Site icon Vistara News

ICC World Cup 2023 : ಜಸ್ಟ್​ ಮಿಸ್​; ಪ್ರೇಕ್ಷಕರ ಸೀಟ್​​ಗಳ ಮೇಲೆ ಬಿದ್ದ ಬೃಹತ್​ ಹೋರ್ಡಿಂಗ್​

Hording

ಲಖನೌ: ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ನಡುವಿನ ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ರ (ICC World Cup 2023) 14 ನೇ ಪಂದ್ಯವು ಮಳೆ ಮತ್ತು ಬಲವಾದ ಗಾಳಿಯಿಂದಾಗಿ ಸ್ವಲ್ಪ ಹೊತ್ತು ಸ್ಥಗಿತಗೊಂಡಿತು. ಈ ವೇಳೆ ದೊಡ್ಡ ಹೋರ್ಡಿಂಗ್​ ಒಂದು ಪ್ರೇಕ್ಷಕರ ಗ್ಯಾಲರಿ ಮೇಲೆ ಬಿದ್ದಿದ್ದ ಸ್ವಲ್ಪದರಲ್ಲೇ ದೊಡ್ಡ ಅನಾಹುತ ತಪ್ಪಿದೆ. ಪ್ರೇಕ್ಷಕರ ಸಂಖ್ಯೆ ಕಡಿಮೆ ಇದ್ದ ಕಾಣ ಯಾವುದೇ ಅವಘಡ ಉಂಟಾಗಿಲ್ಲ ಎಂದು ಹೇಳಲಾಗಿದೆ.

ಟಾಸ್ ಗೆದ್ದ ಶ್ರೀಲಂಕಾ ನಾಯಕ ಕುಸಾಲ್ ಮೆಂಡಿಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನಂತರ, ಶ್ರೀಲಂಕಾ ಉತ್ತಮ ಆರಂಭದ ಹೊರತಾಗಿಯೂ 209 ರನ್​ಗಳಿಗೆ ಆಲೌಟ್ ಆಯಿತು. ಅವರ ಇನಿಂಗ್ಸ್​​ನ ಅಂತಿಮ ಹಂತಗಳಲ್ಲಿ, ಎಕಾನಾ ಕ್ರೀಡಾಂಗಣದಲ್ಲಿ ಭಾರಿ ಗಾಳಿ ಬೀಸಿತ, ಬಿರುಗಾಳಿಯ ವೇಗಕ್ಕೆ ಸ್ಟೇಡಿಯಮ್​ ಮೇಲೆ ಹಾಕಲಾಗಿದ್ದ ಹೋರ್ಡಿಂಗ್​ಗಳೆಲ್ಲವೂ ಕಿತ್ತು ಹೋಯಿತು. ಅದರಲ್ಲೊಂದು ಸಂಪೂರ್ಣವಾಗಿ ಜಾರಿ ಪ್ರೇಕ್ಷಕರ ಗ್ಯಾಲರಿ ಮೇಲೆ ಬಿತ್ತು. ಅದೃಷ್ಟವಶಾತ್​, ಯಾವುದೇ ಅಭಿಮಾನಿಗಳಿಗೆ ಗಾಯಗಳಾಗಿಲ್ಲ, ಅಲ್ಲದೆ, ಅನಾಹುತ ತಪ್ಪಿಸಲು ಗ್ರೌಂಡ್ ಸ್ಟಾಫ್ ತ್ವರಿತವಾಗಿ ಕಾರ್ಯನಿರ್ವಹಿಸಿದರು.

ಈ ಸುದ್ದಿಗಳನ್ನೂ ಓದಿ :
Virat Kohli : ಸಿಂಗಾಪುರದಲ್ಲಿ ವಿರಾಟ್​ ಕೊಹ್ಲಿಯ ಮೇಣದ ಪ್ರತಿಮೆ; ಎಲ್ಲಿ, ಏನು ಎಂಬ ವಿವರ ಇಲ್ಲಿದೆ
Virat Kohli : ಒಲಿಂಪಿಕ್ಸ್​ಗೆ ಕ್ರಿಕೆಟ್​ ಸೇರ್ಪಡೆಯಾಗಲು ಕೊಹ್ಲಿಯೇ ಕಾರಣವಂತೆ
Los Angeles Olympics 2028 : ಒಲಿಂಪಿಕ್ಸ್‌ಗೆ ಕ್ರಿಕೆಟ್ ಸೇರ್ಪಡೆಯಾಗಿದ್ದಕ್ಕೆ ನೀತಾ ಅಂಬಾನಿ ಸಂತಸ

ತಕ್ಷಣ ಪ್ರೇಕ್ಷಕರನ್ನು ಸ್ಥಳಾಂತರಿಸಲಾಯಿತು ಮತ್ತು ಸಿಬ್ಬಂದಿ ಎರಡನೇ ಇನ್ನಿಂಗ್ಸ್ ಗೆ ಮೈದಾನವನ್ನು ಮತ್ತೆ ಸಿದ್ಧಪಡಿಸಿದರು. ಗಾಳಿಯಿಂದಾಗಿ ವಿಶ್ವಕಪ್​​ನ ಬ್ರ್ಯಾಂಡಿಂಗ್ ಬೋರ್ಡ್​​ಗಳೂ ಸಡಿಲಗೊಂಡವು. ಮತ್ತು ಹರಿದುಹೋದವು. ಮೈದಾನದ ಸಿಬ್ಬಂದಿ ತ್ವರಿತವಾಗಿ ತೆರವುಗೊಳಿಸಿ ಆಟಕ್ಕೆ ಅನುವು ಮಾಡಿಕೊಟ್ಟರು.

