1. Mysore dasara : 414ನೇ ಮೈಸೂರು ದಸರಾ ಮಹೋತ್ಸವಕ್ಕೆ ಹಂಸಲೇಖರಿಂದ ಅದ್ಧೂರಿ ಚಾಲನೆ
ಮೈಸೂರು: ವಿಶ್ವವಿಖ್ಯಾತ 414ನೇ ಮೈಸೂರು ದಸರಾ (Mysore Dasara) ಮಹೋತ್ಸವಕ್ಕೆ ಭಾನುವಾರ (ಅಕ್ಟೋಬರ್ 15) ಅದ್ಧೂರಿ ಚಾಲನೆ ಸಿಕ್ಕಿದೆ. ಬೆಳಗ್ಗೆ 10:15ರಿಂದ 10.36ರವರೆಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ನಾಡದೇವಿ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವ ಮೂಲಕ ಸಂಗೀತ ನಿರ್ದೇಶಕ ಹಂಸಲೇಖ (Music Director Hamsalekha) ಚಾಲನೆ ನೀಡಿದ್ದಾರೆ. ಇದಕ್ಕೂ ಮೊದಲು ಹಂಸಲೇಖ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ ಮಹದೇವಪ್ಪ, ಸಂಸದ ಪ್ರತಾಪ್ ಸಿಂಹ ಸೇರಿದಂತೆ ಹಲವಾರು ಗಣ್ಯರು ಅಲಂಕೃತ ಬೆಳ್ಳಿ ರಥದಲ್ಲಿ ಆಸೀನಳಾಗಿದ್ದ ಪಂಚಲೋಹದ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ ಸಲ್ಲಿಸಿದರು. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ
ಈ ಸುದ್ದಿಯನ್ನೂ ಓದಿ : ದಸರಾ ನೋಡಲು ಮೈಸೂರಿಗೆ ಹೋದಾಗ ಈ ಸ್ಥಳಗಳನ್ನು ಮಿಸ್ ಮಾಡಲೇಬೇಡಿ
ರಾಜ್ಯದಲ್ಲಿನ ಅಂತಾರಾಜ್ಯದವರಿಗೆ ಕನ್ನಡ ಕಲಿಸಿ; ಆರ್‌ಟಿಸಿ ಮಾದರಿ ʼಕನ್ನಡ ಪಟ್ಟʼ ಕೊಡಿ ಎಂದ ಹಂಸಲೇಖ
ವಿಸ್ತಾರ ‘ನವವರ್ಣ’: ಕೇಸರಿ ದಿರಸಿನಲ್ಲಿ ಮಿಂಚಿದ ಬಾಲೆಯರು; ಇಲ್ಲಿದೆ ಫೋಟೊ ಗ್ಯಾಲರಿ
2. ಮುಂದಿನ ವರ್ಷವೇ 5ನೇ ಗ್ಯಾರಂಟಿ ಜಾರಿ; ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
ಮೈಸೂರು: ವಿಶ್ವವಿಖ್ಯಾತ 414ನೇ ಮೈಸೂರು ದಸರಾ (Mysore Dasara) ಮಹೋತ್ಸವಕ್ಕೆ ಅದ್ಧೂರಿಯಾಗಿ ಚಾಲನೆ ದೊರೆತಿದೆ. ನಾದಬ್ರಹ್ಮ ಹಂಸಲೇಖ ಅವರು ದಸರೆಗೆ ಚಾಲನೆ ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಂಸದ ಪ್ರತಾಪ್ ಸಿಂಹ ಸೇರಿ ಹಲವು ಗಣ್ಯರು ಸಾಂಪ್ರದಾಯಿಕ ಕಾರ್ಯಕ್ರಮದ ಉದ್ಘಾಟನೆಗೆ ಸಾಕ್ಷಿಯಾದರು. ಇದೇ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah), ಗ್ಯಾರಂಟಿ ಯೋಜನೆಗಳ (Congress Guarantee Schemes) ಕುರಿತು ಪ್ರಸ್ತಾಪಿಸಿದರು. ಹಾಗೆಯೇ, 2024ರ ಜನವರಿಯಲ್ಲಿ ಕಾಂಗ್ರೆಸ್ ಐದನೇ ಗ್ಯಾರಂಟಿ ಜಾರಿಗೊಳಿಸಲಾಗುವುದು ಎಂದು ಘೋಷಿಸಿದರು. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ
3. ಮಧ್ಯಪ್ರದೇಶ, ತೆಲಂಗಾಣ, ಛತ್ತೀಸ್‌ಗಢದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಟ್ಟ ಕಾಂಗ್ರೆಸ್; ಯಾರಿಗೆಲ್ಲ ಟಿಕೆಟ್?
