ಮುಂಬಯಿ: ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಫಾರ್ಮ್ ಕಳೆದುಕೊಂಡು ಹಿರಿಯ ಕ್ರಿಕೆಟಿಗರ ಟೀಕೆಗಳಿಗೆ ಗುರಿಯಾಗುತ್ತಿದೆ. ಎರಡು ಕಳೆದ ಮೂರು ವರ್ಷಗಳಿಂದ ಒಂದೇ ಒಂದು ಶತಕ ಬಾರಿಸಿದ ಅವರ ಆಟದ ಸಾಮರ್ಥ್ಯ ಕುಸಿತದ ಬಗ್ಗೆ ದೊಡ್ಡ ಮಟ್ಟಿಗೆ ಚರ್ಚೆ ನಡೆಯುತ್ತಿದೆ.
ಫಾರ್ಮ್ ಪಾತಾಳಕ್ಕೆ ಇಳಿದರೂ ವಿರಾಟ್ ಕೊಹ್ಲಿಯ ಜನಪ್ರಿಯತೆ ಕಡಿಮೆಯಾಗಿಲ್ಲ. ಭಾರತದಲ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಕ್ರೀಡಾಪಟುಗ ಹಾಗೂ ವಿಶ್ವದ ಜನಪ್ರಿಯ ಕ್ರೀಡಾಪಟುಗಳ ಸಾಲಿನಲ್ಲೂ ಅಗ್ರ ಕ್ರಮಾಂಕ ಹೊಂದಿದ್ದಾರೆ. ಹೀಗಾಗಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಮಾಡುವ ಪೋಸ್ಟ್‌ಗಳಿಗೆ ಸಿಕ್ಕಾಪಟ್ಟೆ ಮೌಲ್ಯವಿದೆ.
ವಿರಾಟ್ ಮಾಡುವ ಸೋಶಿಯಲ್ ಮೀಡಿಯಾ ಪೋಸ್ಟ್‌ಗಳು ಪರಿಣಾಮಕಾರಿ ಎಂಬ ಕಾರಣಕ್ಕೆ ಕೆಲವು ಕಂಪನಿಗಳು ತಮ್ಮ ಬ್ರಾಂಡ್‌ಗೆ ಉತ್ತೇಜನ ಕೊಟ್ಟರೆ ವಿರಾಟ್ ಕೊಹ್ಲಿಗೆ ಹಣ ನೀಡುತ್ತದೆ. ಇನ್‌ಸ್ಟಾಗ್ರಾಮ್ ಈ ರೀತಿಯ ಹಣ ಕೊಡುವ ಕಂಪನಿಯಾಗಿದೆ. ಅಂತೆಯೇ ವಿರಾಟ್ ಕೊಹ್ಲಿ ಇನ್‌ಸ್ಟಾಗ್ರಾಮ್ ಮೂಲಕ ಯಾವುದಾದರೂ ಒಂದು ಪ್ರಾಯೋಜಿತ ಪೋಸ್ಟ್ ಮಾಡಿದರೆ ೬.೬೯ ಕೋಟಿ ರೂಪಾಯಿ ಪಡೆಯುತ್ತಾರೆ ಎಂಬುದಾಗಿ HopperHQ ವರದಿ ಸಂಸ್ಥೆಯ ಸಮೀಕ್ಷೆ ಹೇಳಿದೆ.
ದೊಡ್ಡ ಮೊತ್ತವನ್ನು ಪಡೆಯುವಲ್ಲಿ ವಿರಾಟ್ ಕೊಹ್ಲಿ ವಿಶ್ವದ ಅಗ್ರ ೨೫ ಕ್ರೀಡಾಪಟುಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಕ್ರಿಸ್ಟಿಯಾನೊ ರೊನಾಲ್ಡೊಗೆ ಮೊದಲ ಸ್ಥಾನವಿದೆ. ಅವರಿಗೆ ೧೯ ಕೋಟಿ ರೂ. ದೊರೆಯುತ್ತದೆ. ಇದು ಕೊಹ್ಲಿಯ ಆದಾಯಕ್ಕಿಂತ ದುಪ್ಪಟ್ಟು. ಲಯನೆಲ್ ಮೆಸ್ಸಿ ಎರಡನೇ ಸ್ಥಾನದಲ್ಲಿದ್ದು, ಅವರು ೧೪ ಕೋಟಿ ರೂಪಾಯಿ ಪಡೆಯುತ್ತಾರೆ.
ರೊನಾಲ್ಡೊ ಇನ್‌ಸ್ಟಾಗ್ರಾಮ್‌ನಲ್ಲಿ ೫೩ ಕೋಟಿಗೂ ಮಿಕ್ಕಿ ಅಭಿಮಾನಿಗಳನ್ನು ಹೊಂದಿದ್ದಾರೆ. ಮೆಸ್ಸಿಗೆ ೩೪ ಕೋಟಿ ಅಭಿಮಾನಿಗಳಿದ್ದಾರೆ. ಕೊಹ್ಲಿಯ ಅಭಿಮಾನಿಗಳ ಸಂಖ್ಯೆ ೨೦ ಕೋಟಿ ರೂಪಾಯಿ.
ಇದನ್ನೂ ಓದಿ | Krishan Das: ಕೃಷ್ಣ ದಾಸ್ ಕೀರ್ತನೆ ಆಲಿಸಿ ಲೋಕವನ್ನೇ ಮರೆತ ವಿರಾಟ್ ಕೊಹ್ಲಿ