ದೆಹಲಿ : ಶನಿವಾರ ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಐಪಿಎಲ್ 2023ರ ತನ್ನ ಕೊನೆಯ ಲೀಗ್ ಪಂದ್ಯವನ್ನು ಆಡುತ್ತಿದೆ. ಇದುವರೆಗೆ ಆಡಿರುವ 13 ಪಂದ್ಯಗಳಲ್ಲಿ 7 ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಆದಾಗ್ಯೂ, ಕಳೆದ ವಾರ ತವರಿನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧ ಸೋತ ನಂತರ ಇದೀಗ ಕೊನೇ ಪಂದ್ಯದಲ್ಲಿ ಆಡುತ್ತಿದೆ.
ಅಂತೆಯೇ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ ನಂತರ ನಿರೂಪಕ ಡ್ಯಾನಿ ಮಾರಿಸನ್ ಅವರು ಪ್ಲೇಆಫ್ ಅರ್ಹತೆ ಕುರಿತು ಕೇಳಿದ ಪ್ರಶ್ನೆಗೆ ವಿಭಿನ್ನವಾಗಿ ಉತ್ತರಿಸಿದರು. ಅದಕ್ಕಿಂತ ಮೊದಲು ಟಾಸ್ ಗೆದ್ದ ಧೋನಿ ನೆಟ್ರನ್ರೇಟ್ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಮೊದಲು ಬ್ಯಾಟಿಂಗ್ ಮಾಡಲು ಆಯ್ಕೆ ಮಾಡಿದರು. ಎಲ್ಎಸ್ಜಿ ತಂಡ ಕೊನೇ ಪಂದ್ಯದಲ್ಲಿ ಕೊನೇ ಪಂದ್ಯದಲ್ಲಿ ನೆಟ್ರನ್ರೇಟ್ ಹೆಚ್ಚಿಸಿಕೊಂಡರೇ ಮೂರನೇ ಸ್ಥಾನ ಸಿಗಬಹುದು ಎಂಬ ಭಯದಿಂದ ಆ ರೀತಿ ಮಾಡಿದರು.
ನ್ಯೂಜಿಲೆಂಡ್ನ ಮಾಜಿ ಕ್ರಿಕೆಟಿಗ ಡ್ಯಾನಿ ಮಾರಿಸನ್ ಟಾಸ್ ಗೆದ್ದ ಬಳಿಕ ಧೋನಿಯನ್ನು ಪ್ರಶ್ನಿಸಿ “ನೀವು ಪ್ಲೇಆಫ್ಗೆ ಅರ್ಹತೆ ಪಡೆಯುತ್ತಿರಲ್ಲವೇ ಎಂದು ಕೇಳಿದರು. ಅದಕ್ಕೆ ಧೋನಿ ಮುಗುಳ್ನಕ್ಕು, “ನಾವು ಮೊದಲ ಪಂದ್ಯದಿಂದಲೇ ಪಂದ್ಯಗಳನ್ನು ಗೆಲ್ಲಲು ಪ್ರಯತ್ನಿಸುತ್ತಿದ್ದೇವೆ” ಎಂದು ಉತ್ತರಿಸಿದರು.
“ನಾವು ಆರಂಭದಿಂದಲೂ ಒಂದೇ ತಂಡದೊಂದಿಗೆ ಆಡುತ್ತಿದ್ದೇವೆ. ಇದು ಸಮತೋಲಿತ ಹನ್ನೊಂದರ ಬಳಗ ಮತ್ತು ನಮಗೆ ಹೆಚ್ಚಿನ ಬದಲಾವಣೆಗಳನ್ನು ಮಾಡುವ ಅಗತ್ಯ ಎದುರಾಗಿಲ್ಲ. ದಿನದ ಆಟ, ಪಂದ್ಯವು ಮುಂದುವರಿದಂತೆ ಪಿಚ್ ಸಹ ನಿಧಾನಗೊಳ್ಳುತ್ತದೆ, ಅದಕ್ಕಾಗಿಯೇ ನಾವು ಮೊದಲು ಬ್ಯಾಟಿಂಗ್ ಮಾಡಲು ಬಯಸಿದ್ದೇವೆ. ಈ ರೀತಿಯ ಪಿಚ್ನಲ್ಲಿ ನಾವು ಉತ್ತಮ ಮತ್ತು ಕೆಟ್ಟ ಪಂದ್ಯಗಳನ್ನು ಹೊಂದಿದ್ದೇವೆ. ಪ್ರತಿ ಪಂದ್ಯದಿಂದ ಕಲಿತಿದ್ದೇವೆ. ಅದೇ ರೀತಿ ತಂಡದ ಆಟಗಾರರು ಕಲಿಯಬೇಕಾಗಿದೆ, ಎಂದು ಧೋನಿ ಹೇಳಿದರು.
ಡೆಲ್ಲಿ ಕೇವಲ ಎರಡು ಬದಲಾವಣೆಗಳನ್ನು ಮಾಡಿದೆ, “ಲಲಿತ್ ಯಾದವ್ ಆಡುತ್ತಾರೆ, ಸಕಾರಿಯಾ ತಂಡಕ್ಕೆ ಸೇರ್ಪಡೆಗೊಳ್ಳಲಿದ್ದು, ಇಶಾಂತ್ ಹೊರಹೋಗುತ್ತಾರೆ ಎಂದು ಡೆಲ್ಲಿ ಕ್ಯಾಪಿಲಟ್ಸ್ ನಾಯಕ ಡೇವಿಡ್ ವಾರ್ನರ್ ಹೇಳಿದ್ದಾರೆ.
ತಂಡಗಳು ಇಂತಿವೆ
ಡೆಲ್ಲಿ ಕ್ಯಾಪಿಟಲ್ಸ್: ಡೇವಿಡ್ ವಾರ್ನರ್ (ನಾಯಕ), ಫಿಲಿಪ್ ಸಾಲ್ಟ್ (ವಿಕೆಟ್ ಕೀಪರ್), ರಿಲೀ ರೊಸೌ, ಯಶ್ ಧುಲ್, ಅಮನ್ ಹಕೀಮ್ ಖಾನ್, ಅಕ್ಷರ್ ಪಟೇಲ್, ಲಲಿತ್ ಯಾದವ್, ಕುಲದೀಪ್ ಯಾದವ್, ಚೇತನ್ ಸಕಾರಿಯಾ, ಖಲೀಲ್ ಅಹ್ಮದ್, ಅನ್ರಿಚ್ ನೋರ್ಜೆ.
ಚೆನ್ನೈ ಸೂಪರ್ ಕಿಂಗ್ಸ್ : ಋತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಅಜಿಂಕ್ಯ ರಹಾನೆ, ಅಂಬಟಿ ರಾಯುಡು, ಶಿವಂ ದುಬೆ, ಮೊಯೀನ್ ಅಲಿ, ರವೀಂದ್ರ ಜಡೇಜಾ, ಎಂಎಸ್ ಧೋನಿ (ಸಿ & ವಿಕೆ), ದೀಪಕ್ ಚಹರ್, ತುಷಾರ್ ದೇಶಪಾಂಡೆ, ಮಹೀಶ್ ತೀಕ್ಷಣ.