ಬೆಂಗಳೂರು: ಐಸಿಸಿ ವಿಶ್ವಕಪ್ 2023ರ ಪಂದ್ಯಾವಳಿಯು ನಿರ್ಣಾಯಕ ಹಂತ ತಲುಪುತ್ತಿದೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಸೆಮಿಫೈನಲ್ ತಲುಪಿದೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ಈಗಾಗಲೇ ಸೆಮಿಫೈನಲ್ನಲ್ಲಿ ತಮ್ಮ ಸ್ಥಾನಗಳನ್ನು ಭದ್ರಪಡಿಸಿಕೊಂಡಿದ್ದು, ಪಾಯಿಂಟ್ಸ್ ಟೇಬಲ್ನಲ್ಲಿ ಮೊದಲ ಎರಡು ಸ್ಥಾನಗಳನ್ನು ಆಕ್ರಮಿಸಿಕೊಂಡಿವೆ. ಮತ್ತೊಂದೆಡೆ, ಆಸ್ಟ್ರೇಲಿಯಾ ಸೆಮಿಫೈನಲ್ ಸ್ಥಾನವನ್ನು ಇನ್ನೂ ಖಾತರಿಪಡಿಸಿಲ್ಲ. ಆದರೆ ಮುಂಬರುವ ಪಂದ್ಯಗಳಲ್ಲಿ ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶವನ್ನು ಎದುರಿಸಲು ಎರಡು ಅವಕಾಶಗಳಿವೆ. ಈ ಎರಡೂ ಪಂದ್ಯಗಳಲ್ಲಿ ಜಯ ಗಳಿಸಿದರೆ ಆಸ್ಟ್ರೇಲಿಯಾ ಲೀಗ್ ಹಂತದಲ್ಲಿ ಅಗ್ರ ಮೂರು ಸ್ಥಾನಗಳಲ್ಲಿ ಸ್ಥಾನ ಪಡೆಯಲಿದೆ.
ನಾಲ್ಕನೇ ಮತ್ತು ಅಂತಿಮ ಸೆಮಿಫೈನಲ್ ಸ್ಥಾನಕ್ಕಾಗಿ ತೀವ್ರ ಹೋರಾಟ ನಡೆಯುತ್ತಿದೆ. ನ್ಯೂಜಿಲೆಂಡ್, ಪಾಕಿಸ್ತಾನ ತಂಡ ರೇಸ್ನಲ್ಲಿ ಮುಂಚೂಣಿಯಲ್ಲಿದೆ. ಅಫ್ಘಾನಿಸ್ತಾನವೂ ಇದರ ಜತೆಗಿದೆ. ಶ್ರೀಲಂಕಾ ಮತ್ತು ನೆದರ್ಲ್ಯಾಂಡ್ಸ್ ತಂಡಕ್ಕೆ ಅವಕಾಶವಿದೆ. ಭಾರತ ಅಗ್ರ ಕ್ರಮಾಂಕದಲ್ಲಿ ಇರುವ ಕಾರಣ ನಾಲ್ಕನೇ ಸ್ಥಾನ ಪಡೆಯುವ ತಂಡವು ಸೆಮಿಫೈನಲ್ನಲ್ಲಿ ಭಾರತವನ್ನು ಎದುರಿಸಲಿದೆ. ಹೀಗಾಗಿ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿಯಾಗುವ ಸಾಧ್ಯತೆಯನ್ನು ಸೃಷ್ಟಿಸಿದೆ.
ಸನ್ನಿವೇಶ 1
ಸಂಭಾವ್ಯ ಸನ್ನಿವೇಶವೊಂದರಲ್ಲಿ ನ್ಯೂಜಿಲೆಂಡ್ ತಂಡ ಶ್ರೀಲಂಕಾ ವಿರುದ್ಧ ಸೋತರೆ ಮತ್ತು ಪಾಕಿಸ್ತಾನವು ಇಂಗ್ಲೆಂಡ್ ಅನ್ನು ಸೋಲಿಸಿದರೆ ಪಾಕಿಸ್ತಾನವು ಹತ್ತು ಅಂಕಗಳನ್ನು ಪಡೆಯುತ್ತಿದೆ. ನ್ಯೂಜಿಲೆಂಡ್ನ ಎಂಟು ಅಂಕಗಳನ್ನು ಮೀರಿಸುತ್ತದೆ. ಜತೆಗೆ ಪಾಕ್ ತಂಡಕ್ಕೆ ತನ್ನ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸಲು ಆಸ್ಟ್ರೇಲಿಯಾ ತಂಡದ ಅಗತ್ಯವಿದೆ. ಯಾಕೆಂದರೆ ಸೆಮೀಸ್ಗೆ ಪ್ರವೇಶ ಪಡೆಯಲು ಪ್ರಯತ್ನಿಸುತ್ತಿರುವ ಅಫಘಾನಿಸ್ತಾನ ತಂಡವನ್ನು ಆಸೀಸ್ ಸೋಲಿಸಿದರೆ ಪಾಕ್ ಮಾರ್ಗ ತೆರವಾಗುತ್ತದೆ. ನಾಲ್ಕನೇ ಸ್ಥಾನಕ್ಕೇರಿ ಭಾರತವನ್ನು ಎದುರಿಸುತ್ತದೆ.
