Site icon Vistara News

IPL 2023 : ಅಭ್ಯಾಸ ಪಂದ್ಯದಲ್ಲೇ ಶತಕ ಬಾರಿಸಿ ಆರ್​ಸಿಬಿ ತಂಡಕ್ಕೆ ಭರವಸೆ ಮೂಡಿಸಿದ ನ್ಯೂಜಿಲ್ಯಾಂಡ್​ ಆಲ್​ರೌಂಡರ್​

Huge shock for the Gujarat team which is celebrating the victory; What happened to that team?

#image_title

ಬೆಂಗಳೂರು: ಫಾಫ್​ ಡು ಪ್ಲೆಸಿಸ್​ ನೇತೃತ್ವದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಐದು ಬಾರಿಯ ಚಾಂಪಿಯನ್​ ಮುಂಬಯಿ ಇಂಡಿಯನ್ಸ್ ತಂಡವನ್ನು ಎದುರಿಸಲು ಸಜ್ಜಾಗಿದೆ. ಏಪ್ರಿಲ್​ 2ರಂದು ಬೆಂಗಳೂರಿನ ಚಿನ್ನ ಸ್ವಾಮಿ ಸ್ಟೇಡಿಯಮ್​ನಲ್ಲಿ ಪಂದ್ಯ ನಡೆಯಲಿದೆ. ಈ ಹಣಾಹಣಿಗಾಗಿ ಕಾಯುತ್ತಿರುವ ಆರ್​ಸಿಬಿ ತಂಡದ ಅಭಿಮಾನಿಗಳಿಗೆ ಅತ್ಯಂತ ಖುಷಿಯ ವಿಷಯವೊಂದಿದೆ. ತಡವಾರಿ ಆರ್​ಸಿಬಿ ಬಳಗ ಸೇರಿಕೊಂಡ ನ್ಯೂಜಿಲ್ಯಾಂಡ್​ನ ಮೈಕೆಲ್​ ಬ್ರೇಸ್​​ವೆಲ್​ ಅಭ್ಯಾಸ ಪಂದ್ಯದಲ್ಲಿ ಭರ್ಜರಿ ಶತಕ ಬಾರಿಸಿ ಮಿಂಚಿದ್ದಾರೆ. ಈ ಮೂಲಕ ಅವರು ಹಾಲಿ ಆವೃತ್ತಿಯ ಟೂರ್ನಿಯಲ್ಲಿ ಬೆಂಗಳೂರು ತಂಡದ ನೆರವಿಗೆ ನಿಲ್ಲುವ ಮುನ್ಸೂಚನೆ ಕೊಟ್ಟಿದ್ದಾರೆ.

ಮುಂಬೈ ಇಂಡಿಯನ್ಸ್​ ವಿರುದ್ಧದ ಪಂದ್ಯಕ್ಕೆ ಮೊದಲು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಸತತವಾಗಿ ಅಭ್ಯಾಸ ನಡೆಸಿದೆ. ಅಂತೆಯೇ ಶುಕ್ರವಾರ ಆರ್​ಸಿಬಿ ಬಳಗವನ್ನು ಎರಡು ತಂಡಗಳಾಗಿ ವಿಂಗಡಿಸಿ ಪಂದ್ಯವೊಂದನ್ನು ಆಡಿಸಿದ್ದರು. ಅದಲ್ಲಿ ಮೈಕೆಲ್ ಬ್ರೇಸ್​ವೆಲ್​ ಬೌಲರ್​ಗಳ ವಿರುದ್ಧ ಸವಾರಿ ಮಾಡಿದ್ದಾರೆ. ಬೌಂಡರಿ ಸಿಕ್ಸರ್​ಗಳ ಮಳೆ ಸುರಿಸಿ ಅಲ್ಲಿದ್ದವರೆಲ್ಲರೂ ನಿಬ್ಬೆರಗಾಗುವಂತೆ ಮಾಡಿದ್ದಾರೆ. ಕೇವಲ 55 ಎಸೆತಗಳಲ್ಲಿ 105 ರನ್​ ಬಾರಿಸಿ ಮಿಂಚಿದ್ದಾರೆ. ಈ ಮೂಲಕ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ನೆರವಾಗುವ ಸೂಚನೆ ಕೊಟ್ಟಿದ್ದಾರೆ.

