1. ಸನಾತನ ಧರ್ಮ ವಿರೋಧಿ ಹೇಳಿಕೆ; ತಮಿಳುನಾಡು ಸಚಿವ ಉದಯನಿಧಿ ವಿರುದ್ಧ ದೇಶಾದ್ಯಂತ ವ್ಯಾಪಕ ಆಕ್ರೋಶ
ಬೆಂಗಳೂರು: ಸಹಸ್ರಾರು ವರ್ಷಗಳ ಪರಂಪರೆ ಹೊಂದಿರುವ ಸನಾತನ ಧರ್ಮವನ್ನು ಹೀಯಾಳಿಸಿದ ತಮಿಳುನಾಡು ಸರ್ಕಾರದ ಸಚಿವ ಹಾಗೂ ಮುಖ್ಯಮಂತ್ರಿ ಸ್ಟಾಲಿನ್ ಪುತ್ರ ಅವರ ಪುತ್ರ ಉದಯನಿಧಿ ವಿರುದ್ಧ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಪ್ರಮುಖವಾಗಿ ಬಿಜೆಪಿ ಸೇರಿದಂತೆ ನಾನಾ ರಾಜಕೀಯ ಪಕ್ಷಗಳು ಸನಾತನ ಧರ್ಮವನ್ನು ಡೆಂಗ್ಯೂ, ಕೊರೊನಾದಂಥ ಮಾರಕ ರೋಗಳಿಗೆ ಹೋಲಿಸಿದ ಉದಯನಿಧಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿವೆ. ಪ್ರತಿಪಕ್ಷಗಳ ಕೂಟವಾದ ಇಂಡಿಯಾ ಬ್ಲಾಕ್ನ ಸದಸ್ಯ ಪಕ್ಷವಾಗಿರುವ ತೃಣಮೂಲ ಕಾಂಗ್ರೆಸ್ ಕೂಡ ಉದಯನಿಧಿ ಹೇಳಿಕೆಯ ತಿರಸ್ಕರಿಸಿ, ಇದು ದುರದೃಷ್ಟಕರ ಎಂದಿದೆ. ಸನಾತನ ಧರ್ಮದ ವಿದ್ವಾಂಸರು, ಹಿಂದು ಧರ್ಮ ಗುರುಗಳು ಸೇರಿದಂತೆ ಧಾರ್ಮಿಕ ವಲಯದ ಪ್ರಮುಖದ ಉದಯನಿಧಿಯ ಹೇಳಿಕೆಯನ್ನು ತೀವ್ರವಾಗಿ ವಿರೋಧಿಸಿದೆ. ಏತನ್ಮಧ್ಯೆ, ಸುಪ್ರೀಮ್ ಕೋರ್ಟ್ ವಕೀಲರೊಬ್ಬರು ಉದಯನಿಧಿ ವಿರುದ್ಧ ಡೆಲ್ಲಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ :ಸನಾತನ ಧರ್ಮ ಅಳಿಸುವೆ ಎಂದ ಉದಯನಿಧಿಯ ಅಮ್ಮ ದೇವರಿಗೆ ಚಿನ್ನದ ಕಿರೀಟ ಸಮರ್ಪಿಸಿದ್ದರು!
2. 114 ಬರಪೀಡಿತ ತಾಲೂಕುಗಳಿಗೆ ಇನ್ಮುಂದೆ 10 ಕೆಜಿ ಅಕ್ಕಿ: ಕೆ.ಎಚ್. ಮುನಿಯಪ್ಪ
ಬೆಂಗಳೂರು: ರಾಜ್ಯದಲ್ಲಿ ಮಳೆ ಇಲ್ಲದೆ ಹಲವು ಕಡೆ ಬರ ಆವರಿಸಿದೆ. ಈ ನಿಟ್ಟಿನಲ್ಲಿ ಬರಪೀಡಿತ ತಾಲೂಕುಗಳ (Drought hit taluk) ನೆರವಿಗೆ ರಾಜ್ಯ ಸರ್ಕಾರ ಧಾವಿಸಿದೆ. ಹೀಗಾಗಿ ಸದ್ಯ 114 ತಾಲೂಕುಗಳಲ್ಲಿ ಬರದ ಪರಿಸ್ಥಿತಿ ಇದ್ದು, ಈ ಎಲ್ಲ ತಾಲೂಕುಗಳಿಗೆ ಅನ್ನ ಭಾಗ್ಯ ಯೋಜನೆ (Anna Bhagya Scheme) ಅಡಿ ಹಣದ ಬದಲು 10 ಕೆಜಿ ಅಕ್ಕಿಯನ್ನು ರಾಜ್ಯ ಸರ್ಕಾರದಿಂದ ವಿತರಣೆ ಮಾಡಲಾಗುವುದು ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ (Food Minister KH Muniyappa) ಹೇಳಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
3. ಮೇಕೆದಾಟು ಪಾದಯಾತ್ರೆ ವೇಳೆ ಎಲ್ಲಿ ಹೋಗಿದ್ರಿ? ಕಾವೇರಿ ಹೋರಾಟಗಾರರ ಮೇಲೆ ಹರಿಹಾಯ್ದ ಡಿಕೆಶಿ
