ಬೆಂಗಳೂರು: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿಯೂ ಸಣ್ಣಪುಟ್ಟ ತಪ್ಪುಗಳು ಆಗುತ್ತವೆ. ಅಂತಾಷ್ಟ್ರೀಯ ಕ್ರಿಕೆಟ್ ಮಾತ್ರವಲ್ಲ, ದೇಶೀಯವಾಗಿ ನಡೆಯುವ ಐಪಿಎಲ್‌ನಂತಹ ವೃತ್ತಿಪರ ಕ್ರಿಡಾಕೂಟಗಳಲ್ಲಿಯೂ ಸಿಲ್ಲಿ ಕಾರಣಗಳಿಗಾಗಿ ಔಟ್ ಆಗುವ ಸಂದರ್ಭಗಳಿರುತ್ತವೆ. ಸುಲಭವಾಗಿ ಕೈಗೆ ಬಂದ ಕ್ಯಾಚ್ ಅನ್ನು ಕೈಚೆಲ್ಲುವ ಸಂದರ್ಭ ಈಗಿನ ವೃತ್ತಿಪರ ಕ್ರಿಕೆಟ್‌ನಲ್ಲಿ ತೀರಾ ಅಪರೂಪ. ಬ್ಯಾಟರ್ ಹಿಟ್ ವಿಕೆಟ್ ಮಾಡಿಕೊಂಡು ಔಟ್ ಆಗುವುದೂ ತುಂಬಾ ಕಡಿಮೆಯೇ. ಐಪಿಎಲ್ 2022 ರಲ್ಲಿ ಗುಜರಾಜ್ ಟೈಗರ್ಸ್ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದಲ್ಲಿ ಗುಜರಾತ್ ಟೈಟನ್ಸ್‌ನ ಸಾಯಿ ಸುದರ್ಶನ್ ಹಿಟ್ ವಿಕೆಟ್ ಆಗಿದ್ದಾರೆ. ಇದು ಐಪಿಎಲ್ 2022ರ ಮೊದಲ ಹಿಟ್ ವಿಕೆಟ್.
ಗುಜರಾತ್ ಟೈಟನ್ಸ್ ಎರಡು ವಿಕೆಟ್‌ಗೆ 138 ರನ್‌ನಲ್ಲಿ ಆಟವಾಡುತ್ತಿದ್ದಾಗ ಪೊಲಾರ್ಡ್ ಮಾಡಿದ ಚೆಂಡನ್ನು ಸುದರ್ಶನ್ ಬ್ಯಾಟ್ ಹಿಂಬಾಲಿಸಿ ಹೋಯಿತು. ಆದರೆ ಚೆಂಡನ್ನು ತಪ್ಪಿಸಿಕೊಂಡ ಬ್ಯಾಟ್, ಸಮತೋಲನ ಕಳೆದುಕೊಂಡು ವಿಕೆಟ್‌ಗೆ ಬಡಿಯಿತು. ಒಬ್ಬ ಬ್ಯಾಟರ್ ಯಾವ ರೀತಿ ಔಟ್ ಆಗಬಾರದು ಎಂದು ಬಯಸುತ್ತಾನೊ ಆ ರೀತಿಯಲ್ಲಿ ಸಾಯಿ ಸುದರ್ಶನ್ ಹೊರನಡೆದರು.
ಹಾಗೆಂದು ಐಪಿಎಲ್‌ನಲ್ಲಿ ಹಿಟ್ ವಿಕೆಟ್ ಆದವರಲ್ಲಿ ಸಾಯಿ ಸುದರ್ಶನ್ ಮೊದಲಿಗರಲ್ಲ. ಅಂತಾರಾಷ್ಟ್ರೀಯ ಕ್ರಿಕೆಟಿಗ ಯುವರಾಜ್ ಸಿಂಗ್, ಹಾರ್ದಿಕ್ ಪಾಂಡ್ಯ ಸೇರಿ ಅನೇಕರು ಈ ಸಾಲಿನಲ್ಲಿ ಈಗಾಗಲೇ ಇದ್ದಾರೆ. ಇಲ್ಲಿದೆ, ಈ ಹಿಂದೆ ಐಪಿಎಲ್‌ನಲ್ಲಿ ಹಿಟ್ ವಿಕೆಟ್ ಆದವರ ಪಟ್ಟಿ.
ಬ್ಯಾಟರ್ | ತಂಡ | ವಿರುದ್ಧ | ಸೀಸನ್ |
ಎಂ. ಖೋಟೆ | ಮುಂಬೈ ಇಂಡಿಯನ್ಸ್ | ಕಿಂಗ್ಸ್ XI ಪಂಜಾಬ್ | ಐಪಿಎಲ್ 2008 |
ಮಿಸ್ಬಾ ಉಲ್ ಹಕ್ | ರಾಯಲ್ ಚಾಲೆಂಜರ್ಸ್ ಬೆಂಗಳೂರು | ಕಿಂಗ್ಸ್ XI ಪಂಜಾಬ್ | ಐಪಿಎಲ್ 2008 |
ಎಸ್. ಅಸ್ನೋಡ್ಕರ್ | ರಾಜಾಸ್ಥಾನ್ ರಾಯಲ್ಸ್ | ಚೆನ್ನೈ ಸೂಪರ್ ಕಿಂಗ್ಸ್ | ಐಪಿಎಲ್ 2009 |
ಆರ್. ಜಡೇಜಾ | ಚೆನ್ನೈ ಸೂಪರ್ ಕಿಂಗ್ಸ್ | ಡೆಕ್ಕನ್ ಚಾರ್ಜರ್ಸ್ | ಐಪಿಎಲ್ 2012 |
ಸೌರಭ್ ತಿವಾರಿ | ರಾಯಲ್ ಚಾಲೆಂಜರ್ಸ್ ಬೆಂಗಳೂರು | ಮುಂಬೈ ಇಂಡಿಯನ್ಸ್ | ಐಪಿಎಲ್ 2012 |
ಯುವರಾಜ್ ಸಿಂಗ್ | ಸನ್ರೈಸರ್ಸ್ ಹೈದರಾಬಾದ್ | ಮುಂಬೈ ಇಂಡಿಯನ್ಸ್ | ಐಪಿಎಲ್ 2016 |
ಡಿ ಹೂಡಾ | ಸನ್ರೈಸರ್ಸ್ ಹೈದರಾಬಾದ್ | ಡೆಲ್ಲಿ ಡೇರ್ಡೆವಿಲ್ಸ್ | ಐಪಿಎಲ್ 2016 |
ಡೇವಿಡ್ ವಾರ್ನರ್ | ಸನ್ರೈಸರ್ಸ್ ಹೈದರಾಬಾದ್ | ಕಿಂಗ್ಸ್ XI ಪಂಜಾಬ್ | ಐಪಿಎಲ್ 2016 |
ಎಸ್. ಜಾಕ್ಸನ್ | ಕೊಲ್ಕತಾ ನೈಟ್ ರೈಡರ್ಸ್ | ರೈಸಿಂಗ್ ಪುಣೆ ಸೂಪರ್ಜೈಂಟ್ಸ್ | ಐಪಿಎಲ್ 2017 |
ಆರ್. ಪರಾಗ್ | ರಾಜಾಸ್ಥಾನ್ ರಾಯಲ್ಸ್ | ಕೊಲ್ಕತಾ ನೈಟ್ ರೈಡರ್ಸ್ | ಐಪಿಎಲ್ 2019 |
ಹಾರ್ದಿಕ್ ಪಾಂಡ್ಯ | ಮುಂಬೈ ಇಂಡಿಯನ್ಸ್ | ಕೊಲ್ಕತಾ ನೈಟ್ ರೈಡರ್ಸ್ | ಐಪಿಎಲ್ 2020 |
ಜಾಣಿ ಬೈರ್ಸ್ಟೋ | ಸನ್ರೈಸರ್ಸ್ ಹೈದರಾಬಾದ್ | ಮುಂಬೈ ಇಂಡಿಯನ್ಸ್ | ಐಪಿಎಲ್ 2021 |
ಸಾಯಿ ಸುದರ್ಶನ್ | ಗುಜರಾತ್ ಟೈಟನ್ಸ್ | ಮುಂಬೈ ಇಂಡಿಯನ್ಸ್ | ಐಪಿಎಲ್ 2022 |
ಇದನ್ನೂ ಓದಿ | IPL 2022 | ದುಬಾರಿ ದುಡ್ಡಿಗೆ ಮಾರಾಟವಾದವರು ಹೇಗೆ ಆಡಿದರು ನೋಡಿ !