ರೋಹಿತ್ ಶರ್ಮಾ (ಆರಂಭಿಕ ಬ್ಯಾಟರ್)
ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಏಪ್ರಿಲ್ 30, 1987 ರಂದು ಮಹಾರಾಷ್ಟ್ರದ ನಾಗ್ಪುರದಲ್ಲಿ ಜನಿಸಿದರು. ಟಿ 20 ವಿಶ್ವಕಪ್ 2007 ಮತ್ತು ಚಾಂಪಿಯನ್ಸ್ ಟ್ರೋಫಿ 2013 ರಲ್ಲಿ ತಮ್ಮ ದೇಶದೊಂದಿಗೆ ಎರಡು ಐಸಿಸಿ ಪ್ರಶಸ್ತಿಗಳನ್ನು ಗೆದ್ದಿರುವ ಸ್ಟಾರ್ ಆಟಗಾರ ಅವರು ಟಿ20 ಮತ್ತು ಏಕದಿನ ಸ್ವರೂಪಗಳಲ್ಲಿ ಹಲವಾರು ವಿಶ್ವ ದಾಖಲೆಗಳನ್ನು ಹೊಂದಿದ್ದಾರೆ. ಬಲಗೈ ಬ್ಯಾಟ್ಸ್‌ಮನ್ 2007ರಲ್ಲಿ ಬೆಲ್ಫಾಸ್ಟ್ನಲ್ಲಿ ಐರ್ಲೆಂಡ್ ವಿರುದ್ಧ ಏಕದಿನ ಮಾದರಿಗೆ ಪದಾರ್ಪಣೆ ಮಾಡಿದರು. ಭಾರತಕ್ಕಾಗಿ ನಿಯಮಿತವಾಗಿ ಕಾಣಿಸಿಕೊಂಡರೂ, ರೋಹಿತ್ 2011 ರ ವಿಶ್ವಕಪ್ನ ಅಂತಿಮ 15ರಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು.
ರೋಹಿತ್ ಏಕದಿನ ಸ್ವರೂಪದಲ್ಲಿ ಹಲವಾರು ದಾಖಲೆಗಳನ್ನು ಹೊಂದಿದ್ದಾರೆ, ಅದು ಬಹುತೇಕ ಮುರಿಯಲಾಗದಂತೆ ತೋರುತ್ತದೆ. 36ರ ಹರೆಯದ ಧೋನಿ ಏಕದಿನ ಪಂದ್ಯಗಳಲ್ಲಿ ಮೂರು ದ್ವಿಶತಕಗಳನ್ನು ಬಾರಿಸಿದ್ದಾರೆ ಮತ್ತು ಮೂರನೇ ಅತಿ ಹೆಚ್ಚು ಸಿಕ್ಸರ್ (292) ಬಾರಿಸಿದ ದಾಖಲೆಯನ್ನೂ ಹೊಂದಿದ್ದಾರೆ. ಸಚಿನ್ ತೆಂಡೂಲ್ಕರ್ (49) ಮತ್ತು ವಿರಾಟ್ ಕೊಹ್ಲಿ (47) ನಂತರ ಟೀಮ್ ಇಂಡಿಯಾ ಪರ ಅತಿ ಹೆಚ್ಚು ಶತಕಗಳನ್ನು (30) ಗಳಿಸಿದ್ದಾರೆ. 2019ರ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ 5 ಶತಕಗಳನ್ನು ಬಾರಿಸಿದ್ದರು. 81.00 ಸರಾಸರಿಯಲ್ಲಿ 648 ರನ್ ಗಳಿಸಿದ್ದರು.
ಒಡಿಐ ಬ್ಯಾಟಿಂಗ್ ಸಾಧನೆ: 251 (ಪಂದ್ಯ), 243 (ಇನಿಂಗ್ಸ್), 10112 (ರನ್), 48.85 (ಸರಾಸರಿ), 90.52 (ಸ್ಟ್ರೈಕ್ರೇಟ್), 264 (ಗರಿಷ್ಠ ಸ್ಕೋರ್) ,52 (ಅರ್ಧ ಶತಕ), 30 (ಶತಕ)
ವಿರಾಟ್ ಕೊಹ್ಲಿ (ಮೂರನೇ ಕ್ರಮಾಂಕದ ಬ್ಯಾಟರ್)
ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ 1988ರ ನವೆಂಬರ್ 5ರಂದು ದೆಹಲಿಯಲ್ಲಿ ಜನಿಸಿದ್ದಾರೆ. ಕೊಹ್ಲಿ ಆಧುನಿಕ ಯುಗದ ಶ್ರೇಷ್ಠ ಬ್ಯಾಟರ್. 2008ರಲ್ಲಿ ಕೌಲಾಲಂಪುರದಲ್ಲಿ ನಡೆದ ಅಂಡರ್ -19 ವಿಶ್ವಕಪ್‌ನಲ್ಲಿ ತಂಡವನ್ನು ಮುನ್ನಡೆಸುವ ಮೂಲಕ ಮುನ್ನೆಲೆಗೆ ಬಂದರು. ಬಲಗೈ ಬ್ಯಾಟ್ಸ್‌ಮನ್ 2008 ರಲ್ಲಿ ಡಂಬುಲ್ಲಾದಲ್ಲಿ ಶ್ರೀಲಂಕಾ ವಿರುದ್ಧ ಏಕದಿನ ಪಂದ್ಯದಲ್ಲಿ ಆಡುವ ಮೂಲಕ ಟೀಮ್ ಇಂಡಿಯಾ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಅವರು ತಮ್ಮ ಚೊಚ್ಚಲ ಪಂದ್ಯದಲ್ಲಿ 22 ಎಸೆತಗಳಲ್ಲಿ ಕೇವಲ 12 ರನ್ ಗಳಿಸುವಲ್ಲಿ ಯಶಸ್ವಿಯಾದರು 2009ರಲ್ಲಿ ಕೋಲ್ಕೊತಾದಲ್ಲಿ ಶ್ರೀಲಂಕಾ ವಿರುದ್ಧ 114 ಎಸೆತಗಳಲ್ಲಿ 107 ರನ್ ಬಾರಿಸಿದ್ದರು. ಅದರ ನಂತರ, ಅವರು 50 ಓವರ್ಗಳ ಸ್ವರೂಪದಲ್ಲಿ ಭಾರತೀಯ ತಂಡದ ಪ್ರಮುಖ ಮತ್ತು ನಿರ್ಣಾಯಕ ಸದಸ್ಯರಾದರು. ಕೊಹ್ಲಿ ನಂತರ ಎಲ್ಲ ಸ್ವರೂಪಗಳಲ್ಲಿ ಸ್ಥಿರ ಪ್ರದರ್ಶನ ನೀಡುವ ಮೂಲಕ ಕ್ರಿಕೆಟ್ ಕ್ಷೇತ್ರವನ್ನು ಆಳಲು ಪ್ರಾರಂಭಿಸಿದರು. ಇಂದೂ ಕ್ರಿಕೆಟ್ ಆಟದ ದಂತಕಥೆಗಳಲ್ಲಿ ಕೊಹ್ಲಿ ಒಬ್ಬರು. ಕಪಿಲ್ ದೇವ್, ಸುನಿಲ್ ಗವಾಸ್ಕರ್ ಮತ್ತು ಸಚಿನ್ ತೆಂಡೂಲ್ಕರ್ ಅವರಂತಹ ಶ್ರೇಷ್ಠರ ನಂತರ ಭಾರತ ಕಂಡ ಅತ್ಯುತ್ತಮ ಆಟಗಾರರಾಗಿದ್ದಾರೆ. ಸಚಿನ್ ತೆಂಡೂಲ್ಕರ್ (49) ನಂತರ ದೆಹಲಿ ಮೂಲದ ಆಟಗಾರ ಎರಡನೇ ಅತಿ ಹೆಚ್ಚು ಏಕದಿನ ಶತಕಗಳನ್ನು (47) ಬಾರಿಸಿದ್ದಾರೆ. ಒಡಿಐನಲ್ಲಿ 13083 ರನ್ ಗಳಿಸಿರುವ ಕೊಹ್ಲಿ ಸಚಿನ್ ತೆಂಡೂಲ್ಕರ್ (18426), ಕುಮಾರ ಸಂಗಕ್ಕಾರ (14234), ರಿಕಿ ಪಾಂಟಿಂಗ್ (13704) ಮತ್ತು ಸನತ್ ಜಯಸೂರ್ಯ (13430) ನಂತರದ ಸ್ಥಾನದಲ್ಲಿದ್ದಾರೆ.
