ನವ ದೆಹಲಿ: ಹೋಂಡಾ (Honda Motors) ತನ್ನ ಭಾರತ ಕೇಂದ್ರಿತ ಎಲಿವೇಟ್ ಎಸ್ಯುವಿ (Honda Elevate) ಕಾರನ್ನು ಜೂನ್ 6ರಂದು ಅನಾವರಣ ಮಾಡಿದೆ. ಇದೇ ವೇಳೆ 2030ರ ಒಳಗೆ ಭಾರತದಲ್ಲಿ ಐದು ಎಸ್ಯುವಿಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ. ಈ ಯೋಜನೆಯ ಮೊದಲ ಕಾರು ಎಲಿವೇಟ್. ಇದರ ಬುಕಿಂಗ್ ಜುಲೈನಲ್ಲಿ ಪ್ರಾರಂಭವಾಗಲಿದ್ದು, ಹಬ್ಬದ ಋತುವಿಗೆ ಮುಂಚಿತವಾಗಿ ಬಿಡುಗಡೆಗೊಳ್ಳಲಿದೆ.
ಹೋಂಡಾ ಕಾರ್ಸ್ ಇಂಡಿಯಾದ ಅಧ್ಯಕ್ಷ ಮತ್ತು ಸಿಇಒ ತಕುಯಾ ಸುಮುರಾ ಎಲಿವೇಟ್ ಕಾರನ್ನು ಅನಾವರಣಗೊಳಿಸಿ ಮಾತನಾಡಿ ನಾವು ಭಾರತಕ್ಕಾಗಿ ಅತ್ಯಂತ ಬಲಿಷ್ಠ ಉತ್ಪನ್ನ ಕಾರ್ಯತಂತ್ರ ರೂಪಿಸಿದ್ದೇವೆ. 2030ರ ವೇಳೆಗೆ ಐದು ಎಸ್ ಯುವಿಗಳನ್ನು ಹೊಂದಲು ಯೋಜಿಸಿದ್ದೇವೆ. ಎಲಿವೇಟ್ಗೆ ಭಾರತವು ಪ್ರಮುಖ ಮಾರುಕಟ್ಟೆಯಾಗಿದ್ದರೂ, ಭವಿಷ್ಯದಲ್ಲಿ ಮಾದರಿಗೆ ಭಾರತ ಪ್ರಮುಖ ರಫ್ತು ಕೇಂದ್ರವಾಗಲಿದೆ. ಹೋಂಡಾ ಕಾರ್ಸ್ ಇಂಡಿಯಾ ಮುಂದಿನ ಮೂರು ವರ್ಷಗಳಲ್ಲಿ ಎಲಿವೇಟ್್ನ ಎಲೆಕ್ಟ್ರಿಕ್ ಆವೃತ್ತಿಯನ್ನೂಐ ಮಾರುಕಟ್ಟೆಗೆ ತರಲು ಯೋಜಿಸಿದೆ ಎಂದು ಹೇಳಿದ್ದಾರೆ.
2023ರ ವರ್ಷಾರಂಭದಲ್ಲಿ ಹೋಂಡಾ ಕಾರ್ಸ್ ಭಾರತದಲ್ಲಿ ಪ್ರತಿ ವರ್ಷ ಒಂದು ಹೊಸ ಮಾದರಿ ಪರಿಚಯಿಸುವ ಯೋಜನೆಯನ್ನು ಹಂಚಿಕೊಂಡಿತ್ತು ಇದರಲ್ಲಿ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳೂ ಸೇರಿವೆ. ದೇಶದಲ್ಲಿ ಹೋಂಡಾ ಬ್ರ್ಯಾಂಡ್ ಅನ್ನು ಬಲಪಡಿಸಲು ಪ್ರೀಮಿಯಂ ಮಾದರಿಗಳನ್ನು ಭಾರತಕ್ಕೆ ತರುವ ಪ್ರಯತ್ವನ್ನು ಮಾಡಲಾಗಿದೆ.
ಹ್ಯುಂಡೈ ಕ್ರೆಟಾಗೆ ಪ್ರತಿಸ್ಪರ್ಧಿ
ಭಾರತದಲ್ಲಿ ಎಸ್ಯುವಿ ಸೆಗ್ಮೆಂಟ್ ಪ್ರಬಲವಾಗುತ್ತಿರವು ಸಮದಲ್ಲಿ ಮಿಡ್ಸೈಜ್ ಎಸ್ಯುವಿ ವಿಭಾಗಕ್ಕೆ ಹೋಂಡಾ ಪ್ರವೇಶ ಮಾಡಿದೆ. ಒಟ್ಟು ಕಾರು ಮಾರುಕಟ್ಟೆಯ ಶೇಕಾಡ 40ರಷ್ಟು ಎಸ್ಯುವಿಗಳ ಪಾಲಿದೆ. ಹೀಗಾಗಿ ಹೋಂಡಾ ಎಲಿವೇಟ್ ಅನ್ನು ಮಧ್ಯಮ ಗಾತ್ರದ ಎಸ್ಯುವಿ ಮಾರುಕಟ್ಟೆಯಲ್ಲಿ ಸ್ಥಾಪಿಸಲು ಹೋಂಡಾ ಮುಂದಾಗಿದೆ. ಈ ಕಾರು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೋಸ್ ಮತ್ತು ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಕಾರುಗಳಿಗೆ ಪೈಪೋಟಿ ನೀಡಲಿದೆ.
