1. Ram Mandir: ರಾಮ ಮಂದಿರ ಕಟ್ಟಿರುವುದು ಸಂತೋಷದ ವಿಷಯ ಎಂದ ಸಿದ್ದರಾಮಯ್ಯ!
ಬೆಂಗಳೂರು: 2024ರ ಜನವರಿ 22ರಂದು ರಾಮಮಂದಿರದ (Ram Mandir) ಗರ್ಭಗುಡಿಯಲ್ಲಿ ರಾಮಲಲ್ಲಾ ಮೂರ್ತಿಯ ಪ್ರತಿಷ್ಠಾಪನೆಗೆ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ದೇಶದ ನಾಲ್ಕು ಸಾವಿರ ಸಾಧು-ಸಂತರು ಸೇರಿ 10-15 ಸಾವಿರ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಇನ್ನು ಈ ಬಗ್ಗೆ ಸಿಎಂ ಸಿದ್ದರಾಮಯ್ಯ ( ಪ್ರತಿಕ್ರಿಯೆ ನೀಡಿದ್ದು, ರಾಮ ಮಂದಿರ ಕಟ್ಟಿರುವುದು ಸಂತೋಷದ ವಿಷಯ ಎಂದು ಹೇಳಿದ್ದಾರೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ: Ram Mandir: ಜನವರಿಯಲ್ಲಿ ಅಯೋಧ್ಯೆಗೆ ನಿತ್ಯ 3ರಿಂದ 5 ಲಕ್ಷ ಜನರ ಭೇಟಿ ನಿರೀಕ್ಷೆ!
ಈ ಸುದ್ದಿಯನ್ನೂ ಓದಿ: Ram Temple: ರಾಮನ ಹೆಸರಲ್ಲಿ ಭಕ್ತರಿಗೆ ಮೋಸ; ಕ್ಯೂಆರ್ ಕೋಡ್ ಸ್ಕ್ಯಾಮ್ ಬಗ್ಗೆ ಇರಲಿ ಎಚ್ಚರ
2. P Pratapsimha : ನನ್ನ ಅಮ್ಮ, ತಂಗೀನೂ ಅರೆಸ್ಟ್ ಮಾಡ್ಸಿ ಸರ್; ಸಿದ್ದರಾಮಯ್ಯ ವಿರುದ್ಧ ಪ್ರತಾಪ್ ಆಕ್ರೋಶ
ಮೈಸೂರು: ನನ್ನನ್ನು ಮುಗಿಸಲು ಎಲ್ಲ ಪ್ರಯತ್ನ ಮಾಡುತ್ತಿದ್ದೀರಿ. ಕೊನೆಗೆ ನನ್ನ ಜೀವ ತೆಗೆಯಬಹುದು ಅಷ್ಟೆ. ನನ್ನ ತಮ್ಮನನ್ನು ಸಿಕ್ಕಿಸಿ ಹಾಕಿದ್ದೀರಿ.. ಬೇಕಿದ್ದರೆ ನನ್ನ ವಯಸ್ಸಾದ ಅಮ್ಮ ಇದ್ದಾರೆ, ತಂಗಿ ಇದ್ದಾಳೆ, ಅವರನ್ನೂ ಅರೆಸ್ಟ್ ಮಾಡ್ಸಿ ಸರ್.. ನಿಮಗೆ ನಿಮ್ಮ ಮಗ ಎಂಪಿ ಆಗಬೇಕು ಅಷ್ಟೇ ಅಲ್ವಾ?; ಹೀಗೆಂದು ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಮುಂದೆ ಭಾವುಕರಾಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ ಮೈಸೂರು ಸಂಸದ ಪ್ರತಾಪ್ ಸಿಂಹ (MP Pratapsimha). ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : Wood Smuggling: ರಾಜಕೀಯ ಷಡ್ಯಂತ್ರದಿಂದ ನನ್ನ ಬಂಧನ; ಟೈಂ ಬರಲಿ ಎಲ್ಲವನ್ನೂ ಹೇಳುತ್ತೇನೆಂದ ವಿಕ್ರಮ್ ಸಿಂಹ
ಈ ಸುದ್ದಿಯನ್ನೂ ಓದಿ : Wood Smuggling: ವಿಕ್ರಮ್ ಸಿಂಹ ಕೇಸ್‌ನಲ್ಲಿ ಕಾನೂನು ಪ್ರಕಾರ ಕ್ರಮ: ಸಿಎಂ ಸಿದ್ದರಾಮಯ್ಯ