ಕೊಹ್ಲಿಯ ಒಡಿಐ ಬ್ಯಾಟಿಂಗ್ ರೆಕಾರ್ಡ್: 281 (ಪಂದ್ಯ) , 269 (ಇನಿಂಗ್ಸ್), 13083 (ರನ್), 57.38 (ಸರಾಸರಿ), 93.78 (ಸ್ಟ್ರೈಕ್ರೇಟ್), 183 (ಗರಿಷ್ಠ), 47 (ಶತಕ), 66 (ಅರ್ಧ ಶತಕ)
ಶುಭ್‌ಮನ್ ಗಿಲ್ (ಆರಂಭಿಕ ಬ್ಯಾಟರ್)
ಶುಭ್‌ಮನ್ ಗಿಲ್ ಸೆಪ್ಟೆಂಬರ್ 8, 1999 ರಂದು ಪಂಜಾನ್ನ ಫಾಜಿಲ್ಕಾದಲ್ಲಿ ಜನಿಸಿದ್ದಾರೆ. 2018 ರಲ್ಲಿ ನಡೆದ ಐಸಿಸಿ ಅಂಡರ್ -19 ಕ್ರಿಕೆಟ್ ವಿಶ್ವಕಪ್‌ನಲ್ಲಿ ನೀಡಿದ ಅದ್ಭುತ ಪ್ರದರ್ಶನದ ನಂತರ ಗಿಲ್ ಬೆಳಕಿಗೆ ಬಂದರು. ಅವರು 2019 ರಲ್ಲಿ ಸೆಡ್ಡನ್ ಪಾರ್ಕ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದಾರೆ. 2021 ರವರೆಗೆ ಗಿಲ್ ಕೇವಲ 3 ಪಂದ್ಯಗಳನ್ನು ಆಡಿದ್ದರು. 2022ರಲ್ಲಿ 12 ಏಕ ದಿನ ಇನಿಂಗ್ಸ್‌ಗಳಲ್ಲಿ 70.88 ಸರಾಸರಿಯಂತೆ 638 ರನ್ ಗಳಿಸಿದ್ದಾರೆ.
ಇದನ್ನೂ ಓದಿ : ICC World Cup 2023 : ಹಿಮಾಚಲ ಪ್ರದೇಶದಲ್ಲಿ ಆಡಿದರೆ ಕೈಕಾಲು ಮುರಿತ ಖಚಿತ; ಹಲವರ ಆತಂಕ
ಗಿಲ್ 2023ರ ಕ್ರಿಕೆಟ್ ಋತುವನ್ನು ಅನ್ನು ಶ್ರೀಲಂಕಾ ವಿರುದ್ಧ ಅದ್ಭುತ ಶತಕ ಮತ್ತು ನ್ಯೂಜಿಲೆಂಡ್ ವಿರುದ್ಧ ದ್ವಿಶತಕದೊಂದಿಗೆ ಪ್ರಾರಂಭಿಸಿದ್ದಾರೆ. ಈ ಸಾಧನೆ ಮಾಡಿದ ಅತ್ಯಂತ ಕಿರಿಯ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಐಪಿಎಲ್ 2023 ರಲ್ಲಿ ಅವರು 17 ಇನಿಂಗ್ಸ್‌ಗಳಲ್ಲಿ 59.33 ಸರಾಸರಿಯಲ್ಲಿ 890 ರನ್ ಗಳಿಸಿದ್ದಾರೆ. ವಿಶ್ವಕಪ್ ಆರಂಭಕ್ಕೂ ಮುನ್ನ 2023ರಲ್ಲಿ ಏಕದಿನ ಕ್ರಿಕೆಟ್ನಲ್ಲಿ 1000 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಏಕೈಕ ಆಟಗಾರ ಗಿಲ್. 35 ಏಕದಿನ ಪಂದ್ಯಗಳಲ್ಲಿ 66.1 ಸರಾಸರಿಯಲ್ಲಿ 1917 ರನ್ ಗಳಿಸಿದ್ದಾರೆ, ಇದರಲ್ಲಿ ಒಂಬತ್ತು ಅರ್ಧಶತಕಗಳು ಮತ್ತು ಆರು ಶತಕಗಳು ಸೇರಿವೆ.
ಗಿಲ್ ಏಕದಿನ ಬ್ಯಾಟಿಂಗ್ ರೆಕಾರ್ಡ್ : 35 (ಪಂದ್ಯ) 35 (ಇನಿಂಗ್ಸ್), 1917 (ರನ್), 66.10 (ಸರಾಸರಿ), 102.84 (ಸ್ಟ್ರೈಕ್ರೇಟ್), 9 (ಅರ್ಧ ಶತಕ), 6 (ಶತಕ), 208 (ಗರಿಷ್ಠ ರನ್)
ಹಾರ್ದಿಕ್ ಪಾಂಡ್ಯ (ಆಲ್ರೌಂಡರ್)
ಆಧುನಿಕ ಯುಗದ ಅತ್ಯುತ್ತಮ ವೈಟ್-ಬಾಲ್ ಆಲ್ರೌಂಡರ್ಗಳಲ್ಲಿ ಒಬ್ಬರಾಗಿರುವ ಹಾರ್ದಿಕ್ ಪಾಂಡ್ಯ ಗುಜರಾತ್ನಲ್ಲಿ ಅಕ್ಟೋಬರ್ 11, 1993 ರಂದು ಜನಿಸಿದರು. ಐಪಿಎಲ್ 2015 ರಲ್ಲಿ ಮುಂಬೈ ಇಂಡಿಯನ್ಸ್ ಪರ ಪ್ರಮುಖ ಪಾತ್ರ ವಹಿಸಿದ ನಂತರ ಅವರು ಬೆಳಕಿಗೆ ಬಂದರು. ಪಾಂಡ್ಯ 2016 ರಲ್ಲಿ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಏಕದಿನ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದರು. ಅವರು ಒಟ್ಟಾರೆ 82 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಅವರು 60 ಇನ್ನಿಂಗ್ಸ್ಗಳಲ್ಲಿ 33.80 ಸರಾಸರಿಯಲ್ಲಿ 1758 ರನ್ ಗಳಿಸಿದ್ದಾರೆ, ಆದರೆ ಅವರು 36.03 ಸರಾಸರಿಯಲ್ಲಿ 79 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರು ಮೂರು ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದಾರೆ. ಎರಡು ಗೆಲುವು ಮತ್ತು ಒಂದು ಸೋಲು ಪಡೆದಿದ್ದಾರೆ. ಟಿ 20 ಯಲ್ಲಿ ಅವರು 16 ಪಂದ್ಯಗಳನ್ನು ಮುನ್ನಡೆಸಿದ್ದಾರೆ. ಅಲ್ಲಿ ಅವರು 10 ಪಂದ್ಯಗಳನ್ನು ಗೆದ್ದಿದ್ದಾರೆ ಮತ್ತು ಐದು ಪಂದ್ಯಗಳನ್ನು ಸೋತಿದ್ದಾರೆ, ಒಂದು ಪಂದ್ಯ ಸಮಬಲಗೊಂಡಿದೆ.