ಹೋಂಡಾ ಕಂಪನಿಯು ಭಾರತದ ಮಾರುಕಟ್ಟೆಯಲ್ಲಿ ಸಿಟಿ ಮತ್ತು ಅಮೇಜ್ ಮೂಲಕ ತನ್ನ ಇರುವಿಕೆಯನ್ನು ಗಟ್ಟಿ ಮಾಡಿಕೊಂಡಿದೆ. ಇದೀಗ ಆ ಪಟ್ಟೆಗೆ ಎಲಿವೇಟ್ ಸೇರ್ಪಡೆಗೊಂಡಿದೆ. ಇದು ಇದು ವೇಗವಾಗಿ ಬೆಳೆಯುತ್ತಿರುವ ಎಸ್ಯುವಿ ವಿಭಾಗದಲ್ಲಿ ತನ್ನ ಅಸ್ತಿತ್ವವನ್ನು ಸ್ಥಾಪಿಸುತ್ತದೆ ಎಂದು ಕಂಪನಿ ಹೇಳಿದೆ.
ಇದನ್ನೂ ಓದಿ : Maruti Suzuki : ಮಾರುತಿಯ 5 ಡೋರ್ ಜಿಮ್ನಿ ಬಿಡುಗಡೆ, ಮಹೀಂದ್ರಾ ಥಾರ್ಗೆ ಪೈಪೋಟಿ ಖಚಿತ
ಸವಾಲುಗಳ ಹೊರತಾಗಿಯೂ, ಭಾರತೀಯ ಕಾರು ಮಾರುಕಟ್ಟೆ ತನ್ನ ಶಕ್ತಿಯನ್ನು ಸಾಬೀತುಪಡಿಸಿದೆ. ವಿಶ್ವದ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಯಾಗಿ ಮುಂದುವರಿದೆ. ನಾವು ಸೆಡಾನ್ ವಿಭಾಗದಲ್ಲಿ ಜನಪ್ರಿಯತೆ ಹೊಂದಿದ್ದೇವೆ ಮತ್ತು ಅದನ್ನು ಎಸ್ಯುವಿ ವಿಭಾಗಕ್ಕೆ ಕೊಂಡೊಯ್ಯಲು ಆಶಿಸಿದ್ದೇವೆ . ಎಲಿವೇಟ್ ಪರಿಪೂರ್ಣ ನಗರ ಕೇಂದ್ರಿತ ಎಸ್ಯುವಿ ಎಂದು ತ್ಸುಮುರಾ ಹೇಳಿದರು.
ತಪುಕಾರಾ ಘಟಕದಲ್ಲಿ ನಿರ್ಮಾಣ
ಎಲಿವೇಟ್ ಮತ್ತು ಭವಿಷ್ಯದ ಉತ್ಪನ್ನಗಳಿಗೆ ಪೂರಕವಾಗಿ ಹೋಂಡಾ ಕಂಪನಿಯು ರಾಜಸ್ಥಾನದ ತಪುಕಾರದಲ್ಲಿರುವ ತನ್ನ ಘಟಕದಲ್ಲಿನ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿದೆ. ದೈನಂದಿನ ಉತ್ಪಾದನಾ ಸಾಮರ್ಥ್ಯವನ್ನು 2023ರ ಮೊದಲ ತ್ರೈಮಾಸಿಕದಲ್ಲಿ 540 ವಾಹನಗಳಿಂದ ದಿನಕ್ಕೆ 660 ವಾಹನಗಳಿಗೆ ವಿಸ್ತರಿಸಲಾಗಿದೆ.
ಎಲಿವೇಟ್ ಬಿಡುಗಡೆಗೆ ಮುಂಚಿತವಾಗಿ ಹೋಂಡಾ ಡೀಲರ್ಶಿಪ್ ನೆಟ್ವರ್ಕ್ ಕೂಡ ನವೀಕರಿಸಲಾಗಿದೆ.
ಬ್ರ್ಯಾಂಡಿಂಗ್ ಮತ್ತು ರಿಟೇಲ್ ದೃಷ್ಟಿಕೋನದಿಂದ ಹೋಂಡಾ ಕಾರ್ಸ್ ಇಂಡಿಯಾ ತನ್ನ ಶೋರೂಂಗಳ ಹೊಸ ಗ್ರಾಹಕ ಇಂಟರ್ಫೇಸ್ಗಾಗಿ (ಸಿಐ) 260 ಕೋಟಿ ರೂಪಾಯಿ ಹೂಡಿಕೆ ಮಾಡಿದೆ. ಹೋಂಡಾ 238 ನಗರಗಳಲ್ಲಿ ಸುಮಾರು 326 ಮಳಿಗೆಗಳನ್ನು ಹೊಂದಿದೆ. ತನ್ನ ಒಟ್ಟಾರೆ ಮಾರಾಟದಲ್ಲಿ 3ನೇ ಶ್ರೇಣಿಯ ನಗರಗಳು ಸುಮಾರು 30 ಪ್ರತಿಶತದಷ್ಟು ಪಾಲನ್ನು ಹೊಂದಿವೆ ಎಂದು ಕಂಪನಿ ಹೇಳಿಕೊಂಡಿದೆ. ಹೋಂಡಾ ಎಲಿವೇಟ್ ಅನ್ನು ಮೊದಲು ಭಾರತದಲ್ಲಿ ಬಿಡುಗಡೆ ಮಾಡಲಿದ್ದು, ನಂತರ ಇತರ ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆಯಾಗಲಿದೆ.