1. Power Point with HPK : ವಿಧಾನಸೌಧದಲ್ಲಿ ವರ್ಗಾವಣೆ ದಂಧೆ: ಬಸವರಾಜ ರಾಯರೆಡ್ಡಿ ಸ್ಫೋಟಕ ಹೇಳಿಕೆ
ಬೆಂಗಳೂರು: ಕರ್ನಾಟಕ ರಾಜಕೀಯದಲ್ಲಿ ಶಿಸ್ತು ಎಂಬುದಿಲ್ಲ. ವಿಧಾನಸೌಧವನ್ನು ನೋಡಿದರೆ ಮಾರ್ಕೆಟ್ ಇದ್ದ ಹಾಗೆ ಕಾಣುತ್ತದೆ. ಅಲ್ಲಿಗೆ ಅಷ್ಟು ಜನ ಯಾಕೆ ಬರುತ್ತಾರೆಂದು ಗೊತ್ತಿಲ್ಲ. ಒಳಗೆ ಹೋಗಬೇಕಾದರೆ ಎಲ್ಲವನ್ನೂ ಸರಿಸಿಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ಯಾವುದೇ ಸರ್ಕಾರ ಇರಲಿ ಹೆಚ್ಚಾಗಿ ಅಲ್ಲಿ ವರ್ಗಾವಣೆಯ ಕೆಲಸ ನಡೆಯುತ್ತದೆ. ಒಟ್ಟಿನಲ್ಲಿ ಅಲ್ಲಿ ವರ್ಗಾವಣೆಯೇ ಒಂದು ದಂಧೆಯಾಗಿಬಿಟ್ಟಿದೆ (Transfer racket) ಎಂದು ಹಿರಿಯ ರಾಜಕಾರಣಿ, ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ (MLA Basavaraj Rayareddy) ಅವರು ಪವರ್ ಪಾಯಿಂಟ್ ವಿತ್ ಎಚ್‌ಪಿಕೆ (Power Point with HPK) ಸಂದರ್ಶನದಲ್ಲಿ ಹೇಳಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : Power Point with HPK : ಸಿದ್ದರಾಮಯ್ಯ ಕೈ ಕಟ್ಟಿದೆ, ಸ್ವತಂತ್ರ ನಿರ್ಧಾರ ಸಾಧ್ಯವಾಗುತ್ತಿಲ್ಲ: ಬಸವರಾಜ ರಾಯರೆಡ್ಡಿ
2. NIA Raid: ಪಿಎಫ್‌ಐ ಉಗ್ರ ಚಟುವಟಿಕೆ ಶಂಕೆ; ಐದು ರಾಜ್ಯಗಳ 14 ಕಡೆ ಎನ್‌ಐಎ ದಾಳಿ
ಬೆಂಗಳೂರು: ನಿಷೇಧಿತ ಪಿಎಫ್‌ಐ ಸಂಘಟನೆ ಉಗ್ರ ಚಟುವಟಿಕೆ ಹಾಗೂ ಇನ್ನಿತರ ಅಕ್ರಮ ಚಟುವಟಿಕೆ ಭಾಗಿಯಾಗಿರುವ ಶಂಕೆ ಹಿನ್ನೆಲೆಯಲ್ಲಿ ಎನ್‌ಐಎ ಅಧಿಕಾರಿಗಳು ಐದು ರಾಜ್ಯಗಳ 14 ಕಡೆ ಏಕಕಾಲಕ್ಕೆ ದಾಳಿ (NIA Raid) ನಡೆಸಿ ಪರಿಶೀಲನೆ ನಡೆಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ : NIA Raid: ಪಿಎಫ್‌ಐಗೆ ಫಂಡಿಂಗ್; ದ.ಕನ್ನಡದ 3 ಕಡೆ ಎನ್‌ಐಎ ರೇಡ್, ಧಾರ್ಮಿಕ ಶಿಕ್ಷಕನ ಮನೆಯಲ್ಲಿ ಶೋಧ
3 . Cow slaughter : ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆದರೆ ಹುಷಾರ್; ಸರ್ಕಾರದ ವಿರುದ್ಧ ಸಿಡಿದ ಸಂತರು!
ಬೆಂಗಳೂರು/ತುಮಕೂರು: ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ತರಲಾಗಿದ್ದ ಗೋಹತ್ಯೆ ನಿಷೇಧ ಕಾಯಿದೆ (Prevention of Cow Slaughter Act) ಹಾಗೂ ಮತಾಂತರ ನಿಷೇಧ ಕಾಯಿದೆ (Anti conversion law) ಪರವಾಗಿ ಈಗ ರಾಜ್ಯದ ವಿವಿಧ ಮಠ ಮಾನ್ಯಗಳ ಸಾಧು-ಸಂತರು ನಿಂತಿದ್ದಾರೆ. ಈಗಿನ ಕಾಂಗ್ರೆಸ್ ಸರ್ಕಾರ ಅದನ್ನು ರದ್ದು ಮಾಡುವ ಪ್ರಸ್ತಾಪ ಮಾಡಿದ್ದಕ್ಕೆ ತೀವ್ರ ಆಕ್ರೋಶಗೊಂಡಿರುವ ಸ್ವಾಮೀಜಿಗಳು ಬೆಂಗಳೂರು ಹಾಗೂ ತುಮಕೂರಿನಲ್ಲಿ ಪ್ರತ್ಯೇಕವಾಗಿ ಸಮಾವೇಶ ನಡೆಸಿ, ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ. ಗೋವು ಭಾರತೀಯ ಸಂಸ್ಕೃತಿಯ ಪ್ರತೀಕ. ಇದರ ಹತ್ಯೆ (Cow slaughter) ಸಲ್ಲದು. ಧರ್ಮ, ಸಂಸ್ಕೃತಿಯನ್ನು ಕಾಪಾಡಬೇಕು. ಇಲ್ಲದಿದ್ದರೆ ಮುಂದಿನ ಪರಿಣಾಮವನ್ನು ಎದುರಿಸಬೇಕಾದೀತು ಎಂಬ ಎಚ್ಚರಿಕೆ ಮಾದರಿ ಸಲಹೆಯನ್ನು ಸರ್ಕಾರಕ್ಕೆ ನೀಡಲಾಗಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
4. Independence Day 2023: ತಿರಂಗಾವನ್ನು ಜಾಲತಾಣಗಳ ಡಿಪಿ ಇಟ್ಟು ದೇಶಪ್ರೇಮ ಮೆರೆಯಲು ಮೋದಿ ಕರೆ
ನವದೆಹಲಿ: ದೇಶಕ್ಕೆ ದೇಶವೇ 76ನೇ ಸ್ವಾತಂತ್ರ್ಯ ದಿನಾಚರಣೆಯ (Independence Day 2023) ಸಂಭ್ರಮಕ್ಕೆ ಕಾಲಿಡುತ್ತಿದೆ. ಆಗಸ್ಟ್ 15ರಂದು ದೇಶಾದ್ಯಂತ ಸ್ವಾತಂತ್ರ್ಯ ದಿನ ಆಚರಿಸಲಾಗುತ್ತದೆ. ಅದರಲ್ಲೂ, ಕೆಂಪು ಕೋಟೆಯಲ್ಲಿ ನಡೆಯುವ ಅದ್ಧೂರಿ ಕಾರ್ಯಕ್ರಮಕ್ಕೆ ದೆಹಲಿ ಸಿದ್ಧವಾಗುತ್ತಿದೆ. ಇದರ ಬೆನ್ನಲ್ಲೇ, ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಪ್ರತಿಯೊಬ್ಬರೂ ತಿರಂಗಾವನ್ನು ಸಾಮಾಜಿಕ ಜಾಲತಾಣಗಳ ಪ್ರೊಫೈಲ್ ಫೋಟೊವನ್ನಾಗಿಸಿ ಎಂದು ಕರೆ ನೀಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. Canada Hindu Temple: ಕೆನಡಾದಲ್ಲಿ ಮತ್ತೊಂದು ಹಿಂದು ದೇಗುಲ ಮೇಲೆ ಖಲಿಸ್ತಾನಿಗಳ ದಾಳಿ; ಖಂಡಿಸಿದ ಹಿಂದುಗಳು
ಒಟ್ಟಾವ: ಕೆನಡಾದಲ್ಲಿ ಹಿಂದುಗಳ ದೇವಾಲಯಗಳ ಮೇಲೆ ಖಲಿಸ್ತಾನಿ ಉಗ್ರರ ದಾಳಿ ಮುಂದುವರಿದಿದೆ. ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿರುವ ಹಿಂದು ದೇವಾಲಯದ ಮೇಲೆ ಶನಿವಾರ ರಾತ್ರಿ (ಆಗಸ್ಟ್ 12) ಖಲಿಸ್ತಾನಿ ಉಗ್ರರು (Khalistan Terrorists) ದಾಳಿ (Canada Hindu Temple) ಮಾಡಿ, ದೇವಾಲಯಕ್ಕೆ ಹಾನಿಗೊಳಿಸಿದ್ದಾರೆ. ಹಾಗೆಯೇ, ಭಾರತದ ಕಾನ್ಸುಲೇಟ್ ಅಧಿಕಾರಿಗಳ ಪೋಸ್ಟರ್‌ಗಳನ್ನು ಅಂಟಿಸುವ ಮೂಲಕ ಉದ್ಧಟತನ ಮೆರೆದಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. OpenAI Bankruptcy: ಎಲ್ಲರ ಉದ್ಯೋಗ ಕಸಿಯಲಿದೆ ಎಂದ ಚಾಟ್‌ಜಿಪಿಟಿಯೇ ದಿವಾಳಿ; ವರದಿ ಹೇಳೋದೇನು?
7. Actor Upendra: ಮಾತನಾಡುವಾಗ ʼಬುದ್ಧಿವಂತʼನ ಎಡವಟ್ಟು; ಉಪೇಂದ್ರ ಮೇಲೆ ಕೇಸ್ ಬಿತ್ತು! ದೂರಲ್ಲೇನಿದೆ?
8 .Weather Report : ಕೂಲ್ ಇದ್ದ ಬೆಂಗಳೂರು ಈಗ ಹಾಟ್; ಸೋಮವಾರ ಇಲ್ಲಷ್ಟೇ ಮಳೆ
9. Red Card : ಫುಟ್ಬಾಲ್ನಂತೆ ಕ್ರಿಕೆಟ್ಗೂ ಬಂತು ರೆಡ್ ಕಾರ್ಡ್ ರೂಲ್ಸ್!
10. Viral News: ಇವರು ಅತಿ ಉದ್ದದ ಗಡ್ಡಧಾರಿ ಮಹಿಳೆ… ದಾಖಲಾಯಿತು ಗಿನ್ನೆಸ್ ರೆಕಾರ್ಡ್!
ಮತ್ತಷ್ಟು ವೈರಲ್ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.