ನವದೆಹಲಿ: 2024ರ ಲೋಕಸಭೆ ಚುನಾವಣೆಯ (Lok Sabha Election 2024) ಸೆಮಿಫೈನಲ್ ಎಂದೇ ಪರಿಗಣಿಸಲಾಗಿರುವ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಗೆ (Assembly Election 2023) ದಿನಾಂಕ ನಿಗದಿಯಾಗುತ್ತಲೇ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಮಧ್ಯಪ್ರದೇಶ, ಛತ್ತೀಸ್‌ಗಢ ಹಾಗೂ ತೆಲಂಗಾಣದಲ್ಲಿ ಕಾಂಗ್ರೆಸ್ ಮೊದಲ ಅಭ್ಯರ್ಥಿಗಳ ಪಟ್ಟಿ (Congress Candidates List) ಬಿಡುಗಡೆ ಮಾಡಿದ್ದು, ಗೆಲ್ಲುವ ಕುದುರೆಗಳಿಗೆ ಮಣೆ ಹಾಕಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ
4. ರಣಬೇಟೆಗಾರ ಇಸ್ರೇಲ್; ಹಮಾಸ್ 3 ಕಮಾಂಡರ್‌ಗಳ ಉಡೀಸ್!
ಜೆರುಸಲೇಂ: ಇಸ್ರೇಲ್ ಮೇಲೆ ಸಾವಿರಾರು ರಾಕೆಟ್‌ಗಳ ಮೂಲಕ ದಾಳಿ ಮಾಡಿದ ಹಮಾಸ್ ಉಗ್ರರಿಗೆ ಇಸ್ರೇಲ್ ಸೇನೆಯು ತಕ್ಕ ಪಾಠ ಕಲಿಸುತ್ತಿದೆ. ಅದರಲ್ಲೂ, ಗಾಜಾ ನಗರದ ಗಡಿಗೆ ಸಾವಿರಾರು ಸೈನಿಕರು, ನೂರಾರು ಯುದ್ಧ ಟ್ಯಾಂಕರ್‌ಗಳನ್ನು (Israel Palestine War) ಕಳುಹಿಸಿರುವ ಇಸ್ರೇಲ್, ಭೂಮಿ, ಆಕಾಶ ಹಾಗೂ ಸಾಗರ ಪ್ರದೇಶದಿಂದಲೂ ಹಮಾಸ್ ಉಗ್ರರ ಮೇಲೆ ದಾಳಿ ನಡೆಸಲು ಸಿದ್ಧತೆ ನಡೆಸುತ್ತಿದೆ. ಇದಕ್ಕಾಗಿಯೇ ಹಮಾಸ್ ಕಮಾಂಡರ್‌ಗಳನ್ನು (Hamas Commanders) ಗುರಿಯಾಗಿಸಿ ಇಸ್ರೇಲ್ ದಾಳಿ ನಡೆಸುತ್ತಿದ್ದು, ಕೇವಲ 24 ಗಂಟೆಯಲ್ಲಿಯೇ ಮೂವರು ಹಮಾಸ್ ಕಮಾಂಡರ್‌ಗಳನ್ನು ಹತ್ಯೆ ಮಾಡಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ
5. ದೇಶದಲ್ಲಿರಬೇಕು ಎಂದರೆ ಭಾರತ್ ಮಾತಾ ಕಿ ಜೈ ಎನ್ನಲೇಬೇಕು; ಕೇಂದ್ರ ಸಚಿವ ಆದೇಶ!