ಚೆನ್ನೈ: ಗುಜರಾತ್ ಟೈಟನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವೆ ಮೇ 23ರಂದು ಐಪಿಎಲ್ 16ನೇ ಆವೃತ್ತಿಯ (IPL 2023) ಮೊದಲ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡವು ನೇರವಾಗಿ ಫೈನಲ್ಗೆ ಪ್ರವೇಶ ಪಡೆಯಲಿದೆ. ಸೋಲುವ ತಂಡವು ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದಿರುವ ತಂಡದ ಜತೆ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಆಡಲಿದೆ. ಹೀಗಾಗಿ ಮೊದಲ ಪಂದ್ಯದಲ್ಲಿಯೇ ಗೆದ್ದು ನೇರ ಫೈನಲ್ಗೇರುವ ಉದ್ದೇಶದೊಂದಿಗೆ ಇತ್ತಂಡಗಳು ಆಡಲಿದೆ. ಈ ಪಂದ್ಯವು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಮ್ನಲ್ಲಿ ನಡೆಯಲಿದೆ. ಈ ಪಿಚ್ ಯಾವ ರೀತಿ ವರ್ತಿಸಲಿದೆ ಯಾರಿಗೆ ಅನಕೂಲಕರ ಎಂಬದನ್ನು ನೋಡೋಣ.
ಪಿಚ್ ಹೇಗಿದೆ?
ಎಂ.ಎ.ಚಿದಂಬರಂ ಸ್ಟೇಡಿಯಂನ ಪಿಚ್ ಪಂದ್ಯ ಸಾಗಿದಂತೆ ನಿಧಾನವಾಗುತ್ತಾ ಹೋಗುತ್ತದೆ. ಬ್ಯಾಟಿಂಗ್ಗೆ ಹೆಚ್ಚು ನೆರವು ನೀಡುವುದಿಲ್ಲ. ಆರಂಭದಲ್ಲಿ ಬ್ಯಾಟರ್ಗಳಿಗೆ ಹೆಚ್ಚು ರನ್ ಗಳಿಸಲು ನೆರವಾಗುತ್ತದೆ. ಹೀಗಾಗಿ ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಮಾಡುತ್ತದೆ. ಗುಜರಾತ್ ತಂಡ ಬೌಲಿಂಗ್ ದಾಳಿಯಲ್ಲಿ ಬಲಿಷ್ಠವಾಗಿರುವ ಕಾರಣ ಮೊದಲು ಬ್ಯಾಟ್ ಮಾಡಿ ಎದುರಾಳಿ ತಂಡವನ್ನು ನಿಯಂತ್ರಿಸಬಹುದು. ಚೆನ್ನೈ ತಂಡವೂ ಬಲಿಷ್ಠ ಬೌಲಿಂಗ್ ದಾಳಿಯನ್ನು ಹೊಂದಿದೆ. 170ಕ್ಕಿಂತ ಹೆಚ್ಚು ಮೊತ್ತ ದಾಖಲಿಸಿದರೆ ಅದನ್ನು ರಕ್ಷಿಸಿಸಿಕೊಳ್ಳಬಹುದು.
ಹವಾಮಾನ ಹೇಗಿದೆ?
ಚೆನ್ನೈನಲ್ಲಿ ಒಣ ಹವೆಯಿರುತ್ತದೆ. ಮಳೆಯ ಸಾಧ್ಯತೆಗಳು ಇಲ್ಲ. ಹೀಗಾಗಿ ಪಂದ್ಯ ನಿರಾತಂಕವಾಗಿ ನಡೆಯಲಿದೆ. ಈ ತಾಣದಲ್ಲಿ ಇಬ್ಬನಿ ಪರಿಣಾಮವೂ ಇರುವುದಿಲ್ಲ. ಹೀಗಾಗಿ ಚೇಸಿಂಗ್ ಸುಲಭ ಎಂಬ ಮಾತಿಲ್ಲ
ಬಲಾಬಲ ಹೇಗಿದೆ?
ಒಟ್ಟು ಪಂದ್ಯಗಳು- 03
ಚೆನ್ನೈ ಸೂಪರ್ ಕಿಂಗ್ಸ್- 00
ಗುಜರಾತ್ ಟೈಟನ್ಸ್- 01
ಎಂ.ಎ.ಚಿದಂಬರಂ ಸ್ಟೇಡಿಯಂ ಐಪಿಎಲ್ ದಾಖಲೆಗಳು
ಈ ಪಿಚ್ನಲ್ಲಿ ಸ್ಪಿನ್ನರ್ಗಳು ಉತ್ತಮ ದಾಖಲೆ ಹೊಂದಿದ್ದಾರೆ. ಸ್ಪಿನ್ ಬೌಲರ್ಗಳು 27.2 ಸರಾಸರಿ ಮತ್ತು 7 ಎಕಾನಮಿಯೊಂದಿಗೆ ಇಲ್ಲಿ ಬೌಲಿಂಗ್ ಮಾಡಿದ್ದಾರೆ. ವೇಗಿಗಳು 8.0 ಎಕಾನಮಿಯೊಂದಿಗೆ 29.2 ಸರಾಸರಿಯಂತೆ ಬೌಲಿಂಗ್ ಮಾಡಿದ್ದಾರೆ. ಈ ಕ್ರೀಡಾಂಗಣದಲ್ಲಿ ಆಡಿದ 74 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್ ಮಾಡುವ ತಂಡಗಳು 46 ಪಂದ್ಯಗಳನ್ನು ಗೆದ್ದರೆ, ಎರಡನೇ ಬ್ಯಾಟಿಂಗ್ ಮಾಡುವ ತಂಡಗಳು 28 ಪಂದ್ಯಗಳನ್ನು ಗೆದ್ದಿವೆ. ಸಿಎಸ್ಕೆ ತಂಡ ಆಡಿರುವ 61 ಪಂದ್ಯಗಳಲ್ಲಿ 45ರಲ್ಲಿ ಜಯ ಸಾಧಿಸಿದೆ.
ಚೆನ್ನೈ ಸ್ಟೇಡಿಯಮ್ ವಿಶೇಷಗಳು
ಆಡಿದ ಪಂದ್ಯಗಳು- 74
ಮೊದಲು ಬ್ಯಾಟಿಂಗ್ ಮಾಡಿ ತಂಡಕ್ಕೆ ಸಿಕ್ಕ ಗೆಲುವು- 46
ಎರಡನೇ ಬ್ಯಾಟಿಂಗ್ ತಂಡಕ್ಕೆ ಸಿಕ್ಕ ಗೆಲುವು- 28
ಮೊದಲ ಇನ್ನಿಂಗ್ಸ್ ಸರಾಸರಿ ಸ್ಕೋರ್- 162.8
ಸರಾಸರಿ ಪವರ್ ಪ್ಲೇ ಸ್ಕೋರ್- 47.4
ಸರಾಸರಿ ಡೆತ್ ಓವರ್ ಸ್ಕೋರ್- 46.4
ಇತ್ತಂಡಗಳ ವಿಶೇಷತೆಗಳು
ರಶೀದ್ ಖಾನ್ 37 ಎಸೆತಗಳಲ್ಲಿ 56 ರನ್ ನೀಡಿ ಮೊಯೀನ್ ಅಲಿಯನ್ನು ನಾಲ್ಕು ಬಾರಿ ಆಯ್ಕೆ ಮಾಡಿದ್ದಾರೆ. ಮೊಹಮ್ಮದ್ ಶಮಿ ಕೇವಲ 22 ಎಸೆತಗಳಲ್ಲಿ ಅಂಬಾಟಿ ರಾಯುಡು ಅವರನ್ನು ಎರಡು ಬಾರಿ ಪೆವಿಲಿಯನ್ಗೆ ಕಳುಹಿಸಿದ್ದಾರೆ. ರವೀಂದ್ರ ಜಡೇಜಾ ಬೌಲಿಂಗ್ನಲ್ಲಿ ವೃದ್ಧಿಮಾನ್ ಸಹಾ ಎರಡು ಬಾರಿ ಔಟ್ ಆಗಿದ್ದಾರೆ. ದೀಪಕ್ ಚಾಹರ್ 37 ಎಸೆತಗಳಲ್ಲಿ ಶುಭ್ಮನ್ ಗಿಲ್ ಅವರನ್ನು ಎರಡು ಬಾರಿ ಔಟ್ ಮಾಡಿದ್ದಾರೆ.
