Site icon Vistara News

ICC World Cup 2023 : ಹಿಸ್ಟರಿ ರಿಪೀಟ್ಸ್​​; ಭಾರತ ತಂಡದ ವಿಶ್ವ ಕಪ್ ಟ್ರೋಫಿ ಕನಸು ಭಗ್ನ

World Cup champion

ಅಹಮದಾಬಾದ್​: 130 ಕೋಟಿ ಭಾರತೀಯರ ಹೃದಯ ಭಾರವಾಗಿದೆ. ಮತ್ತೊಂದು ಏಕ ದಿನ ವಿಶ್ವ ಕಪ್​ (ICC World Cup 2023) ಗೆಲ್ಲುವ ಅವರೆಲ್ಲರ ಆಸೆ ಕಮರಿ ಹೋಗಿದೆ. ತವರು ನೆಲದಲ್ಲಿ ನಡೆದ ವಿಶ್ವ ಕಪ್ ಆವೃತ್ತಿಯಲ್ಲಿ ಟ್ರೋಫಿ ಗೆದ್ದೇ ಗೆಲ್ಲುತ್ತೇವೆ ಎಂಬ ಹುಮ್ಮಸ್ಸು ಬತ್ತಿ ಹೋಯಿತು. ನರೇಂದ್ರ ಮೋದಿ ಸ್ಟೇಡಿಯಮ್​ನಲ್ಲಿ ನಡೆದ ಏಕ ದಿನ ವಿಶ್ವ ಕಪ್​ನ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ತಲೆ ಬಾಗಿದ ಟೀಮ್ ಇಂಡಿಯಾದ ಪ್ರಯತ್ನಗಳು ಭಗ್ನವಾಗಿದೆ. 2003ರ ವಿಶ್ವ ಕಪ್​ನ ಫೈನಲ್ ಫಲಿತಾಂಶವು ಮತ್ತೊಂದು ಬಾರಿ ಪುನರಾವರ್ತನೆಯಾಗಿದೆ. ಅಂದು ಭಾರತ ತಂಡ ಆಸ್ಟ್ರೇಲಿಯಾ ತಂಡದ ವಿರುದ್ಧವೇ 125 ರನ್​ಗಳಿಂದ ಸೋಲು ಕಂಡಿತ್ತು.

ಸೋಲಿನೊಂದಿಗೆ ಭಾರತ ತಂಡದ ಐಸಿಸಿ ಟ್ರೋಫಿ ಬರ ಮುಂದುವರಿಯಿತು. ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಹಾಗೂ ವಿರಾಟ್​ ಕೊಹ್ಲಿಗೆ ವಿಶ್ವ ಕಪ್​​ ಕೊಡುಗೆ ಕೊಡುಗೆ ನೀಡುವ ಅಭಿಲಾಷೆಯೂ ಇಲ್ಲವಾಯಿತು. ಇದು ಆಸ್ಟ್ರೇಲಿಯಾ ತಂಡದ ಪಾಲಿಗೆ 6ನೇ ವಿಶ್ವ ಕಪ್​. ಆ ತಂಡ ಈ ಹಿಂದೆ 1987, 1999, 2003, 2007, 2015ರಲ್ಲಿ ಏಕ ದಿನ ವಿಶ್ವ ಕಪ್ ಗೆದ್ದಿತ್ತು. ಇದೀಗ ಮತ್ತೊಂದು ಟ್ರೋಫಿ ಆ ತಂಡಕ್ಕೆ ಸೇರ್ಪಡೆಯಾಗಿದ್ದು ಅತ್ಯಂತ ಯಶಸ್ವಿ ತಂಡ ಎನಿಸಿಕೊಂಡಿತು.

ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತ ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನ ಪಡೆಯಿತು. ಆದರೆ, ಬ್ಯಾಟಿಂಗ್ ವೈಫಲ್ಯ ಎದುರಿಸಿದ ಭಾರತ ತಂಡ ನಿಗದಿತ 50 ಓವರ್​ಗಳಲ್ಲಿ 240 ರನ್​ಗಳಿಗೆ ಆಲ್ಔಟ್ ಆಯಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಆಸ್ಟ್ರೇಲಿಯಾ ತಂಡ 43 ಓವರ್​ಗಳಲ್ಲಿ 4 ವಿಕೆಟ್ ಕಳೆದುಕೊಂಡು 241 ರನ್ ಬಾರಿಸಿ ನಿರಾಯಾಸ ವಿಜಯ ಕಂಡಿತು. ಆಸ್ಟ್ರೇಲಿಯಾ ತಂಡದ ಪರ ಆರಂಭಿಕ ಬ್ಯಾಟರ್​​ ಟ್ರಾವಿಸ್ ಹೆಡ್​ 137 ರನ್​ ಬಾರಿಸಿ ಗೆಲುವಿನ ರೂವಾರಿ ಎನಿಸಿಕೊಂಡರು.

ಫೈನಲ್​ ಪಂದ್ಯದಲ್ಲಿ ಭಾರತ ತಂಡ ಸಂಪೂರ್ಣ ಪಾರಮ್ಯ ಸಾಧಿಸಿತು. ಆರಂಭದಲ್ಲಿ ಬೌಲಿಂಗ್​ನಲ್ಲಿ ಮೇಲುಗೈ ಸಾಧಿಸಿದ ಆಸೀಸ್ ಪಡೆ ಬಳಿಕ ಬ್ಯಾಟಿಂಗ್​ನಲ್ಲಿ ಮೇಲುಗೈ ಸಾಧಿಸಿತು. ಅತ್ಯಂತ ಸುಲಭ ಜಯ ತನ್ನದಾಗಿಸಿಕೊಂಡಿತು. ಹಾಲಿ ವಿಶ್ವ ಕಪ್​ನಲ್ಲಿ ಭಾರತ ತಂಡ ಸತತವಾಗಿ 10 ಪಂದ್ಯಗಳನ್ನು ಗೆದ್ದು ಫೈನಲ್​ಗೆ ಬಂದಿತ್ತು. ಆದರೆ, 11ನೇ ಪಂದ್ಯದಲ್ಲಿ ಸೋತಿತು. ಒಂದು ವೇಳೆ ಈ ಪಂದ್ಯದಲ್ಲಿ ಗೆದ್ದಿದ್ದರೆ ಭಾರತ ತಂಡ ವಿಶ್ವ ಕಪ್ ಆವೃತ್ತಿಯಲ್ಲಿ ಸತತವಾಗಿ 11 ಪಂದ್ಯಗಳನ್ನು ಗೆದ್ದಿರುವ ಆಸ್ಟ್ರೇಲಿಯಾ ತಂಡದ ದಾಖಲೆಯನ್ನು ಸರಿಗಟ್ಟಬಹುದಾಗಿತ್ತು.

ಇದನ್ನೂ ಓದಿ : IND vs AUS Final: ಭಾರತಕ್ಕೆ ಮತ್ತೆ ಕಂಟಕವಾದ ಅಂಪೈರ್; ನಿರೀಕ್ಷೆಯಂತೆ ಈ ಬಾರಿಯೂ ಸೋಲು

ಆರಂಭದಲ್ಲಿ ವಿಕೆಟ್ ಪತನ

ಸಾಧಾರಣ ಮೊತ್ತವನ್ನು ಬೆನ್ನಟ್ಟಿದ್ದ ಆಸ್ಟ್ರೇಲಿಯಾ ತಂಡ 47 ರನ್​ಗಳಿಗೆ 3 ವಿಕೆಟ್ ಕಳೆದುಕೊಂಡಿತು. ವಾರ್ನರ್​ 7 ರನ್, ಮಿಚೆಲ್ ಮಾರ್ಷ್​ 15 ಹಾಗೂ ಸ್ಟೀವ್ ಸ್ಮಿತ್​​ 4 ರನ್ ಬಾರಿಸಿದರು. ಆದರೆ, ಟ್ರಾವಿಸ್ ಹೆಡ್​ ಹಾಗೂ ಮರ್ನಸ್​ ಲಾಬುಶೇನ್​ (58) ನಾಲ್ಕನೇ ವಿಕೆಟ್​ಗೆ 192 ರನ್​ ಬಾರಿಸಿದರು. ಅದು ಭಾರತ ತಂಡದ ಪಾಲಿಗೆ ಮುಳುವಾಯಿತು. ಟಾಸ್​ ಗೆದ್ದ ಬಳಿಕ ಆಸ್ಟ್ರೇಲಿಯಾ ತಂಡದ ನಾಯಕ ಇಬ್ಬನಿ ಪರಿಣಾಮವನ್ನು ಬಳಸಿಕೊಳ್ಳುವ ಸೂಚನೆ ನೀಡಿದ್ದರು. ಅಂತೆಯೇ ಅವರು ಅದನ್ನು ಸಾಧಿಸಿ ತೋರಿಸಿದ್ದಾರೆ.