ಒಡಿಐ ಬ್ಯಾಟಿಂಗ್ ರೆಕಾರ್ಡ್: 82 (ಪಂದ್ಯ), 60 (ಇನಿಂಗ್ಸ್), 1758 (ರನ್), 33.81 (ಸರಾಸರಿ), 110.21 (ಸ್ಟ್ರೈಕ್ರೇಟ್), 11 (ಅರ್ಧಶತಕ), 92* (ಗರಿಷ್ಠ)
ಬೌಲಿಂಗ್ ರೆಕಾರ್ಡ್: 82 (ಪಂದ್ಯ), 76 (ಇನಿಂಗ್ಸ್), 79 (ವಿಕೆಟ್), 5.51 (ಎಕಾನಮಿ), 4/24 (ಉತ್ತಮ ಬೌಲಿಂಗ್)
ಕೆ. ಎಲ್ ರಾಹುಲ್ (ವಿಕೆಟ್ ಕೀಪರ್ ಬ್ಯಾಟರ್)
ಏಪ್ರಿಲ್ 18, 1992 ರಂದು ಕರ್ನಾಟಕದ ಬೆಂಗಳೂರಿನಲ್ಲಿ ಜನಿಸಿದ ಕೆಎಲ್ ರಾಹುಲ್ ಭಾರತೀಯ ಕ್ರಿಕೆಟ್ ತಂಡದ ಅತ್ಯಂತ ಪ್ರಭಾವಶಾಲಿ ಬ್ಯಾಟರ್ಗಳಲ್ಲಿ ಒಬ್ಬರು. 2016 ರಲ್ಲಿ ಜಿಂಬಾಬ್ವೆ ವಿರುದ್ಧ ಏಕದಿನ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದಾರೆ. 61 ಏಕದಿನ ಪಂದ್ಯಗಳನ್ನಾಡಿರುವ ಕೆಎಲ್ ರಾಹುಲ್ 47.72ರ ಸರಾಸರಿಯಲ್ಲಿ 2291 ರನ್ ಗಳಿಸಿದ್ದಾರೆ. ತಮ್ಮ ವೃತ್ತಿಜೀವನದುದ್ದಕ್ಕೂ, ಅವರು 15 ಅರ್ಧಶತಕಗಳು ಮತ್ತು ಆರು ಶತಕಗಳನ್ನು ಬಾರಿಸಿದ್ದಾರೆ. ಅವರ ಅಂಶವೆಂದರೆ ವಿಭಿನ್ನ ಬ್ಯಾಟಿಂಗ್ ಕ್ರಮಾಂಕಗಳಿಗೆ ಹೊಂದಿಕೊಳ್ಳುವುದು.
ಆರಂಭಿಕನಾಗಿ ರಾಹುಲ್ 43.57 ಸರಾಸರಿಯಲ್ಲಿ 915 ರನ್ ಗಳಿಸಿದ್ದಾರೆ ಮತ್ತು ಮೂರು ಶತಕಗಳು ಮತ್ತು ಐದು ಅರ್ಧಶತಕಗಳನ್ನು ಗಳಿಸಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ, ರಾಹುಲ್ ಅಷ್ಟೇ ಪ್ರಭಾವಶಾಲಿಯಾಗಿದ್ದಾರೆ. 32 ಇನ್ನಿಂಗ್ಸ್ಗಳಲ್ಲಿ 54.12ರ ಸರಾಸರಿಯಲ್ಲಿ 1299 ರನ್ ಗಳಿಸಿದ್ದಾರೆ. ನಾಲ್ಕನೇ ಕ್ರಮಾಂಕದ 11 ಇನಿಂಗ್ಸ್‌ಗಳಲ್ಲಿ 481 ರನ್ ಗಳಿಸಿದ್ದಾರೆ. ರಾಹುಲ್ ಹಲವಾರು ಸಂದರ್ಭಗಳಲ್ಲಿ ವಿಕೆಟ್ ಕೀಪಿಂಗ್ ಕರ್ತವ್ಯಗಳನ್ನು ಮಾಡುತ್ತಿದ್ದಾರೆ. ತಮ್ಮ ವಿಕೆಟ್ ಕೀಪಿಂಗ್ ಕರ್ತವ್ಯಗಳಲ್ಲಿ, ನಾಲ್ಕು ಸ್ಟಂಪಿಂಗ್‌ಗಳನ್ನು ದಾಖಲಿಸಿದ್ದಾರೆ ಮತ್ತು 29 ಕ್ಯಾಚ್ಗಳನ್ನು ಪಡೆದಿದ್ದಾರೆ.
ಒಡಿಐ ಬ್ಯಾಟಿಂಗ್ ಸಾಧನೆ: 61 (ಪಂದ್ಯ), 58 (ಇನಿಂಗ್ಸ್), 2291 (ರನ್), 54.12 (ಸರಾಸರಿ), 94.95 (ಸ್ಟ್ರೈಕ್ರೇಟ್), 3 (ಶತಕ), 9 (ಅರ್ಧ ಶತಕ)
ಶ್ರೇಯಸ್ ಅಯ್ಯರ್ (ಮಧ್ಯಮ ಕ್ರಮಾಂಕದ ಬ್ಯಾಟರ್)
ಶ್ರೇಯಸ್ ಅಯ್ಯರ್ ಡಿಸೆಂಬರ್ 06, 1994 ರಂದು ಮುಂಬೈನಲ್ಲಿ ಜನಿಸಿದರು. ಶ್ರೇಯಸ್ ಅಯ್ಯರ್ ಅವರ ಏಕದಿನ ವೃತ್ತಿಜೀವನದ ಒಂದು ಗಮನಾರ್ಹ ಅಂಶವೆಂದರೆ ಡಕ್ ಔಟ್ ಆಗದೆ ಸ್ಥಿರವಾಗಿ ರನ್ ಗಳಿಸುವ ಸಾಮರ್ಥ್ಯ. 42 ಇನ್ನಿಂಗ್ಸ್ಗಳಲ್ಲಿ ಒಂದು ಬಾರಿಯೂ ಅವರು ಶೂನ್ಯಕ್ಕೆ ಔಟಾಗಿಲ್ಲ.
ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಸ್ಥಿರ ಪ್ರದರ್ಶನ ನೀಡುತ್ತಿದ್ದಾರೆ. ನಾಲ್ಕನೇ ಕ್ರಮಾಂಕದಲ್ಲಿ 31 ಇನ್ನಿಂಗ್ಸ್ನಲ್ಲಿ 1159 ರನ್ ಗಳಿಸಿದ್ದಾರೆ. ವಿಶೇಷವೆಂದರೆ, ಅವರು ಈ ಸ್ಥಾನದಲ್ಲಿ 45.63 ರನ್ಗಳ ಸರಾಸರಿ ಹೊಂದಿದ್ದಾರೆ. ತಮ್ಮ ಬ್ಯಾಟಿಂಗ್ ಆರಂಭವನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸುವ ಶಕ್ತಿ ಹೊಂದಿದೆ. ಎರಡು ಶತಕಗಳು ಮತ್ತು ಐದು ಅರ್ಧಶತಕಗಳೊಂದಿಗೆ, ಅಯ್ಯರ್ ಅವರು ದೀರ್ಘ ಇನ್ನಿಂಗ್ಸ್ ಆಡಬಹುದು. 2019 ರ ವಿಶ್ವಕಪ್ ನಂತರ, ಭಾರತೀಯ ಕ್ರಿಕೆಟ್ ತಂಡವು ವಿಶ್ವಾಸಾರ್ಹ ನಾಲ್ಕನೇ ಕ್ರಮಾಂಕದ ಬ್ಯಾಟ್ಸ್‌ಮನ್‌ಗಾಗಿ ಹುಡುಕುತ್ತಿದೆ. ಹಲವಾರು ಆಯ್ಕೆಗಳನ್ನು ಪ್ರಯತ್ನಿಸಲಾಗಿದೆ. ಅಂತಿಮವಾಗಿ ಶ್ರೇಯಸ್ ಅಯ್ಯರ್ಗೆ ಅವಕಾಶ ನೀಡಲಾಗಿದೆ.
ಒಡಿಐ ಬ್ಯಾಟಿಂಗ್ ಸಾಧನೆ: 47 (ಪಂದ್ಯ), 42 (ಇನಿಂಗ್ಸ್) 1801 (ರನ್) 113* (ಗರಿಷ್ಠ) 46.17 (ಸರಾಸರಿ) 97.88 (ಸ್ಟ್ರೈಕ್ರೇಟ್) 3 (ಶತಕ) 14 (ಅರ್ಧಶತಕ)
ರವೀಂದ್ರ ಜಡೇಜಾ (ಆಲ್ರೌಂಡರ್)
ರವೀಂದ್ರ ಜಡೇಜಾ ಡಿಸೆಂಬರ್ 06, 1988 ರಂದು ಸೌರಾಷ್ಟ್ರದ ನವಗಾಮ್-ಖೇಡ್ನಲ್ಲಿ ಜನಿಸಿದರು. ಭಾರತದ ಸ್ಟಾರ್ ಆಟಗಾರ 317 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. 5897 ರನ್ ಗಳಿಸಿದ್ದಾರೆ. ಇದರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 530 ವಿಕೆಟ್ಗಳೂ ಸೇರಿವೆ. 2008ರಲ್ಲಿ ಕೌಲಾಲಂಪುರದಲ್ಲಿ ನಡೆದ ಅಂಡರ್-19 ವಿಶ್ವಕಪ್ ಹಾಗೂ 2013ರಲ್ಲಿ ಇಂಗ್ಲೆಂಡ್ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಸೇರಿದಂತೆ ಎರಡು ಐಸಿಸಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.
2009ರಲ್ಲಿ ಕೊಲಂಬೊದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಜಡೇಜಾ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಬಾಂಗ್ಲಾದೇಶದ ಶಕೀಬ್ ಅಲ್ ಹಸನ್, ಇಂಗ್ಲೆಂಡ್ನಲ್ಲಿ ಬೆನ್ ಸ್ಟೋಕ್ಸ್ ಮತ್ತು ವೆಸ್ಟ್ ಇಂಡೀಸ್ನ ಜೇಸನ್ ಹೋಲ್ಡರ್ ಅವರೊಂದಿಗೆ ಇಂದು ಕ್ರಿಕೆಟ್ ಜಗತ್ತಿನಲ್ಲಿ ಪ್ರಮುಖ ಆಲ್ರೌಂಡರ್ಗಳಲ್ಲಿ ಒಬ್ಬರೆನಿಸಿಕೊಂಡಿದ್ದಾರೆ.
ಇದನ್ನೂ ಓದಿ : ICC World Cup 2023 : ತಾಕತ್ತಿದ್ದರೆ ಔಟ್ ಮಾಡಿ; ಭಾರತದ ಸ್ಪಿನ್ ದಾಳಿಗೆ ಸವಾಲೆಸೆದ ಆಸ್ಟ್ರೇಲಿಯಾ ನಾಯಕ!
ಜಡೇಜಾ 2013 ರಲ್ಲಿ ಚಾಂಪಿಯನ್ ಟ್ರೋಫಿ ವಿಜೇತ ಟೀಮ್ ಇಂಡಿಯಾದ ಭಾಗವಾಗಿದ್ದರು. ಜಡೇಜಾ ಈಗ ಎಲ್ಲಾ ಮೂರು ಸ್ವರೂಪಗಳಲ್ಲಿ ಟೀಮ್ ಇಂಡಿಯಾದ ಕಾಯಂ ಮತ್ತು ನಿರ್ಣಾಯಕ ಸದಸ್ಯರಾಗಿದ್ದಾರೆ. ಏಕದಿನ ಕ್ರಿಕೆಟ್ನಲ್ಲಿ ಅನಿಲ್ ಕುಂಬ್ಳೆ (334) ಮತ್ತು ಹರ್ಭಜನ್ ಸಿಂಗ್ (265) ನಂತರ ಮೂರನೇ ಅತಿ ಹೆಚ್ಚು ವಿಕೆಟ್ (204) ಪಡೆದ ಭಾರತೀಯ ಸ್ಪಿನ್ನರ್ ಆಗಿದ್ದಾರೆ. ಏಕದಿನ ಮಾದರಿಯಲ್ಲಿ 2500 ಕ್ಕೂ ಹೆಚ್ಚು ರನ್ ಮತ್ತು 200 ಕ್ಕೂ ಹೆಚ್ಚು ವಿಕೆಟ್ ಪಡೆದ ಭಾರತೀಯ ಆಲ್ರೌಂಡರ್ಗಳಲ್ಲಿ ಜಡೇಜಾ ಒಬ್ಬರು. ಮಾಜಿ ಕ್ರಿಕೆಟಿಗ ಕಪಿಲ್ ದೇವ್ 3783 ರನ್ ಮತ್ತು 253 ವಿಕೆಟ್ ಪಡೆದಿದ್ದಾರೆ.
ಒಡಿಐ ಬ್ಯಾಟಿಂಗ್ ಸಾಧನೆ: 186 (ಪಂದ್ಯಗಳು), 127 (ಇನಿಂಗ್ಸ್), 2636 (ರನ್), 32.14 (ಸರಾಸರಿ), 84.43 (ಸ್ಟ್ರೈಕ್ರೇಟ್), 87 (ಗರಿಷ್ಠ), 13 (ಅರ್ಧ ಶತಕ)
ಬೌಲಿಂಗ್ ಸಾಧನೆ: 186 (ಪಂದ್ಯ), 178 (ವಿಕೆಟ್), 204 (ವಿಕೆಟ್), 36.95 (ಸರಾಸರಿ), 45.0(ಸ್ಟ್ರೈಕ್ರೇಟ್), 4.92 (ಎಕಾನಮಿ), 5/36 (ಅತ್ಯುತ್ತಮ), 7(4 ವಿಕೆಟ್ ಸಾಧನೆ), 1 (5 ವಿಕೆಟ್ ಸಾಧನೆ)
ಜಸ್ಪ್ರಿತ್ ಬುಮ್ರಾ (ವೇಗದ ಬೌಲರ್)
ಡಿಸೆಂಬರ್ 6, 1993 ರಂದು ಅಹಮದಾಬಾದ್ನಲ್ಲಿ ಜನಿಸಿದ ಜಸ್ಪ್ರೀತ್ ಬುಮ್ರಾ ವಿಶ್ವಾದ್ಯಂತ ಕ್ರಿಕೆಟ್ ಉತ್ಸಾಹಿಗಳಿಗೆ ಚಿರಪರಿಚಿತ ಹೆಸರು. ಅಸಾಂಪ್ರದಾಯಿಕ ಬೌಲಿಂಗ್ ಆಕ್ಷನ್ ಮತ್ತು ಅಸಾಧಾರಣ ಕೌಶಲಗಳಿಗೆ ಹೆಸರುವಾಸಿಯಾದ ಬುಮ್ರಾ ವಿಶ್ವ ಕ್ರಿಕೆಟ್ನಲ್ಲಿ ಜನಪ್ರಿಯ ಬೌಲರ್.
