಾಬಾದ್ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿದೆ.
Hyderabad Cricket Association will provide Free Entry for the families of Indian armed forces on Republic Day during India vs England Test match. [TOI]
— Johns. (@CricCrazyJohns) January 15, 2024
– A great gesture by HCA. 👏 pic.twitter.com/0nKmxa4eo1
ಗಣರಾಜ್ಯೋತ್ಸವದ ಖುಷಿಯನ್ನು ಸಂಭ್ರಮಿಸಲು ಹಾಗೂ ಯೋಧರ ಸೇವೆಯನ್ನು ಗೌರವಿಸಲು ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಅಜರುದ್ದೀನ್ ನೇತೃತ್ವದ ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್, ಆ ನಿರ್ದಿಷ್ಟ ದಿನದಂದು ಭಾರತೀಯ ಸಶಸ್ತ್ರ ಪಡೆಗಳ ಕುಟುಂಬಗಳಿಗೆ ಉಚಿತ ಪ್ರವೇಶವನ್ನು ನೀಡಲು ನಿರ್ಧರಿಸಿದೆ.
ಯೋಧರ ಕುಟುಂಬಗಳಿಗೆ ಉಚಿತ ಪ್ರವೇಶ ನೀಡುವ ನಿರ್ಧಾರವು ದೇಶವನ್ನು ಕಾಪಾಡುವವರ ಕುಟುಂಬದ ಸದಸ್ಯರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ವಿಶೇಷ ಮಾರ್ಗವಾಗಿದೆ. ಗಣರಾಜ್ಯೋತ್ಸವವು ಭಾರತದಲ್ಲಿ ಅಪಾರ ಮಹತ್ವವನ್ನು ಹೊಂದಿದೆ. ಅದನ್ನು ಕ್ರಿಕೆಟ್ ಪಂದ್ಯದೊಂದಿಗೆ ಸಂಯೋಜಿಸಿ ಆಚರಿಸುವುದು ವಿಶೇಷವಾಗಿದೆ.
ಕುಟುಂಬದ ತ್ಯಾಗ
ಸಶಸ್ತ್ರ ಪಡೆಗಳ ಸಿಬ್ಬಂದಿಯ ಕುಟುಂಬಗಳು ತಮ್ಮವರಿಂದ ದೂರವಿರುವಂತಾಗಿದೆ. ಅವರು ತಮ್ಮ ಕುಟುಂಬ ಸದಸ್ಯರನ್ನು ತ್ಯಾಗ ಮಾಡುತ್ತಾರೆ. ಎಚ್ಸಿಎ ಯೋಜನೆ ತ್ಯಾಗವನ್ನು ಗುರುತಿಸುತ್ತದೆ. ಕ್ರಿಕೆಟ್ ಕ್ರೀಡಾಂಗಣದಲ್ಲಿ ಮನರಂಜನೆ ಮತ್ತು ಸ್ನೇಹದ ದಿನವನ್ನು ಆನಂದಿಸಲು ಅವರಿಗೆ ಅವಕಾಶವನ್ನು ಒದಗಿಸುತ್ತದೆ ಎಂದು ಎಚ್ಸಿಎ ಅಧಿಕಾರಿಗಳು ಹೇಳಿದ್ದಾರೆ.
ಇದನ್ನೂ ಓದಿ : Ranji Trophy : ಕರ್ನಾಟಕ ತಂಡಕ್ಕೆ 6 ರನ್ಗಳ ಆಘಾತಕಾರಿ ಸೋಲು
ತೆಲಂಗಾಣದ ಸರ್ಕಾರಿ ಶಾಲೆಗಳ ಮಕ್ಕಳಿಗೆ ಪಂದ್ಯ ವೀಕ್ಷಣೆಗೆ ಉಚಿತ ಪ್ರವೇಶ ನೀಡಲು ಎಚ್ಸಿಎ ನಿರ್ಧರಿಸಿದೆ. ಜೊತೆಗೆ ಮೊದಲ ಟೆಸ್ಟ್ ಪಂದ್ಯದ ಸಂಪೂರ್ಣ ಭಾಗಕ್ಕೆ ಉಚಿತ ಭೋಜನ ವ್ಯವಸ್ಥೆಯನ್ನೂ ಮಾಡುವುದಾಗಿ ಹೇಳಿದೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಮುಂಬರುವ ಟೆಸ್ಟ್ ಸರಣಿಯ ಬಗ್ಗೆ ನಿರೀಕ್ಷೆ ಉತ್ತುಂಗಕ್ಕೇರಿದೆ. ಇತ್ತೀಚಿನ ಇತಿಹಾಸದಲ್ಲಿ ಭಾರತ ತವರು ನೆಲದಲ್ಲಿ ಅಜೇಯವಾಗಿದೆ. ಅಸಾಂಪ್ರದಾಯಿಕ ‘ಬಜ್ಬಾಲ್’ ವಿಧಾನದಿಂದಾಗಿ ಇಂಗ್ಲೆಂಡ್ ಗಮನಾರ್ಹ ಯಶಸ್ಸು ಪಡೆಯುತ್ತಿದೆ. ಸ್ಪಿನ್-ಸ್ನೇಹಿ ಪರಿಸ್ಥಿತಿಗಳಲ್ಲಿ ಹೇಗೆ ಕೆಲಸ ಮಾಡುತ್ತದೆ ಎಂದು ಕಾದು ನೋಡಬೇಕು.
ಭಾರತ ತಂಡಕ್ಕೆ, ಈ ಟೆಸ್ಟ್ ಸರಣಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನ ಶ್ರೇಯಾಂಕದಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಒಂದು ಉತ್ತಮ ಅವಕಾಶವಾಗಿದೆ.