ಭಾರತದ ಬ್ಯಾಟಿಂಗ್ ವೈಫಲ್ಯ

ಭಾರತ ತಂಡ ಮೊದಲ 39 ಎಸೆತಗಳಿಗೆ 50 ರನ್ ಬಾರಿಸಿತ್ತು. ಹೀಗಾಗಿ ದೊಡ್ಡ ಮೊತ್ತ ಗ್ಯಾರಂಟಿ ಎಂದು ನಂಬಲಾಗಿತ್ತು. ಆದರೆ ಅದಕ್ಕಿಂತ ಮೊದಲೇ ಶುಭ್​ಮನ್​ ಗಿಲ್​ 4 ರನ್ ಬಾರಿಸಿ ಔಟಾಗಿದ್ದರು. ಈ ವೇಳೆ ವಿರಾಟ್ ಕೊಹ್ಲಿಯೂ ರನ್​ ಗತಿ ಇಳಿಕೆಯಾಗದಂತೆ ನೋಡಿಕೊಂಡಿತು. ಆದರೆ, ನಂತರ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಲು ಮುಂದಾದ ರೋಹಿತ್​ ಶರ್ಮಾ 47 ರನ್​ಗಳಿಗೆ ಔಟಾದರು. ಅವರು 31 ಎಸೆತಗಳಿಗೆ 47 ರನ್ ಬಾರಿಸಿದ್ದರು. ಆದರೆ, ಆ ಬಳಿಕ ಬ್ಯಾಟ್ ಮಾಡಲು ಬಂದ ಶ್ರೇಯಸ್​ ಅಯ್ಯರ್​​ 4 ರನ್​ ಗೆ ಔಟಾದರು. ಅವರು ಅದಕ್ಕಿಂತ ಮೊದಲು ಅವರು ಒಂದು ಫೋರ್ ಬಾರಿಸಿದ್ದರು.

ರಾಹುಲ್​- ಕೊಹ್ಲಿ ಮೇಲೆ ಒತ್ತಡ

ಮೊದಲ ಮೂರು ವಿಕೆಟ್​​ಗಳು 81 ರನ್​ಗೆ ಪತನಗೊಂಡ ಕಾರಣ ಭಾರತ ತಂಡದ ಮೇಲೆ ಒತ್ತಡ ಬಿತ್ತು. ಮಾಜಿ ನಾಯಕ ವಿರಾಟ್​ ಕೊಹ್ಲಿ ಹಾಗೂ ವಿಕೆಟ್​ ಕೀಪರ್​ ಕೆ. ಎಲ್ ರಾಹುಲ್ ಮೇಲೆ ಇನಿಂಗ್ಸ್ ಕಟ್ಟುವ ಜವಾಬ್ದಾರಿ ಬಿತ್ತು. ಬಲಿಕ ಅವರಿಬ್ಬರು 67 ರನ್​ಗಳ ಜತೆಯಾಟವಾಡಿದರು. ಈ ವೇಳೆ ಭಾರತ ತಂಡದ ರನ್ ಗಳಿಕೆ ಕುಸಿತಗೊಂಡಿತ್ತು. 11 ಓವರ್​ಗಳ ಒಳಗೆ ಮೂರು ವಿಕೆಟ್​ ನಷ್ಟ ಮಾಡಿಕೊಂಡಿದ್ದರಿಂದ ವಿಕೆಟ್​ ಕಾಪಾಡುವುದು ಈ ಬ್ಯಾಟರ್​​ಗಳ ಪಾಲಿಗೆ ದೊಡ್ಡ ಸವಾಲಾಯಿತು. ಇವರಿಬ್ಬರ ಜತೆಯಾಟದ ವೇಳೆ ಸಿಂಗಲ್ ರನ್​ಗಳೇ ಹೆಚ್ಚು ಗಳಿಕೆಯಾಯಿತು.