ಉತ್ತಮ ಆರಂಭದ ಬಳಿಕ ಕುಸಿತ

ಆರಂಭಿಕ ಆಟಗಾರರಾದ ಪಥುಮ್ ನಿಸ್ಸಾಂಕಾ (67 ಎಸೆತಗಳಲ್ಲಿ 61 ರನ್) ಮತ್ತು ಕುಸಾಲ್ ಪೆರೆರಾ (82 ಎಸೆತಗಳಲ್ಲಿ 78 ರನ್) ಮೊದಲ ವಿಕೆಟ್​ಗೆ 130 ಎಸೆತಗಳಲ್ಲಿ 125 ರನ್ ಸೇರಿಸಿದರು. ಆಸ್ಟ್ರೇಲಿಯಾದ ನಾಯಕ ಪ್ಯಾಟ್ ಕಮಿನ್ಸ್ 22ನೇ ಓವರ್​ನಲ್ಲಿ ನಿಸ್ಸಾಂಕಾ ಅವರನ್ನು ಶಾರ್ಟ್ ಬಾಲ್​ನಲ್ಲಿ ಔಟ್ ಮಾಡುವ ಮೂಲಕ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು.

ಪೆರೆರಾ ಕೂಡ ಕೆಲವು ಓವರ್​ಗಲ ನಂತರ ಪ್ಯಾಟ್ ಕಮಿನ್ಸ್​ಗೆ ವಿಕೆಟ್​ ಒಪ್ಪಿಸಿದರು. ಅವರ ಔಟ್ ನಂತರ, ಆಡಮ್ ಜಂಪಾ ಲಂಕಾ ಬ್ಯಾಟಿಂಗ್ ಬಲಕ್ಕೆ ಪೆಟ್ಟು ಕೊಟ್ಟರು. ಹೀಗಾಗಿ ಶ್ರೀಲಂಕಾ ನಾಟಕೀಯ ಕುಸಿತವನ್ನು ಅನುಭವಿಸಿತು. ಕುಸಾಲ್ ಮೆಂಡಿಸ್ (13 ಎಸೆತಗಳಲ್ಲಿ 9), ಸದೀರಾ ಸಮರವಿಕ್ರಮ (8 ಎಸೆತಗಳಲ್ಲಿ 8), ಚಮಿಕಾ ಕರುಣರತ್ನೆ (11 ಎಸೆತಗಳಲ್ಲಿ 2) ಮತ್ತು ಮಹೀಶ್​ ತೀಕ್ಷಣಾ (5 ಎಸೆತಗಳಲ್ಲಿ 0) ತಮ್ಮ ವಿಕೆಟ್​ಗಳನ್ನು ಜಂಪಾಗೆ ಒಪ್ಪಿಸಿದರು. ಹೀಗಾಗಿ ಅವರು 47 ರನ್​ಗೆ 4 ವಿಕೆಟ್ ಪಡೆದರು.

ಆಸ್ಟ್ರೇಲಿಯಾ ತಂಡದ ಕಳಪೆ ಸಾಧನೆ

ಏಕದಿನ ವಿಶ್ವಕಪ್​ನ(icc world cup 2023) ಅತ್ಯಂತ ಯಶಸ್ವಿ ತಂಡ, 5 ಬಾರಿಯ ಚಾಂಪಿಯನ್, ಹ್ಯಾಟ್ರಿಕ್​ ಸರದಾರ​ ಆಸ್ಟ್ರೇಲಿಯಾ ಈ ಬಾರಿ ಅತ್ಯಂತ ಹೀನಾಯ ಸ್ಥಿತಿಗೆ ಬಂದು ನಿಂತಿದೆ. ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ. ಇದು 48 ವರ್ಷಗಳ ವಿಶ್ವಕಪ್​ ಇತಿಹಾಸದಲ್ಲಿ ಆಸ್ಟ್ರೇಲಿಯಾಕ್ಕೆ ಎದುರಾದ ಭಾರಿ ಮುಖಭಂಗ ಇದಾಗಿದೆ

ಸರ್ವಾಧಿಕ 5 ಬಾರಿ ಪ್ರಶಸ್ತಿಯನ್ನು ಗೆದ್ದ ಆಸೀಸ್​ 2 ಬಾರಿ ರನ್ನರ್​ ಆಗಿದೆ. ಒಟ್ಟು 12 ಆವೃತ್ತಿಯ ವಿಶ್ವಕಪ್​ ಟೂರ್ನಿಯಲ್ಲಿ 7 ಬಾರಿ ಫೈನಲ್​ ಪ್ರವೇಶಿಸಿದ ಸಾಧನೆ ಮಾಡಿತ್ತು. ಈ ಬಾರಿ ಭಾರತದ ಆತಿಥ್ಯದಲ್ಲಿ ವಿಶ್ವಕಪ್​ ನಡೆಯುತ್ತಿದ್ದರೂ ಆಸ್ಟ್ರೇಲಿಯಾವೇ ಕಪ್​ ಗೆಲ್ಲುವ ನೆಚ್ಚಿನ ತಂಡವಾಗಿತ್ತು. ಆದರೆ ತಂಡದ ಕಳಪೆ ಪ್ರದರ್ಶನ ನೋಡುವಾಗ ಆಸೀಸ್​ಗಿಂತ ನೆದರ್ಲೆಂಡ್​, ಅಫಘಾನಿಸ್ತಾನ ತಂದಡ ಪ್ರದರ್ಶನವೇ ಲೇಸು ಎನಿಸತೊಡಗಿದೆ.

Exit mobile version