ಬೆಂಗಳೂರು: ಅಹ್ಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನವೆಂಬರ್ 19ರಂದು ನಡೆಯಲಿರುವ 2003ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ಈ ಪಂದ್ಯ ಸದ್ಯ ಕ್ರಿಕೆಟ್ ಕ್ಷೇತ್ರದಲ್ಲಿ ದೊಡ್ಡ ಮಾತಾಗಿದೆ. ಬಲಿಷ್ಠ ತಂಡಗಳೆರಡು ಪ್ರಶಸ್ತಿಗಾಗಿ ಸೆಣಸುವ ಸಂದರ್ಭಕ್ಕಾಗಿ ಎರಡೂ ತಂಡಗಳ ಅಭಿಮಾನಿಗಳ ಪಾಲಿಗೆ ಬಹುನಿರೀಕ್ಷಿತವಾಗಿದೆ. ರೋಹಿತ್ ಶರ್ಮಾ ಬಳಗವು ತವರು ಪ್ರೇಕ್ಷಕರ ಮುಂದೆ ಪ್ರಶಸ್ತಿಯನ್ನು ಎತ್ತಿಹಿಡಿಯುವ ನೆಚ್ಚಿನ ತಂಡವಾಗಿದ್ದರೂ, 5 ಬಾರಿ ವಿಶ್ವ ಚಾಂಪಿಯನ್ ಆಗಿರುವ ಆಸೀಸ್ ತಂಡವನ್ನು ನಿರ್ಲಕ್ಷ್ಯ ಮಾಡುವಂತಿಲ್ಲ.
2003ರಲ್ಲಿ ಸೌರವ್ ಗಂಗೂಲಿ ನಾಯಕತ್ವದ ಟೀಂ ಇಂಡಿಯಾವನ್ನು 125 ರನ್ ಗಳಿಂದ ಮಣಿಸಿದ ಆಸ್ಟ್ರೇಲಿಯಾ ಮೂರನೇ ಬಾರಿಗೆ ವಿಶ್ವಕಪ್ ಟ್ರೋಫಿ ಎತ್ತಿ ಹಿಡಿದಿತ್ತು. ಆ ಸಂದರ್ಭ ಭಾರತೀಯ ಅಭಿಮಾನಿಗಳ ಮನದಿಂದ ಇನ್ನೂ ಮಾಸಿಲ್ಲ. ಅಂತೆಯೇ ವಿಶ್ವಕಪ್ ಇತಿಹಾಸದುದ್ದಕ್ಕೂ, ಆಸ್ಟ್ರೇಲಿಯಾವು ಸತತವಾಗಿ ಪ್ರಬಲ ತಂಡವಾಗಿದ್ದು 13 ಮುಖಾಮುಖಿಗಳಲ್ಲಿ ಭಾರತವನ್ನು 8 ಬಾರಿ ಸೋಲಿಸಿದೆ.
ಏಕದಿನ ವಿಶ್ವಕಪ್ನಲ್ಲಿ ಆಸ್ಟ್ರೇಲಿಯಾ ತಂಡ ಭಾರತೀಯ ಅಭಿಮಾನಿಗಳ ಆಘಾತ ಕೊಟ್ಟ 3 ನಿದರ್ಶನಗಳನ್ನು ನಾವು ನೋಡೋಣ.
ವಿಶ್ವಕಪ್ 1992 (ಗುಂಪು ಹಂತ); ಭಾರತ ವಿರುದ್ಧ ಆಸ್ಟ್ರೇಲಿಯಾ ತಂಡಕ್ಕೆ 1 ರನ್ ಜಯ
ಡೀನ್ ಜೋನ್ಸ್ (90) ಮತ್ತು ಡೇವಿಡ್ ಬೂನ್ (43) ಅವರ ಜೊತೆಯಾಟದ ನೆರವಿನಿಂದ ಆಸ್ಟ್ರೇಲಿಯಾ 237 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಮೊಹಮ್ಮದ್ ಅಜರುದ್ದೀನ್ ಅವರ 93 ರನ್ಗಳ ನೆರವಿನಿಂದ ಭಾರತ ಕಠಿಣ ಹೋರಾಟ ನೀಡಿತು. ಕೊನೆಯ ಓವರ್ನಲ್ಲಿ ಗೆಲುವಿಗೆ 13 ರನ್ಗಳ ಅವಶ್ಯಕತೆಯಿತ್ತು. ಕಿರಣ್ ಮೋರೆ ಸತತ ಎರಡು ಬೌಂಡರಿಗಳನ್ನು ಬಾರಿಸಿದರು. ಕೊನೆಯಲ್ಲಿ ೪ ಎಸೆತಗಳಲ್ಲಿ ೫ ರನ್ ಬೇಕಾಯಿತು. ಆದಾಗ್ಯೂ ಭಾರತ ತಂಡ ಮೋರ್ ವಿಕೆಟ್ ಕಳೆದುಕೊಂಡಿತು. ಮುಂದಿನ 3ಎಸೆತಗಳಲ್ಲಿ ಕೇವಲ ಮೂರು ರನ್ ಗಳಿಸಲು ಸಾಧ್ಯವಾಯಿತು, ಅಂತಿಮವಾಗಿ ಒಂದು ರನ್ ನಿಂದ ಸೋತಿತು.