ಬೆಂಗಳೂರು: ರಾಜ್ಯದಲ್ಲಿ ಕಾವೇರಿ ಜಲ ವಿವಾದ (Cauvery water dispute) ತಾರಕಕ್ಕೇರಿದೆ. ಕರ್ನಾಟಕದಲ್ಲಿ ಸಮರ್ಪಕವಾಗಿ ಮಳೆಯಾಗಿಲ್ಲ. ಮೊದಲೇ ಇಲ್ಲಿನ ಹಲವು ಜಿಲ್ಲೆಗಳಲ್ಲಿ ಕುಡಿಯಲೇ ಸರಿಯಾಗಿ ನೀರು ಸಿಗುತ್ತಿಲ್ಲ. ಇನ್ನು ಬೆಳೆಗಳಿಗಂತೂ ಬಹಳವೇ ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ತಮಿಳುನಾಡಿಗೆ ನೀರು (Water to Tamil Nadu) ಬಿಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ (State Congress Government) ಕ್ರಮ ಖಂಡಿಸಿ ರೈತ ಸಂಘಟನೆಗಳು (Farmers Union) ಸೇರಿದಂತೆ ಅನೇಕ ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸುತ್ತಿವೆ. ಈಗ ಹೋರಾಟದ ವಿರುದ್ಧ ಡಿಸಿಎಂ, ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ (DK Shivakumar) ಗರಂ ಆಗಿದ್ದಾರೆ. ಹೋರಾಟಗಾರರ ಮೇಲೆ ಕಿಡಿಕಾರಿದ್ದಾರೆ. ಈ ಹೋರಾಟಕ್ಕೆ ಧನ್ಯವಾದಗಳು. ಆದರೆ, ನಾವು ಮೇಕೆದಾಟು ಪಾದಯಾತ್ರೆ ಮಾಡುವಾಗ ನೀವೆಲ್ಲ ಎಲ್ಲಿ ಹೋಗಿದ್ದಿರಿ? ಎಂದು ಪ್ರಶ್ನೆ ಮಾಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
4. ಉತ್ತರ ಕರ್ನಾಟಕದಲ್ಲಿ ಇನ್ನೊಂದು ವಾರ ಭರ್ಜರಿ ಮಳೆ; ಯೆಲ್ಲೋ ಅಲರ್ಟ್ ಘೋಷಣೆ
ಬೆಂಗಳೂರು: ರಾಜ್ಯಾದ್ಯಂತ ಇನ್ನೊಂದು ವಾರ ಭಾರಿ ಮಳೆಯಾಗುವ (Rain News) ಎಚ್ಚರಿಕೆಯನ್ನು ಹವಾಮಾನ ಇಲಾಖೆ (Weather report) ನೀಡಿದೆ. ಕರಾವಳಿ ಮತ್ತು ಉತ್ತರ ಒಳನಾಡಿನ ಬಹುತೇಕ ಕಡೆಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
5. ಕೊಡಗಿನಲ್ಲಿ ಮುಂದುವರಿದ ಆನೆ ದಾಳಿ; ಕ್ಷಿಪ್ರ ಕಾರ್ಯಾಚರಣೆ ಸಿಬ್ಬಂದಿಯೇ ಬಲಿ
ಮಡಿಕೇರಿ: ಕೊಡಗಿನಲ್ಲಿ ಆನೆಗಳ ಹಾವಳಿ (Elephant Menace) ತೀವ್ರವಾಗಿದೆ. ಈ ಬಾರಿ ಅದು ಅರಣ್ಯ ಇಲಾಖೆಯ ಸಿಬ್ಬಂದಿಯೊಬ್ಬರನ್ನೇ (Forest department Employee) ಬಲಿ ಪಡೆದಿದೆ. ಈ ಭಾಗದಲ್ಲಿ ಆನೆಗಳ ಹಾವಳಿಯನ್ನು ನಿಯಂತ್ರಿಸುವುದಕ್ಕಾಗಿ ರೂಪಿಸಲಾದ ರ‍್ಯಾಪಿಡ್ ರೆಸ್ಪಾನ್ಸ್ ಟೀಮ್‌ನ (Rapid Response Team- RRT) ಸದಸ್ಯರೊಬ್ಬರು ಆನೆಯ ದಾಳಿಗೆ (Elephant Attack) ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
6. ಕಾಯಕವೇ ಕೈಲಾಸ; 9 ವರ್ಷದಲ್ಲಿ ಒಂದೂ ರಜೆ ಹಾಕದ ಮೋದಿ, ಆರ್‌ಟಿಐ ಮಾಹಿತಿ
7. ಶ್ರಾವಣ ಮಾಸದಲ್ಲಿ ಮಟನ್ ತಿಂದ ‘ಜನಿವಾರಧಾರಿ ಬ್ರಾಹ್ಮಣ’ ರಾಹುಲ್ ಗಾಂಧಿ! ಬಿಜೆಪಿ ಟಾಂಗ್
8. ಸಿಂಪಲ್ ಕ್ಯಾಚ್ ಬಿಟ್ಟು ಅಪಹಾಸ್ಯಕ್ಕೆ ಒಳಗಾದರೂ ನೇಪಾಳಿ ಹಾಡಿಗೆ ಸೊಂಟ ಕುಣಿಸಿದ ಕೊಹ್ಲಿ!
9. 24 ದಿನಗಳಲ್ಲಿ ಪಠಾಣ್, ಬಾಹುಬಲಿ 2 ದಾಖಲೆ ಮುರಿದ ಗದರ್ 2!
10. 68ನೇ ವಯಸ್ಸಲ್ಲಿ 3ನೇ ಮದುವೆಯಾದ ಖ್ಯಾತ ವಕೀಲ ಹರೀಶ್ ಸಾಳ್ವೆ; ವಧು ಯಾರು?
ಇನ್ನಷ್ಟು ವೈರಲ್ ಸುದ್ದಿಗೆಳಿಗೆ ಇಲ್ಲಿ ಕ್ಲಿಕ್ ಮಾಡಿ.