Site icon Vistara News

Asian Games : ಏಷ್ಯನ್​ ಗೇಮ್ಸ್​ನಲ್ಲಿ ಭಾರತದ ಐತಿಹಾಸಿಕ ಸಾಧನೆ, ಒಟ್ಟು ಪದಕಗಳ ಸಂಖ್ಯೆ 81ಕ್ಕೆ ಏರಿಕೆ

Asian Games medals

ಬೆಂಗಳೂರು: ಭಾರತೀಯ ಕ್ರೀಡಾ ಕ್ಷೇತ್ರಕ್ಕೆ ಅಕ್ಟೋಬರ್​ 4 ಮಹತ್ವದ ದಿನವಾಗಿದೆ. ಚೀನಾದ ಹ್ಯಾಂಗ್ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್​ನಲ್ಲಿ (Asian Games) ಭಾರತದ ಅಥ್ಲೀಟ್​ಗಳು ಇದುವರೆಗಿನ ಗರಿಷ್ಠ ಸಾಧನೆ ಮಾಡಿದ್ದಾರೆ. ಇಲ್ಲಿಯವರೆಗಿನ 18 ಆವೃತ್ತಿಗಳಲ್ಲಿ ಭಾರತ ಗರಿಷ್ಠ 69 ಪದಕಗಳನ್ನು ಗೆದ್ದುಕೊಂಡಿತ್ತು. ಆದರೆ, ಈ ಬಾರಿ 11ನೇ ದಿನಕ್ಕೆ ಒಟ್ಟು ಪದಕಗಳ ಸಂಖ್ಯೆ 81ಕ್ಕೆ ಏರಿಕೆಯಾಗಿದೆ. ಈ ಮೂಲಕ ಸಾರ್ವಕಾಲಿಕ ದಾಖಲೆಯನ್ನು ಬರೆದಿದೆ. ಅಕ್ಟೋಬರ್ 7ರವರೆಗೆ ಅಂದರೆ ಇನ್ನೂ ಮೂರು ದಿನಗಳ ಕಾಲ ಕ್ರೀಡಾಕೂಟ ನಡೆಯಲಿದ್ದು ಭಾರತದ ಒಟ್ಟು ಪದಕಗಳ ಸಂಖ್ಯೆ ಹೆಚ್ಚಳವಾಗಲಿದೆ. ಅಂದಾಜಿನ ಪ್ರಕಾರ ಭಾರತಕ್ಕೆ 100 ಪದಕಗಳನ್ನು ಗೆಲ್ಲುವ ಅವಕಾಶವೂ ಇದೆ.

ಬುಧವಾರ ಏಷ್ಯನ್ ಗೇಮ್ಸ್ 2023ರಲ್ಲಿ ಭಾರತವು ಅತ್ಯುತ್ತಮ ಆರಂಭವನ್ನೇ ಪಡೆದಿದೆ. ಮಂಗಳವಾರ 69 ಪದಕಗಳೊಂದಿಗೆ ದಿನವನ್ನು ಅಂತ್ಯಗೊಳಿಸಿದ್ದ ಭಾರತ ಬುಧವಾರ ಸಂಜೆಯ ವೇಳೆಗೆ ಇನ್ನೂ 12 ಪದಕಗಳನ್ನು ಸೇರ್ಪಡೆಗೊಳಿಸಿದೆ. ಭಾರತವು ಇದೀಗ 18 ಚಿನ್ನದ ಪದಕಗಳನ್ನು ತನ್ನ ಬುಟ್ಟಿಗೆ ಇಳಿಸಿಕೊಂಡಿದ್ದು,. ಒಂದೇ ಏಷ್ಯನ್ ಕ್ರೀಡಾಕೂಟದಲ್ಲಿ ಅತಿ ಹೆಚ್ಚು ಸ್ವರ್ಣ ಗೆದ್ದ ದಾಖಲೆಗೂ ಭಾಜನವಾಗಿದೆ. ಈ ಹಿಂದೆ ಏಶ್ಯನ್ ಗೇಮ್ಸ್ ನಲ್ಲಿ ಭಾರತ ಗರಿಷ್ಠ 16 ಚಿನ್ನದ ಪದಕಗಳಿಗೆ ಕೊರಳೊಡ್ಡಿತ್ತು.