ಜಸ್ಪ್ರೀತ್ ಬುಮ್ರಾ ಅವರ ಏಕದಿನ ವೃತ್ತಿಜೀವನವು ಅಸಾಧಾರಣವಾಗಿದೆ. 78 ಪಂದ್ಯಗಳನ್ನಾಡಿ 129 ವಿಕೆಟ್ ಕಬಳಿಸಿದ್ದಾರೆ. 2019 ರ ವಿಶ್ವಕಪ್‌ನಲ್ಲಿ ಕೇವಲ ಒಂಬತ್ತು ಪಂದ್ಯಗಳಲ್ಲಿ 18 ವಿಕೆಟ್‌ಗಳನ್ನು ಪಡೆದಿದ್ದಾರೆ. ಗಾಯದಿಂದಾಗಿ ಒಂದು ವರ್ಷದ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ಹೊರಗುಳಿದಿದ್ದ ಜಸ್ಪ್ರೀತ್ ಬುಮ್ರಾ ಗಮನಾರ್ಹ ಪುನರಾಗಮನ ಮಾಡಿದ್ದಾರೆ.
ಏಕ ದಿನ ಬೌಲಿಂಗ್ ಸಾಧನೆ: 78 (ಪಂದ್ಯ), 77 (ಇನಿಂಗ್ಸ್), 129 (ವಿಕೆಟ್), 6/19 (ಅತ್ಯುತ್ತಮ ಸಾಧನೆ), 24.31 (ಸ್ಟ್ರೈಕ್ರೇಟ್), 4.67 (ಎಕಾನಮಿ).
ಮೊಹಮ್ಮದ್ ಸಿರಾಜ್ (ವೇಗದ ಬೌಲರ್)
ಮಾರ್ಚ್ 13, 1994 ರಂದು ಹೈದರಾಬಾದ್ನಲ್ಲಿ ಜನಿಸಿದ ಮೊಹಮ್ಮದ್ ಸಿರಾಜ್ ಕ್ರಿಕೆಟ್ ಜಗತ್ತಿನಲ್ಲಿ ಅಸಾಧಾರಣ ಪ್ರತಿಭೆಯಾಗಿ ಹೊರಹೊಮ್ಮಿದ್ದಾರೆ. ವೇಗದ ಬೌಲರ್ ಆಗಿ ಅವರ ಪ್ರಯಾಣವು ಗಮನಾರ್ಹವಾಗಿದೆ. ಐಪಿಎಲ್ನಲ್ಲಿ ಅವರ ಪ್ರಭಾವಶಾಲಿ ಪ್ರದರ್ಶನದಿಂದ, ಅವರು ಭಾರತೀಯ ರಾಷ್ಟ್ರೀಯ ತಂಡದಲ್ಲಿ ಅರ್ಹ ಸ್ಥಾನವನ್ನು ಗಳಿಸಿದರು. ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದಾಗಿನಿಂದ, ಸಿರಾಜ್ ಸ್ಥಿರವಾಗಿ 2ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಕೇವಲ 30 ಏಕದಿನ ಪಂದ್ಯಗಳಲ್ಲಿ ಅವರು ಈಗಾಗಲೇ 54 ವಿಕೆಟ್‌ಗಳನ್ನು ಪಡೆದಿದ್ದಾರೆ. 21 ರನ್ಗೆ 6 ವಿಕೆಟ್ ಉರುಳಿಸುವ ಮೂಲಕ ಶ್ರೀಲಂಕಾ ವಿರುದ್ಧ ಏಷ್ಯಾ ಕಪ್ ಗೆಲ್ಲಲು ಭಾರತಕ್ಕೆ ನೆರವಾಗಿದ್ದರು. ಇದರಿಂದಾಗಿ ಅವರು ನಂಬರ್ ಒನ್ ಬೌಲರ್ ಎನಿಸಿಕೊಂಡಿದ್ದಾರೆ. ಚೆಂಡನ್ನು ಎರಡೂ ರೀತಿಯಲ್ಲಿ ಸ್ವಿಂಗ್ ಮಾಡುವ ಸಾಮರ್ಥ್ಯ ಸಿರಾಜ್ಗೆ ಇದೆ.
ಒಡಿಐ ಬೌಲಿಂಗ್ ಸಾಧನೆ: 30 (ಪಂದ್ಯ), 29 (ರೆಕಾರ್ಡ್), 54 (ವಿಕೆಟ್), 20.01 (ಸರಾಸರಿ), 24.6 (ಸ್ಟ್ರೈಕ್ರೇಟ್), 4.87 (ಎಕಾನಮಿ), 6ವಿಕೆಟ್/21 ರನ್ (ಅತ್ಯುತ್ತಮ ಸಾಧನೆ)
ಇಶಾನ್ ಕಿಶನ್ (ವಿಕೆಟ್ಕೀಪರ್ ಬ್ಯಾಟರ್)
ಪ್ರತಿಭಾನ್ವಿತ ವಿಕೆಟ್ ಕೀಪರ್ ಮತ್ತು ಎಡಗೈ ಆರಂಭಿಕ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಭಾರತೀಯ ಕ್ರಿಕೆಟ್ ಜಗತ್ತಿನಲ್ಲಿ ಅಲೆಗಳನ್ನು ಸೃಷ್ಟಿಸಿದ್ದಾರೆ. ಜುಲೈ 18, 1998 ರಂದು ಜಾರ್ಖಂಡ್ನಲ್ಲಿ ಜನಿಸಿದ ಕಿಶನ್, ಲೆಜೆಂಡರಿ ಕ್ರಿಕೆಟಿಗ ಎಂಎಸ್ ಧೋನಿಯನ್ನು ಪೋಷಿಸಿದ ಅದೇ ರಾಜ್ಯದಲ್ಲಿ, ವಿವಿಧ ಹಂತಗಳಲ್ಲಿ ತಮ್ಮ ಕೌಶಲ್ಯ ಮತ್ತು ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. 2016 ರಲ್ಲಿ ಬಾಂಗ್ಲಾದೇಶದಲ್ಲಿ ನಡೆದ 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದರು. ಆರಂಭಿಕ ಬ್ಯಾಟರ್ ಕೇವಲ 7 ಇನಿಂಗ್ಸ್‌ಗಳಲ್ಲಿ ಅವರು 210 ಗರಿಷ್ಠ ಸ್ಕೋರ್ನೊಂದಿಗೆ 448 ರನ್ ಗಳಿಸಿದ್ದಾರೆ. ಈ ಅತ್ಯುತ್ತಮ ಶತಕ ಮತ್ತು ಮೂರು ಅರ್ಧಶತಕಗಳು ಅವರ ಮೌಲ್ಯವನ್ನು ಹೆಚ್ಚಿಸಿದೆ. ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿ, ಕಿಶನ್ ಗರಿಷ್ಠ 82 ರನ್ ಸೇರಿದಂಥೆ ಮತ್ತು ಎರಡು ಅರ್ಧಶತಕಗಳೊಂದಿಗೆ 275 ರನ್ ಗಳಿಸಿದ್ದಾರೆ.
