Site icon Vistara News

Glenn Maxwell : ವಿಶ್ವ ಕಪ್​ನಲ್ಲಿ ದ್ವಿಶತಕ ಬಾರಿಸಿದ ಆಟಗಾರರ ವಿವರ ಇಲ್ಲಿದೆ

Glen Maxwell

ಮುಂಬಯಿ: ಹಾಲಿ ವಿಶ್ವ ಕಪ್​ನಲ್ಲಿ ಅಫಘಾನಿಸ್ತಾನ ವಿರುದ್ಧದ ಪಂದ್ಯದ ವೇಳೆ ಆಸ್ಟ್ರೇಲಿಯಾದ ಗ್ಲೆನ್​ ಮ್ಯಾಕ್ಸ್​ವೆಲ್​ (Glenn Maxwell) ಅಜೇಯ 202 ರನ್ ಬಾರಿಸಿದ್ದಾರೆ. ಈ ಮೂಲಕ ಅವರು ತಂಡಕ್ಕೆ ರೋಚಕ ವಿಜಯವನ್ನು ತಂದುಕೊಟ್ಟರು. ಇದು ಹಾಲಿ ಏಕ ದಿನ ವಿಶ್ವ ಕಪ್​ನಲ್ಲಿ ಮೊದಲ ಶತಕ. ಆದರೆ, ಒಟ್ಟು ವಿಶ್ವ ಕಪ್​ನಲ್ಲಿ ಮೂರನೇ ಶತಕವಾಗಿದೆ. ಈ ಮೂಲಕ ಅವರ ಅವರು ಏಕ ದಿನ ವಿಶ್ವ ಕಪ್​ನಲ್ಲಿ ಶತಕ ಬಾರಿಸಿದವರ ಎಲೈಟ್​ ಪಟ್ಟಿಗೆ ಸೇರ್ಪಡೆಗೊಂಡರು.

157 ಸ್ಟ್ರೈಕ್ ರೇಟ್​​ನಲ್ಲಿ ಬ್ಯಾಟಿಂಗ್ ಮಾಡಿದ ಮ್ಯಾಕ್ಸ್ವೆಲ್ ತಮ್ಮ ದ್ವಿಶತಕವನ್ನು ತಲುಪಲು 128 ಎಸೆತಗಳನ್ನು ತೆಗೆದುಕೊಂಡರು. ಅವರು 21 ಬೌಂಡರಿಗಳು ಮತ್ತು 10 ಸಿಕ್ಸರ್​ಗಳನ್ನು ಬಾರಿಸಿ ದ್ವಿಶತಕವನ್ನು ತಲುಪಿದರು ಮತ್ತು ಏಕದಿನ ಪಂದ್ಯಗಳಲ್ಲಿ ಚೇಸಿಂಗ್ ಮಾಡುವಾಗ ದ್ವಿಶತಕ ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ವಿಶ್ವಕಪ್​​ನಲ್ಲಿ ದ್ವಿಶತಕ ಬಾರಿಸಿದ ಆಸ್ಟ್ರೇಲಿಯಾದ ಮೊದಲ ಆಟಗಾರ ಎಂಬ ಹೆಗ್ಗಳಿಕೆಯನ್ನು ಮ್ಯಾಕ್ಸ್​ವೆಲ್​ ತಮ್ಮದಾಗಿಸಿಕೊಂಡಿದ್ದಾರೆ.