ತಡವಾಗಿ ತಂಡ ಸೇರಿದ ಬ್ರೇಸ್​ವೆಲ್​

ನ್ಯೂಜಿಲ್ಯಾಂಡ್​ನ ಸ್ಪಿನ್ ಆಲ್​ರೌಂಡರ್​ ಮೈಕೆಲ್​ ಬ್ರೇಸ್​ವೆಲ್​ ಆರಂಭದಲ್ಲಿ ಬೆಂಗಳೂರು ತಂಡದ ಭಾಗವಾಗಿರಲಿಲ್ಲ. ಐಪಿಎಲ್​ ಆಟಗಾರರ ಮಿನಿ ಹರಾಜಿನಲ್ಲಿ ಅವರನ್ನು ಯಾರು ಕೂಡ ತಂಡಕ್ಕೆ ಸೇರಿಸಿಕೊಂಡಿರಲಿಲ್ಲ. ಸ್ಫೋಟಕ ಬ್ಯಾಟರ್​ ಆಗಿರುವ ಹೊರತಾಗಿಯೂ ಒಂದು ಕೋಟಿ ರೂಪಾಯಿ ಮೂಲ ಬೆಲೆ ಹೊಂದಿದ್ದ ಕಾರಣ ಯಾವ ತಂಡವೂ ಖರೀದಿ ಮಾಡಿರಲಿಲ್ಲ. ಆದರೆ ಅವರ ಅದೃಷ್ಟ ಬೇರೆ ರೀತಿಯದ್ದಾಗಿತ್ತು. ಯಾಕೆಂದರೆ ಹರಾಜಿನಲ್ಲಿ ಆರ್​ಸಿಬಿ ತಂಡ ಖರೀದಿ ಮಾಡಿದ್ದ ಇಂಗ್ಲೆಂಡ್​ನ ಆಲ್​ರೌಂಡರ್​ ವಿಲ್​ ಯಂಗ್​ ಗಾಯದ ಸಮಸ್ಯೆಯಿಂದಾಗಿ ಈ ಬಾರಿಯ ಐಪಿಎಲ್​ನಲ್ಲಿ ಪಾಲ್ಗೊಳ್ಳುತ್ತಿಲ್ಲ. ಬಾಂಗ್ಲಾದೇಶ ವಿರುದ್ಧದ ಸರಣಿಯಲ್ಲಿ ಗಾಯಗೊಂಡಿರುವ ಅವರು ಸರ್ಜರಿಗೆ ಒಳಗಾಗಿದ್ದಾರೆ. ಅವರ ಅಲಭ್ಯತೆ ಗೊತ್ತಾಗುತ್ತಿದ್ದಂತೆ ಅನ್​ಸೋಲ್ಡ್​​ ಆಗಿರುವ ಆಟಗಾರರಾಗಿದ್ದ ಬ್ರೇಸ್​ವೇಲ್​ ಅವರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ. ಅದಕ್ಕಾಗಿ ಮೂಲ ಬೆಲೆ ಒಂದು ಕೋಟಿ ರೂಪಾಯಿ ಸಲ್ಲಿಸಿದೆ.

ಸುಯಾಶ್​ ಪಡೆಗೆ ಗೆಲುವು

ಸುಯಾಶ್​ ಪ್ರಭುದೇಸಾಯಿ ಹಾಗೂ ಫಾಫ್​ ಡು ಪ್ಲೆಸಿಸ್​ ಅವರಿಗೆ ನಾಯಕತ್ವ ನೀಡಿ ಎರಡು ತಂಡಗಳನ್ನಾಗಿ ವಿಂಗಡಿಸಿ ಪಂದ್ಯವನ್ನು ಆಡಿಸಲಾಗಿತ್ತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಸುಯಾಶ್ ಪಡೆ ಮ್ಯಾಕ್ಸ್​ವೆಲ್​ ಅವರು 78 ರನ್​ಗಳ ನೆರವಿನಿಂದ 6 ವಿಕೆಟ್​ಗೆ 216 ರನ್​ ಬಾರಿಸಿತ್ತು. ಪ್ರತಿಯಾಗಿ ಆಡಿದ ಪ್ಲೆಸಿಸ್ ಪಡೆ 3 ರನ್​ಗಳಿಂದ ಸೋಲು ಕಂಡಿತು. ಬ್ರೇಸ್​ವೆಲ್​ ಶತಕ ಬಾರಿಸಿದ ಹೊರತಾಗಿಯೂ ತಂಡಕ್ಕೆ ವಿಜಯ ಸಿಗಲಿಲ್ಲ.

ಬೌಲಿಂಗ್ ಬಗ್ಗೆ ಆತಂಕ

ಬ್ರೇಸ್​ವೆಲ್​ ಶತಕ ಬಾರಿಸುವ ಮೂಲಕ ಆರ್​ಸಿಬಿ ಅಭಿಮಾನಿಗಳನ್ನು ಖುಷಿಪಡಿಸಿದ್ದಾರೆ. ಆದರೆ ಬೌಲಿಂಗ್ ಕತೆಯೇನು. ಅಭ್ಯಾಸ ಪಂದ್ಯದಲ್ಲಿ ಎರಡೂ ತಂಡಗಳ ಬೌಲರ್​​ಗಳು ಸತತವಾಗಿ ರನ್​ ಬಿಟ್ಟುಕೊಟ್ಟಿದ್ದರು. ಅನುಭವಿ ಬೌಲರ್ ಮೊಹ್ಮಮದ್ ಸಿರಾಜ್​ 4 ಓವರ್​ಗಳಲ್ಲಿ 49 ರನ್​ ನೀಡಿದ್ದರು.

Exit mobile version