ವಿಕೆಟ್ ಕೀಪರ್ ಆಗಿ ಕಿಶನ್ ಅವರ ಪರಾಕ್ರಮವು ಅಂಕಿಅಂಶಗಳಲ್ಲಿ ಸ್ಪಷ್ಟವಾಗಿದೆ . ಏಕದಿನ ಪಂದ್ಯಗಳಲ್ಲಿ ಕೀಪರ್ ಆಗಿ 13 ಪಂದ್ಯಗಳಲ್ಲಿ 10 ಕ್ಯಾಚ್ಗಳ ಪಡೆದಿದ್ದಾರೆ. ಮೂರು ಸ್ಟಂಪಿಂಗ್‌ಗಳನ್ನು ಮಾಡಿದ್ದಾರೆ.
ಏಕದಿನ ಬ್ಯಾಟಿಂಗ್ ಸಾಧನೆ: 25 (ಪಂದ್ಯ) 22 (ಇನಿಂಗ್ಸ್) 886 (ರನ್) 210 (ಗರಿಷ್ಠ) 44.30 (ಸರಾಸರಿ) 102.42 (ಸ್ಟ್ರೈಕ್ರೇಟ್) 7 (ಅರ್ಧಶತಕ), 1(ಶತಕ).
ಶಾರ್ದೂಲ್ ಠಾಕೂರ್ (ಆಲ್ರೌಂಡರ್)
ಶಾರ್ದೂಲ್ ಠಾಕೂರ್ ಅಕ್ಟೋಬರ್ 16, 1991 ರಂದು ಮಹಾರಾಷ್ಟ್ರದ ಪಾಲ್ಘರ್ ಮೂಲದ ಬೌಲಿಂಗ್ ಆಲ್ರೌಂಡರ್. 2015/16ರಲ್ಲಿ ರಣಜಿ ಟ್ರೋಫಿ ಫೈನಲ್ನಲ್ಲಿ ಎಂಟು ವಿಕೆಟ್‌ಗಳನ್ನು ಪಡೆದಾಗ ಅವರು ಆಯ್ಕೆದಾರರ ಗಮನ ಸೆಳೆದರು. ಶಾರ್ದೂಲ್ ಠಾಕೂರ್ 2017 ರಲ್ಲಿ ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು. ಠಾಕೂರ್ 43 ಇನ್ನಿಂಗ್ಸ್ಗಳಲ್ಲಿ 30.34 ಸರಾಸರಿಯಲ್ಲಿ 63 ವಿಕೆಟ್‌ಗಳನ್ನು ಪಡೆದಿದ್ದಾರೆ ಮತ್ತು 29.1 ಸರಾಸರಿಯಲ್ಲಿ ಸ್ಟ್ರೈಕ್ ಮಾಡಿದ್ದಾರೆ.
ಇದನ್ನೂ ಓದಿ : ICC World Cup 2023 : ಬಿಕೋ ಎನ್ನುತ್ತಿದೆ ವಿಶ್ವ ಕಪ್ ಪಂದ್ಯ ನಡೆಯುವ ಸ್ಟೇಡಿಯಮ್!
ಶಾರ್ದೂಲ್ ಠಾಕೂರ್ ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಏಕದಿನ ಮಾದರಿಯಲ್ಲಿ ಭಾರತಕ್ಕಾಗಿ ಕೆಲವು ಅದ್ಭುತ ಪ್ರದರ್ಶನಗಳೊಂದಿಗೆ ತಂಡದಲ್ಲಿ ತಮ್ಮ ಸ್ಥಾನವನ್ನು ಗಳಿಸಿದ್ದಾರೆ. ಠಾಕೂರ್ 38 ಇನ್ನಿಂಗ್ಸ್ಗಳಲ್ಲಿ 28.30 ಸರಾಸರಿಯಲ್ಲಿ 57 ವಿಕೆಟ್‌ಗಳನ್ನು ಪಡೆದಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ 50ಕ್ಕೂ ಹೆಚ್ಚು ವಿಕೆಟ್ ಪಡೆದ ಭಾರತದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ 18 ಇನಿಂಗ್ಸ್‌ಗಳಲ್ಲಿ ಠಾಕೂರ್ 215 ರನ್ ಗಳಿಸಿದ್ದಾರೆ. 114.36 ಸ್ಟ್ರೈಕ್ ರೇಟ್ ಹೊಂದಿದ್ದಾರೆ.
ಒಡಿಐ ಬೌಲಿಂಗ್ ಸಾಧನೆ: 44 (ಪಂದ್ಯ), 43 (ಇನಿಂಗ್ಸ್), 63 (ವಿಕೆಟ್), 30.34 (ಸರಾಸರಿ), 29.1 (ಸ್ಟ್ರೈಕ್ರೇಟ್), 6.24 (ಎಕಾನಮಿ), 3 ಬಾರಿ (4 ವಿಕೆಟ್ ಸಾಧನೆ), 4/37 (ಅತ್ಯುತ್ತಮ ಬೌಲಿಂಗ್)
ಬ್ಯಾಟಿಂಗ್ ಸಾಧನೆ: 44 (ಪಂದ್ಯ), 25 (ಇನಿಂಗ್ಸ್), 329 (ರನ್) , 17.31 (ಸರಾಸರಿ), 105.11 (ಸ್ಟ್ರೈಕ್ರೇಟ್), 1 (ಅರ್ಧಶತಕ) 50 (ಗರಿಷ್ಠ ಸ್ಕೋರ್)
ಮೊಹಮ್ಮದ್ ಶಮಿ (ವೇಗದ ಬೌಲರ್)
ಭಾರತದ ಅತ್ಯುತ್ತಮ ವೇಗದ ಬೌಲರ್ಗಳಲ್ಲಿ ಒಬ್ಬರಾದ ಮೊಹಮ್ಮದ್ ಶಮಿ ಸೆಪ್ಟೆಂಬರ್ 03, 1990 ರಂದು ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಜನಿಸಿದರು. 33 ವರ್ಷದ ಬಲಗೈ ವೇಗಿ ಇತ್ತೀಚಿನ ವರ್ಷಗಳಲ್ಲಿ ತಮ್ಮ ಸ್ಥಿರ ಪ್ರದರ್ಶನದ ಮೂಲಕ ಎಲ್ಲಾ ಮೂರು ಸ್ವರೂಪಗಳಲ್ಲಿ ಟೀಮ್ ಇಂಡಿಯಾದ ನಿಯಮಿತ ಸದಸ್ಯರಾಗಿದ್ದಾರೆ. ಶಮಿ ಏಕದಿನ ಮಾದರಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆಯುವ ಮೂಲಕ ಎಲ್ಲಾ ಸ್ವರೂಪಗಳಲ್ಲಿ ತಮ್ಮ ದೇಶಕ್ಕಾಗಿ 400 ಕ್ಕೂ ಹೆಚ್ಚು ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
2013ರ ಜನವರಿಯಲ್ಲಿ ದೆಹಲಿಯಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಏಕದಿನ ಪಂದ್ಯದಲ್ಲಿ ಆಡುವ ಮೂಲಕ ವೇಗದ ಬೌಲರ್ ಮೆನ್ ಇನ್ ಬ್ಲೂ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಏಕದಿನ ಕ್ರಿಕೆಟ್ನಲ್ಲಿ 25.50ರ ಸರಾಸರಿಯಲ್ಲಿ 171 ವಿಕೆಟ್‌ಗಳನ್ನು ಪಡೆದಿದ್ದಾರೆ. 2019 ರ ವಿಶ್ವಕಪ್‌ನಲ್ಲಿ ಸೌತಾಂಪ್ಟನ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಹ್ಯಾಟ್ರಿಕ್ ವಿಕೆಟ್ ವಿಶೇಷ ಸಾಧನೆ ಮಾಡಿದರು. ಚೇತನ್ ಶರ್ಮಾ, ಕಪಿಲ್ ದೇವ್ ಮತ್ತು ಕುಲದೀಪ್ ಯಾದವ್ (ಎರಡು ಬಾರಿ) ಈ ಸಾಧನೆ ಮಾಡಿದ ಇತರ ಮೂವರು ಭಾರತೀಯರು. ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ವೇಗದ ಬೌಲರ್ಗಳಲ್ಲಿ ಏಳನೇ ಸ್ಥಾನದಲ್ಲಿದ್ದಾರೆ ಶಮಿ. ಜಾವಗಲ್ ಶ್ರೀನಾಥ್, ಅಜಿತ್ ಅಗರ್ಕರ್, ಜಹೀರ್ ಖಾನ್, ಕಪಿಲ್ ದೇವ್, ವೆಂಕಟೇಶ್ ಪ್ರಸಾದ್ ಮತ್ತು ಇರ್ಫಾನ್ ಪಠಾಣ್ ಈ ಪಟ್ಟಿಯಲ್ಲಿದ್ದಾರೆ.