ದ್ವಿಶತಕ ಬಾರಿಸಿದ ಮೂರನೇ ಆಟಗಾರ

ಅಜೇಯ 201 ರನ್ ಗಳಿಸುವ ಮೂಲಕ ಗ್ಲೆನ್ ಮ್ಯಾಕ್ಸ್​ವೆಲ್ ವಿಶ್ವಕಪ್​ನಲ್ಲಿ ಅತಿ ಹೆಚ್ಚು ವೈಯಕ್ತಿಕ ಸ್ಕೋರ್ ಗಳಿಸಿದ ಮೂರನೇ ಬ್ಯಾಟರ್​​ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಮಾರ್ಟಿನ್ ಗಪ್ಟಿಲ್ (237) ಮತ್ತು ಕ್ರಿಸ್ ಗೇಲ್ (215) ಮಾತ್ರ ಅವರಿಗಿಂತ ಮುಂದಿದ್ದಾರೆ. ಏಕದಿನ ಇತಿಹಾಸದಲ್ಲಿ ಚೇಸಿಂಗ್ ಮಾಡುವಾಗ 5 ಅಥವಾ ಅದಕ್ಕಿಂತ ಕಡಿಮೆ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 150 ರನ್ ಗಳಿಸಿದ ಮೊದಲ ಬ್ಯಾಟರ್​ ಎಂಬ ಶ್ರೆಯಸ್ಸಿಗೂ ಮ್ಯಾಕ್ಸ್​ವೆಲ್​ ಪಾತ್ರರಾಗಿದ್ದಾರೆ. ಗ್ಲೆನ್ ಮ್ಯಾಕ್ಸ್ವೆಲ್ ವಿಶ್ವಕಪ್ ಆವೃತ್ತಿಯಲ್ಲಿ 5 ಅಥವಾ ಅದಕ್ಕಿಂತ ಕಡಿಮೆ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿ 2 ಶತಕಗಳನ್ನು ಗಳಿಸಿದ ಮೊದಲ ಆಟಗಾರ.

ಆಪ್ಘನ್​ ವಿರುದ್ಧ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್​ ದಾಖಲೆಗಳು

ವಿಶ್ವಕಪ್ ನಲ್ಲಿ ಅತ್ಯಧಿಕ ವೈಯಕ್ತಿಕ ಸ್ಕೋರ್​ಗಳು

237* – ಮಾರ್ಟಿನ್ ಗಪ್ಟಿಲ್ (ನ್ಯೂಜಿಲೆಂಡ್) ವೆಸ್ಟ್​ಇಂಡಿಸ್ ವಿರುದ್ಧ , ವೆಲ್ಲಿಂಗ್ಟನ್, 2015
215 – ಕ್ರಿಸ್ ಗೇಲ್ (ವಿಐ) ಜಿಂಬಾಬ್ವೆ ವಿರುದ್ಧ , ಕ್ಯಾನ್ಬೆರಾ, 2015
201* – ಗ್ಲೆನ್ ಮ್ಯಾಕ್ಸ್​ವೆಲ್​ (ಆಸ್ಟ್ರೇಲಿಯಾ) ಅಫಘಾನಿಸ್ತಾನ ವಿರುದ್ಧ. ಮುಂಬೈ ಡಬ್ಲ್ಯೂಎಸ್, 2023
188* – ಗ್ಯಾರಿ ಕರ್ಸ್ಟನ್ (ಎಸ್ಎ) ಯುಎಇ ವಿರುದ್ಧ , ರಾವಲ್ಪಿಂಡಿ, 1996
183 – ಸೌರವ್ ಗಂಗೂಲಿ (ಭಾರತ) ಶ್ರೀಲಂಕಾ ವಿರುದ್ಧ , ಟೌಂಟನ್, 1999

ಏಕದಿನ ಕ್ರಿಕೆಟ್​ನ ರನ್ ಚೇಸ್ ನಲ್ಲಿ ಅತ್ಯಧಿಕ ವೈಯಕ್ತಿಕ ಸ್ಕೋರ್

201* – ಗ್ಲೆನ್ ಮ್ಯಾಕ್ಸ್ವೆಲ್ (ಆಸ್ಟ್ರೇಲಿಯಾ) ಅಫ್ಘನ್ ವಿರುದ್ಧ ,​ ಮುಂಬೈ , 2023 ವಿಶ್ವಕಪ್
193 – ಫಖರ್ ಜಮಾನ್ (ಪಾಕಿಸ್ತಾನ) ದಕ್ಷಿಣ ಆಫ್ರಿಕಾ ವಿರುದ್ಧ , ಜೋಹಾನ್ಸ್ಬರ್ಗ್, 2021
185* – ಶೇನ್ ವ್ಯಾಟ್ಸನ್ (ಆಸ್ಟ್ರೇಲಿಯಾ) ಬಾಂಗ್ಲಅ ವಿರುದ್ಧ, ಮಿರ್​ಪುರ, 2011
183* – ಎಂಎಸ್ ಧೋನಿ (ಭಾರತ) ಶ್ರೀಲಂಕಾ ವಿರುದ್ಧ, ಜೈಪುರ, 2005
183 – ವಿರಾಟ್ ಕೊಹ್ಲಿ (ಭಾರತ) ಪಾಕಿಸ್ತಾನ ವಿರುದ್ಧ, ಮಿರ್​ಪುರ, 2012

ಏಕದಿನ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಪರ ಗರಿಷ್ಠ ವೈಯಕ್ತಿಕ ಸ್ಕೋರ್

201* – ಗ್ಲೆನ್ ಮ್ಯಾಕ್ಸ್ವೆಲ್, ಆಫ್ಘನ್​ ವಿರುದ್ಧ , ಮುಂಬೈ ಡಬ್ಲ್ಯೂಎಸ್, 2023 ವಿಶ್ವಕಪ್
185* – ಶೇನ್ ವ್ಯಾಟ್ಸನ್, ಬಾಂಗ್ಲಾ ವಿರುದ್ಧ ಮಿರ್ಪುರ್, 2011
181* – ಮ್ಯಾಥ್ಯೂ ಹೇಡನ್, ನ್ಯೂಜಿಲೆಂಡ್ ವಿರುದ್ಧ , ಹ್ಯಾಮಿಲ್ಟನ್, 2007
179 – ಡೇವಿಡ್ ವಾರ್ನರ್, ಪಾಕಿಸ್ತಾನ ವಿರುದ್ಧ , ಅಡಿಲೇಡ್, 2017
178 – ಡೇವಿಡ್ ವಾರ್ನರ್, ಆಫ್ಘನ್​ ವಿರುದ್ಧ ಪರ್ತ್, 2015 ವಿಶ್ವಕಪ್

ಪಂದ್ಯದಲ್ಲಿ ಏನಾಯಿತು?

ಗ್ಲೆನ್​ ಮ್ಯಾಕ್ಸ್​ವೆಲ್ ಅವರ ವಿಶ್ವ ದಾಖಲೆಯ ದ್ವಿಶತಕದ (ಅಜೇಯ 201 ರನ್​) ನೆರವು ಪಡೆದ ಆಸ್ಟ್ರೇಲಿಯಾ ತಂಡ ಅಫಘಾನಿಸ್ತಾನ ವಿರುದ್ಧದ ತನ್ನ ವಿಶ್ವ ಕಪ್​ ಪಂದ್ಯದಲ್ಲಿ (ICC World Cup 2023) 3 ವಿಕೆಟ್​ ಗೆಲುವು ಸಾಧಿಸಿದೆ. ಈ ಮೂಲಕ ಪ್ಯಾಟ್ ಕಮಿನ್ಸ್ ನೇತೃತ್ವದ ಆಸೀಸ್​ ಬಳಗ ವಿಶ್ವ ಕಪ್​ನ ಸೆಮಿಫೈನಲ್​ಗೆ ಪ್ರವೇಶ ಪಡೆದಿದ್ದು, ದಕ್ಷಿಣ ಆಫ್ರಿಕಾಗೆ ಎದುರಾಗಲಿದೆ. ಇದು ವಿಶ್ವ ಕಪ್​ ಇತಿಹಾಸದಲ್ಲಿ ಆಸ್ಟ್ರೇಲಿಯಾ ತಂಡ ಚೇಸ್​ ಮಾಡಿದ ಗರಿಷ್ಠ ಮೊತ್ತವೂ ಆಗಿದೆ. 91 ರನ್​ಗಳಿಗೆ 7 ವಿಕೆಟ್​ ಕಳೆದುಕೊಂಡಿದ್ದ ಆಸ್ಟ್ರೇಲಿಯಾ ತಂಡ ಮ್ಯಾಕ್ಸ್​ವೆಲ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಮುರಿಯದ ಏಳನೇ ವಿಕೆಟ್​ಗೆ 202 ರನ್ ಪೇರಿಸುವ ಮೂಲಕ ಗೆಲುವು ದಾಖಲಿಸಿತು. ಇದು ಹಾಲಿ ವಿಶ್ವ ಕಪ್​ನಲ್ಲಿ ಮೂಡಿ ಬಂದ ಮತ್ತೊಂದು ಅಚ್ಚರಿಯ ಫಲಿತಾಂಶವಾಗಿದೆ. ಅಲ್ಲದೆ, ಈ ಗೆಲುವು ಆಸ್ಟ್ರೇಲಿಯಾ ತಂಡದ ಪಾಲಿಗೆ ಹಾಗೂ ಮ್ಯಾಕ್ಸ್​ವೆಲ್​ಗೆ ಐತಿಹಾಸಿಕ ದಾಖಲೆ.

ಆಸ್ಟ್ರೇಲಿಯಾ ತಂಡ 49 ರನ್​ಗಳಿಗೆ 4 ವಿಕೆಟ್​ ಕಳೆದುಕೊಂಡಿದ್ದ ವೇಳೆ ಆಡಲು ಬಂದ ಗ್ಲೆನ್​ ಮ್ಯಾಕ್ಸ್​ವೆಲ್​ ಕೊನೆ ತನಕ ಅಜೇಯರಾಗಿ ಉಳಿದು ತಂಡವನ್ನು ಗೆಲ್ಲಿಸಿಕೊಟ್ಟರು. ತಾನು ಎದುರಿಸಿದ ಮೊದಲ ಎಸೆತದಲ್ಲಿಯೇ ಡಿಆರ್​ಎಸ್​ ಮನವಿ ಎದುರಿಸಿದ ಗ್ಲೆನ್​ ಮ್ಯಾಕ್ಸ್​ವೆಲ್ ಅಲ್ಲಿಂದ 128 ಎಸೆತಗಳನ್ನು ಎದುರಿಸಿ 21 ಫೋರ್ ಹಾಗೂ 10 ಸಿಕ್ಸರ್​ಗಳ ನೆರವಿನಿಂದ ದ್ವಿಶತಕ ಬಾರಿಸಿ ಗೆಲುವು ತಂದುಕೊಟ್ಟರು. ಅದಕ್ಕಿಂತ ಮೊದಲು ನೂರ್ ಅಹಮದ್​ ಎಸೆತದಲ್ಲಿ ಅಂಪೈರ್ ನೀಡಿದ್ದ ಎಲ್​ಬಿಡಬ್ಲ್ಯು ಔಟ್​ ವಿರುದ್ದ ಡಿಆರ್​ಎಸ್​ ಪಡೆದುಕೊಂಡು ಅಲ್ಲೂ ಬಚಾವಾಗಿದ್ದರು. ಎಲ್ಲದಕ್ಕಿಂತ ಮುಖ್ಯವಾಗಿ ಆಫ್ಘನ್ ತಂಡದ ಮುಜೀಬ್​ ಉರ್ ರಹಮಾನ್ ಅವರು ಮ್ಯಾಕ್ಸ್​ವೆಲ್ ಅವರ ಕ್ಯಾಚೊಂದನ್ನು ಕೈ ಚೆಲ್ಲುವ ಮೂಲಕ ಅವರಿಗೆ ಜೀವದಾನ ಕೊಟ್ಟಿದ್ದರು. ಅದರನ್ನು ಸದ್ಬಳಕೆ ಮಾಡಿಕೊಂಡ ಮ್ಯಾಕ್ಸ್​ವೆಲ್​ ಇತಿಹಾಸವನ್ನೇ ಸೃಷ್ಟಿಸಿದರು. ಮತ್ತೊಂದು ತುದಿಯಲ್ಲಿ 68 ಎಸೆತಗಳನ್ನು ಎದುರಿಸಿದ ನಾಯಕ ಪ್ಯಾಟ್​ ಕಮಿನ್ಸ್​ 12 ರನ್ ಮಾತ್ರ ಬಾರಿಸಿದರೂ ಅವರು ಕೊಟ್ಟ ಜತೆಯಾಟವೂ ಗೆಲುವಿಗೆ ಪ್ರಮುಖ ಕಾರಣವಾಯಿತು.

Exit mobile version