ಹೈದರಾಬಾದ್: ಪಾಕಿಸ್ತಾನ ವಿರುದ್ಧ ನಡೆದ ಕ್ರಿಕೆಟ್ ಪಂದ್ಯದಲ್ಲಿ (ICC World Cup 2023) ರೋಹಿತ್ ಶರ್ಮಾ ಪಡೆ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ದೇಶಾದ್ಯಂತ ಭಾರತ್ ಮಾತಾ ಕಿ ಜೈ (Bharat Mata ki Jai), ವಂದೇ ಮಾತರಂ ಘೋಷಣೆಗಳು ಮೊಳಗಿವೆ. ಇಸೇಲ್‌ನಿಂದ ಸುರಕ್ಷಿತವಾಗಿ ಭಾರತಕ್ಕೆ ವಾಪಸ್ ಬಂದವರೂ ಭಾರತ್ ಮಾತಾ ಕಿ ಜೈ ಎನ್ನುತ್ತಿದ್ದಾರೆ. ಇದರ ಬೆನ್ನಲ್ಲೇ, “ಭಾರತದಲ್ಲಿರಬೇಕು ಎಂದರೆ, ಅವರು ಭಾರತ್ ಮಾತಾ ಕಿ ಜೈ ಎನ್ನಲೇಬೇಕು” ಎಂದು ಕೇಂದ್ರ ಕೃಷಿ ಖಾತೆ ಸಹಾಯಕ ಸಚಿವ ಕೈಲಾಶ್ ಚೌಧರಿ (Kailash Choudhary) ಹೇಳಿದ್ದಾರೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ
6. ಹಮಾಸ್ ಉಗ್ರರ ಬೆಂಬಲಿಸಿದ ರಿಜ್ವಾನ್ ಮುಂದೆ ಜೈಶ್ರೀರಾಮ್ ಘೋಷಣೆ; ಪರ- ವಿರೋಧ ಚರ್ಚೆ
ಅಹಮದಾಬಾದ್ : ಭಾರತ ಹಾಗೂ ಪಾಕಿಸ್ತಾನ (ind vs pak) ನಡುವಿನ ವಿಶ್ವ ಕಪ್ ಕ್ರಿಕೆಟ್ ಪಂದ್ಯ ಅಷ್ಟೊಂದು ಜಿದ್ದಾಜಿದ್ದಿನಿಂದ ಕೂಡಿರಲಿಲ್ಲ. ಭಾರತ ತಂಡದ ಬೌಲಿಂಗ್ ದಾಳಿಗೆ ಬೆದರಿದ ಪಾಕ್ 191 ರನ್ಗೆ ಆಲ್ಔಟ್ ಆದರೆ, ಭಾರತ ತಂಡ ನಿರಾಯಾಸವಾಗಿ 3 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತ್ತು. ಆದರೆ, ಪಂದ್ಯದುದ್ದಕ್ಕೂ ಅಭಿಮಾನಿಗಳ ಅಬ್ಬರ ಜೋರಾಗಿತ್ತು. ಯಾಕೆಂದರೆ 1.32 ಲಕ್ಷ ಸೀಟ್ ಸಾಮರ್ಥ್ಯದ ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ಭಾರತೀಯ ಅಭಿಮಾನಿಗಳೇ ತುಂಬಿದ್ದರು. ಅವರಿಗೆ ಸಂತಸಕ್ಕೆ ಯಾವುದೇ ಲಗಾಮು ಇರಲಿಲ್ಲ. ಹೀಗಾಗಿ ಭಾರತೀಯ ತಂಡಕ್ಕೆ ಬೆಂಬಲ ನೀಡುವ ಜತೆಗೆ ವಿರೋಧಿ ತಂಡದ ಆಟಗಾರರನ್ನು ಲೇವಡಿ ಮಾಡುವ ಕೆಲಸ ಜೋರಾಗಿ ನಡೆದಿದೆ. ಅಂತೆಯೇ 49 ರನ್ಗೆ ಔಟಾಗಿ ಪೆವಿಲಿಯನ್ಗೆ ಮರಳುತ್ತಿದ್ದ ಮೊಹಮ್ಮದ್ ರಿಜ್ವಾನ್ ಮುಂದೆ ಜೈ ಶ್ರೀರಾಮ್ ಎಂದು ಕೂಗಿದ ಘಟನೆ ನಡೆದಿದೆ. ಇದು ಸೋಶಿಯಲ್ ಮೀಡಿಯಾಗಳಲ್ಲಿ ಚರ್ಚೆಗೆ ಕಾರಣವಾಗಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ
ಈ ಸುದ್ದಿಯನ್ನೂ ಓದಿ : ಇಂಡೋ-ಪಾಕ್ ಪಂದ್ಯದ ವೇಳೆ ಜೈ ಶ್ರೀರಾಮ್ ಘೋಷಣೆ ಕೂಗಿದ್ದು ತಪ್ಪು; ಉದಯನಿಧಿ ಸ್ಟಾಲಿನ್ ಟೀಕೆ