ಬುಧವಾರ ಭಾರತದ ಪರ ನೀರಜ್ ಚೋಪ್ರಾ (ಪುರುಷರ ಜಾವೆಲಿನ್ ಥ್ರೋ), ಪುರುಷರ 4×400 ಮೀಟರ್ ರಿಲೇ ತಂಡ ಮತ್ತು ಜ್ಯೋತಿ ಸುರೇಖಾ ವೆನ್ನಮ್ ಮತ್ತು ಓಜಾಸ್ ಡಿಯೋಟಾಲೆ (ಆರ್ಚರಿ ಮಿಶ್ರ ತಂಡ ಕಾಂಪೌಂಡ್) ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದಾಋಎ. ಕಿಶೋರ್ ಜೆನಾ (ಜಾವೆಲಿನ್ ಥ್ರೋ), ಹರ್ಮಿಲನ್ ಬೈನ್ಸ್ (ಮಹಿಳೆಯರ 800 ಮೀಟರ್), ಅವಿನಾಶ್ ಸಾಬ್ಲೆ (ಪುರುಷರ 5000 ಮೀಟರ್), ಮಹಿಳೆಯರ 4×400 ಮೀಟರ್ ರಿಲೇ ತಂಡ, ಲವ್ಲಿನಾ ಬೊರ್ಗೊಹೈನ್ (ಬಾಕ್ಸಿಂಗ್) ಬೆಳ್ಳಿ ಪದಕ ಗೆದ್ದರು. ಸುನಿಲ್ ಕುಮಾರ್ (ಗ್ರೀಕೋ-ರೋಮನ್ ಕುಸ್ತಿ), ಅಭಯ್ ಸಿಂಗ್ ಮತ್ತು ಅನಾಹತ್ ಸಿಂಗ್ (ಮಿಶ್ರ ತಂಡ ಸ್ಕ್ವಾಷ್), ರಾಮ್ ಬಾಬೂ ಮತ್ತು ಮನು ರಾಣಿ (35 ಕಿ.ಮೀ ರೇಸ್ ವಾಕ್ ಮಿಶ್ರ ತಂಡ) ಮತ್ತು ಪರ್ವೀನ್ ಹೂಡಾ (ಬಾಕ್ಸಿಂಗ್ ಮಹಿಳೆಯರ 57 ಕೆಜಿ) ಕಂಚಿನ ಪದಕಗಳನ್ನು ಪಡೆದುಕೊಂಡಿದ್ದಾರೆ.

ದಿನದ ಹೈಲೈಟ್ಸ್​​

ಇದನ್ನೂ ಓದಿ : Neeraj Chopra : ವ್ಯರ್ಥವಾಯಿತು ನೀರಜ್ ಚೋಪ್ರಾ ಅವರ ಬೃಹತ್​ ಎಸೆತ; ಆದ್ರೂ ಸಿಕ್ಕಿತು ಚಿನ್ನ

ಭಾರತದ ಪದಕ ಪಟ್ಟಿ

ದಿನದ ಫಲಿತಾಂಶಗಳು

ಆರ್ಚರಿ: ಭಾರತದ ಜ್ಯೋತಿ ಸುರೇಖಾ ವೆನ್ನಮ್ ಮತ್ತು ಪ್ರವೀಣ್ ಓಜಾಸ್ ಡಿಯೋಟಾಲೆ ಕಾಂಪೌಂಡ್ ಆರ್ಚರಿ ಮಿಶ್ರ ತಂಡ ಸ್ಪರ್ಧೆಯಲ್ಲಿ ಚಿನ್ನ ಗೆದ್ದರು

ಕುಸ್ತಿ: ಪುರುಷರ ಗ್ರೀಕೋ-ರೋಮನ್ 87 ಕೆಜಿ ವಿಭಾಗದಲ್ಲಿ ಸುನಿಲ್ ಕುಮಾರ್ ಕಂಚಿನ ಪದಕ ಗೆದ್ದಿದ್ದಾರೆ.

ಬಾಕ್ಸಿಂಗ್: ಮಹಿಳೆಯರ 57 ಕೆಜಿ ವಿಭಾಗದ ಸೆಮಿಫೈನಲ್​​ನಲ್ಲಿ ಸೋತು ಕಂಚಿನ ಪದಕ ಗೆದ್ದ ಪರ್ವೀನ್

ಮಹಿಳೆಯರ 75 ಕೆಜಿ ವಿಭಾಗದ ಫೈನಲ್​​ನಲ್ಲಿ ಚೀನಾದ ಲಿ ಕಿಯಾನ್ ವಿರುದ್ಧ ಸೋತ ಲೊವ್ಲಿನಾ ಬೊರ್ಗೊಹೈನ್ ಬೆಳ್ಳಿ ಪದಕ ಗೆದ್ದರು.