ಸಿಎಸ್ಕೆ ವಿರುದ್ಧ ಜಿಟಿ ಗರಿಷ್ಠ ಮತ್ತು ಕನಿಷ್ಠ ಒಟ್ಟು ದಾಖಲೆಗಳು
ಜಿಟಿ ವಿರುದ್ಧ ಸಿಎಸ್ಕೆಯ ಗರಿಷ್ಠ ಮೊತ್ತ 178 ಮತ್ತು ಕನಿಷ್ಠ ಮೊತ್ತ 133
ಸಿಎಸ್ಕೆ ವಿರುದ್ಧ ಜಿಟಿ ಗಳಿಸಿದ ಗರಿಷ್ಠ ಮೊತ್ತ 182 ಮತ್ತು ಕನಿಷ್ಠ ಮೊತ್ತ 137
ಮಿಂಚಬಲ್ಲ ಆಟಗಾರರು
ಚೆನ್ನೈ ಸೂಪರ್ ಕಿಂಗ್ಸ್: ಋತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಮತೀಶಾ ಪತಿರಾನಾ
ಗುಜರಾತ್ ಟೈಟನ್ಸ್: ಶುಬ್ಮನ್ ಗಿಲ್, ರಶೀದ್ ಖಾನ್, ಮೊಹಮ್ಮದ್ ಶಮಿ
ತಂಡಗಳು
ಚೆನ್ನೈ ಸೂಪರ್ ಕಿಂಗ್ಸ್: ಮಹೇಂದ್ರ ಸಿಂಗ್ ಧೋನಿ(ನಾಯಕ), ರವೀಂದ್ರ ಜಡೇಜಾ, ಡೆವೊನ್ ಕಾನ್ವೇ, ಋತುರಾಜ್ ಗಾಯಕ್ವಾಡ್, ಅಂಬಾಟಿ ರಾಯುಡು, ಸುಬ್ರಾಂಶು ಸೇನಾಪತಿ, ಮೊಯೀನ್ ಅಲಿ, ಶಿವಂ ದುಬೆ, ರಾಜವರ್ಧನ್ ಹಂಗರ್ಗೇಕರ್, ಡ್ವೇನ್ ಪ್ರಿಟೋರಿಯಸ್, ಮಿಚೆಲ್ ಸ್ಯಾಂಟ್ನರ್, ದೀಪಕ್ ಚಹರ್, ತುಷಾರ್ ದೇಶಪಾಂಡೆ, ಆಕಾಶ್ ಸಿಂಗ್, ಮಥೀಶಾ ಪತಿರಾನಾ, ಸಿಮರ್ಜೀತ್ ಸಿಂಗ್, ಪ್ರಶಾಂತ್ ಸೋಲಂಕಿ, ಮಹೀಶ್ ತೀಕ್ಷಾನಾ, ಅಜಿಂಕ್ಯ ರಹಾನೆ, ಬೆನ್ ಸ್ಟೋಕ್ಸ್, ಶೇಖ್ ರಶೀದ್, ನಿಶಾಂತ್ ಸಿಂಧು.
ಗುಜರಾತ್ ಟೈಟನ್ಸ್ (ಜಿಟಿ) : ಹಾರ್ದಿಕ್ ಪಾಂಡ್ಯ (ನಾಯಕ), ಶುಭಮನ್ ಗಿಲ್, ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್, ಸಾಯಿ ಸುದರ್ಶನ್, ವೃದ್ಧಿಮಾನ್ ಸಹಾ, ಮ್ಯಾಥ್ಯೂ ವೇಡ್, ರಶೀದ್ ಖಾನ್, ರಾಹುಲ್ ತೇವಾಟಿಯಾ, ವಿಜಯ್ ಶಂಕರ್, ಮೊಹಮ್ಮದ್ ಶಮಿ, ಅಲ್ಜಾರಿ ಜೋಸೆಫ್, ಯಶ್ ದಯಾಳ್, ಪ್ರದೀಪ್ ಸಾಂಗ್ವಾನ್, ದರ್ಶನ್ ನಲ್ಕಂಡೆ, ಜಯಂತ್ ಯಾದವ್, ಆರ್ ಸಾಯಿ ಕಿಶೋರ್, ನೂರ್ ಅಹ್ಮದ್, ದಸುನ್ ಶನಕಾ, ಒಡಿಯನ್ ಸ್ಮಿತ್, ಕೆಎಸ್ ಭರತ್, ಶಿವಂ ಮಾವಿ, ಉರ್ವಿಲ್ ಪಟೇಲ್, ಜೋಶುವಾ ಲಿಟಲ್, ಮೋಹಿತ್ ಶರ್ಮಾ.