Site icon Vistara News

ICC World Cup 2023 : ಸೆಮಿಫೈನಲ್​ಗೇರಿದ 4 ತಂಡಗಳ ಸೋಲು-ಗೆಲುವುಗಳ ಇತಿಹಾಸ ಈ ರೀತಿ ಇದೆ

Semi Final teams

ಮುಂಬಯಿ : 2023ರ ವಿಶ್ವಕಪ್ ಟೂರ್ನಿಗೆ (ICC World Cup 2023) ನಾಲ್ಕು ಸೆಮಿಫೈನಲ್ ಪಂದ್ಯಗಳು ನಡೆಯಲಿವೆ. ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ನವೆಂಬರ್ 15 ರಂದು ನಾಲ್ಕನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ವಿರುದ್ಧ ಸೆಣಸಲಿದೆ. ಎರಡನೇ ಮತ್ತು ಮೂರನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ನವೆಂಬರ್ 16 ರಂದು ಮುಖಾಮುಖಿಯಾಗಲಿವೆ. ಎರಡು ಸೆಮಿಫೈನಲ್​ಗಳಲ್ಲಿ ಮುಂಚಿತವಾಗಿವಿಶ್ವಕಪ್ ಸೆಮಿಫೈನಲ್​​ನಲ್ಲಿ ಭಾರತ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳ ದಾಖಲೆಯನ್ನು ವಿವರವಾಗಿ ನೋಡೋಣ.

ವಿಶ್ವ ಕಪ್​ ಸೆಮಿಫೈನಲ್​ನಲ್ಲಿ ನಾಲ್ಕು ತಂಡಗಳ ಸಾಧನೆಗಳ ವಿವರ

ಪಂದ್ಯಗಳುಭಾರತದಕ್ಷಿಣ ಆಫ್ರಿಕಾಆಸ್ಟ್ರೇಲಿಯಾನ್ಯೂಜಿಲ್ಯಾಂಡ್​
ಪಂದ್ಯಗಳು7488
ಗೆಲುವು3053
ಸೋಲು4325
ಟೈ0110
ಗೆಲುವಿನ ಪ್ರತಿಶತ42.85%00.00%62.50%37.50%
ಸೋಲಿನ ಪ್ರತಿಶತ57.15%75.00%25.00%62.50%

ಭಾರತದ ಸೆಮಿ ಫೈನಲ್ ದಾಖಲೆಗಳು

ಏಕದಿನ ವಿಶ್ವಕಪ್​​ನ ಕಳೆದ 12 ಆವೃತ್ತಿಗಳಲ್ಲಿ ಭಾರತ 7 ಬಾರಿ ಸೆಮಿಫೈನಲ್ ತಲುಪಿದೆ. ಈ 7 ಸೆಮಿಫೈನಲ್​​ಗಳಲ್ಲಿ ಮೆನ್ ಇನ್ ಬ್ಲೂ 3-4 ಗೆಲುವು / ಸೋಲಿನ ದಾಖಲೆಯನ್ನು ಹೊಂದಿದೆ, ಕಳೆದ ಎರಡು ನಾಕೌಟ್ ಪಂದ್ಯಗಳಲ್ಲಿ ನ್ಯೂಜಿಲೆಂಡ್ (2019) ಮತ್ತು ಆಸ್ಟ್ರೇಲಿಯಾ (2015) ವಿರುದ್ಧ ಸೋತಿದೆ. 2011ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಕೊನೆಯ ಬಾರಿ ಫೈನಲ್​ ಪ್ರವೇಶಿಸಿತ್ತು ಹಾಗೂ ಶ್ರೀಲಂಕಾ ತಂಡವನ್ನು ಸೋಲಿಸಿ ಟ್ರೋಫಿ ಗೆದ್ದಿತ್ತು.