ಅಥ್ಲೆಟಿಕ್ಸ್: 35 ಕಿ.ಮೀ ಓಟದ ಮಿಶ್ರ ತಂಡ ಫೈನಲ್​​ನಲ್ಲಿ ಭಾರತಕ್ಕೆ ಕಂಚಿನ ಪದಕ

ಮಹಿಳೆಯರ 800 ಮೀಟರ್ ಫೈನಲ್​​ನಲ್ಲಿ ಹರ್ಮಿಲನ್ ಬೈನ್ಸ್ ಬೆಳ್ಳಿ ಗೆದ್ದರು

ಪುರುಷರ 5000 ಮೀಟರ್ ಫೈನಲ್​​ನಲ್ಲಿ ಅವಿನಾಶ್ ಸಾಬ್ಲೆ ಬೆಳ್ಳಿ ಗೆದ್ದರು

ಭಾರತದ ಮಹಿಳಾ 4*400 ಮೀಟರ್ ರಿಲೇ ತಂಡ ಬೆಳ್ಳಿ ಪದಕ ಗೆದ್ದಿದೆ.

ಪುರುಷರ ಜಾವೆಲಿನ್ ಫೈನಲ್ನಲ್ಲಿ ನೀರಜ್ ಚೋಪ್ರಾ ಚಿನ್ನ ಗೆದ್ದರೆ, ಕಿಶೋರ್ ಕುಮಾರ್ ಜೆನಾ ಬೆಳ್ಳಿ ಗೆದ್ದರು

ಪುರುಷರ 4*400 ಮೀಟರ್ ರಿಲೇ ಸ್ಪರ್ಧೆಯಲ್ಲಿ ಚಿನ್ನ ಗೆದ್ದ ಭಾರತ

ಸ್ಕ್ವಾಷ್: ಮಿಶ್ರ ಡಬಲ್ಸ್ ಸೆಮಿಫೈನಲ್ನಲ್ಲಿ ಭಾರತದ ಅನಾಹತ್ ಸಿಂಗ್ ಮತ್ತು ಅಭಯ್ ಸಿಂಗ್ ಮಲೇಷ್ಯಾದ ಐಫಾ ಬಿಂಟಿ ಮತ್ತು ಮೊಹಮ್ಮದ್ ಸಯಾಫಿಕ್ ವಿರುದ್ಧ ಸೋತು ಕಂಚಿನ ಪದಕ ಗೆದ್ದರು.

ಪದಕದ ಭರವಸೆಗಳು

ಸ್ಕ್ವಾಷ್​: ಮಿಶ್ರ ಡಬಲ್ಸ್ ಸೆಮಿಫೈಲ್​ನಲ್ಲಿ ದೀಪಿಕಾ ಪಳ್ಳಿಕಲ್ ಮತ್ತು ಹರಿಂದರ್ ಪಾಲ್ ಸಿಂಗ್ ಸಂಧು ಹಾಂಕಾಂಗ್ನ ಕಾ ಯಿ ಲೀ ಮತ್ತು ಚಿ ಹಿಮ್ ವಾಂಗ್ ಅವರನ್ನು ಸೋಲಿಸಿ ಫೈನಲ್​ಗೆ ಪ್ರವೇಶಿಸಿದ್ದಾರೆ.

ಪುರುಷರ ಸಿಂಗಲ್ಸ್ ಸೆಮಿಫೈನಲ್ ಪ್ರವೇಶಿಸಿದ ಸೌರವ್ ಘೋಷಾಲ್

ಕಬಡ್ಡಿ: ಥಾಯ್ಲೆಂಡ್ ವಿರುದ್ಧ ಭಾರತಕ್ಕೆ 63-26 ಅಂತರದ ಗೆಲುವು

ಮಹಿಳಾ ಕಬಡ್ಡಿ: ಥಾಯ್ಲೆಂಡ್ ವಿರುದ್ಧ ಭಾರತಕ್ಕೆ 54-22 ಅಂತರದ ಗೆಲುವು

Exit mobile version