ಏತನ್ಮಧ್ಯೆ ವಿರಾಟ್​ ಕೊಹ್ಲಿಯ ವಿಕೆಟ್ ದುರದೃಷ್ಟಕರವಾಗಿ ನಷ್ಟವಾಯಿತು. ಆಸೀಸ್​ ನಾಯಕ ಪ್ಯಾಟ್​ ಕಮಿನ್ಸ್ ಅವರ ಎಸೆತವನ್ನು ರಕ್ಷಿಸಲು ಮುಂದಾದ ಅವರು ಇನ್​ಸೈಡ್ ಎಜ್​ ಆಗಿ ಬೌಲ್ಡ್ ಆದರು. ಈ ವೇಳೆ ತಂಡಕ್ಕೆ ಮತ್ತೊಂದು ಆಘಾತ ಎದುರಾಯಿತು. ಯಾಕೆಂದರೆ ಮುಂದೆ ಆಡಲು ಬಂದ ರವೀಂದ್ರ ಜಡೇಜಾ 9 ರನ್​ಗಳಿಗೆ ಔಟ್ ಆದರು.

ಈ ರನ್ ಸಾಕೇ?

ಎರಡನೇ ಇನಿಂಗ್ಸ್ ವೇಳೆ ಇಬ್ಬನಿ ಪರಿಣಾಮ ಇರುತ್ತದೆ. ಬೌಲಿಂಗ್ ಮಾಡಲು ಕಷ್ಟ ಎಂಬ ಕಾರಣಕ್ಕೆ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಮೊದಲು ಫೀಲ್ಡಿಂಗ್ ಮಾಡಿದ್ದರು. ಹೀಗಾಗಿ 250 ರನ್​ಗಳಿಗಿಂತ ಕಡಿಮೆ ಮೊತ್ತ ಗೆಲುವಿಗೆ ಸಾಕಾಗುತ್ತದೆಯೇ ಎಂಬ ಪ್ರಶ್ನೆ ಎದ್ದಿದೆ. ಭಾರತ ತಂಡ 270ಕ್ಕಿಂತ ಹೆಚ್ಚು ರನ್ ಮಾಡಿದರೆ ಗೆಲುವು ಪಡೆಯು ಸಾಧ್ಯತೆಗಳು ಇವೆ. ಕ್ರಿಕೆಟ್​ ಪಂಡಿತರ ವಿಶ್ಲೇಷಣೆ ಪ್ರಕಾರ ಪಿಚ್​ ಸ್ವಲ್ಪ ನಿಧಾನಗತಿಯಲ್ಲಿದೆ. ನಿರೀಕ್ಷಿತ ಮಟ್ಟದಲ್ಲಿ ಬೌಂಡರಿ ಸಿಕ್ಸರ್​ಗಳನ್ನು ಹೊಡೆಯಲು ಸಾಧ್ಯವಿಲ್ಲ. ಹಾಗಾದರೆ 250ಕ್ಕಿಂತ ಹೆಚ್ಚಿನ ರನ್​ ದಾಟುವುದು ಆಸೀಸ್​ ಪಾಲಿಗೆ ಸವಾಲಾಗಬಹುದು. ಆದರೆ ಭಾರತ ತಂಡ ಅಷ್ಟೊಂದು ದೊಡ್ಡ ಮೊತ್ತ ಪೇರಿಸುವುದೇ ಎಂಬುದು ಅಭಿಮಾನಿಗಳ ಪಾಲಿಗೆ ಕೌತುಕದ ವಿಷಯ.

Exit mobile version