ಬೆಂಗಳೂರು ತಲುಪಿದ ರೋಹಿತ್ ಶರ್ಮಾ ಬಳಗ
ವಿಸ್ತಾರನ್ಯೂಸ್ ಬೆಂಗಳೂರು: ಮೊದಲ ಎರಡು ಟಿ 20 ಪಂದ್ಯಗಳಲ್ಲಿ ಅಫ್ಘಾನಿಸ್ತಾನವನ್ನು ಸೋಲಿಸಿದ ನಂತರ, ಭಾರತೀಯ ಆಟಗಾರರು ಸರಣಿಯ ಮೂರನೇ ಪಂದ್ಯಕ್ಕೆ ಸಜ್ಜಾಗುತ್ತಿದ್ದಾರೆ. ಮೂರನೇ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಅಂತೆಯೇ ಸೋಮವಾರ ನಾಯಕ ರೋಹಿತ್ ಶರ್ಮಾ ಸೇರಿದಂತೆ ಟೀಮ್ ಇಂಡಿಯಾದ ಸದಸ್ಯರ ಬೆಂಗಳೂರಿನಲ್ಲಿ ಬಂದಿಳಿದರು. ಶುಬ್ಮನ್ ಗಿಲ್, ಮುಖೇಶ್ ಕುಮಾರ್, ರಿಂಕು ಸಿಂಗ್, ಅಕ್ಷರ್ ಪಟೇಲ್ ಮತ್ತು ಕುಲದೀಪ್ ಯಾದವ್ ಸೇರಿದಂತೆ ಹಲವಾರು ಸಹ ಆಟಗಾರರು ವಿಮಾನ ನಿಲ್ದಾಣದಿಂದ ಹೊರಬರುತ್ತಿರುವ ವಿಡಿಯೊ ಕಂಡು ಬಂದಿದೆ.
ಜನವರಿ 15 ರಂದು ಈ ಆಟಗಾರರು ಬೆಂಗಳೂರು ತಲುಪಿದ್ದಾರೆ. ಅವರೆಲ್ಲರೂ ಬೆಂಗಳೂರಿನಲ್ಲಿ ಅಭ್ಯಾಸ ನಡೆಸಲಿದ್ದಾರೆ. ತಂಡದ ಹೋಟೆಲ್ಗೆ ತೆರಳುವ ಮೊದಲು ಆಟಗಾರರು ವಿಮಾನ ನಿಲ್ದಾಣದಲ್ಲಿ ಭಾರತೀಯ ಕ್ರಿಕೆಟ್ ಅಭಿಮಾನಿಗಳ ದೊಡ್ಡ ವಿಭಾಗದಿಂದ ಆತ್ಮೀಯ ಸ್ವಾಗತ ಪಡೆದರು.
ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಮೊದಲ ಎರಡು ಟಿ 20 ಪಂದ್ಯಗಳಲ್ಲಿ ಅಫ್ಘಾನಿಸ್ತಾನವನ್ನು ಸೋಲಿಸಿ ಮೂರು ಪಂದ್ಯಗಳ ಸರಣಿಯನ್ನು ಒಂದು ಪಂದ್ಯ ಬಾಕಿ ಇರುವಾಗಲೇ ಗೆದ್ದುಕೊಂಡಿದೆ. ಆಲ್ರೌಂಡರ್ ಶಿವಂ ದುಬೆ ಎರಡೂ ಸಂದರ್ಭಗಳಲ್ಲಿ ರನ್ ಚೇಸಿಂಗ್ ಇನಿಂಗ್ಸ್ಗಳನ್ನು ಆಡಿದ್ದಾರೆ. ಮೊಹಾಲಿಯಲ್ಲಿ ನಡೆದ ಸರಣಿಯ ಆರಂಭಿಕ ಪಂದ್ಯದಲ್ಲಿ ಜಿತೇಶ್ ಶರ್ಮಾ ಮತ್ತು ಇಂದೋರ್ನಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಶಿವಂ ದುಬೆ ಜತೆ ಉತ್ತಮ ಇನಿಂಗ್ಸ್ ಆಡಿದ್ದರು.
ಮುಂಬರುವ 2024 ರ ಟಿ 20 ವಿಶ್ವಕಪ್ ಹಾದಿಯಲ್ಲಿ ‘ಮೆನ್ ಇನ್ ಬ್ಲೂ’ ಗೆ ಈ ಸರಣಿ ಪರೀಕ್ಷಾ ಪಂದ್ಯಗಳಾಗಿ ಕಾರ್ಯನಿರ್ವಹಿಸುತ್ತವೆ ಎಂದು ಪರಿಗಣಿಸಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಭಾರತದ ಟಿ20 ಐ ಸೆಟಪ್ಗಳಿಗೆ ಮರಳಿದ್ದಾರೆ. ಇಂದೋರ್ನಲ್ಲಿ ಕೊಹ್ಲಿ 29 ರನ್ ಗಳಿಸಿ ಪುನರಾಗಮನ ಮಾಡಿದ್ದರೆ ನಾಯಕ ಶರ್ಮಾ ಸರಣಿಯಲ್ಲಿ ಆಡಿದ ಎರಡು ಇನ್ನಿಂಗ್ಸ್ಗಳಲ್ಲಿ ಖಾತೆ ತೆರೆಯಲು ವಿಫಲಗೊಂಡಿದ್ದಾರೆ.
ಅಫ್ಘಾನಿಸ್ತಾನ ಮತ್ತು ಆತಿಥೇಯ ಭಾರತ ನಡುವಿನ ಮೂರನೇ ಟಿ 20 ಪಂದ್ಯ ಜನವರಿ 17 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.