ವಿಶ್ವಕಪ್ 2015 (ಸೆಮಿಫೈನಲ್); ಆಸ್ಟ್ರೇಲಿಯಾಕ್ಕೆ 95 ರನ್ ಗಳ ಜಯ
ಆತಿಥೇಯ ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಹಾಲಿ ಚಾಂಪಿಯನ್ ಭಾರತ ಬಲಿಷ್ಠ ಎನಿಸಿಕೊಂಡಿತ್ತು . ಎಂಎಸ್ ಧೋನಿ ನೇತೃತ್ವದ ತಂಡವು ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಕೆಟ್ಟ ಪ್ರದರ್ಶನವನ್ನು ನೀಡಿತು. 329 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಮೆನ್ ಇನ್ ಬ್ಲೂ ತಂಡ 233 ರನ್ಗಳಿಗೆ ಆಲೌಟ್ ಆಗಿ ಟೂರ್ನಿಯಿಂದ ನಿರ್ಗಮಿಸಿತು. ಇಲ್ಲಿಯೂ ಭಾರತದ ಪ್ರಶಸ್ತಿ ಆಸೆಗೆ ಅಡ್ಡ ಬಂದಿದ್ದು ಆಸ್ಟ್ರೇಲಿಯಾ. ಆಸ್ಟ್ರೇಲಿಯಾವೇ ಇಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತು.
ಇದನ್ನೂ ಓದಿ : ICC World Cup 2023 : ಫೈನಲ್ಗೆ ಮೊದಲು ಬಾನಂಗಳದಲ್ಲಿ ಚಿತ್ತಾರ ಮೂಡಿಸಲಿದೆ ಸೂರ್ಯ ಕಿರಣ!
ವಿಶ್ವಕಪ್ 2003 (ಫೈನಲ್); ಆಸ್ಟ್ರೇಲಿಯಾಕ್ಕೆ 125 ರನ್ ಗಳ ಜಯ
ಇದು ಟೀಮ್ ಇಂಡಿಯಾ ಮತ್ತು ಭಾರತೀಯ ಅಭಿಮಾನಿಗಳನ್ನು ವರ್ಷಗಳ ಕಾಲ ಕಾಡಿದ ಪಂದ್ಯವಾಗಿದೆ. ಪಂದ್ಯಾವಳಿಯಲ್ಲಿ ಸತತ 8 ಗೆಲುವುಗಳ ನಂತರ ಮೆನ್ ಇನ್ ಬ್ಲೂ ವಿಶ್ವಕಪ್ ಟ್ರೋಫಿಯಿಂದ ಕೇವಲ ಒಂದು ಹೆಜ್ಜೆ ದೂರದಲ್ಲಿತ್ತು. ಆದಾಗ್ಯೂ, ಆಸ್ಟ್ರೇಲಿಯಾವು ಪ್ರಾಬಲ್ಯದ ಪ್ರದರ್ಶನದೊಂದಿಗೆ ಭಾರತದ ಭರವಸೆಗಳನ್ನು ನುಚ್ಚುನೂರು ಮಾಡಿತು. ಮೆನ್ ಇನ್ ಯೆಲ್ಲೋ ತಂಡವು 359 ರನ್ಗಳ ಬೃಹತ್ ಗುರಿಯನ್ನು ನಿಗದಿಪಡಿಸಿತು. ಬಲಿಷ್ಠ ಆಸ್ಟ್ರೇಲಿಯಾದ ಬೌಲರ್ಗಳಿಗೆ ಸವಾಲೊಡ್ಡಲು ವಿಫಲವಾದ ಟೀಮ್ ಇಂಡಿಯಾ 125 ರನ್ಗಳಿಂದ ಸೋತಿತು.