IPL 2023 : ಪಂಜಾಬ್ ತಂಡವನ್ನು ಆರ್ಆರ್ ಬಳಗ ಸೋಲಿಸಿದ ಬಳಿಕ ಐಪಿಎಲ್ ಅಂಕ ಪಟ್ಟಿ ಹೀಗಿದೆ
Sukhesha Padibagilu
ಹೈದರಾಬಾದ್ : ಐಪಿಎಲ್ 16ನೇ ಅವೃತ್ತಿಯಲ್ಲಿ ಶುಕ್ರವಾರ ನಡೆದ 66ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಎದುರಾಳಿ ಪಂಜಾಬ್ ಕಿಂಗ್ಸ್ ವಿರುದ್ಧ 4 ವಿಕೆಟ್ ವಿಜಯ ಸಾಧಿಸಿದೆ. ಈ ಹಣಾಹಣಿ ಇತ್ತಂಡಗಳಿಗೆ ಹಾಲಿ ಆವೃತ್ತಿಯ 14ನೇ ಹಾಗೂ ಕೊನೇ ಲೀಗ್ ಹಣಾಹಣಿ. ಹೀಗಾಗಿ ಪಂದ್ಯ ಸೋತ ಪಂಜಾಬ್ ತಂಡ ಒಟ್ಟು 12 ಅಂಕಗಳೊಂದಿಗೆ ಅಭಿಯಾನ ಮುಗಿಸಿತು. ಅತ್ತ ಆರ್ಆರ್ ತಂಡ ಅಂಕಪಟ್ಟಿಯ ಐದನೇ ಸ್ಥಾನದಲ್ಲಿ ಉಳಿಯಿತು. ಲೀಗ್ ಹಂತದ ಕೊನೇ ಪಂದ್ಯದವರೆಗೆ ಪ್ಲೇ ಆಫ್ ಅವಕಾಶದ ಸಾಧ್ಯತೆಗಾಗಿ ಕಾಯಬೇಕಾಗಿದೆ. ಈ ಪಂದ್ಯದ ಬಳಿಕ ಐಪಿಎಲ್ ಅಂಕಪಟ್ಟಿ ಈ ರೀತಿ ಇದೆ.