ಇದನ್ನೂ ಓದಿ : ICC World Cup 2023: ಮಳೆ ಬಂದರೆ ವಿಶ್ವಕಪ್‌ನಲ್ಲಿ ಮೀಸಲು ದಿನ ಇದೆಯೇ? ಐಸಿಸಿ ಕೈಗೊಂಡ ನಿರ್ಧಾರ ಏನು?
ಏಕದಿನ ಕ್ರಿಕೆಟ್ನಲ್ಲಿ 100 ಮತ್ತು 150 ವಿಕೆಟ್ಗಳ ಮೈಲುಗಲ್ಲನ್ನು ವೇಗವಾಗಿ ತಲುಪಿದ ಭಾರತೀಯ ಎಂಬ ಹೆಗ್ಗಳಿಕೆಗೆ ಶಮಿ ಪಾತ್ರರಾಗಿದ್ದಾರೆ. ಶಮಿ 56ನೇ ಪಂದ್ಯದಲ್ಲಿ ಶತಕ ಗಳಿಸಿದರೆ, ಜಸ್ಪ್ರೀತ್ ಬುಮ್ರಾ ತಮ್ಮ 57 ನೇ ಪಂದ್ಯದಲ್ಲಿ ಅದೇ ರೀತಿ ಮಾಡಿದರು. ಶಮಿ ತಮ್ಮ 80 ನೇ ಪಂದ್ಯದಲ್ಲಿ 150 ವಿಕೆಟ್ ಪಡೆದ ಸಾಧನೆ ಮಾಡಿದರೆ. ಸ್ಪಿನ್ನರ್ ಕುಲದೀಪ್ ಯಾದವ್ ತಮ್ಮ 88 ನೇ ಏಕದಿನ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ.
ಒಡಿಐ ಬೌಲಿಂಗ್ ಸಾಧನೆ: 94 (ಪಂದ್ಯಗಳು), 93 (ಇನಿಂಗ್ಸ್), 171 (ವಿಕೆಟ್), 25.50 (ಸರಾಸರಿ), 27.4 (ಸ್ಟ್ರೈಕ್ರೇಟ್), 5.57 (ಎಕಾನಮಿ), 5/51 (ಅತ್ಯುತ್ತಮ ಬೌಲಿಂಗ್), 9 ಬಾರಿ (4 ವಿಕೆಟ್), 2 (ಐದು ವಿಕೆಟ್ ಸಾಧನೆ).
ರವಿಚಂದ್ರನ್ ಅಶ್ವಿನ್ (ಸ್ಪಿನ್ ಬೌಲರ್)
ಸೆಪ್ಟೆಂಬರ್ 17, 1986 ರಂದು ತಮಿಳುನಾಡಿನ ಚೆನ್ನೈನಲ್ಲಿ ಜನಿಸಿದ ರವಿಚಂದ್ರನ್ ಅಶ್ವಿನ್ ಟೆಸ್ಟ್ ಕ್ರಿಕೆಟ್ನಲ್ಲಿ ಮಾತ್ರವಲ್ಲದೆ ಏಕದಿನ ಅಂತಾರಾಷ್ಟ್ರೀಯ (ಏಕದಿನ) ಪಂದ್ಯಗಳಲ್ಲಿ ಅಸಾಧಾರಣ ಬೌಲರ್. ತಮ್ಮ ಪ್ರಭಾವಶಾಲಿ ಕೌಶಲ ಮತ್ತು ಆಲ್ರೌಂಡ್ ಸಾಮರ್ಥ್ಯಗಳಿಂದ, ಅಶ್ವಿನ್ ಕ್ರಿಕೆಟ್ ಜಗತ್ತಿನಲ್ಲಿ ಹೆಸರು ಮಾಡಿದ್ದಾರೆ. ಅವರು ತಮ್ಮ ಏಕದಿನ ವೃತ್ತಿಜೀವನದಲ್ಲಿ ಒಟ್ಟು 707 ರನ್ ಗಳಿಸಿದ್ದಾರೆ. ಅವರ ಅತ್ಯಧಿಕ ಸ್ಕೋರ್ 65.
115 ಏಕದಿನ ಪಂದ್ಯಗಳಲ್ಲಿ ಅಶ್ವಿನ್ 155 ವಿಕೆಟ್ ಪಡೆದಿದ್ದಾರೆ. ಎಡಗೈ ಬ್ಯಾಟರ್ಗಳ ವಿರುದ್ಧದ ಯಶಸ್ಸಿಗೆ ಅವರು ಹೆಸರುವಾಸಿಯಾಗಿದ್ದರೂ, ಬಲಗೈ ಬ್ಯಾಟರ್ಗಳ ವಿರುದ್ಧ ಅವರ ದಾಖಲೆಗಳು ಅಷ್ಟೇ ಪ್ರಭಾವಶಾಲಿಯಾಗಿವೆ. ಅವರು ಎಸೆದ 4,059 ಎಸೆತಗಳಲ್ಲಿ ಗಮನಾರ್ಹ 1956 ಡಾಟ್ ಬಾಲ್ಗಳಿವೆ. ಬೌಲಿಂಗ್ ವೇರಿಯೇಷನ್ ಅವರ ವೈಶಿಷ್ಟ್ಯ. ಐಸಿಸಿ ವಿಶ್ವಕಪ್ನ 2015 ರ ಆವೃತ್ತಿಯಲ್ಲಿ, ಅವರು 13 ವಿಕೆಟ್‌ಗಳನ್ನು ಪಡೆದಿದ್ದಾರೆ. ಆ ವಿಶ್ವಕಪ್‌ನಲ್ಲಿ ಭಾರತೀಯ ತಂಡದ ಪರವಾಗಿ ಜಂಟಿ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಶ್ವಿನ್ ಅವರು 2011 ರ ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದರು.