7. Actor Prabhas: ಪ್ರಭಾಸ್ ಇನ್‌ಸ್ಟಾಗ್ರಾಮ್ ಇದ್ದಕ್ಕಿಂದ್ದಂತೆ ಮಾಯ; ಹ್ಯಾಕ್ ಆಯ್ತಾ? ಡಿಲಿಟ್ ಮಾಡಿದ್ರಾ?
ಬೆಂಗಳೂರು: ಟಾಲಿವುಡ್ ನಟ ಪ್ರಭಾಸ್ (Actor Prabhas) ಅವರ ಇನ್‌ಸ್ಟಾಗ್ರಾಮ್ ಇದ್ದಕ್ಕಿಂದ್ದಂತೆ ಮಾಯವಾಗಿದೆ. ಕೆಲವರು ಖಾತೆಯನ್ನು ಹ್ಯಾಕ್ ಮಾಡಿರಬಹುದು ಎಂದು ಊಹಿಸಿದರೆ, ಇನ್ನು ಕೆಲವರು ಪ್ರಭಾಸ್ ಅವರೇ ಇನ್‌ಸ್ಟಾವನ್ನು ಡಿಲಿಟ್ ಮಾಡಿದ್ದಾರೆ ಎನ್ನಲಾಗಿದೆ. ಪ್ರಭಾಸ್ ಯಾವಾಗಲೂ ಸಾಮಾಜಿಕ ಮಾಧ್ಯಮದಲ್ಲಿ ಆಕ್ಟಿವ್ ಇರುವುದು ಕಡಿಮೆ. ಇದೀಗ ಈ ಬಗ್ಗೆ ಹಲವು ಚರ್ಚೆಗಳು ಆಗುತ್ತಿವೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ
8. ಜನವರಿ ಮಧ್ಯದಲ್ಲಿ ಹಾಲೋ ಕಕ್ಷೆ ಸೇರಲಿದೆ ಆದಿತ್ಯ ಎಲ್ 1 , ಬಳಿಕ ಸೂರ್ಯನ ಅಧ್ಯಯನ ಶುರು
ಬೆಂಗಳೂರು: ಸೂರ್ಯನ ಅಧ್ಯಯನಕ್ಕೆ (Sun Study) ಕೈಗೊಳ್ಳಲಾಗಿರುವ ಆದಿತ್ಯ ಎಲ್ 1 ಮಿಷನ್ (Aditya L1 Mission) ಯಶಸ್ಸಿನ ಹಾದಿಯಲ್ಲಿದ್ದು, ಆದಿತ್ಯ ಎಲ್ 1 ಬಾಹ್ಯಾಕಾಶ ನೌಕೆ (Aditya L1 Spacecraft) ಜನವರಿಯಲ್ಲಿ ಹಾಲೋ ಕ್ಷಕೆಯನ್ನು (Halo Orbit) ಸೇರಲಿದೆ ಎಂದು ಇಸ್ರೋ ಹೇಳಿದೆ. ಈ ಕುರಿತು ಮಾಹಿತಿ ನೀಡಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಮುಖ್ಯಸ್ಥ ಎಸ್ ಸೋಮನಾಥ (S Somanath) ಅವರು, ಭಾರತದ ಚೊಚ್ಚಲ ಬಾಹ್ಯಾಕಾಶ ಆಧಾರಿತ ಸೌರ ಮಿಷನ್ ಆದಿತ್ಯ-ಎಲ್ 1 ಬಾಹ್ಯಾಕಾಶ ನೌಕೆಯು ಸುಗಮವಾಗಿ ಸಾಗುತ್ತಿದೆ ಮತ್ತು ಜನವರಿ ಮಧ್ಯದ ವೇಳೆಗೆ ಲಾಗ್ರೇಂಜ್ ಪಾಯಿಂಟ್ 1 (L1) ತಲುಪಲಿದೆ ಎಂದು ಹೇಳಿದ್ದಾರೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ
9. ಸೈಬರ್ ಸೇಫ್ಟಿ ಅಂಕಣ: ಮೊಬೈಲ್ ಕಳೆದು ಹೋದರೆ ಏನು ಮಾಡಬೇಕು
ಆ ದಿನಗಳಲ್ಲಿ ನಾವು ಮನೆಯಿಂದ ಹೊರಗೆ ಹೋಗಬೇಕಾದರೆ ಜೇಬಲ್ಲಿ ದುಡ್ದಿರಬೇಕಿತ್ತು. ಇಂದು ಮೊಬೈಲ್ ಜೊತೆಗೆ ಇಂಟರ್‌ನೆಟ್ ಸಂಪರ್ಕ ಇದ್ದರೆ ಎಲ್ಲಾ ವ್ಯವಹಾರಗಳೂ ಸರಾಗ. ಇದರ ಬಗ್ಗೆ “ಅಂಗೈಯಲ್ಲಿ ಅಂತರ್ಜಾಲ, ಅರಿವಿದೆಯೇ ಅಪಾಯ?” ಲೇಖನದಲ್ಲಿ ಬರೆದಿದ್ದೆ. ಡೇಟಾ ದರಗಳು ಕಡಿಮೆಯಾದ ಕಾರಣ, ನಾವೆಲ್ಲರೂ ಸ್ಮಾರ್ಟ್ ಫೋನ್‌ಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಮಾಹಿತಿ ಮತ್ತು ಮನರಂಜನೆಗೆ ಬಳಸುತ್ತಿದ್ದೇವೆ. ಜೊತೆಗೆ ನಮ್ಮ ಬ್ಯಾಂಕಿಂಗ್ ಮತ್ತು ಹಣಕಾಸಿನ ವ್ಯವಹಾರಗಳೂ ಮೊಬೈಲ್ ಮೂಲಕವೇ ನೆಡೆಯುತ್ತಿವೆ. ಇಂತಹ ಸಮಯದಲ್ಲಿ ನಿಮ್ಮ ಮೊಬೈಲ್ ಕಳೆದು ಹೋದರೆ (mobile lost) ಏನಾಗಬಹುದು ಯೋಚಿಸಿದ್ದೀರಾ? ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ
10. Viral Video: ಫಲಿಸಿದ ಪಾಂಡ್ಯ ಮಂತ್ರ ಪಠಣ; ವಿಕೆಟ್ ಕೈಚೆಲ್ಲಿದ ಇಮಾಮ್ ಉಲ್ ಹಕ್
ಅಹಮದಾಬಾದ್: ಪಾಕಿಸ್ತಾನ ವಿರುದ್ಧ ಶನಿವಾರ ನಡೆದ ವಿಶ್ವಕಪ್(icc world cup 2023) ಲೀಗ್ ಪಂದ್ಯದಲ್ಲಿ ಆತಿಥೇಯ ಭಾರತ ತಂಡ 7 ವಿಕೆಟ್ಗಳ ಗೆಲುವು ಸಾಧಿಸಿ ಕೂಟದಲ್ಲಿ ಹ್ಯಾಟ್ರಿಕ್ ಗೆಲುವು ಸಂಪಾದಿಸಿದೆ. ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ(Hardik Pandya) ಅವರು ಮಂತ್ರ ಪಠಣ ಮಾಡಿ ಪಾಕ್ ಆಟಗಾರ ಇಮಾಮ್ ಉಲ್ ಹಕ್(Imam-ul-Haq) ವಿಕೆಟ್ ಕಿತ್ತ ಘಟನೆ ನಡೆಯಿತು. ಈ ವಿಡಿಯೊ ಎಲ್ಲಡೆ ವೈರಲ್ ಆಗಿದೆ. ಪೂರ್ಣ ಸುದ್ದಿ ಓದಲು ಈ ಲಿಂಕ್ ಕ್ಲಿಕ್ ಮಾಡಿ
ಇನ್ನಷ್ಟು ವೈರಲ್ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ.