Site icon Vistara News

IPL 2023 : ಎಸ್​ಆರ್​ಎಚ್​ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ತಂಡದಲ್ಲಿ ಸೃಷ್ಟಿಯಾದ ದಾಖಲೆಗಳ ಪಟ್ಟಿ ಇಲ್ಲಿದೆ

Here's a list of records created by RCB in their match against SRH

#image_title

ಹೈದರಾಬಾದ್​​: ಐಪಿಎಲ್ 16ನೇ ಆವೃತ್ತಿಯ (IPL 2023) 65ನೇ ಪಂದ್ಯದಲ್ಲಿ ಸನ್​ ರೈಸರ್ಸ್​ ಹೈದರಾಬಾದ್​ ತಂಡ ಆರ್​ಸಿಬಿ ತಂಡ ಎಂಟು ವಿಕೆಟ್​ಗಳ ಸುಲಭ ಜಯ ದಾಖಲಿಸಿತು. ಈ ಗೆಲುವಿನ ಮೂಲಕ ಹಾಲಿ ಆವೃತ್ತಿಯ ಐಪಿಎಲ್​ನ ಪ್ಲೇಆಫ್​ ಹಾದಿಯಲ್ಲಿ ಇನ್ನೊಂದು ಹೆಜ್ಜೆ ಮುಂದಕ್ಕೆ ಇಟ್ಟಿತು. ಏತನ್ಮಧ್ಯೆ,, ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ (100) ಶತಕ ಬಾರಿಸಿ ದಾಖಲೆ ಮಾಡಿದ್ದಾರೆ. ಅಂತೆಯೇ ಈ ಪಂದ್ಯದಲ್ಲಿ ಹಲವಾರು ದಾಖಲೆಗಳು ಸೃಷ್ಟಿಯಾಗಿವೆ. ಅವುಗಳು ಯಾವುವು ಎಂದು ನೋಡೋಣ.

ಈ ಪಂದ್ಯದ ಶತಕದ ಮೂಲಕ ವಿರಾಟ್​ ಕೊಹ್ಲಿ ಶ್ರೀಮಂತ ಕ್ರಿಕೆಟ್​ ಲೀಗ್​ ಐಪಿಎಲ್​ನಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ದಾಖಲೆಯನ್ನು ಮಾಜಿ ಆಟಗಾರ ಕ್ರಿಸ್​ ಗೇಲ್​ ಜತೆ ಹಂಚಿಕೊಂಡರು. ವಿರಾಟ್ ಕೊಹ್ಲಿ ಪಾಲಿಗೆ ಇದು ಆರನೇ ಶತಕ . ವೆಸ್ಟ್​ ಇಂಡೀಸ್​ ನ ದೈತ್ಯ ಆಟಗಾರ ಕ್ರಿಸ್​ ಗೇಲ್​ ಆರು ಶತಕಗಳನ್ನು ಬಾರಿಸಿ ಗರಿಷ್ಠ ಶತಕಗಳನ್ನು ಬಾರಿಸಿದವರ ಸಾಲಿನಲ್ಲಿ ಅಗ್ರಗಣ್ಯ ಎನಿಸಿಕೊಂಡಿದ್ದರು. ವಿರಾಟ್ ಕೊಹ್ಲಿ ಆ ದಾಖಲೆಯನ್ನು ಸರಿಗಟ್ಟಿದ್ದಾರೆ. ಕೊಹ್ಲಿ ಈಗಲೂ ಆಡುತ್ತಿರುವ ಆಟಗಾರನಾಗಿರುವ ಕಾರಣ ದಾಖಲೆ ವಿಚಾರಕ್ಕೆ ಬಂದಾಗ ಒಂದು ಹೆಜ್ಜೆ ಮುಂದಿಟ್ಟಂತಾಗಿದೆ.

ವಿರಾಟ್ ಕೊಹ್ಲಿ ಈ ಪಂದ್ಯದಲ್ಲಿ 63 ಎಸೆತಗಳಲ್ಲಿ ಶತಕ ಬಾರಿಸುವ ಜತೆಗೆ ಐಪಿಎಲ್​ನಲ್ಲಿ 7500 ರನ್ ಬಾರಿಸಿದ ದಾಖಲೆಯನ್ನೂ ಮಾಡಿದರು. ಈ ಮೂಲಕ ಇಂಡಿಯನ್ ಪ್ರೀಮಿಯರ್​ ಲೀಗ್​ನಲ್ಲಿ ಗರಿಷ್ಠ ರನ್ ಬಾರಿಸಿದ ಏಕೈಕ ಆಟಗಾರ ಎಂಬ ಖ್ಯಾತಿಯನ್ನು ತಮ್ಮದಾಸಿಕೊಂಡರು.

ನಾಲ್ಕು ವರ್ಷಗಳ ಬಳಿಕ ಶತಕ

ವಿರಾಟ್​ ಕೊಹ್ಲಿ ಪಾಲಿಗೆ ಇದು ನಾಲ್ಕು ವರ್ಷಗಳ ಬಳಿಕ ಬಾರಿಸಿದ ಶಕವಾಗಿದೆ. 2019ನೇ ಅವೃತ್ತಿಯಲ್ಲಿ ವಿರಾಟ್​ ಕೊಹ್ಲಿ ಕೋಲ್ಕೊತಾ ನೈಟ್​ ರೈಡರ್ಸ್​ ತಂಡ ವಿರುದ್ಧ ಶತಕ ಬಾರಿಸಿದ್ದರು. ಆ ಬಳಿಕದ ಮೂರು ಆವೃತ್ತಿಯಲ್ಲಿ ಅವರ ಬ್ಯಾಟಿಂಗ್ ವೈಖರಿ ಕಳೆಗುಂದಿತ್ತು. ಇದೀಗ ಎಸ್ಆರ್​ಎಚ್​ ವಿರುದ್ಧ ಮತ್ತೆ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದಾರೆ. ಹಾಲಿ ಆವೃತ್ತಿಯಲ್ಲಿ ವಿರಾಟ್​ ಕೊಹ್ಲಿ ಆರು ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಒಟ್ಟಾರೆ ಆಡಿರುವ 13 ಪಂದ್ಯಗಳಲ್ಲಿ 538 ರನ್​ ಬಾರಿಸಿದ್ದು ಆರೆಂಜ್ ಕ್ಯಾಪ್​ ಸ್ಪರ್ಧೆಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಇಷ್ಟೊಂದು ಇನಿಂಗ್ಸ್​ಗಳಲ್ಲಿ 52 ಫೊರ್​ ಹಾಗೂ 15 ಸಿಕ್ಸರ್​ಗಳನ್ನು ಬಾರಿಸಿದ್ದಾರೆ.

ಕೊಹ್ಲಿ- ಪ್ಲೆಸಿಸ್​ ಜತೆಯಾಟ ದಾಖಲೆಗಳು

ವಿರಾಟ್​ ಕೊಹ್ಲಿ_ ಫಾಪ್ ಡು ಪ್ಲೆಸಿಸ್​ ಆರ್​ಸಿಬಿ ಪರವಾಗಿ ನಾಲ್ಕನೇ ಬಾರಿ ಶತಕದ ಜತೆಯಾಟವನ್ನಾಡಿದ ದಾಖಲೆ ಮಾಡಿದರು. ಈ ಹಿಂದೆ ಅವರು ವೆಸ್ಟ್​ ಇಂಡೀಸ್​ ದೈತ್ಯ ಬ್ಯಾಟ್ಸ್​ಮನ್​ ಕ್ರಿಸ್​ ಗೇಲ್​ ಅವರೊಂದಿಗೆ ನಾಲ್ಕು ಬಾರಿ ಶತಕದ ಜತೆಯಾಟ ನೀಡಿದ್ದರು. ಈ ಮೂಲಕ ಫಾಫ್​ ಡು ಪ್ಲೆಸಿಸ್​ ಹಾಗೂ ವಿರಾಟ್​ ಕೊಹ್ಲಿ ಹೊಸ ದಾಖಲೆಯೊಂದನ್ನು ಸೃಷ್ಟಿಸಿದ್ದಾರೆ.

ಇದೇ ವೇಳೆ ವಿರಾಟ್ ಕೊಹ್ಲಿ ಹಾಗೂ ಪ್ಲೆಸಿಸ್ ಐಪಿಎಲ್​ ತಂಡವೊಂದರ ಪರ ಆವೃತ್ತಿಯೊಂದರಲ್ಲಿ ಅತ್ಯಧಿಕ ಬಾರಿ ಆರಂಭಿಕರಾಗಿ ಅರ್ಧ ಶತಕದ ಜತೆಯಾಟವಾಡಿದ ದಾಖಲೆಯನ್ನೂ ಸೃಷ್ಟಿಸಿದರು. ವಿರಾಟ್​ ಹಾಗೂ ಪ್ಲೆಸಿಸ್ ಅವರದ್ದು ಇದು ಆರನೇ ಅರ್ಧ ಶತಕದ ಜತೆಯಾಟವಾಗಿದೆ. ಈ ಹಿಂದೆ 2019ರಲ್ಲಿ ಎಸ್​ಆರ್​ಎಚ್ ತಂಡದ ಜಾನಿ ಬೇರ್​ಸ್ಟೋವ್​ ಹಾಗೂ ಡೇವಿಡ್​ ವಾರ್ನರ್​ ಏಳು ಬಾರಿ 50 + ರನ್​ ಬಾರಿಸಿದ್ದರು. ಈ ಮೂಲಕ ಮತ್ತೊಂದು ದಾಖಲೆಯನ್ನು ಸರಿಗಟ್ಟಿದಂತಾಗಿದೆ.

Exit mobile version