ತಿರುವನಂತಪುರ : ಭಾರತ ಹಾಗೂ ಪ್ರವಾಸಿ ದಕ್ಷಿಣ ಆಫ್ರಿಕಾ ನಡುವೆ ನಡೆಯಲಿರುವ ಮೂರು ಪಂದ್ಯಗಳ ಟಿ೨೦ ಸರಣಿಗೆ ವೇದಿಕೆ ಸಜ್ಜುಗೊಂಡಿದೆ. ಅಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ೨-೧ ಅಂತರಿಂದ ವಿಜಯ ಸಾಧಿಸಿರುವ ಭಾರತಕ್ಕೆ ಆ ಬಳಿಕದ ಸರಣಿ ಇದಾಗಿದ್ದು, ಗೆಲುವಿನ ವಿಶ್ವಾಸದಲ್ಲಿದೆ. ಹೀಗಾಗಿ ಮೊದಲ ಪಂದ್ಯವನ್ನ ಗೆದ್ದು ಸರಣಿಯಲ್ಲಿ ಶುಭಾರಂಭ ಮಾಡುವ ವಿಶ್ವಾಸದಲ್ಲಿದೆ ರೋಹಿತ್ ಶರ್ಮ ಬಳಗ. ಅಂತೆಯೇ ಮುಂಬರುವ ಟಿ೨೦ ವಿಶ್ವ ಕಪ್‌ಗೆ ಮೊದಲು ಭಾರತ ತಂಡಕ್ಕೆ ಭಾಗಿಯಾಗುವ ಕೊಟ್ಟಕೊನೆಯ ಟಿ೨೦ ಸರಣಿ ಇದಾಗಿದೆ.
ಎಲ್ಲಿ ನಡೆಯಲಿದೆ ಪಂದ್ಯ?
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಟಿ೨೦ ಸರಣಿಯ ಮೊದಲ ಪಂದ್ಯ ಕೇರಳದ ತಿರುವನಂತಪುರದ ಗ್ರೀನ್‌ಫೀಲ್ಡ್ ಸ್ಟೇಡಿಯಮ್‌ನಲ್ಲಿ ಅಯೋಜನೆಗೊಂಡಿದೆ. ಇದು ೨೦೧೫ರಲ್ಲಿ ನಿರ್ಮಾಣಗೊಂಡಿರುವ ಕ್ರೀಡಾಂಗಣವಾಗಿದ್ದು, ಇದುವರೆಗೆ ಮೂರು ಅಂತಾರಾಷ್ಟ್ರೀಯ ಪಂದ್ಯಗಳು ನಡೆದಿವೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡ ಇಲ್ಲಿ ಆಡುತ್ತಿರುವುದು ಇದೇ ಮೊದಲು. ಈ ಸ್ಟೇಡಿಯಮ್‌ನಲ್ಲಿ ಎರಡು ಟಿ೨೦ ಹಾಗೂ ಒಂದು ಏಕದಿನ ಪಂದ್ಯ ನಡೆದಿದೆ. ಒಂದು ಟಿ೨೦ ಹಾಗೂ ಒಂದು ಏಕ ದಿನ ಪಂದ್ಯದಲ್ಲಿ ಭಾರತ ತಂಡ ಜಯಿಸಿದೆ. (ನ್ಯೂಜಿಲೆಂಡ್ ವಿರುದ್ಧ ಟಿ೨೦ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ). ಆದರೆ, ೨೦೧೯ರಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧ ಸೋಲು ಕಂಡಿದೆ.
ಹೇಗಿದೆ ಪಿಚ್
ಈ ಪಿಚ್ ಬ್ಯಾಟಿಂಗ್‌ಗೆ ಪೂರಕ. ಆದರೆ, ಆರಂಭದಲ್ಲಿ ಬೌಲರ್‌ಗಳಿಗೆ ನೆರವಾಗುತ್ತದೆ. ನಂತರದಲ್ಲಿ ನಿಧಾನಗೊಂಡು ಬ್ಯಾಟರ್‌ಗಳಿಗೆ ಅನುಕೂಲ ಕಲ್ಪಿಸುತ್ತದೆ. ದೊಡ್ಡ ಮೊತ್ತದ ಸ್ಕೋರ್ ಇಲ್ಲಿ ದಾಖಲಾಗುತ್ತದೆ.
ನೇರ ಪ್ರಸಾರ ಎಲ್ಲಿ?
ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಸರಣಿಯ ಪಂದ್ಯಗಳು ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ ಟಿವಿಗಳಲ್ಲಿ ನೇರ ಪ್ರದರ್ಶನಗೊಳ್ಳುತ್ತದೆ. ಅದೇ ರೀತಿ ಡಿಸ್ನಿ ಹಾಟ್ ಸ್ಟಾರ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಕೂಡ ಇರುತ್ತದೆ.
ಸರಣಿಯ ವೇಳಾಪಟ್ಟಿ ಇಂತಿದೆ
ಮೊದಲ ಪಂದ್ಯ- ಸೆಪ್ಟೆಂಬರ್ ೨೮- ತಿರುವನಂತಪುರ
ಎರಡನೇ ಪಂದ್ಯ- ಅಕ್ಟೋಬರ್ ೨, ಗುವಾಹಟಿ
ಮೂರನೇ ಪಂದ್ಯ- ಅಕ್ಟೋಬರ್ ೪- ಇಂದೋರ್
ತಂಡಗಳು
ಭಾರತ ಟಿ20 ತಂಡ:
ರೋಹಿತ್ ಶರ್ಮ (ನಾಯಕ), ಕೆ.ಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ರಿಷಭ್ ಪಂತ್, ದಿನೇಶ್ ಕಾರ್ತಿಕ್ , ರವಿಚಂದ್ರನ್ ಅಶ್ವಿನ್, ಯಜ್ವೇಂದ್ರ ಚಹಲ್, ಅಕ್ಷರ್ ಪಟೇಲ್, ಅರ್ಶ್‌ದೀಪ್ ಸಿಂಗ್, ಶಹಬಾಜ್, ಹರ್ಷಲ್ ಪಟೇಲ್, ದೀಪಕ್ ಚಾಹರ್, ಜಸ್ಪ್ರೀತ್ ಬುಮ್ರಾ.
ದಕ್ಷಿಣ ಆಫ್ರಿಕಾ:
ತೆಂಬಾ ಬವುಮಾ, ಕ್ವಿಂಟನ್ ಡಿ ಕಾಕ್, ಹೆನ್ರಿಕ್ ಕ್ಲಾಸೆನ್, ರೀಜಾ ಹೆಂಡ್ರಿಕ್ಸ್, ಕೇಶವ್ ಮಹಾರಾಜ್, ಏಡೆನ್ ಮಾರ್ಕ್ರಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಆನ್ರಿಚ್ ನೋರ್ಜೆ, ವೇಯ್ನ್ ಪರ್ನೆಲ್,ಡ್ವೇನ್ ಪ್ರಿಟೋರಿಯಸ್, ಕಗಿಸೊ ರಬಾಡ, ರಿಲಿ ರೊಸೊ, ತಬ್ರೇಜ್ ಶಂಸಿ, ಟ್ರಿಸ್ಟಾನ್ ಸ್ಟಬ್ಸ್.
ಇದನ್ನೂ ಓದಿ | IND vs SA | ತಿರುವನಂತಪುರ ಕ್ರೀಡಾಂಗಣದಲ್ಲಿ ಭಾರತ ತಂಡ ಎಷ್ಟು ಬಾರಿ ಗೆದ್ದಿದೆ? ಪಿಚ್ ಸ್ಥಿತಿ ಹೇಗಿದೆ?