ದಕ್ಷಿಣ ಆಫ್ರಿಕಾ ತಂಡದ ವಿಶ್ವಕಪ್ ಸೆಮಿಫೈನಲ್ ದಾಖಲೆ

1992ರ ಆವೃತ್ತಿಯಲ್ಲಿ ಏಕದಿನ ವಿಶ್ವಕಪ್ ಪ್ರಯಾಣವನ್ನು ಪ್ರಾರಂಭಿಸಿದ ದಕ್ಷಿಣ ಆಫ್ರಿಕಾ, ಆಡಿದ 8 ಆವೃತ್ತಿಗಳಲ್ಲಿ 4 ಬಾರಿ ಸೆಮಿಫೈನಲ್ ತಲುಪಿದೆ. ಒತ್ತಡಕ್ಕೆ ಬಗ್ಗು ದಕ್ಷಿಣ ಆಫ್ರಿಕಾ ತಂಡ ಐಸಿಸಿ ವಿಶ್ವಕಪ್​ ಸೆಮಿಫೈನಲ್​ನಲ್ಲಿ ಒಂದು ಬಾರಿಯೂ ಗೆದ್ದಿಲ್ಲ. 2015ರಲ್ಲಿ ಕೊನೆಯ ಬಾರಿ ಸೆಮಿಫೈನಲ್ ಆಡಿದ್ದ ದಕ್ಷಿಣ ಆಫ್ರಿಕಾ ನ್ಯೂಜಿಲೆಂಡ್ ವಿರುದ್ಧ ಸೋತಿತ್ತು.

ಇದನ್ನೂ ಓದಿ : ICC World Cup 2023 : ವಿಶ್ವ ಕಪ್​ ಸೆಮಿಫೈನಲ್​ ಪಂದ್ಯಗಳ ಕುರಿತು ಇಲ್ಲಿದೆ ಕೆಲವು ಮಾಹಿತಿ

ಆಸ್ಟ್ರೇಲಿಯಾ ವಿಶ್ವಕಪ್ ಸೆಮಿಫೈನಲ್ ದಾಖಲೆ

ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ತಂಡ (5 ವಿಶ್ವ ಕಪ್​ ಪ್ರಶಸ್ತಿಗಳು) ಆಸ್ಟ್ರೇಲಿಯಾ. ಇದು ಎಂಟು ಬಾರಿ ಸೆಮಿ ಫೈನಲ್​ ಅವಕಾಶ ಪಡೆದಿತ್ತು. ಐದು ಬಾರಿ ಗೆದ್ದು 2 ಬಾರಿ ಮಾತ್ರ ಸೋತಿತ್ತು. 2015ರ ಏಕದಿ ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾ ತಂಡ ಭಾರತವನ್ನು ಸುಲಭವಾಗಿ ಸೋಲಿಸಿತ್ತು. 2019ರಲ್ಲಿ ಚಾಂಪಿಯನ್ ಇಂಗ್ಲೆಂಡ್​ಗೆ ಮಣಿದಿತ್ತು.

ನ್ಯೂಜಿಲೆಂಡ್ ವಿಶ್ವಕಪ್ ಸೆಮಿಫೈನಲ್ ದಾಖಲೆ

ವಿಶ್ವ ಕಪ್​ ಈವೆಂಟ್ ನ ಪ್ರತಿ ಆವೃತ್ತಿಯಲ್ಲಿ ಭಾಗವಹಿಸುವ ಮತ್ತು ಅದನ್ನು ಎಂದಿಗೂ ಚಾಂಪಿಯನ್​ಪಟ್ಟ ಅಲಂಕರಿಸಿದ ಏಕೈಕ ತಂಡವೆಂದರೆ ನ್ಯೂಜಿಲೆಂಡ್. ಕಿವೀಸ್ ಏಕದಿನ ವಿಶ್ವಕಪ್​​ನಲ್ಲಿ ಅತ್ಯಂತ ಸ್ಥಿರ ತಂಡಗಳಲ್ಲಿ ಒಂದಾಗಿದ್ದು, 8 ಸೆಮಿಫೈನಲ್ಗಳಿಗೆ ಪ್ರವೇಶ ಮಾಡಿದೆ. (ಆಸ್ಟ್ರೇಲಿಯಾದೊಂದಿಗೆ ಜಂಟಿಯಾಗಿ ಅತಿ ಹೆಚ್ಚು ಬಾರಿ ಪ್ರವೇಶ).

ಈ ತಂಡದ ದಾಖಲೆಗಳು ಕಳಪೆಯಾಗಿದೆ (3 ಬಾರಿ ಗೆದ್ದಿದ್ದು. 5 ಸೋಲು ಕಂಡಿದೆ). ಕಳೆದ ನಾಲ್ಕು ವಿಶ್ವಕಪ್​ಗಳಲ್ಲಿ ಸೆಮಿಫೈನಲ್ ತಲುಪಿದ್ದರೂ, ಕಿವೀಸ್ ಕೇವಲ 2 ಬಾರಿ ಫೈನಲ್ ಆಡಿದೆ. ಎರಡರಲ್ಲೂ ಸೋತಿದೆ.

Exit mobile version