Site icon Vistara News

Hockey Asia Cup: ಕೊರಿಯಾವನ್ನು ಮಣಿಸಿ ಚಾಂಪಿಯನ್​ ಪಟ್ಟ ಅಲಂಕರಿಸಿದ ಭಾರತದ ಕಿರಿಯ ಮಹಿಳಾ ತಂಡ

Women's Junior Asia Cup 2023 hockey

ಕಾ​ಕ​ಮಿ​ಗ​ಹ​ರಾ​(​ಜ​ಪಾ​ನ್‌​): ಇಲ್ಲಿ ನಡೆದ ಕಿರಿಯ ಮಹಿ​ಳೆ​ಯರ ಏಷ್ಯಾ​ಕಪ್‌ ಹಾಕಿ ಟೂರ್ನಿ​ಯಲ್ಲಿ(Hockey Asia Cup) ಭಾರತ ತಂಡ ಕೊರಿಯಾವನ್ನು ಮಣಿಸುವ ಮೂಲಕ ಚಿನ್ನದ ಪದಕ ಜಯಿಸಿದೆ. ಈ ಮೂಲಕ 2ನೇ ಪ್ರಯತ್ನದಲ್ಲಿ ಚೊಚ್ಚಲ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿತು.

ಭಾನುವಾರ ನಡೆದ ಪ್ರಶಸ್ತಿ ಸುತ್ತಿನ ಕಾಳಗದಲ್ಲಿ ಭಾರತದ ಕಿರಿಯ ಮಹಿಳೆಯರ ತಂಡ ಅಮೋಘ ಪ್ರದರ್ಶನ ತೋರುವ ಮೂಲಕ ಕೊರಿಯಾ ತಂಡವನ್ನು 2-1 ಗೋಲ್​ಗಳ ಅಂತರದಿಂದ ಬಗ್ಗು ಬಡಿದಿದೆ. ಅತ್ಯಂತ ರೋಚಕವಾಗಿ ನಡೆದ ಈ ಪಂದ್ಯದಲ್ಲಿ ಭಾರತದ ರಕ್ಷಣಾತ್ಮ ಆಟ ಎಲ್ಲರ ಗಮನ ಸೆಳೆಯಿತು. ಎದುರಾಳಿ ಕೊರೊಯಾಕ್ಕೆ ಹಲವು ಗೋಲು ಬಾರಿಸುವ ಅವಕಾಶಗಳಿದ್ದರೂ ಅದನ್ನು ಡಿಫೆಪ್ಸ್​ ವಿಭಾಗ ಇದಕ್ಕೆ ಅನುವು ಮಾಡಿಕೊಡಲಿಲ್ಲ. ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದ ತಂಡದ ನಾಯಕಿ ಪ್ರೀತಿ ಫೈನಲ್​ ಪಂದ್ಯದ ಪ್ಲೇಯರ್​ ಆಫ್​ದಿ ಮ್ಯಾಚ್​ ಅವಾರ್ಡ್​ ಪಡೆದುಕೊಂಡರು.

ಸೆಮಿಫೈನಲ್​ ಪಂದ್ಯದಲ್ಲಿ ಭಾರತ ಆತಿ​ಥೇಯ ಜಪಾನ್‌ ವಿರುದ್ಧ 1-0 ಗೋಲಿನ ಅಂತರದಿಂದ ರೋಚಕ ಗೆಲು​ವು ಸಾಧಿಸಿತ್ತು. ಜತೆಗೆ ​ವರ್ಷಾಂತ್ಯ​ದಲ್ಲಿ ಚಿಲಿ​ಯಲ್ಲಿ ನಡೆ​ಯ​ಲಿ​ರುವ ಎಫ್‌​ಐ​ಎಚ್‌ ಕಿರಿಯರ ಮಹಿಳಾ ವಿಶ್ವ​ಕ​ಪ್‌ಗೂ ಅರ್ಹತೆ ಗಿಟ್ಟಿ​ಸಿ​ಕೊಂಡಿತ್ತು.

ಇದನ್ನೂ ಓದಿ Hockey India: ಆಸೀಸ್​ ವಿರುದ್ಧದ ಹಾಕಿ ಸರಣಿ; ಭಾರತ ತಂಡಕ್ಕೆ ಸವಿತಾ ಪೂನಿಯಾ ನಾಯಕಿ

ಫೈನಲ್​ನಲ್ಲಿ ಪಂದ್ಯ ಆರಂಭಗೊಂಡ 22 ನಿಮಿಷದಲ್ಲಿ ಭಾರತ ಗೋಲಿನ ಖಾತೆ ತೆರೆಯಿತು. ಆದರೆ ಮೂರೇ ನಿಮಿಷದ ಅಂತರದಲ್ಲಿ ಎದುರಾಳಿ ಕೊರಿಯಾ ಕೂಡ ಗೋಲು ಬಾರಿಸಿ ಸಮಬಲ ಸಾಧಿಸಿತು. ಆದರೆ ದ್ವಿತೀಯ ಗೋಲು ಬಾರಿಸಿದ ಭಾರತ ಆ ಬಳಿಕ ರಕ್ಷಣಾತ್ಮ ಆಟಕ್ಕೆ ಒತ್ತು ಕೊಟ್ಟು ಪಂದ್ಯವನ್ನು ಜಯಿಸಿತು. ಇದು ಈ ಟೂರ್ನಿಯಲ್ಲಿ ಭಾರತ ಪ್ರೇಶಿಸಿದ ಎರಡನೇ ಫೈನಲ್​ ಪಂದ್ಯವಾಗಿತ್ತು. ಇದಕ್ಕೂ ಮುನ್ನ 2012ರಲ್ಲಿ ಫೈನಲ್​ ಪ್ರವೇಶ ಪಡೆದಿತ್ತು. ಆದರೆ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಗಿತ್ತು. ಇದೀಗ ಚೊಚ್ಚಲ ಪ್ರಶಸ್ತಿ ಗೆದ್ದು ಸಂಭ್ರಮಿಸಿದೆ.

Exit mobile version