3. KS Eshwarappa: ದೇಗುಲ ಒಡೆದು ಮಸೀದಿ ಕಟ್ಟಿದ್ರೆ ಒಂದನ್ನೂ ಉಳಿಸಲ್ಲ, ಹಿಂದುಗಳು ಒಡೆದು ಹಾಕ್ತಾರೆ: ಈಶ್ವರಪ್ಪ
ಚಿಕ್ಕೋಡಿ: ಮುಸ್ಲಿಮರು ಎಲ್ಲೆಲ್ಲಿ ದೇವಸ್ಥಾನ (Hindu Temple) ಒಡೆದು ಮಸೀದಿ ನಿರ್ಮಿಸಿದ್ದೀರೋ ಮರ್ಯಾದೆಯಿಂದ ಮಸೀದಿಗಳನ್ನು (mosque) ವಾಪಸ್ ತೆಗೆದುಕೊಳ್ಳಿ. ಇಲ್ಲವಾದಲ್ಲಿ ಹಿಂದು ಸಮಾಜ ಮಸೀದಿಗಳನ್ನು ಒಡೆದು ಪುಡಿ ಪುಡಿ ಮಾಡುತ್ತದೆ ಎಂದು ಮಾಜಿ ಡಿಸಿಎಂ ಹಾಗೂ ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ (KS Eshwarappa) ಪ್ರಚೋದನಾಕಾರಿ ಭಾಷಣ ಮಾಡಿದ್ದು, ವಿವಾದಕ್ಕೀಡಾಗಿದೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.
4. ಶೀಘ್ರ ಬಿಜೆಪಿ ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳ ನೇಮಕ: ಬಿ.ವೈ. ವಿಜಯೇಂದ್ರ
ಬಾಗಲಕೋಟೆ: ಅತಿ ಶೀಘ್ರದಲ್ಲೇ ಜಿಲ್ಲೆಗಳ ಅಧ್ಯಕ್ಷರು (BJP District Presidents) ಮತ್ತು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. ನಾನು ಬಿಜೆಪಿ ರಾಜ್ಯಾಧ್ಯಕ್ಷನಾದ ಬಳಿಕ ಮೊದಲು ಮಾಡಿದ ಕೆಲಸವೇ ಬೂತ್ ಅಧ್ಯಕ್ಷರ (BJP Booth President) ಮನೆಗೆ ಭೇಟಿ ನೀಡಿದ್ದಾಗಿತ್ತು. ಬೂತ್ ಅಧ್ಯಕ್ಷರ ಮನೆಗೆ ಭೇಟಿ ನೀಡುವ ಉದ್ದೇಶ ಹಾಗೂ ಪರಿಪಾಠವನ್ನು ಬೆಳೆಸಿಕೊಂಡಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಹೇಳಿದರು. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.
5.New Year 2024: ಹಿಂದೂಗಳ ಹೊಸ ವರ್ಷಾರಂಭ ಜ.1ರಿಂದ ಅಲ್ಲ! ಹಾಗಾದರೆ ಯಾವಾಗ?
ಬೆಂಗಳೂರು: 2023ಕ್ಕೆ ಗುಡ್‌ಬೈ ಹೇಳುವ ಕ್ಷಣ ಬಂದೇ ಬಿಟ್ಟಿದೆ. ವರ್ಷದ ಕೊನೆಯ ದಿನದ ಹೊಸ್ತಿಲಿನಲ್ಲಿ ನಿಂತಿದ್ದೇವೆ. ಹೊಸ ವರ್ಷಾಚರಣೆಗೆ ಎಲ್ಲೆಡೆ ಭರದ ಸಿದ್ಧತೆ ನಡೆಯುತ್ತಿದೆ (New Year 2024). ಆದರೆ ಹಿಂದೂ ಸಂಪ್ರದಾಯದ ಪ್ರಕಾರ ಇದು ವರ್ಷದ ಕೊನೆ ಅಲ್ಲ ಎನ್ನುವುದು ನಿಮಗೆ ಗೊತ್ತೆ? ಹಾಗಾದರೆ ಹಿಂದೂ ನಂಬಿಕೆಯ ಪ್ರಕಾರ ಹೊಸ ವರ್ಷ ಯಾವುದು? ಇದನ್ನು ಯಾವಾಗ ಆಚರಿಸಲಾಗುತ್ತದೆ? ಈ ಬಗ್ಗೆ ಧಾರ್ಮಿಕ ಗ್ರಂಥ ಏನು ಹೇಳುತ್ತದೆ? ಮುಂತಾದ ನಿಮ್ಮ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.
