ಚೆನ್ನೈ: ಐಪಿಎಲ್ 16ನೇ ಅವೃತ್ತಿಯ ಪ್ಲೇಹಂತದ ಮೊದಲ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರಸ್ಪರ ಮುಖಾಮುಖಿಯಾಗಲಿವೆ. ಈ ತಂಡಗಳು ಲೀಗ್ ಹಂತದ ಅಂಕಪಟ್ಟಿಯಲ್ಲಿ 1 ಮತ್ತು ಎರಡನೇ ಸ್ಥಾನ ಪಡೆದುಕೊಂಡಿರುವ ತಂಡಗಳಾಗಿವೆ. ಈ ಪಂದ್ಯದಕ್ಕೆ ಕೆಲವು ಆಟಗಾರರು ಮೈಲುಗಲ್ಲುಗಳನ್ನು ದಾಟಲಿದ್ದಾರೆ. ಅ ಸಾಧ್ಯತೆಗಳು ಹೇಗಿವೆ ಎಂದು ನೋಡೋಣ.
- 04- ಗುಜರಾತ್ ಹಾಗೂ ಚೆನ್ನೈ ತಂಡ ಮುಖಾಮುಖಿಯಾಗುವುದು ಇದು ನಾಲ್ಕನೇ ಬಾರಿ. ಜಿಟಿ ಎಲ್ಲಾ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.
- 02-ರವೀಂದ್ರ ಜಡೇಜಾ (98) 100 ಸಿಕ್ಸರ್ಗಳ ಮೈಲುಗಲ್ಲು ದಾಟಲು ಎರಡು ಸಿಕ್ಸರ್ ಬಾರಿಸಬೇಕಾಗಿದೆ.
- 01- ಮಹೇಂದ್ರ ಸಿಂಗ್ ಧೋನಿಗೆ ಐಪಿಎಲ್ನಲ್ಲಿ 350 ಫೋರ್ಗಳನ್ನು ಬಾರಿಸಲು ಒಂದು ಫೋರ್ ಬೇಕಾಗಿದೆ.
- 01- ರವೀಂದ್ರ ಜಡೇಜಾ ಒಂದು ವಿಕೆಟ್ ಕಬಳಿಸಿದರೆ ಐಪಿಎಲ್ನಲ್ಲಿ ಅವರ ಒಟ್ಟು ವಿಕೆಟ್ಗಳ ಸಂಖ್ಯೆ 150 ಆಗಲಿದೆ.
- 05- ಚೆನ್ನೈ ಬ್ಯಾಟರ್ 05 ಫೊರ್ ಬಾರಿಸಿದರೆ ಟಿ20 ಮಾದರಿಯಲ್ಲಿ 500 ಫೋರ್ಗಳ ಸಾಧನೆ ಮಾಡಲಿದ್ದಾರೆ.
- 08- ಅಂಬಾಟಿ ರಾಯಡುಗೆ ಟಿ20 ಕ್ರಿಕೆಟ್ನಲ್ಲಿ 6000 ರನ್ ಗಡಿ ದಾಟಲು 8 ರನ್ ಬೇಕಾಗಿದೆ.
- 78- ಚೆನ್ನೈ ಬ್ಯಾಟರ್ ಅಜಿಂಕ್ಯ ರಹಾನೆಗೆ ಟಿ20ಯಲ್ಲಿ 6000 ರನ್ ಗಡಿ ದಾಟಲು 78 ರನ್ ಬೇಕಾಗಿದೆ.
- 01- ಚೆನ್ನೈ ಆರಂಭಿಕ ಬ್ಯಾಟರ್ ಋತುರಾಜ್ ಗಾಯಕ್ವಾಡ್ಗೆ ಐಪಿಎಲ್ನಲ್ಲಿ 150 ರನ್ ಫೋರ್ಗಳನ್ನು ಬಾರಿಸಲು ಒಂದು ಫೋರ್ ಬೇಕಾಗಿದೆ.
- 02- ಗುಜರಾತ್ ತಂಡದ ನಾಯಕ ಹಾರ್ದಿಕ್ ಪಾಂಡ್ಯಗೆ ಟಿ20 ಮಾದರಿಯಲ್ಲಿ 150 ವಿಕೆಟ್ಗಳನ್ನು ಕಬಳಿಸಲು ಇನ್ನು 2 ವಿಕೆಟ್ ಬೇಕಾಗಿದೆ.
- 41- ಗುಜರಾತ್ ತಂಡದ ಆರಂಭಿಕ ಬ್ಯಾಟರ್ ಸುಭ್ಮನ್ ಗಿಲ್ಗೆ ಟಿ20 ಮಾದರಿಯಲ್ಲಿ 3500 ರನ್ ಬಾರಿಸಲು 41 ರನ್ ಬೇಕಾಗಿದೆ.
- 08- ಗುಜರಾತ್ ಬ್ಯಾಟರ್ ವಿಜಯ್ ಶಂಕರ್ 8 ಸಿಕ್ಸರ್ ಬಾರಿಸಿದರೆ ಐಪಿಎಲ್ನಲ್ಲಿ ಅವರು ಬಾರಿಸಿದ ಸಿಕ್ಸರ್ಗಳ ಸಂಖ್ಯೆ 50 ಆಗಲಿದೆ.
- 08- ಗುಜರಾತ್ ತಂಡದ ಶುಭ್ಮನ್ ಗಿಲ್ಗೆ ಟಿ20 ಕ್ರಿಕೆಟ್ನಲ್ಲಿ 350 ಫೊರ್ಗಳನ್ನು ಬಾರಿಸಲು ಇನ್ನು 08 ಫೋರ್ಗಳು ಬೇಕಾಗಿದೆ.
- 07- ಅಜಿಂಕ್ಯ ರಹಾನೆ ಐಪಿಎಲ್ನಲ್ಲಿ 93 ರನ್ ಬಾರಿಸಿದ್ದು, ಏಳು ಸಿಕ್ಸರ್ ಬಾರಿಸಿದರೆ 100ರ ಮೈಲುಗಲ್ಲು ದಾಟಲಿದ್ದಾರೆ.
- 01- ಗುಜರಾತ್ ಬೌಲರ್ ಅಲ್ಜಾರಿ ಜೋಸೆಫ್ 1 ವಿಕೆಟ್ ಪಡೆದರೆ ಟಿ20 ಮಾದರಿಯಲ್ಲಿ 100 ವಿಕೆಟ್ ಕಬಳಿಸಿದಂತಾಗುತ್ತದೆ.