ಒಡಿಐ ಬೌಲಿಂಗ್ ಸಾಧನೆ: 115 (ಪಂದ್ಯಗಳು), 113 (ಇನಿಂಗ್ಸ್), 155 (ವಿಕೆಟ್), 4/25 (ಅತ್ಯುತ್ತಮ ಬೌಲಿಂಗ್), 33.20 (ಸರಾಸರಿ), 4.94 (ಎಕಾನಮಿ)
ಸೂರ್ಯಕುಮಾರ್ ಯಾದವ್ (ಮಧ್ಯಮ ಕ್ರಮಾಂಕದ ಬ್ಯಾಟರ್)
ವಿಶ್ವದ ಅತ್ಯಂತ ನಿರ್ಭೀತ ಮತ್ತು ವಿನಾಶಕಾರಿ ಟಿ 20 ಬ್ಯಾಟರ್ಗಳಲ್ಲಿ ಒಬ್ಬರಾದ ಸೂರ್ಯಕುಮಾರ್ ಯಾದವ್ ಸೆಪ್ಟೆಂಬರ್ 14, 1990 ರಂದು ಮಹಾರಾಷ್ಟ್ರದ ಮುಂಬೈನಲ್ಲಿ ಜನಿಸಿದರು. ‘ಸ್ಕೈ’ ಎಂಬ ಅಡ್ಡಹೆಸರಿನಿಂದ ಕರೆಯಲ್ಪಡುವ ಅವರು ಮಾರ್ಚ್ 2021 ರಲ್ಲಿ ಪಾದಾರ್ಪಣೆ ಮಾಡಿದಾಗಿನಿಂದ ಕಡಿಮೆ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಅದ್ಭುತ ಪ್ರದರ್ಶನ ನೀಡಿದ ನಂತರ ಬಲಗೈ ಬ್ಯಾಟ್ಸ್‌ಮನ್ ಟೀಮ್ ಇಂಡಿಯಾಕ್ಕೆ ಆಯ್ಕೆಯಾದರು.
ಇದನ್ನೂ ಓದಿ : ICC World Cup 2023 : ಏಕ ದಿನ ಕ್ರಿಕೆಟ್ ಮಾದರಿ ಯುಗಾಂತ್ಯ? ಮೈದಾನಗಳು ಯಾಕೆ ಖಾಲಿ ಖಾಲಿ?
ಅವರು ಎರಡೂವರೆ ವರ್ಷಗಳ ಹಿಂದೆ ಅಹಮದಾಬಾದ್ನಲ್ಲಿ ಇಂಗ್ಲೆಂಡ್ ವಿರುದ್ಧದ ಟಿ 20ಯಲ್ಲಿ ತಮ್ಮ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದರು. ಜುಲೈ 2021 ರಲ್ಲಿ, ಸೂರ್ಯ ಕೊಲಂಬೊದಲ್ಲಿ ಶ್ರೀಲಂಕಾ ವಿರುದ್ಧ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು. ಮುಂಬೈ ಬ್ಯಾಟರ್ 30 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ನಾಲ್ಕು ಅರ್ಧಶತಕಗಳೊಂದಿಗೆ 667 ರನ್ ಗಳಿಸಿದ್ದಾರೆ.
ಒಡಿಐ ಬ್ಯಾಟಿಂಗ್ ಸಾಧನೆ: 30 (ಪಂದ್ಯ), 28 (ಇನಿಂಗ್ಸ್), 667 (ರನ್), 27.79 (ಸರಾಸರಿ), 105.70 (ಸ್ಟ್ರೈಕ್ರೇಟ್), 72* (ಗರಿಷ್ಠ), 4 (ಅರ್ಧ ಶತಕ).
ಕುಲದೀಪ್ ಯಾದವ್ (ಸ್ಪಿನ್ ಬೌಲಿಂಗ್)
ಎಡಗೈ ಮಣಿಕಟ್ಟು ಸ್ಪಿನ್ನರ್ ಕುಲದೀಪ್ ಯಾದವ್ ಉತ್ತರ ಪ್ರದೇಶದ ಕಾನ್ಪುರ ಮೂಲದವರಾಗಿದ್ದು, ಡಿಸೆಂಬರ್ 14, 1994ರಂದು ಜನಿಸಿದರು. ಕುಲದೀಪ್ 2017 ರಲ್ಲಿ ಕ್ವೀನ್ಸ್ ಪಾರ್ಕ್ ಓವಲ್ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು. 90 ಏಕದಿನ ಪಂದ್ಯಗಳಲ್ಲಿ ಕುಲ್ದೀಪ್ 25.62ರ ಸರಾಸರಿಯಲ್ಲಿ 152 ವಿಕೆಟ್‌ಗಳನ್ನು ಪಡೆದಿದ್ದಾರೆ. 2014ರ ಅಂಡರ್-19 ವಿಶ್ವಕಪ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದರು.
2016ರ ದುಲೀಪ್ ಟ್ರೋಫಿಯಲ್ಲಿ 5 ಇನಿಂಗ್ಸ್‌ಗಳಲ್ಲಿ 17 ವಿಕೆಟ್ ಕಬಳಿಸುವ ಮೂಲಕ ಈ ಋತುವಿನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. 2017ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಏಕದಿನ ಕ್ರಿಕೆಟ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆಯುವ ಮೂಲಕ ಗಮನ ಸೆಳೆದಿದ್ದರು. ಕುಲದೀಪ್ ಯಾದವ್ 2019 ರ ವಿಶ್ವಕಪ್‌ನಲ್ಲಿ ಸಾಧಾರಣ ಪ್ರದರ್ಶನ ನೀಡಿದ್ದರು, ಅವರು ಪಂದ್ಯಾವಳಿಯನ್ನು ಏಳು ಪಂದ್ಯಗಳಲ್ಲಿ ಆರು ವಿಕೆಟ್ ಪಡೆದು ಕೊನೆಗೊಳಿಸಿದರು. ಪ್ರದರ್ಶನದಲ್ಲಿ ಕುಸಿತದಿಂದಾಗಿ, ಅವರು ತಂಡದ ಒಳಗೆ ಮತ್ತು ಹೊರಗೆ ಇದ್ದರು. 24 ಇನಿಂಗ್ಸ್‌ಗಳಲ್ಲಿ 19.15 ಸರಾಸರಿಯಲ್ಲಿ 45 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಅವಧಿಯಲ್ಲಿ ಮೊಹಮ್ಮದ್ ಸಿರಾಜ್ ಮಾತ್ರ ಕುಲದೀಪ್ ಗಿಂತ ಹೆಚ್ಚು ವಿಕೆಟ್ ಪಡೆದಿದ್ದಾರೆ.
ಶ್ರೀಲಂಕಾ ವಿರುದ್ಧ 4 ವಿಕೆಟ್ ಹಾಗೂ ಪಾಕಿಸ್ತಾನ ವಿರುದ್ಧ 5 ವಿಕೆಟ್ ಕಬಳಿಸುವ ಮೂಲಕ ಏಷ್ಯಾಕಪ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಕುಲದೀಪ್ ಯಾದವ್ 88 ಪಂದ್ಯಗಳಲ್ಲಿ 150 ವಿಕೆಟ್ ಪಡೆದ ಎರಡನೇ ವೇಗದ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಬೌಲಿಂಗ್ ಸಾಧನೆ: 90 (ಪಂದ್ಯ), 87 (ಇನಿಂಗ್ಸ್), 152 (ವಿಕೆಟ್), 25.62 (ಸರಾಸರಿ), 29.9 (ಸ್ಟ್ರೈಕ್ರೇಟ್)ಮ 5.13 (ಎಕಾನಮಿ), 7/2 (4ವಿಕೆಟ್/5ವಿಕೆಟ್ ಸಾಧನೆ), 6/25 (ಅತ್ಯುತ್ತಮ ಬೌಲಿಂಗ್ ಸಾಧನೆ).