6. Mann Ki Baat: ಮೋದಿ ಮನ್ ಕೀ ಬಾತ್‌ನಲ್ಲಿ ಬೆಂಗಳೂರಿನ ರಿಷಭ್ ಫಿಟ್‌ನೆಸ್ ಟಿಪ್ಸ್; ಇಲ್ಲಿದೆ ಹೈಲೈಟ್ಸ್
ನವದೆಹಲಿ: ಮನ್ ಕೀ ಬಾತ್ ಸರಣಿಯ 108ನೇ, 2023ರ ಕೊನೆಯ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಫಿಟ್‌ನೆಸ್ ಹಾಗೂ ಮಾನಸಿಕ ಆರೋಗ್ಯದ ಕುರಿತು ಮಾತನಾಡಿದರು. ಅಲ್ಲದೆ, ಬೆಂಗಳೂರಿನಲ್ಲಿ ನೆಲೆಸಿರುವ, ಫಿಟ್‌ನೆಸ್ ಸ್ಟಾರ್ಟಪ್ ಆರಂಭಿಸಿರುವ ರಿಷಭ್ ಮಲ್ಹೋತ್ರಾ (Rishabh Malhotra) ಅವರು ಮನ್ ಕೀ ಬಾತ್ ಕಾರ್ಯಕ್ರಮದ ಮೂಲಕ ದೇಶದ ಜನರಿಗೆ ಸಾಂಪ್ರದಾಯಿಕವಾಗಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು, ಫಿಟ್‌ನೆಸ್ ಕಾಪಾಡುವುದು ಹೇಗೆ ಎಂಬುದರ ಕುರಿತು ಸಲಹೆ ನೀಡಿದರು. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.
7. Finance Commission: 16ನೇ ಹಣಕಾಸು ಆಯೋಗ ರಚನೆ, ಅರವಿಂದ್ ಪನಗಾರಿಯಾ ಅಧ್ಯಕ್ಷ
ನವದೆಹಲಿ: 16ನೇ ಹಣಕಾಸು ಆಯೋಗ (16th Finance Commission) ರಚಿಸಿರುವ ಕೇಂದ್ರ ಸರ್ಕಾರವು (Central Government), ನೀತಿ ಆಯೋಗದ (Niti Ayog) ಮಾಜಿ ಉಪಾಧ್ಯಕ್ಷ ಅರವಿಂದ್ ಪನಗಾರಿಯಾ (Arvind Panagariya) ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ. 2026 ಮತ್ತು 2031ರ ನಡುವಿನ ಐದು ವರ್ಷಗಳ ಅವಧಿಯನ್ನು ಒಳಗೊಂಡಿರುವ ಆಯೋಗವು ತನ್ನ ವರದಿಯನ್ನು 2025ರ ಅಕ್ಟೋಬರ್ 31ರೊಳಗೆ ನೀಡಲಿದೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.
8. ಭಾರತ ವಿರೋಧಿ ಕೃತ್ಯಕ್ಕೆ ತಕ್ಕ ಶಾಸ್ತಿ; ಹುರ‍್ರಿಯತ್ ಸಂಘಟನೆ ನಿಷೇಧಿಸಿದ ಕೇಂದ್ರ ಸರ್ಕಾರ
ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಕೇಂದ್ರ ಸರ್ಕಾರವು ಮತ್ತೊಂದು ಪ್ರತ್ಯೇಕವಾದಿ ಸಂಘಟನೆಯನ್ನು ನಿಷೇಧಿಸಿದೆ. ಭಾರತ ವಿರೋಧಿ ಚಟುವಟಿಕೆಗಳಿಗೆ ಪ್ರೇರೇಪಣೆ ನೀಡಿದ ಆರೋಪದಲ್ಲಿ ಕೇಂದ್ರ ಸರ್ಕಾರವು (Central Government) ಜಮ್ಮು-ಕಾಶ್ಮೀರದ ತೆಹ್ರೀಕ್-ಎ-ಹುರ‍್ರಿಯತ್ (Tehreek-e-Hurriyat) ಪ್ರತ್ಯೇಕವಾದಿ ಸಂಘಟನೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಕಣಿವೆ ಪ್ರತ್ಯೇಕವಾದಿ ಸೈಯದ್ ಅಲಿ ಶಾ ಗೀಲಾನಿ ಸ್ಥಾಪಿಸಿದ ತೆಹ್ರೀಕ್-ಎ-ಹುರ‍್ರಿಯತ್‌ಅನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿಯಲ್ಲಿ ನಿಷೇಧಿಸಲಾಗಿದೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.
9. Virat Kohli : ವರ್ಷದ ಕ್ರಿಕೆಟ್ ತಂಡದಲ್ಲಿ ವಿರಾಟ್ ಕೊಹ್ಲಿ, ಸ್ಟ್ರೀವ್ ಸ್ಮಿತ್ಗೆ ಸ್ಥಾನವಿಲ್ಲ!
ನವದೆಹಲಿ: ಆಧುನಿಕ ಕಾಲದ ದಂತಕಥೆಗಳಾದ ವಿರಾಟ್ ಕೊಹ್ಲಿ ಮತ್ತು ಸ್ಟೀವ್ ಸ್ಮಿತ್ ಅವರು ಸಾಂಪ್ರದಾಯಿಕ ಕ್ರಿಕೆಟ್ ಮಾದರಿಯಲ್ಲಿ ಎಲ್ಲರಿಗಿಂತಲೂ ಶ್ರೇಷ್ಠ ಆಟಗಾರರು. ಕಳೆದ 12 ತಿಂಗಳುಗಳ ಕಾಲ ಅತ್ಯುತ್ತಮ ರೀತಿಯಲ್ಲಿ ಕ್ರಿಕೆಟ್ ಆಡಿದ್ದಾರೆ ಅವರು. ಆದರೆ, ಅವರಿಬ್ಬರೂ ಕ್ರಿಕೆಟ್ ಆಸ್ಟ್ರೇಲಿಯಾ ಪ್ರಕಟಿಸಿರುವ ವರ್ಷದ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದಿಲ್ಲ. ಭಾರತದ ಶ್ರೇಷ್ಠ ಆಟಗಾರ ಕೊಹ್ಲಿ ಎರಡು ಶತಕಗಳನ್ನು ಬಾರಿಸಿದರೆ, ಆಸೀಸ್ ಸ್ನೇಹಿತ ಸ್ಮಿತ್ ಮೂರು ಶತಕಗಳನ್ನು ಗಳಿಸಿದ್ದಾರೆ. ಸಿಎ ವರ್ಷದ ಗೌರವಾನ್ವಿತ ಟೆಸ್ಟ್ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ನೀಡಿಲ್ಲ ಎಂಬುದು ಚರ್ಚೆಯ ಸಂಗತಿಯಾಗಿದೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.
10. ಮಕ್ಕಳ ಜತೆ ಆಟ, ಹಿರಿಯರ ಜತೆ ಪ್ರೀತಿ; ಮೊಬೈಲ್ ನೋಡುತ್ತೆ ಈ ಕೋತಿ! ವಿಡಿಯೊ ಇದೆ!
ದಾವಣಗೆರೆ : ಕೋತಿ ಪ್ರೀತಿ (Monkey love) ಎಂದರೆ ಹೇಗಿರುತ್ತದೆ ಎಂದು ತಿಳಿಯಬೇಕು ಅಂತಿದ್ದರೆ ನೀವು ದಾವಣಗೆರೆಯ ಚನ್ನಗಿರಿ (Davanagere News) ತಾಲೂಕಿನ ಬೆಳ್ಳಿಗನೂಡು ಗ್ರಾಮಕ್ಕೆ ಬರಬೇಕು. ಇಲ್ಲೊಂದು ಕೋತಿ ಮಕ್ಕಳ ಜತೆ ಮಕ್ಕಳಂತೆ ಆಟವಾಡುತ್ತದೆ (Monkey play with children), ಹಿರಿಯರ ಜತೆ ಅತ್ಯಂತ ಪ್ರೀತಿಯಿಂದ ನಡೆದುಕೊಳ್ಳುತ್ತದೆ. ಜತೆಗೆ ಯುವಕರ ಕೈಲಿ ಮೊಬೈಲ್ ಕಂಡರೆ ನಂಗೂ ತೋರ್ಸು ಎಂದು ಕಟ್ಟುಬೀಳುತ್ತೆ. ಪೂರ್ಣ ಸುದ್ದಿಯನ್ನು ಓದಲು ಈ ಲಿಂಕ್ ಕ್ಲಿಕ್ ಮಾಡಿ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ: