Site icon Vistara News

Rahul Dravid : ಬರ್ತ್​ಡೇ ಬಾಯ್​ ದ್ರಾವಿಡ್ ಹೊಂದಿರುವ ಹಲವು ದಾಖಲೆಗಳ ವಿವರ ಇಲ್ಲಿದೆ

Rahul Dravid

ಬೆಂಗಳೂರು: ಟೀಂ ಇಂಡಿಯಾದ ಮಾಜಿ ನಾಯಕ ರಾಹುಲ್ ದ್ರಾವಿಡ್ (Rahul Dravid ) ಇಂದು ತಮ್ಮ 51ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಯಾವುದೇ ವಿವಾದಗಳಿಗೆ ಒಳಗಾಗದ ಮತ್ತು ಸೌಮ್ಯ ಸ್ವಭಾವದ ಕ್ರಿಕೆಟಿಗರಾಗಿರುವ ದ್ರಾವಿಡ್ ತಮ್ಮ 15 ವರ್ಷಗಳ ವೃತ್ತಿಜೀವನದಲ್ಲಿ ಹಲವಾರು ದಾಖಲೆಗಳನ್ನು ಮಾಡಿದ್ದಾರೆ. ಭಾರತ ತಂಡವನ್ನು ಹಲವು ಅಪಾಯಗಳಿಂದ ಕಾಪಾಡಿದ್ದಾರೆ. ವಿದೇಶಿ ನೆಲದಲ್ಲಿ ಪಂದ್ಯ ಗೆಲ್ಲಲು ನೆರವು ನೀಡಿದ್ದಾರೆ. ಅವರು ತಮ್ಮ ವೃತ್ತಿ ಕ್ರಿಕೆಟ್​ ಕೊನೆಗೊಳಿಸುವ ಮೊದಲು ಹಲವಾರು ಐತಿಹಾಸಿಕ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಅವರುಗಳ ವಿವರ ಇಲ್ಲಿದೆ.

ಶೂನ್ಯಕ್ಕೆ ಔಟಾಗದ ಆಟಗಾರ

ದ್ರಾವಿಡ್ ಭಾರತದ ಏಕದಿನ ತಂಡದಲ್ಲಿ ನಾನಾ ಕ್ರಮಾಂಕದಲ್ಲಿ ಆಡಿದ್ದಾರೆ. ಯಾವಾಗಲೂ ತಮ್ಮ ತಂಡಕ್ಕೆ ಮೊದಲ ಆದ್ಯತೆ ನೀಡಿದ್ದರು. ಅವರು ಸತತ 120 ಏಕದಿನ ಇನ್ನಿಂಗ್ಸ್ ಗಳನ್ನು ಆಡಿದರೂ ಒಂದೇ ಒಂದು ಬಾರಿ ಶೂನ್ಯಕ್ಕೆ ಔಟಾಗಿಲ್ಲ.

ಟೆಸ್ಟ್ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಕ್ಯಾಚ್​ಗಳು

ದ್ರಾವಿಡ್ ಕ್ರಿಕೆಟ್​ ಕ್ಷೇತ್ರದ ಅತ್ಯುತ್ತಮ ಸ್ಲಿಪ್ ಫೀಲ್ಡರ್ ಗಳಲ್ಲಿ ಒಬ್ಬರು. ಟೆಸ್ಟ್ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ ಆಟಗಾರ ಎಂಬ ದಾಖಲೆ ಅವರ ಹೆಸರಿನಲ್ಲಿದೆ. ಅವರು ಒಟ್ಟು 210 ಕ್ಯಾಚ್​ಗಳನ್ನು ಪಡೆದಿದ್ದಾರೆ.

ಟೆಸ್ಟ್ ಕ್ರಿಕೆಟ್​ನಲ್ಲಿ ಅತಿ ಹೆಚ್ಚು 90ಪ್ಲಸ್​ ರನ್​

ದ್ರಾವಿಡ್ ಟೆಸ್ಟ್ ಕ್ರಿಕೆಟ್​ನಲ್ಲಿ 10 ಹೆಚ್ಚು ಬಾರಿ 90 ಪ್ಲಸ್​ ರನ್ ಗಳಿಸಿದ್ದಾರೆ. ದ್ರಾವಿಡ್ ಅವರಲ್ಲದೆ, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮತ್ತು ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ವಾ ತಲಾ 10 ಬಾರಿ ಈ ಸಾಧನೆ ಮಾಡಿದ್ದಾರೆ.

ಟೆಸ್ಟ್ ಕ್ರಿಕೆಟ್​ನಲ್ಲಿ ಅತಿ ಹೆಚ್ಚು ಎಸೆತಗಳು

ದ್ರಾವಿಡ್ ಟೆಸ್ಟ್​ ಕ್ರಿಕೆಟ್​ನಲ್ಲಿ 31,258 ಎಸೆತಗಳನ್ನು ಎದುರಿಸಿದ್ದು, ಇದು ಸುಮಾರು 5210 ಓವರ್​ಗಳಿಗೆ ಸಮನಾಗಿದೆ. ಟೆಸ್ಟ್ ಕ್ರಿಕೆಟ್​ನ ಸಮಕಾಲೀನ ಬದಲಾವಣೆಯನ್ನು ಗಮನಿಸಿದರೆ, ರಕ್ಷಣಾತ್ಮಕ ತಂತ್ರಗಳಿಗೆ ಒತ್ತು ಕಡಿಮೆಯಾಗಿದೆ. ಹೀಗಾಗಿ ದ್ರಾವಿಡ್ ಅವರು ದಾಖಲೆ ಶಾಶ್ವತವಾಗಿ ಉಳಿದಿದೆ.

ಕ್ರೀಸ್ ನಲ್ಲಿ ಹೆಚ್ಚಿನ ಸಮಯ ಕಳೆದ ಬ್ಯಾಟರ್​

ದ್ರಾವಿಡ್ 44,152 ನಿಮಿಷಗಳ ಕಾಲ ಕ್ರೀಸ್ ನಲ್ಲಿದ್ದು ಬ್ಯಾಟಿಂಗ್ ಮಾಡಿದ್ದರು. ಈ ಮೂಲಕ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದ್ದಾರೆ.

ಇದನ್ನೂ ಓದಿ : ಗಂಗೂಲಿ ಅಲ್ಲ, ಸೆಹ್ವಾಗ್​ ಅಲ್ಲ; ಇವರೇ ಆಗಿದ್ದರು ಭಾರತದ ಸೆಕ್ಸಿಯೆಸ್ಟ್​ ಕ್ರಿಕೆಟರ್​

ಹೆಚ್ಚಿನ ಜತೆಯಾಟದ ರನ್ ಗಳು

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ಶತಕಗಳ ಜೊತೆಯಾಟವನ್ನು ನಿರ್ಮಿಸಿದ ದಾಖಲೆ ದ್ರಾವಿಡ್ ಅವರ ಹೆಸರಿನಲ್ಲಿದೆ. ಈ ಸ್ವರೂಪದಲ್ಲಿ ಅವರು 100 ಅಥವಾ ಅದಕ್ಕಿಂತ ಹೆಚ್ಚಿನ ರನ್​ಗಳಿಗೆ 88 ಜತೆಯಾಟವನ್ನು ಆಡಿದ್ದಾರೆ. ಈ ಸಾಧನೆಯಲ್ಲಿ ಅವರು ಸಚಿನ್ ತೆಂಡೂಲ್ಕರ್ ಅವರನ್ನು ಹಿಂದಿಕ್ಕಿದ್ದಾರೆ. ಆದರೆ, ತೆಂಡೂಲ್ಕರ್ ಅವರೊಂದಿಗೆ ಹೆಚ್ಚು ಜತೆಯಾಟದ ರನ್ ಗಳಿಸಿದ್ದಾರೆ.

Exit mobile version