ಇದನ್ನೂ ಓದಿ: ICC World Cup 2023 : ಲಂಕಾ ವಿರುದ್ಧ ಗೆದ್ದ ಬಳಿಕ ಅಂಕಪಟ್ಟಿಯಲ್ಲಿ ಬಾಂಗ್ಲಾ ತಂಡದ ಸ್ಥಾನವೇನು?
ಸನ್ನಿವೇಶ 2
ಒಂದು ವೇಳೆ ನ್ಯೂಜಿಲೆಂಡ್ ಶ್ರೀಲಂಕಾ ವಿರುದ್ಧ ಗೆಲುವು ಸಾಧಿಸಿದರೆ, ಪಾಕಿಸ್ತಾನ ಇಂಗ್ಲೆಂಡ್ ವಿರುದ್ಧ ಗೆದ್ದರೆ, ಅಫ್ಘಾನಿಸ್ತಾನದ ಅಭಿಯಾನ ಎರಡು ಸೋಲಿನಲ್ಲಿ ಕೊನೆಗೊಂಡರೆ, ನಾಲ್ಕನೇ ಸ್ಥಾನವು ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ನೆಟ್ ರನ್ ರೇಟ್ಮೂಲಕ ನಿರ್ಧಾಗೊಳ್ಳುತ್ತದೆ. ನ್ಯೂಜಿಲೆಂಡ್ ತಂಡದ ನೆಟ್ ರನ್ ರೇಟ್ ಅನ್ನು ಹಿಂದಿಕ್ಕಲು, ಪಾಕಿಸ್ತಾನವು ಇಂಗ್ಲೆಂಡ್ ವಿರುದ್ಧದ ಗೆಲುವಿನ ಅಂತರ ಹೆಚ್ಚಿಸಬೇಕು. ಆದಾಗ್ಯೂ, ಅಫ್ಘಾನಿಸ್ತಾನವು ತನ್ನ ಉಳಿದ ಎರಡು ಪಂದ್ಯಗಳಲ್ಲಿ ಕನಿಷ್ಠ ಒಂದು ಪಂದ್ಯ ಗೆದ್ದರೆ ಹತ್ತು ಅಂಕಗಳನ್ನು ಪಡೆಯುತ್ತದೆ. ಇದರ ಹೊರತಾಗಿಯೂ ಆ ತಂಡ ನಕಾರಾತ್ಮಕ ನೆಗೆಟಿವ್ (-0.330) ನೆಟ್ ರನ್ ರೇಟ್ ಕಾರಣಕ್ಕೆ ನಾಲ್ಕನೇ ಕ್ರಮಾಂಕದ ರೇಸ್ನಲ್ಲಿ ಮೂರನೇ ಸ್ಥಾನದಲ್ಲಿರುತ್ತದೆ.
ಸನ್ನಿವೇಶ 3
ಶ್ರೀಲಂಕಾ ವಿರುದ್ಧದ ನ್ಯೂಜಿಲೆಂಡ್ನ ಅಂತಿಮ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದರೆ ಮತ್ತು ಪಾಕಿಸ್ತಾನದ ಇಂಗ್ಲೆಂಡ್ ವಿರುದ್ಧ ಗೆದ್ದರೆ ಪಾಕಿಸ್ತಾನ ತಂಡ ಸೆಮೀಸ್ಗೆ ತಲುಪಬಹುದು. ಆದರೆ, ಆಫ್ಘನ್ ತಂಡ ಎರಡೂ ಪಂದ್ಯ ಗೆದ್ದರೆ ಆ ತಂಡಕ್ಕೆ ಅವಕಾಶ. ಜತೆಗೆ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ನ ಕೊನೆಯ ಪಂದ್ಯಗಳ ಮೇಲೆ ಮಳೆ ಪರಿಣಾಮ ಬೀರಿದರೆ ನ್ಯೂಜಿಲೆಂಡ್ ತಮ್ಮ ಉತ್ತಮ ರನ್ರೇಟ್ ಕಾರಣದಿಂದಾಗಿ ಸೆಮಿಫೈನಲ್ಗೆ ಪ್ರವೇಶಿಸುತ್ತದೆ.