ಬೆಂಗಳೂರು: ಕ್ರೀಡಾ ಪಟುಗಳು ಹಾಗೂ ಕ್ರೀಡಾ ಪ್ರೇಮಿಗಳು ವರ್ಷಾಂತ್ಯದ ಸಂಭ್ರಮದಲ್ಲಿದ್ದಾರೆ. ಟಿ20 ವಿಶ್ವ ಕಪ್ ಏಷ್ಯಾ ಕಪ್ ಕ್ರಿಕೆಟ್ ಮತ್ತು ಫಿಫಾ ವಿಶ್ವ ಕಪ್ ಕ್ರಿಕೆಟ್ ಟೂರ್ನಿಯನ್ನು ವೀಕ್ಷಿಸಿರುವ ಭಾರತದ ಕ್ರೀಡಾಸ್ತರು ಮುಂದಿನ ವರ್ಷ ನಡೆಯುವ ಪ್ರಮುಖ ಟೂರ್ನಮೆಂಟ್ಗಳು ಯಾವಾಗ ಆರಂಭವಾಗಬಹುದು ಎಂಬ ಲೆಕ್ಕಾಚಾರ ಶುರು ಮಾಡಿಕೊಂಡಿದ್ದಾರೆ. ಪ್ರತಿ ವರ್ಷ ನಡೆಯುವ ಟೂರ್ಗಳು ಮತ್ತು ಇನ್ನಿತರ ಪ್ರಮುಖ ಟೂರ್ನಿಗಳನ್ನು ಹೊರತುಪಡಿಸಿ ಹಲವಾರು ಪ್ರಮುಖ ಸ್ಪರ್ಧೆಗಳು 2023ರಲ್ಲಿ ಆಯೋಜನೆಗೊಂಡಿವೆ. ಅವುಗಳು ವೇಳಾಪಟ್ಟಿ ಇಲ್ಲಿದೆ.
ಕ್ರೀಡಾಕೂಟ | ಯಾವಾಗ? | ಎಲ್ಲಿ? |
ಪುರುಷರ ಹಾಕಿ ವಿಶ್ವ ಕಪ್ | ಜನವರಿ 13ರಿಂದ29 | ಭಾರತ (ಭುವನೇಶ್ವರ) |
ಆಸ್ಟ್ರೇಲಿಯಾ ಓಪನ್ | ಜನವರಿ 16ರಿಂದ 29 | ಆಸ್ಟ್ರೇಲಿಯಾ (ಮೆಲ್ಬೋರ್ನ್) |
ಖೇಲೋ ಇಂಡಿಯಾ ಯೂತ್ ಗೇಮ್ಸ್ | ಜನವರಿ 31ರಿಂದ ಫೆಬ್ರವರಿ 11 | ಮಧ್ಯಪ್ರದೇಶ |
ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್ಷಿಪ್ | ಮಾರ್ಚ್ 15ರಿಂದ 31 | ಭಾರತ (ಹೊಸ ದಿಲ್ಲಿ) |
ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ | ಮಾರ್ಚ್ 14ರಿಂದ 19 | ಬರ್ಮಿಂಗ್ಬಮ್ (ಇಂಗ್ಲೆಂಡ್) |
ಏಷ್ಯನ್ ರಸ್ಲಿಂಗ್ ಚಾಂಪಿಯನ್ಷಿಪ್ | ಮಾರ್ಚ್ 28ರಿಂದ ಏಪ್ರಿಲ್ 2 | ಭಾರತ (ನವ ದೆಹಲಿ) |
ಪುರುಷರ ಬಾಕ್ಸಿಂಗ್ ವಿಶ್ವ ಚಾಂಪಿಯನ್ಷಿಪ್ | ಮೇ 1ರಿಂದ14 | ಉಜ್ಬೇಕಿಸ್ತಾನ (ತಾಷ್ಕೆಂಟ್) |
ಏಷ್ಯನ್ ವೇಟ್ಲಿಫ್ಟಿಂಗ್ ಚಾಂಪಿಯನ್ಶಿಪ್ | ಮೇ 3ರಿಂದ13 | ಜಿಂಜು, ದಕ್ಷಿಣ ಕೊರಿಯಾ |
ದೋಹಾ ಡೈಮಂಡ್ ಲೀಗ್ | ಮೇ 5 | ಕತಾರ್ |
ವಿಶ್ವ ಟೇಬಲ್ ಟೆನಿಸ್ ಚಾಂಪಿಯನ್ಷಿಪ್ | ಮೇ 22ರಿಂದ 28 | ದಕ್ಷಿಣ ಆಫ್ರಿಕಾ (ಡರ್ಬನ್) |
ಫ್ರೆಂಚ್ ಓಪನ್ | ಮೇ 28ರಿಂದ ಜೂನ್ 11 | ಪ್ಯಾರಿಸ್, ಫ್ರಾನ್ಸ್ |
ವಿಂಬಲ್ಡನ್ | ಜುಲೈ 3ರಿಂದ 13 | ಇಂಗ್ಲೆಂಡ್ |
ಮಹಿಳೆಯರ ಫಿಫಾ ಫುಟ್ಬಾಲ್ | ಜುಲೈ 20ರಿಂದ ಆಗಸ್ಟ್ 20 | ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ |
ವರ್ಲ್ಡ್ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ | ಆಗಸ್ಟ್ 19ರಿಂದ 27 | ಹಂಗರಿ (ಬುಡಾಪೆಸ್ಟ್) |
ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ಷಿಪ್ | ಆಗಸ್ಟ್ 21ರಿಂದ 27 | ಡೆನ್ಮಾರ್ಕ್ (ಕೋಪನ್ಹೇಗ್) |
ಯುಎಸ್ ಓಪನ್ | ಆಗಸ್ಟ್ 28ರಿಂದ ಸೆಪ್ಟೆಂಬರ್ 10 | ಅಮರಿಕ (ನ್ಯೂಯಾರ್ಕ್) |
ವಿಶ್ವ ವೇಟ್ಲಿಫ್ಟಿಂಗ್ ಚಾಂಪಿಯನ್ಷಿಪ್ | ಸೆಪ್ಟೆಂಬರ್ 2ರಿಂದ 17 | ಸೌದಿ ಅರೇಬಿಯಾ (ರಿಯಾದ್) |
ವಿಶ್ವ ಕುಸ್ತಿ ಚಾಂಪಿಯನ್ಶಿಪ್ | ಸೆಪ್ಟೆಂಬರ್ 16ರಿಂದ 24 | ಸರ್ಬಿಯಾ |
ಏಷ್ಯಾ ಕಪ್ ಕ್ರಿಕೆಟ್ | ಸೆಪ್ಟೆಂಬರ್ 2ರಿಂದ 17 | ಪಾಕಿಸ್ತಾನ |
ಏಷ್ಯನ್ ಗೇಮ್ಸ್ | ಸೆಪ್ಟೆಂಬರ್ 23- ಅಕ್ಟೋಬರ್ 8 | ಚೀನಾ (ಹ್ಯಾಂಗ್ಜೊ) |
ಏಕ ದಿನ ವಿಶ್ವ ಕಪ್ | ಅಕ್ಟೋಬರ್26- ನವೆಂಬರ್ 26 | ಭಾರತ |
ವರ್ಲ್ಡ್ ಟೂರ್ ಫೈನಲ್ಸ್ | ಡಿಸೆಂಬರ್ | ಕತಾರ್ |
ಭಾರತೀಯರ ಪಾಲಿಗೆ ಕ್ರಿಕೆಟ್ ಪ್ರಮುಖವಾಗಿದೆ. ಅಂತೆಯೇ ಈ ವರ್ಷದಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್, ಏಷ್ಯಾ ಕಪ್ ಹಾಗೂ ಏಕ ದಿನ ವಿಶ್ವ ಕಪ್ ನಡೆಯಲಿದೆ. ಅದನ್ನು ಹೊರತುಪಡಿಸಿದರೆ ಬ್ಯಾಡ್ಮಿಂಟರ್ ಟೂರ್ಗಳು ಮತ್ತು ವಿಶ್ವ ಚಾಂಪಿಯನ್ಷಿಪ್ ಭಾರತಕ್ಕೆ ಪ್ರಮುಖ ಎನಿಸಿದೆ. ಅದರ ಜತೆಗೆ ಏಷ್ಯಾ ಕಪ್ ಹಾಗೂ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ಗಾಗಿಯೂ ಭಾರತೀಯ ಅಥ್ಲೀಟ್ಗಳು ಕಾಯುತ್ತಿದ್ದಾರೆ.
ಇದನ್ನೂ ಓದಿ | ICC World Cup 2023| ತೆರಿಗೆ ಸಮಸ್ಯೆ; ಏಕದಿನ ವಿಶ್ವಕಪ್ ಆತಿಥ್ಯ ಕೈಜಾರುವ ಭೀತಿಯಲ್ಲಿ ಬಿಸಿಸಿಐ!